HOME
CINEMA NEWS
GALLERY
TV NEWS
REVIEWS
CONTACT US
ನಟ ಭಯಂಕರನಿಗೆಪೊಗರುಧ್ವನಿ
ವಾಗ್ಮಿ, ಬಿಗ್ ಬಾಸ್ ವಿಜೇತ ಪ್ರಥಮ್ ನಟನೆ,ನಿರ್ದೇಶನದ ‘ನಟ ಭಯಂಕರ’ ಚಿತ್ರದ ಶೀರ್ಷಿಕೆ ಗೀತೆಯನ್ನುಉಪೇಂದ್ರ ಹಾಡಿ ಪ್ರೋತ್ಸಾಹ ನೀಡಿದಂತೆ, ಸೆಟ್‍ಗೆಅಭಿಷೇಕ್‍ಅಂಬರೀಷ್ ಭೇಟಿ ನೀಡಿ ಶುಭ ಹಾರೈಸಿದ್ದರು. ಈಗ ಧ್ರುವಸರ್ಜಾ ಸಿನಿಮಾದ ನಿರೂಪಣೆಗೆಧ್ವನಿ ನೀÀಡಿರುವುದರಿಂದ ಹೆಚ್ಚಿನಆಕರ್ಷಣೆ,ಚೈತನ್ಯಬಂದಿದೆ. ನಮ್ಮಿಬ್ಬರ ಮಧ್ಯೆ ಸ್ನೇಹಇರುವಜೊತೆಗೆ ಒಳ್ಳೆಯ ಕಂಟೆಂಟ್‍ಇರುವುದರಿಂದವಾಯ್ಸ್‍ಓವರ್ ನೀಡಿದ್ದಾರೆ.ಇದಕ್ಕೆಯಾವುದೇತರಹದ ಸಂಭಾವನೆಯನ್ನು ಪಡೆದಿರುವುದಿಲ್ಲ. ಅದರಿಂದಅವರಿಗೆ ಪುಣ್ಯಕೋಟೆಯರಜತ ಪ್ರತಿಮೆಯನ್ನುಗೌರವಪೂರ್ವಕವಾಗಿ ನೀಡಿಕೃತಜ್ಘತೆ ಸಲ್ಲಿಸಲಾಗಿದೆ.ಇವರಿಗೆಕೊಡಬೇಕಾದ ಹಣವನ್ನುಗೋಶಾಲೆಯೊಂದಕ್ಕೆಆರ್ಥಿಕ ನೆರವುಕೊಡುತ್ತಿರುವುದಾಗಿ ಪ್ರಥಮ್ ಮಾಹಿತಿ ನೀಡುತ್ತಾರೆ.ಸಿನಿಮಾವು ಪಕ್ಕಾ ಹಾರರ್‍ಕಾಮಿಡಿಕತೆಯಾಗಿದೆ.

ಒಬ್ಬ ಸ್ಟುಪಿಡ್ ಸೂಪರ್ ಸ್ಟಾರ್ ಹಾಗೂ ದೆವ್ವವೇಚಿತ್ರದಕಥಾಹಂದರ.ನಿಹಾರಿಕಾಶಣೈ, ಸುಶ್ಮಿತಾಜೋಷಿ ನಾಯಕಿಯರು. ಮತ್ತೋಂದು ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್‍ಅಗ್ನಿ ಎಂಬಿಬಿಎಸ್‍ಅಂದರೆ ಮನ:ಶಾಸ್ತ್ರಜ್ಘನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಉಳಿದಂತೆ ಶೋಭರಾಜ್, ಕುರಿಪ್ರತಾಪ್, ಓಂಪ್ರಕಾಶ್‍ರಾವ್, ಉಮೇಶ್, ರಾಕ್‍ಲೈನ್‍ಸುಧಾಕರ್ ನಟಿಸಿದ್ದಾರೆ. ಹಾಡುಗಳಿಗೆ ಪ್ರದ್ಯೋತನ್ ಸಂಗೀತ ಸಂಯೋಜಿಸಿದ್ದಾರೆ. ಸ್ವಾರಸ್ಯ ಸಿನಿ ಕ್ರಿಯೇಶನ್ಸ್ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದು, ಮೇ ತಿಂಗಳಲ್ಲಿ ತೆರೆಗೆ ಬರುವ ಸಂಭವವಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
20/03/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore