HOME
CINEMA NEWS
GALLERY
TV NEWS
REVIEWS
CONTACT US

ಹೀಗೊಬ್ಬ ಒಳ್ಳೇವ್ನು !
ವಿಜಯ್ ಮಹೇಶ್ ನಿರ್ದೇಶಿಸಿ, ನಟಿಸಿರುವ `ನಾನೊಬ್ನೆ ಒಳ್ಳೆವ್ನು' ಚಿತ್ರ ಈಗಿನ ಟ್ರೆಂಡ್‍ಗೆ ತಕ್ಕಂತಿರುವ ಸಿನಿಮಾ. ಇಲ್ಲಿ ನಾಯಕ ಒಳ್ಳೇವ್ನು ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತಾ ಹೋಗುತ್ತವೆ.ಯಾಕೆಂದರೆ, ಅವನೊಬ್ಬ ಕಾಲೇಜ್‍ನಲ್ಲಿ ಸೀನಿಯರ್. ಅವನಿಗೆ ಕಾಲೇಜ್‍ನಲ್ಲಿ ಒಂದು ಗೌರವ. ಅದರಲ್ಲೂ ಹೆಣ್ಣು ಮಕ್ಕಳ ವಿಷಯದಲ್ಲಂತೂ ಸಿಕ್ಕಾಪಟ್ಟೆ ಕಾಳಜಿ ಅವನಿಗೆ. ಅದು ಎಷ್ಟರಮಟ್ಟಿಗೆ ಅಂದರೆ, ಯಾರಾದರೂ ಕಾಲೇಜ್‍ಗೆ ಸ್ಕರ್ಟ್ ಹಾಕಿಕೊಂಡು ಬಂದರೆ, ಅವರನ್ನು ನಿಲ್ಲಿಸಿ, ಮೈ ತುಂಬಾ ಬಟ್ಟೆ ಹಾಕಿಕೊಂಡು ಬರಬೇಕು ಎಂದು ಹೇಳುವಷ್ಟರ ಮಟ್ಟಿಗೆ ಕಾಳಜಿ. ಅಷ್ಟೇ ಅಲ್ಲ, ಅವನನ್ನು ಪ್ರೀತಿಸುತ್ತೇನೆ ಎಂದು ಹೇಳುವು ಹುಡುಗಿಗೂ ಒಂದು ಉಪದೇಶ ನೀಡುತ್ತಾನೆ. ಉಪನ್ಯಾಸಕರಿಗೇ ಅವನು ಬುದ್ಧಿ ಹೇಳವಷ್ಟರ ಮಟ್ಟಿಗೆ ಇರುವಂತಹ ಸೀನಿಯರ್. ಅವನ ಮಾತೆಂದರೆ, ಎಲ್ಲರಿಗೂ ಪ್ರೀತಿ. ಅಂತಹ ಹುಡುಗನ ಲೈಫಲ್ಲಿ ಒಂದು ಘಟನೆ ನಡೆದು ಹೋಗುತ್ತದೆ. ಆ ಘಟನೆ ಏನೆಂದು ತಿಳಿದುಕೊಳ್ಳಬೇಕಾದರೆ, ಒಮ್ಮೆ ಸಿನಿಮಾ ನೋಡಲು ಯಾವುದೇ ತಕರಾರು ಇಲ್ಲ.

ಇಲ್ಲಿ ವಿಜಯ್ ಮಹೇಶ್ ಅವರು ನಿರ್ದೇಶನವನ್ನಷ್ಟೇ ಮಾಡಿಲ್ಲ. ಅವರು ನಾಯಕರಾಗಿ ನಟಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹೀಗೆ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡುವ ಮೂಲಕ ಸಕಲಕಲಾವಲ್ಲಭ ಎನಿಸಿಕೊಂಡಿದ್ದಾರೆ. ಇಲ್ಲಿ ನಿರೂಪಣೆ ಹೈಲೆಟ್ ಆಗಿದೆ. ಪ್ರತಿಯೊಂದು ಫ್ರೇಮ್‍ನಲ್ಲೂ ವಿಜಯ್ ಮಹೇಶ್ ಅವರು ಉಪದೇಶ ಕೊಡುತ್ತಲೇ ಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತಾರೆ. ಈಗಿನ ಯೂತ್ಸ್‍ಗೆ ಬೇಕಾದಂತಹ ಎಲ್ಲಾ ಅಂಶಗಳೂ ಚಿತ್ರದಲ್ಲಿರುವುದರಿಂದ ಸಿನಿಮಾದಲ್ಲಿ ಬೋರ್ ಎನಿಸುವ ಯಾವುದೇ ದೃಶ್ಯಗಳು ಕಾಣಸಿಗುವುದಿಲ್ಲ. ಇಲ್ಲಿ ರೊಮ್ಯಾನ್ಸ್ ಮಾಡುವ ಹಾಡೊಂದು ಖುಷಿಕೊಟ್ಟರೆ, ಹೀರೋ ವಿಲನ್‍ಗಳ ಜತೆ ಹೊಡೆದಾಡುವ ದೃಶ್ಯವು ಕಣ್ಮನ ಸೆಳೆಯುತ್ತದೆ. ಇನ್ನು, ಸಿನಿಮಾದಲ್ಲಿ ಒಳ್ಳೆಯ ತಾಣಗಳು ಕಣ್ಣಿಗೆ ಮುದ ನೀಡುತ್ತವೆ. ಪ್ರತಿ ದೃಶ್ಯಕ್ಕೂ ಹಿನ್ನೆಲೆ ಸಂಗೀತ ಪೂರಕವೆನಿಸಿದೆ. ಆರಂಭದಲ್ಲಿ ಸಿನಿಮಾ ನಿಧಾನಗತಿಯಲ್ಲಿ ಸಾಗಿದರೂ, ಮಧ್ಯಂತರದಲ್ಲಿ ಸಿನಿಮಾ ನೋಡುಗರನ್ನು ಕೂರಿಸುತ್ತದೆ. ಅದಕ್ಕೆ ಕಾರಣ, ಸೆಕೆಂಡ್ ಹಾಫ್‍ನಲ್ಲಿರುವ ಕಥೆಯೊಳಗಿನ ಗಟ್ಟಿತನ. ಇಲ್ಲಿ ಪ್ರೀತಿ, ಉಪದೇಶ, ಗೆಳೆತನ, ತಂಗಿಯ ಸೆಂಟಿಮೆಂಟ್ ಎಲ್ಲವೂ ಇದೆ. ಅದನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರು, ಕೆಲವೊಮ್ಮೆ ಗೊಂದಲ ಎನಿಸುವಂತಹ ದೃಶ್ಯಗಳನ್ನು ತೋರಿಸುತ್ತಾರೆ. ಜತೆಗೇ ಕೆಲವೊಂದು ತಿರುವು ಕೊಡುವಂತಹ ಘಟನೆಗಳು ಬಂದು ಸಿನಿಮಾವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಆ ಘಟನೆಗಳು ಯಾವು, ಎಂಬ ಕುತೂಹಲವಿದ್ದರೆ, ಒಂದೊಮ್ಮೆ ಚಿತ್ರ ನೋಡಬಹುದು.
ಇಲ್ಲಿ ವಿಜಯ್ ಮಹೇಶ್‍ಗೆ ಮೊದಲ ಸಿನಿಮಾ ಅಂತ ಅನಿಸುವುದಿಲ್ಲ. ಅಷ್ಟರಮಟ್ಟಿಗೆ ನಿರ್ದೇಶನದಲ್ಲಿ ಸೈ ಎನಿಸಿಕೊಂಡಿದ್ದಾರೆ. ನಟನೆಯಲ್ಲೂ ಹಿಂದುಳಿದಿಲ್ಲ. ಹೊಡೆದಾಟ ಹಾಗೂ ಕುಣಿತದಲ್ಲೂ ವಿಜಯ್ ಮಹೇಶ್ ಅವರು ಹಿಂದೆ ಬಿದ್ದಿಲ್ಲ. ಇನ್ನು, ಚಿತ್ರದಲ್ಲಿ ಅವರ ಜತೆ ನಾಯಕಿಯಾಗಿ ನಟಿಸಿರುವ ಆನಿ ಪ್ರಿನ್ಸ್ ಕೂಡ ಗ್ಲಾಮರ್ ಜತೆಗೆ ನಟನೆಯಲ್ಲೂ ಗಮನಸೆಳೆದಿದ್ದಾರೆ. ಸೌಜನ್ಯ ಇಲ್ಲಿ ಬಜಾರಿ ಹುಡುಗಿಯಾಗಿ, ಅಣ್ಣನ ಪಾಲಿಗೆ ಮುದ್ದಿನ ತಂಗಿಯಾಗಿ, ಪ್ರೇಮಿಯ ಪಾಲಿಗೆ ಒಳ್ಳೇ ಪ್ರೇಮಿಯಾಗಿ ಗಮನಸೆಳೆಯುತ್ತಾರೆ. ರವಿತೇಜ ಚಿತ್ರದ ಪಾತ್ರವನ್ನು ಜೀವಿಸಿದ್ದಾರೆ. ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇನ್ನು, ಮೂರ್ತಿ ಅವರು ಅಣ್ಣನಾಗಿ ಇಲ್ಲಿ ಇಷ್ಟವಾಗುತ್ತಾರೆ. ಚಿತ್ರದಲ್ಲಿ ಮುಖ್ಯವಾದ ತಿರುವೊಂದು ಬರುತ್ತದೆ. ಅದೇ ಚಿತ್ರವನ್ನು ಇನ್ನಷ್ಟು ಕುತೂಹಲ ಹಂತಕ್ಕೆ ಕರೆದೊಯ್ಯುತ್ತದೆ. ಆದೇನೆಂದು ತಿಳಿಯುವ ಕುತೂಹಲ ಇದ್ದರೆ, ಮಿಸ್ ಮಾಡಿಕೊಳ್ಳಬೇಡಿ.

ಇಲ್ಲಿ ನಾಯಕ ವಿಜಯ್ ಕಮಿಷನರ್ ಮಗನಾಗಿ ಕಾಲೇಜ್‍ನಲ್ಲಿ ಸೀನಿಯರ್ ಎನಿಸಿಕೊಂಡಿರುವಾತ. ಎಲ್ಲರಿಗೂ ಉಪದೇಶ, ವೇದಾಂತ ಹೇಳುವ ಮೂಲಕ ಒಳ್ಳೇವ್ನು ಎನಿಸಿಕೊಂಡವರು. ಅವರ ಲೈಫ್‍ನಲ್ಲೊಂದು ಘಟನೆ ನಡೆದು ಹೋಗುತ್ತದೆ. ಅದೇ ಚಿತ್ರಕ್ಕೊಂದು ಪ್ಲಸ್. ಅಲ್ಲಿಂದ ಆಗುವುದೆಲ್ಲವೂ ಚಿತ್ರವನ್ನೂ ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ. ಒಂದು ಸಿನಿಮಾದಲ್ಲಿ ಸಂಗೀತ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎಂಬುದಕ್ಕೆ ಇಲ್ಲಿ ಉದಾಹರಣೆ ಇದೆ. ಇಲ್ಲಿರುವ ಹಾಡುಗಳೆಲ್ಲವೂ ಚೆನ್ನಾಗಿವೆ. ಅದರಲ್ಲೂ ಮಳೆಯಲ್ಲಿ ಇರುವಂತಹ ಹಾಡೊಂದು, ಹೈಲೆಟ್ ಆಗಿದೆ. ವಿಜಯ್ ಹಾಗೂ ಆನಿ ಪ್ರಿನ್ಸ್ ಜತೆ ಬರುವ ರೊಮ್ಯಾನ್ಸ್ ಹಾಡು ಕೂಡ ಪಡ್ಡೆಗಳಿಗೆ ಇಷ್ಟವಾಗುವಂತಿದೆ. ಒಟ್ಟಾರೆ, ಇಲ್ಲಿರುವ ನಾಯಕ ಒಳ್ಳೇವ್ನಾ ಅಥವಾ ಕೆಟ್ಟವನಾ? ಈ ಬಗ್ಗೆ ಅನುಮಾನ ಅಥವಾ ಕುತೂಹಲವಿದ್ದರೆ, ಒಮ್ಮೆ ಸಿನಿಮಾ ನೋಡಲೇಬೇಕು.
-1/07/17

NANNOBBANE OLLEYAVANU’ RELEASING ON JUNE 30
‘Naanobbane Olleyavanu’ will release in more than 100 theatres across Karnataka on June 30. The film is produced by T M Basavaraj while it is written and directed by Vijay Mahesh who has also penned the lyrics for the songs and played the lead in the film. Sudhir Shastry has scored the music. The film stars Annie Princes, Sowjanya and Ravi Teja among others.

Director Vijay Mahesh told reporters that all of them feel that they are good even if they mistake mistakes. He said people should correct themselves which is the essence of the film’s story. He said he plays s the commissioner’s son in the movie who believes that relationships are fake. He said the heroine has a meaty role and the film has a message.

Sowjanya said she plays a sister to her five brothers. She said the shoot was held under complicated circumstances and that she plays a man hater in the movie.

Annie thanked the director and producer for choosing her for the role and for reposing the faith in her even though she didn’t understand the language. Ravi Teja also spoke.
-19/06/17

NANNOBBANE OLLEYAVANU’ AUDIO RELEASED
D
r Shivarajkumar released the audio of the upcoming Kannada film ‘Nannobbane Olleyavanu’ at a function in Bengaluru. The film is produced by T M Basavaraj and is written and directed by Vijay Mahesh who has also penned the lyrics for the songs and played the lead in the film. Sudhir Shastry has scored the music and the film. The film also stars Anne Princi, Sowjanya, Deepti Kapse and Ravi Teja among others.  

Speaking on the occasion, Shivarajkumar urged the people to extend the same kind of love and support to the film team as much as he had got during these years. He said the film’s title is positive. Referring to dubbed films being released in Kannada he said Kannadigas have given a suitable answer. He said people of Karnataka are good and it should be left to their voice whether or not to allow dubbed films. He said it is better to dub all films into Kannada and not allow their original films to be released here so that others could also learn Kannada. However, he said he is not against the release of other language films in Karnataka.  

Vijay Mahesh said finding locations for the shoot was difficult and time consuming. He said the film was shot in real rain and after the rains had stopped the film team went back second time after a year to shoot in the rain. He said the technicians were affected and heroine Sowjanya fell sick. He said he had to convince the technicians to come back for the shoot as they had left the team.  

Referring to the title, he said all of them feel that they are good even if mistakes are committed. He said people should correct their mistakes and that is the essence of the film’s story which unfolds in the second half.  

Music director Sudhir Shastry said the film has nine songs in his first movie and added that he has made an effort to see that the songs get registered in people’s minds.  

Ravi Teja said audiences can expect the unexpected and added that he got drenched in the rain for eight days. He said he is a big fan of Shivarajkumar and followed all of his films.  

Sowjanya said she was still struggling to find a foothold in the Kannada film industry as many of her films have released and gone. She said she was fortunate to be the 51st girl to be auditioned and selected for the role and expressed the confidence that she had done well. She said the cinema was shot in the rain without any umbrella.  

Anne Princi who hails from Odisha said she came to Bengaluru to pursue her studies and went on to win the Miss Bengaluru crown in 2012. She said she was the first girl from Odisha to win the crown and get work in Kannada and Tamil films. She said she plays the main lead and gets to play five characters in the movie.  

Tsunami Kitty, Murthy, Aravind Rao came to wish the team.  

Senior director S K Bhagawan said he saw the films which is a different kind of movie and added that the film brought him happiness. He said the hero and director sports a Upendra kind of get-up in the movie.  

Lahari Velu who has acquired the film’s audio rights said all of us are good and none is bad and it depends on how we shape up our lives.
-5/03/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/