HOME
CINEMA NEWS
GALLERY
TV NEWS
REVIEWS
CONTACT US
ನಮೋ ಅಂದರೆ ನರೇಂದ್ರ ಮೋದಿ
ಕಲಾತ್ನಕ, ಕಮರ್ಷಿಯಲ್ ಚಿತ್ರಗಳ ನಿರ್ದೇಶಕಿ ರೂಪಐಯ್ಯರ್ ಈ ಬಾರಿ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದು, ವಿಷಯವನ್ನು ತಿಳಿಸಲು ಮಾದ್ಯಮದವರನ್ನು ಆಹ್ವಾನಿಸಿದ್ದರು. ಅವರ ಪ್ರಕಾರ ಗಾಂದೀಜಿ ನಂತರ ಜಗತ್ತು ಕಂಡ ಅದ್ಬುತ ನಾಯಕ. ಇಂತಹ ಗುಣಗಳನ್ನು ಹೊಂದಿರುವ ವ್ಯಕ್ತ ಅಂತ ನೋಡುವುದಾದರೆ ಅದು ನರೇಂದ್ರಮೋದಿ. ಪ್ರತಿಯೊಬ್ಬ ಭಾರತೀಯನು ಅವರಂತೆ ಆಗಬೇಕು ಎಂದುದನ್ನು ಪ್ರಚುರ ಪಡಿಸಲು ‘ನಮೋ’ ಅಡಿಬರಹದಲ್ಲಿ ನಿಜವಾದ ಭಾರತೀಯ ಎಂಬ ಚಿತ್ರಕ್ಕೆ ಕೈ ಹಾಕಲಾಗಿದೆ. ಹಾಗಂತ ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಇದನ್ನು ಮಾಡುತ್ತಿಲ್ಲ. ಅವರ ಬಾಲ್ಯ, ಯೌವ್ವನ, ಆರ್‍ಎಸ್‍ಎಸ್‍ನಲ್ಲಿ ತೊಡಗಿಕೊಂಡಿದ್ದು, ಮದುವೆ, ತಾಯಿ ಸಂಬಂದ, ಅಧ್ಯಾತ್ಮಿಕ ಬದುಕು ಇಂತಹ ಸಣ್ಣ ಸಣ್ಣ ಅಂಶಗಳನ್ನು ಕಲೆಹಾಕಿ ಕತೆ ಸಿದ್ದಪಡಿಲಾಗಿದೆ. ಅವರ ಜೊತೆ ಒಡನಾಟ ಮಾಡಿದ್ದವರನ್ನು ಭೇಟಿ ಮಾಡಿ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಅವರ ಜೀವನದಲ್ಲಿ ಬಂದು ಹೋದ ಪ್ರಮುಖರ ಸುತ್ತ ಚಿತ್ರವು ಸಾಗಲಿದ್ದು, ಅಡ್ವಾಣ ಯಿಂದ ಹಿಡಿದು ಅಮಿತ್‍ಷಾ ವರೆಗೂ ಪಾತ್ರಗಳು ಬರಲಿದೆ. ಪಾತ್ರಕ್ಕೆ ಹೊಂದುವಂತ ಕಲಾವಿದರ ಆಯ್ಕೆ ನಡೆಯುತ್ತಿದೆ. ಇಷ್ಟರಲ್ಲೆ ಅವರ ತಾಯಿ, ಪತ್ನಿಯನ್ನು ಭೇಟಿ ಮಾಡಲಾಗುವುದು. ಇಲ್ಲಿಯವರೆಗೂ ಮೋದಿ ಅವರಿಂದ ಅನುಮತಿ ಪಡೆದುಕೊಂಡಿಲ್ಲ. ಮುಂದೆ ತಕರಾರು ಬಂದಲ್ಲಿ ನೋಡುವ ಎನ್ನುತ್ತಾರೆ.

ನಮೋ ಸಾಧನೆಯ ಕ್ರಾಂತಿಕಾರಕ ಬೆಳವಣ ಗೆಗಳನ್ನು ನೋಡಿಕೊಂಡು ಬೆಳೆದಿರುವ ಮಠ ಖ್ಯಾತಿ ಗುರುಪ್ರಸಾದ್, ಸುನಿಲ್‍ಪುರಾಣ ಕ್ ಮತ್ತು ಡಾ.ಜಯಲಕ್ಷೀ ಮೂವರು ಸೇರಿಕೊಂಡು ಚಿತ್ರಕತೆ, ಸಂಭಾಷಣೆ ರಚಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಇದಕ್ಕಾಗಿ ಹಲವು ಪುಸ್ತಕಗಳನ್ನು ಅಧ್ಯಯನ ಮಾಡಿದ್ದಾರಂತೆ. ಅಧಿಕಾರಕ್ಕೆ ಬಂದಾಗ ಸ್ವಚ್ಚ ಭಾರತ ಅಭಿಯಾನ, ನೋಟು ಅಮಾನ್ಯಕರಣ ಹೀಗೆ ಬದಲಾವಣೆಗಳನ್ನು ತಂದ ವಿಶೇಷ ವ್ಯಕ್ತಿಯ ಚಿತ್ರಣ ಇರಲಿದೆ ಎಂದು ಹೇಳಿಕೊಂಡರು. ಸಂಗೀತ ಅದರಲ್ಲೂ ವಿಶೇಷ ರೀತಿಯ ಸೌಂಡ್ ಡಿಸೈನ್ ಮಾಡುತ್ತಿರುವುದು ಗೌತಂಶ್ರೀವತ್ಸ.. ಸಂಕಲನ ಕ್ರೇಜಿಮೈಂಡ್ಸ್, ಛಾಯಗ್ರಹಣ ಜಿ.ಎಸ್.ವಿ.ಸೀತಾರಾಮ್ ನಿರ್ವಹಿಸುತ್ತಿದ್ದಾರೆ. ಅನಿವಾಸಿ ಭಾರತೀಯೆ ಗಾಯಿತ್ರಿರವಿ ಇಂಡಿಯನ್ ಕ್ಲಾಸಿಕ್ ಆಟ್ರ್ಸ್ ಮುಖಾಂತರ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
11/03/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore