HOME
CINEMA NEWS
GALLERY
TV NEWS
REVIEWS
CONTACT US
ನಮ್ಮವರು ಅಂದುಕೊಂಡರೆ ಸುಂದರ ಸಂಸಾರವಾಗುತ್ತದೆ
ಹೆತ್ತವರನ್ನು ಕಡೆಗಾಣ ಸಬೇಡಿ, ಅವರನ್ನು ಗೌರವಿಸಿ ಎಂದು ಹೇಳುವ ಸಾಕಷ್ಟು ಚಿತ್ರಗಳು ಬಂದಿವೆ. ಅದರ ಸಾಲಿಗೆ ‘ನಮ್ಮವರು’ ಸೇರ್ಪಡೆಯಾಗುತ್ತದೆ. ಮಾಮೂಲಿ ಕತೆಯಾಗಿದ್ದರೂ ನಿರೂಪಣಾ ಶೈಲಿ ವಿಭಿನ್ನ ಎನ್ನಬಹುದು. ಮನರಂಜನೆ ಜೊತೆಗೆ ಸಾಕಷ್ಟು ಸಂದೇಶಗಳನ್ನು ಸನ್ನಿವೇಶಗಳ ಮೂಲಕ ಹೇಳಿರುವುದು ಪ್ಲಸ್ ಪಾಯಿಂಟ್ ಆಗಿದೆ. ಪ್ರಚಲಿತ ಪಟ್ಟಣದ ವ್ಯವಸ್ಥೆ , ವಾಸ್ತವ ಜೀವನ ಶೈಲಿ, ವೇಗದ ಬದುಕುನಲ್ಲಿ ಮಾನವೀಯತೆಯನ್ನು ಮರೆತಿರುವ ಅಂಶ ಪೂರ್ಣ ಸಿನಿಮಾದ ಕೇಂದ್ರ ಬಿಂದುವಾಗಿದೆ. ಆಮೆಯಂತೆ ಸಾಗುವ ಚಿತ್ರಕತೆಯು ವಿರಾಮದ ನಂತರ ಗಂಭೀರತೆಯನ್ನು ಪಡೆದುಕೊಳ್ಳುತ್ತದೆ. ನಗರ ಜೀವನಕ್ಕೆ ಮಾರು ಹೋಗಿರುವ ನಾವುಗಳು ಹೆತ್ತವರನ್ನು ಹೇಗೆ ನೋಯಿಸುತ್ತೇವೆ. ಪ್ರೀತಿ-ಮಮತೆಯಿಂದ ಮಾನವೀಯ ಸಂಬಂದಗಳನ್ನು ಕಳೆದುಕೊಳ್ಳುವ ಬಗ್ಗೆ ಮನಮಿಡಿಯುವಂತೆ ತೋರಿಸಿರುವುದು ಕಾಣುತ್ತದೆ. ಬಿಂದಾಸ್ ಜೀವನ, ಶ್ರೀಮಂತಿಕೆ ಅಮಲು ತನ್ನ ವ್ಯಕ್ತಿತ್ವವನ್ನು ಹರಾಜಿಗೆ ಇಡುವ ಸೂಕ್ಷ ಅಂಶಗಳು ಕತೆಯ ಸಾರವನ್ನು ಹೇಳುತ್ತದೆ.

ಶ್ರೀಮಂತರ ಮಗಳನ್ನು ಮದುವೆಯಾದ ವಿಜಯ್‍ಗೆ ಆಕೆಯೆ ಮನೆಯಲ್ಲಿ ದರ್ಬಾರ್ ನಡೆಸುತ್ತಿರುತ್ತಾಳೆ. ಅಮ್ಮನನ್ನು ನೋಡಿಕೊಳ್ಳದ ಪರಿಸ್ಥತಿಯಲ್ಲಿ, ಭಯದಿಂದ ವೃದ್ದಾಶ್ರಮಕ್ಕೆ ಸೇರಿಸುತ್ತಾನೆ. ಒಂದು ಕಡೆ ಹೆಂಡತಿ ಪ್ರೀತಿ, ಮತ್ತೋಂದು ಕಡೆ ತಾಯಿ ವಾತ್ಸಲ್ಯ ಸಿಗದೆ ಪರಿತಪಿಸುತ್ತಾನೆ. ಕ್ಲೈಮಾಕ್ಸ್‍ನಲ್ಲಿ ಮಗ ಅಜ್ಜಿಯನ್ನು ಹುಡುಕಲು ಹೋದಾಗ ಆತನಿಂದ ದಂಪತಿ ಬದುಕು ಒಂದಾಗುತ್ತಾ ಎಂಬುದು ಸಿನಿಮಾದ ಹೈಲೈಟ್ ಆಗಿದೆ. ಪೋಷಕ ಪಾತ್ರಗಳಲ್ಲಿ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣ ಸಿಕೊಂಡಿದ್ದ ಗಣೇಶ್‍ರಾವ್ ನಾಯಕನಾಗಿ ಮೊದಲ ಚಿತ್ರವಾಗಿದ್ದರಿಂದ ಕಷ್ಟಪಟ್ಟು ಅಭಿನಯಿಸಿದ್ದಾರೆ. ಜೋಡಿಯಾಗಿ ಜ್ಯೋತಿ ಇದ್ದಾರೆ. ಅತ್ತೆ ಪಾತ್ರದಲ್ಲಿ ಜಯಲಕ್ಷೀ ನಟನೆ ಕಣ್ಣು ಒದ್ದೆ ಮಾಡಿಸುತ್ತದೆ. ಶ್ರೀನಿವಾಸಮೂರ್ತಿ, ರಮೇಶ್‍ಭಟ್ ಅಭಿನಯದ ಬಗ್ಗೆ ಹೇಳುವ ಆಗಿಲ್ಲ. ರಾಜ್‍ಭಾಸ್ಕರ್ ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ಭಕ್ತಿ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪುರುಷೋತ್ತಮ್‍ಓಂಕಾರ್ ಈ ಬಾರಿ ಸಂಸಾರಿಕ ಸಿನಿಮಾಕ್ಕೆ ನೀಟಾಗಿ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.
ನಿರ್ಮಾಪಕರು: ಆಶಾಮುನಿಯಪ್ಪ, ಉಷಾಪುರುಷೋತ್ತಮ್
-6/01/18

ಜನವರಿ ಐದರಂದು ನಮ್ಮವರು
ತಂದೆ ತಾಯಿ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು. ಅದರಂತೆ ಮಕ್ಕಳು ಅಪ್ಪ-ಅಮ್ಮನಿಗೆ ಹೇಗೆ ಗೌರವ ಕೊಡಬೇಕೆಂದು ಸಾರುವ ಚಿತ್ರ ‘ನಮ್ಮವರು’ ಎಲ್ಲವನ್ನು ದೃಶ್ಯಗಳ ಮೂಲಕ ಹೇಳಲಾಗಿದೆ. ನೋಡುಗರಿಗೆ ಇದು ನಮ್ಮದೆ ಸಿನಿಮಾ ಅನಿಸುವುದುಂಟು. ಮಗ, ಅತ್ತೆ, ಸೊಸೆ ಹೇಗಿರಬೇಕೆಂದು ಸನ್ನಿವೇಶಗಳ ಹೇಳುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಚಿತ್ರದಲ್ಲಿ ಆರು ಸಂದೇಶಗಳು ಇರುವುದು ಧನಾತ್ಮಕ ಅಂಶವಾಗಿದೆ. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಗಣೇಶ್‍ರಾವ್ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಜ್ಯೋತಿಸುರಕ್ಷ , ಮಗನಾಗಿ ಫಸ್ಟ್ ರ್ಯಾಂಕ್ ಖ್ಯಾತಿ ಚಿನ್ಮಯ್ ಮತ್ತು ಅತ್ತೆ ಪಾತ್ರದಲ್ಲಿ ಹಿರಿಯ ನಟಿ ಜಯಲಕ್ಷೀ ನಟಿಸಿದ್ದಾರೆ.

ಓಂಕಾರ್ ಪುರುಷೋತ್ತಮ್ ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಹಾಗೂ ನಿರ್ದೇಶನವಿದೆ. ಮುತ್ತುರಾಜ್ ಛಾಯಾಗ್ರಹಣ, ರಾಜ್‍ಭಾಸ್ಕರ್ ಸಂಗೀತ, ವಿಷ್ಣುನಾಚನೇಕರ್ ಕಥೆ ಇದೆ. ತಾರಬಳಗದಲ್ಲಿ ಶ್ರೀನಿವಾಸಮೂರ್ತಿ, ಆಶಾಮುನಿಯಪ್ಪ, ರಮೇಶ್‍ಭಟ್, ತಿಮ್ಮೇಗೌಡ, ಸಿಂಗರ್‍ಶ್ರೀನಿವಾಸ್, ವಠಾರ ಮಲ್ಲೇಶಿ, ಟೇಕ್‍ಕಲ್ ಮಂಜು, ಸುಬ್ಬು.ಆರ್.ಕೆ. ನಟನೆ ಇದೆ. ಅಟವೀಶ್ವರ ಫಿಲಂಸ್ ಲಾಂಛನದಲ್ಲಿ ಶ್ರೀಮತಿ ಉಷಾಪುರುಷೋತ್ತಮ್ ಹಾಗೂ ಆಶಾಮುನಿಯಪ್ಪ ನಿರ್ಮಿಸುತ್ತಿರುವ ಇದೇ ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣಲಿದೆ.
-2/01/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\