HOME
CINEMA NEWS
GALLERY
TV NEWS
REVIEWS
CONTACT US
ಪ್ರೀತಿ-ಕ್ರಾಂತಿಯ ಧರ್ಮಯುದ್ದ
ಕ್ರಾಂತಿಯನ್ನು ಪ್ರೀತಿಯಿಂದ ಗೆಲ್ಲಬಹುದು. ಆದೇ ಪ್ರೀತಿಯನ್ನು ಕ್ರಾಂತಿಯಿಂದ ಗೆಲ್ಲವುದು ಅಸಾಧ್ಯ. ದ್ವೇಷಕ್ಕೆ ಆರಂಭ, ಅಂತ್ಯ ಎಂಬುದು ಇರುತ್ತದೆ. ಆದರೆ ಪ್ರೀತಿಗೆ ಇವೆರಡು ಇರುವುದಿಲ್ಲ. ಇಂತಹ ಅಂಶಗಳನ್ನು ಸಾರುವ ಚಿತ್ರ ‘ನಾನು ಲವ್ವರ್ ಆಫ್ ಜಾನು’ ನೋಡಬಹುದು. ಸಿನಿಮಾ ಕುರಿತು ಹೇಳುವುದಾದರೆ ಜಾನು ಹಿಂದೆ ಹೋಗುವ ದೇವ ಅವಳನ್ನು ಗೆಲ್ಲಲು ಸರ್ಕಸ್ ಮಾಡುವುದು ಆರಂಭದಲ್ಲಿ ಮಿತಿ ಇಲ್ಲದೆ ಬರುತ್ತದೆ. ವಿರಾಮದ ನಂತರ ಅದನ್ನು ಉಳಿಸಿಕೊಳ್ಳಲು ಇಬ್ಬರು ಹೋರಾಡುತ್ತಾರೆ. ಲವ್ ಅಂದ ಮೇಲೆ ವಿಲನ್ ಇರಲೆಬೇಕಂಬ ನಿಯಮದಂತೆ ಇಲ್ಲೂ ಕೂಡ ದುರಳ ವ್ಯಕ್ತಿ ಬರುತ್ತಾನೆ. ಮುಂದೆ ಏನು ಕಾದಿದೆಯೋ ಎಂದು ನೋಡುತ್ತಾ ಹೋದರೆ ಅಲ್ಲಿರುವುದು ಕ್ರಾಂತಿ. ವ್ಯವಸ್ಥಯನ್ನು ಉಳಿಸಬೇಕು ಎಂದುಕೊಂಡ ಕ್ರಾಂತಿಕಾರಿಗಳು ತಮ್ಮ ಉಳುವಿಗಾಗಿ ಒದ್ದಾಡುವ ರೀತಿಯಲ್ಲಿ ಬರುತ್ತದೆ. ಕೊನೆಗೆ ಪ್ರೀತಿ ಗೆಲ್ಲುತ್ತಾ? ಸೋಲುತ್ತಾ” ಅಂತ ತಿಳಿಯಲು ಟಾಕೀಸ್‍ಗೆ ಬರಬೇಕು. ನಿರ್ದೇಶಕರು ಚಿತ್ರವನ್ನು ಕತೆಯೇ ವಿಲನ್ ಎಂದು ಹೇಳಿಕೊಂಡಿದ್ದಾರೆ.

ಲವರ್ ಬಾಯ್ ಆಗಿ ವಿಶಾಲ್ ಹಾಗೇ ಬಜಾರಿ ಹುಡುಗಿ ಲವ್ ಮಾಡುವ ಮಂಜುಳಾ ನಾಯಕಿ ಇಬ್ಬರಿಗೂ ನಟನೆ ಹೊಸ ಅನುಭವವಾಗಿರುವುದಿಂದ ಹೆಚ್ಚೇನು ಹೇಳುವ ಆಗಿಲ್ಲ. ನಗಿಸಲು ಇದ್ದಾರೆಂದು ಬರುವ ಕುರಿಪ್ರತಾಪ್, ಚಿಕ್ಕಣ್ಣ ಸಪ್ಪೆ ಎನಿಸುತ್ತಾರೆ. ಉಳಿದಂತೆ ಮೃಧು ಖಳನಾಯಕನಾಗಿ ಸುಚೇಂದ್ರಪ್ರಸಾದ್, ರಾಕ್‍ಲೈನ್ ಸುಧಾಕರ್, ಹರಿಣ ನಟನೆ ಇದೆ. ಶಿವು ಕ್ಯಾಮಾರ ಕೆಲಸ ಅಲ್ಲಲ್ಲಿ ಕಣ ್ಣಗೆ ತಂಪು ಕೊಡುತ್ತದೆ. ಶ್ರೀಧರ್.ವಿ.ಜಿ ಸಂಗೀತದಲ್ಲಿ ಹಾಡುಗಳನ್ನು ಒಮ್ಮೆ ಆಲಿಸಬಹುದು. ಮೊದಲ ಬಾರಿ ನಿರ್ದೇಶನ ಮಾಡಿರುವ ಸುರೇಶ್.ಜಿ ಒಳ್ಳೆ ಕತೆಯನ್ನು ಆಯ್ಕೆ ಮಾಡಿಕೊಂಡಿರುವುದು ಗೊತ್ತಾಗುತ್ತದೆ. ಚಂದ್ರು..ಕೆ.ವಿ, ರಾಜುಕಲ್ಕುಣ ಕಿ, ವಿಷ್ಣುಭಂಡಾರಿ ಮತ್ತು ರವಿಶಂಕರ್.ಕೆ.ಬಿ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ವಿಷ್ಣುಭಂಡಾರಿ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ.
ಸಿನಿ ಸರ್ಕಲ್. ಇನ್ ನ್ಯೂಸ್
-10/02/18


ಬಿಡುಗಡೆ ಹಾದಿಯಲ್ಲಿ ನಾನು ಐ/ಔ ಜಾನು
ವೈಜ್ಘಾನಿಕ ಚಳುವಳಿ ಆದಾಗ, ಪ್ರೀತಿ ಬಂದು ಅದನ್ನು ತಡೆಯುತ್ತೆ ಎಂಬುದು ‘ನಾನು ಐ/ಔ ಜಾನು’ ಹೊಸ ತಂಡದವರ ಚಿತ್ರದಲ್ಲಿ ಮೂಡಿಬಂದಿದೆ. ನಾಯಕಿ ಹೆಸರು ಜಾನಕಿ ಮುದ್ದಾಗಿ ಜಾನು ಅಂತ ಕರೆಯುತ್ತಾರೆ. ಕತೆಯಲ್ಲಿ ಅಣ್ಣ-ಅತ್ತಿಗೆ ಬಾಂದವ್ಯ, ಚಿಕ್ಕಣ್ಣನ ಕಾಮಿಡಿ ಅಂಶಗಳು, ನಕರಾತ್ಮಕ ಪಾತ್ರಕ್ಕೆ ಸುಚೇಂದ್ರಪ್ರಸಾದ್ ಇರುವುದು ವಿಶೇಷವಾಗಿದೆ. ರಚಿಸಿ , ನಿರ್ದೇಶನ ಮಾಡಿರುವ ಜಿ.ಸುರೇಶ್ ಪ್ರಕಾರ ಕತೆಯೇ ವಿಲನ್. ಅದು ಯಾವ ರೀತಿ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು . ಆತನ ಒಂದು ತಪ್ಪು ಚಳುವಳಿಯಾಗಿ ಕ್ರಾಂತಿಯಾಗಿ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎಂಬುದು ಸಿನಿಮಾದ ಸಾರಾಂಶವಾಗಿದೆ. ಓದಿ ತನ್ನದೆ ವ್ಯಾಪಾರದಲ್ಲಿ ಬದುಕಬೇಕಂಬ ಹಂಬಲವಿರುವ ಪಾತ್ರದಲ್ಲಿ ವಿಶಾಲ್ ನಾಯಕ. ಜೋರು ಹುಡುಗಿ, ಯಾರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೆ ಗುರ್ ಎನ್ನುತ್ತಾ ನಾಯಕನ ಎದುರು ಮನೆಯಲ್ಲಿದ್ದು, ಮುಂದೆ ಆತನ ಪ್ರೀತಿ ಹಿಂದೆ ಬೀಳುವ ಪಾತ್ರದಲ್ಲಿ ತುಮಕೂರಿನ ಕಿರುತರೆ ನಟಿ ಮಂಜುಳಾಗಂಗಪ್ಪಾ ನಾಯಕಿ. ಬೆಂಗಳೂರು, ಚಿಕ್ಕಮಗಳೂರು, ತುಮಕೂರು ತಟಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಶ್ರೀನಾಥ್‍ವಿಜಯ್ ಸಂಗೀತ, ಛಾಯಗ್ರಹಣ ಶಿವು.ಬಿ.ಕೆ.ಕುಮಾರ್, ಸಂಕಲನ ರಾಜಶಿವ, ಸಾಹಿತ್ಯ ಡಾ.ನಾಗೇಂದ್ರಪ್ರಸಾದ್, ಸಾಹಸ ವಿಕ್ರಮ್‍ಮೋರ್ ನಿರ್ವಹಿಸಿದ್ದಾರೆ. ಚಂದ್ರು..ಕೆ.ವಿ, ರಾಜುಕಲ್ಕುಣ ಕಿ, ವಿಷ್ಣುಭಂಡಾರಿ ಮತ್ತು ರವಿಶಂಕರ್.ಕೆ.ಬಿ ನಿರ್ಮಾಪಕರುಗಳು ಅಲ್ಲದೆ ವಿಷ್ಣುಭಂಡಾರಿ ಖಳನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಜಯಣ್ಣ ಸಂಸ್ಥೆ ಮೂಲಕ ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-6/02/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore