HOME
CINEMA NEWS
GALLERY
TV NEWS
REVIEWS
CONTACT US
ಬಿಡುಗಡೆ ಬಾಗಿಲಿಗೆ ಮುಂದಿನ ಬದಲಾವಣೆ
ಅಂದೂ ಒಂದು ಕಾಲವಿತ್ತು. ಸಿಂಗಲ್ ಪರದೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದೇ ಚೆಂದ, ಖುಷಿ ಕೊಡುತ್ತಿತ್ತು. ಪ್ರೇಕ್ಷಕ ಹೀರೋನ ದೃಶ್ಯ ಬಂದಾಗ ಶಿಳ್ಳೆ ಹೊಡೆಯುವುದು, ಕೂಗುವುದು, ಡ್ಯಾನ್ಸ್ ಮಾಡುವುದು ಎಲ್ಲವು ಟಾಕೀಸಿನೊಳಗೆ ಆಗುತ್ತಿತ್ತು. ಕಾಲ, ತಂತ್ರಜ್ಘಾನ ಬೆಳೆದಂತೆ ಚಿತ್ರಮಂದಿರಗಳು, ಹೂವಿನ ಹಾರ, ಕಟ್‍ಔಟ್‍ಗಳು ಕಡಿಮೆಯಾಗುತ್ತಾ ಮಲ್ಟಿಪ್ಲೆಕ್ಸ್‍ಗಳು ಹುಟ್ಟಿಕೊಳ್ಳುತ್ತಿವೆ. ಇದರ ಕಲ್ಪನೆ ಮೇಲೆ ಬೆಳಕು ಚೆಲ್ಲುವ ‘ಮುಂದಿನ ಬದಲಾವಣೆ’ ಚಿತ್ರವೊಂದು ಜನರಿಗೆ ತೋರಿಸಲು ಸಜ್ಜಾಗಿದೆ. ಶೇಕಡ 60 ರಷ್ಟು ಕತೆಯು ಟಾಕೀಸ್‍ನಲ್ಲಿ ನಡೆಯಲಿರುವುದರಿಂದ ಕತೆಗೆ ಪೂರಕವಾಗಿ ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಇದಕ್ಕಾಗಿ ಬೆಂಗಳೂರಿನಲ್ಲಿವ ಹೆಚ್‍ಎಂಟಿ ಚಿತ್ರಮಂದಿರದಲ್ಲಿ ಶೂಟಿಂಗ್, ಉಳಿದಂತೆ ತುಮಕೂರು, ದೇವರಾಯನದುರ್ಗ, ಚಿಕ್ಕನಾಯಕನಹಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಗಟ್ಟಿಕತೆ ಇಲ್ಲದಿದ್ದರೂ 2.05 ಗಂಟೆಗಳ ಕಾಲ ಮನರಂಜನೆ ಖಚಿತವಂತೆ.

ಕಾಲೇಜು ತಂಡವೊಂದು ಸಿನಿಮಾ ನೋಡಲು ಸಿಂಗಲ್ ಟಾಕೀಸ್‍ಗೆ ಹೋದಾಗ ಅಲ್ಲಿ ಹಲವು ಘಟನೆಗಳು, ನೆನಪುಗಳು ಬರುತ್ತವೆ. ಕತೆಯಲ್ಲಿ ನಾಯಕನು ತನ್ನ ಸ್ನೇಹಿತರೊಂದಿಗೆ ಕಾಲೇಜ್‍ಗೆ ಬಂಕ್ ಹೊಡೆದು ಟಾಕೀಸ್‍ಗೆ ಹೋಗುತ್ತಾನೆ. ಅಲ್ಲಿ ಬ್ರೇಕ್‍ಅಪ್ ಆದ ಪ್ರೇಮಿ ಭೇಟಿಯಾಗುತ್ತದೆ. ಮುಂದೆ ಇಬ್ಬರ ಫ್ಲಾಶ್‍ಬ್ಯಾಕ್ ತೆರೆದುಕೊಳ್ಳುತ್ತದೆ. ಕ್ಲೈಮಾಕ್ಸ್‍ನಲ್ಲಿ ಚಿತ್ರಮಂದಿರದಿಂದ ಜೋಡಿಗಳಾಗಿ ಹೊರಗೆ ಬರುತ್ತಾರೆ ಎಂಬುದು ಚಿತ್ರದ ಸಾರಾಂಶವಾಗಿದೆ. ಒಂದೊಂದು ಪಾತ್ರಕ್ಕೂ ಹಿನ್ನಲೆಯನ್ನು ಹೇಳಲಾಗಿದೆ. ಸಿನಿಮಾ ನೋಡಿ ಹೊರಬಂದಾಗ ನೋಡುಗನ ಜೀವನದಲ್ಲಿ ಏನೋ ಒಂದು ಬದಲಾವಣೆ ಆಗಿದೆ ಅನಿಸುತ್ತದೆ. ಸಿಂಪಲ್‍ಸುನಿ ಬಳಿ ಸಹಾಯಕನಾಗಿ ಅನುಭವ ಪಡೆದುಕೊಂಡಿದ್ದ ಪಿ.ಎಸ್. ಪ್ರವೀಣ್‍ಭೂಷಣ್ ಕತೆ, ಐದು ಹಾಡುಗಳಿಗೆ ಸಾಹಿತ್ಯ, ನಿರ್ದೇಶನ ಹಾಗೂ ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿ ಸಂಗೀತ, ಉಳಿದಂತೆ ಕಾವ್ಯಗೌಡ, ಮಾಲಾಶ್ರೀ., ಅಶ್ವಿನಿರಾವ್, ಆರ್ಯನ್ ನಟನೆ ಇದೆ. ಕಾರ್ತಿಕ್‍ವೆಂಕಟೇಶ್ ಸಂಗೀತ, ಕೋಟೇಶ್ವರ್.ಎನ್. ಛಾಯಗ್ರಹಣವಿದೆ. ತಮ್ಮನಿಗೆ ಬೆಂಬಲ ನೀಡುವ ಸಲುವಾಗಿ ಪಿ.ಎಸ್.ಫಣಿಭೂಷಣ್ ನಿರ್ಮಾಣ ಮಾಡಿರುವ ಚಿತ್ರವು ಇದೇ ಶುಕ್ರವಾರದಂದು ತೆರೆಗೆ ಬರಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
3/12/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\