HOME
CINEMA NEWS
GALLERY
TV NEWS
REVIEWS
CONTACT US
ಮುಂದಿನ ಬದಲಾವಣೆ ಇದು ಸಿನಿಮಾದ ಹೆಸರು
‘ಮುಂದಿನ ಬದಲಾವಣೆ’ ಎಂದು ಸಿನಿಮಾದ ಜಾಹಿರಾತುಗಳು ಪತ್ರಿಕೆಯಲ್ಲಿ ಪ್ರಕಟವಾಗುವುದನ್ನು ನೋಡಿದ್ದೇವೆ. ಇದನ್ನೆ ಹೊಸ ತಂಡವೊಂದು ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ. ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಪ್ರವೀಣ್‍ಭೂಷಣ್.ಪಿ.ಎಸ್. ಕತೆ ಬರೆದು ನಿರ್ಮಾಪಕರಿಗಾಗಿ ಸೈಕಲ್ ತುಳಿದಿರೂ ಫಲಿತಾಂಶ ಶೂನ್ಯ. ಕೊನೆಗೆ ಕುಟುಂಬದವರು ಧೈರ್ಯ ನೀಡಿದ್ದಾರೆ. ಬ್ಯಾಂಕ್ ನೌಕರ, ರೈತನಾಗಿರುವ ಅಣ್ಣ ಪಣಿಭೂಷಣ್.ಪಿ.ಎಸ್. ತಮ್ಮನ ಪ್ರತಿಭೆಯನ್ನು ಗುರುತಿಸಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಅದರಂತೆ ನಿರ್ದೇಶನ ಮತ್ತು ನಾಯಕನಾಗಿ ನಟಿಸಿರುವ ಸಿನಿಮಾವು ಸೆನ್ಸಾರ್ ಹಂತಕ್ಕೆ ಹೋಗಲು ಸಿದ್ದವಿದೆ. ಕತೆಯಲ್ಲಿ ನಾಯಕನು ತನ್ನ ಸ್ನೇಹಿತರೊಂದಿಗೆ ಕಾಲೇಜ್‍ಗೆ ಬಂಕ್ ಹೊಡೆದು ಟಾಕೀಸ್‍ಗೆ ಹೋಗುತ್ತಾನೆ. ಅಲ್ಲಿ ಬ್ರೇಕ್‍ಅಪ್ ಆದ ಪ್ರೇಮಿ ಭೇಟಿಯಾಗುತ್ತದೆ. ಮುಂದೆ ಇಬ್ಬರ ಫ್ಲಾಶ್‍ಬ್ಯಾಕ್ ತೆರೆದುಕೊಳ್ಳುತ್ತದೆ. ಕ್ಲೈಮಾಕ್ಸ್‍ನಲ್ಲಿ ಚಿತ್ರಮಂದಿರದಿಂದ ಜೋಡಿಗಳಾಗಿ ಹೊರಗೆ ಬರುತ್ತಾರೆ ಎಂಬುದು ಚಿತ್ರದ ಸಾರಾಂಶವಾಗಿದೆ.

ಕಾಲೇಜು ಹುಡುಗಿ ಸಂಗೀತ ನಾಯಕಿಯಾಗಿ ಮೊದಲ ಚಿತ್ರ. ಇವರೊಂದಿಗೆ ಹೊಸ ಕಲಾವಿದರುಗಳಾದ ಮಾಲಾಶ್ರೀ, ಖಳನಟನಾಗಿ ಲಕ್ಷಣ್‍ಗೌಡ, ಗಿರಿ ಮತ್ತು ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಕಾವ್ಯಗೌಡ ನಟನೆ ಇದೆ. ಆರು ಹಾಡುಗಳಿಗೆ ಕಾರ್ತಿಕ್‍ವೆಂಕಟೇಶ್ ಸಂಗೀತವಿದೆ. ತುಮಕೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಒಂದು ಕಾಲದಲ್ಲಿ ಸಾಹಿತಿಯಾಗಲು ಅವಕಾಶ ಕಲ್ಪಿಸಿದ್ದ ಸಂಗೀತ ನಿರ್ದೇಶಕ ಕದ್ರಿಮಣಿಕಾಂತ್‍ರನ್ನು ನೆನಸಿಕೊಂಡ ನಿರ್ದೇಶಕರು ಅವರಿಂದಲೇ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸಿಲಾಯಿತು. ಅವರು ಹೇಳುವಂತೆ ಹೊಸದಾಗಿ ಬರುವವರಿಗೆ ತಾನು ಸಾಹಿತಿಯಾಗಬೇಕೆಂಬ ಕನಸು ಇರುತ್ತದೆ. ಅದರಂತೆ ಪ್ರವೀಣ್‍ರವರು ಒಂದು ಹಾಡು ಬರೆದು ಕಳುಹಿಸಿದ್ದರು. ಅದನ್ನು ಇಷ್ಟಪಟ್ಟು ಕರೆಸಿಕೊಂಡು ಚಿತ್ರದಲ್ಲಿ ಬರೆಯಲು ಕೆಲಸವನ್ನು ಕಲ್ಪಿಸಲಾಯಿತು. ಇಂದು ನಾಯಕನಾಗಿ ಪರಿಚಯವಾಗುತ್ತಿದ್ದಾರೆ ಒಳ್ಳೆಯದಾಗಲಿ ಎಂದರು. ನಟ ಅನಿರುದ್ದ್, ಕನ್ನಡ ರಕ್ಷಣಾ ವೇದಿಕೆ ಪದಾದಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು. ಇದಕ್ಕೂ ಮುನ್ನ ಚಿತ್ರದ ಟ್ರೈಲರ್, ಎರಡು ಹಾಡುಗಳು ದೊಡ್ಡ ಪರದೆ ಮೇಲೆ ಪ್ರದರ್ಶನಗೊಂಡಿತು.
ಸಿನಿ ಸರ್ಕಲ್.ಇನ್ ನ್ಯೂಸ್
9/09/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore