HOME
CINEMA NEWS
GALLERY
TV NEWS
REVIEWS
CONTACT US
ಬಿಡುಗಡೆಗೆ ಸಿದ್ದ ಮಿಸ್ಟರ್ LL.B
‘ಮಿಸ್ಟರ್ ಐಐಃ’ ಟೈಟಲ್ ಕೇಳಿದಾಗ ವಕೀಲನ ಕತೆ ಇರಬಹುದು ಅಂದುಕೊಂಡರೆ ತಪ್ಪಾಗುತ್ತದೆ. ಲ್ಯಾಂಡ್ ಲಾರ್ಡ್ ಭದ್ರೆಗೌಡನನ್ನು ಪ್ರೀತಿಯಿಂದ ಈ ರೀತಿಯಲ್ಲಿ ಕರೆಯುತ್ತಾರೆ. ಹಳ್ಳಿಯಲ್ಲಿ ಕ್ಯಾಟ್ಲೆ ಕೊಡುತ್ತಾ, ಪಟ್ಟಣಕ್ಕೆ ಹೋದಾಗ ಎಲ್ಲರು ಸಂಭ್ರಮಿಸುತ್ತಾರೆ. ವಾಪಸ್ಸು ಹಂಗೇ, ಹೇಗೆ ಬರುತ್ತಾನೆ. ಬರುವಾಗ ಪ್ರೀತಿ, ಸ್ನೇಹ ಉಳಿಸಿಕೊಳ್ತಾನಾ. ವಿರಾಮದ ನಂತರ ಹಲವು ಮಗ್ಗಲುಗಳಲ್ಲಿ ಕತೆ ಸಾಗುತ್ತದೆ. ಫೈಟ್ಸ್ ಇರೋಲ್ಲ. ಭಾವನೆಗಳ ಮೂಲಕ ಹೊಡೆದಾಟ ಮಾಡುವ ಪಾತ್ರದಲ್ಲಿ ಶಿಶಿರ್‍ಶಾಸ್ತ್ರೀ ಹಿರಿತೆರೆಗೆ ನಂದೇ ರೋಡ್ ನಂದೇ ಸ್ಪೀಡು ಎಂದು ಅಡಿಬರಹದಲ್ಲಿ ಇರುವಂತೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ಜೋಡಿಯಾಗಿ ಗತ್ತು, ದೌಲತ್ತು, ಜಂಬದ ಹುಡುಗಿಯಾಗಿ ಲೇಖಾಚಂದ್ರ ನಾಯಕಿ. ಉಳಿದಂತೆ ಗೆಳಯನಾಗಿ ಕಂಪೆಗೌಡ, ಶ್ರೀನಿವಾಸಮೂರ್ತಿ ಮುಂತಾದವರು ನಟಿಸಿದ್ದಾರೆ.

ಹಾಡುಗಳಿಗೆ ಮಂಜುಚರಣ್ ರಾಗ ಒದಗಿಸಿದ್ದಾರೆ. ಛಾಯಗ್ರಹಣ ಸುರೇಶ್‍ಬಾಬು, ಸಾಹಸ ಥ್ರಿಲ್ಲರ್‍ಮಂಜು, ಅವರದಾಗಿದೆ. ಸಾಯಿ ಆಡಿಯೋ ಸಂಸ್ಥೆ ಮೂಲಕ ಹೊರ ಬಂದಿರುವ ಹಾಡುಗಳನ್ನು ಸುದೀಪ್ ಬಿಡುಗಡೆ ಮಾಡಿದ್ದರು. ಗುಣವಂತ ಚಿತ್ರದ ನಂತರ ರಘುವರ್ಧನ್ ನಿರ್ಮಿಸಿ ನಿರ್ದೇಶನ ಮಾಡಿರುವುದು ವಿಶೇಷ. ಆರ್‍ವಿ ಕ್ರಿಯೇಶನ್ಸ್ ಮೂಲಕ ಸಿದ್ದಗೊಂಡಿರುವ ಚಿತ್ರವು ಇದೇ ತಿಂಗಳು ಹದಿನಾರರಂದು ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-6/02/18

ಮಿಸ್ಟರ್ ಐಐಃಗೆ ಮಿ.ಸುದೀಪ್‍ರಿಂದ ಮೋಹಿ
ಬುದುವಾರ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಿರುತೆರೆ ಕಲಾವಿದರ ದಂಡು ಹಾಜರಿತ್ತು. ಸಹದ್ಯೋಗಿ ಕುಲವಧು ಧಾರವಾಹಿ ನಾಯಕ ಶಿಶಿರ್‍ಶಾಸ್ತ್ರೀ ಹಿರಿತೆರೆಗೆ ನಟಿಸಿರುವ ‘ಮಿಸ್ಟರ್ ಐಐಃ’ ಚಿತ್ರಕ್ಕೆ ಶುಭಹಾರೈಸಲು ಹಾಗೂ ಸುದೀಪ್‍ರನ್ನು ನೋಡಲು ಆಗಮಿಸಿದ್ದರು. ಹೊರಗಡೆ ಜೋರಾಗಿ ಮಳೆ, ಒಳಗಡೆ ಹವಾನಿಯಂತ್ರಿತ ಸಭಾಂಗಣದಲ್ಲಿ ನಿರೂಪಕಿ ಹೆಬ್ಬುಲಿ ಬರುತ್ತಿದ್ದಾರೆಂದು ಹೇಳುತ್ತಲೆ ಇದ್ದರು. ಗೆಳಯ ಶ್ರವಂತ್ ನಾಯಕ ಶಿಶಿರ್‍ರನ್ನು ವೇದಿಕಗೆ ಆಹ್ವಾನಿಸಿ ಚಿತ್ರದ ಕುರಿತು ಮಾಹಿತಿ ನೀಡಲು ಕೋರಿಕೊಂಡರು. ಟೈಟಲ್ ಕೇಳಿದಾಗ ನನ್ನ ಪಾತ್ರ ವಕೀಲ ಇರಬಹುದೆಂದು ಅನಿಸುತ್ತದೆ. ಲ್ಯಾಂಡ್ ಲಾರ್ಡ್ ಭದ್ರೆಗೌಡ ಆಗಿದೆ. ಹಳ್ಳಿಯಲ್ಲಿ ಎಲ್ಲರಿಗೂ ಕ್ಯಾಟ್ಲೆ ಕೊಡುತ್ತಾ, ಪಟ್ಟಣಕ್ಕೆ ಹೋದಾಗ ಎಲ್ಲರು ಸಂಭ್ರಮಿಸುತ್ತಾರೆ. ವಾಪಸ್ಸು ಹಂಗೇ, ಹೇಗೆ ಬರುತ್ತೇನೆ. ಬರುವಾಗ ಪ್ರೀತಿ, ಸ್ನೇಹ ಉಳಿಸಿಕೊಳ್ತಾನಾ. ವಿರಾಮದ ನಂತರ ಹಲವು ಮಗ್ಗಲುಗಳಲ್ಲಿ ಕತೆ ಸಾಗುತ್ತದೆ. ಫೈಟ್ಸ್ ಇರೋಲ್ಲ. ಭಾವನೆಗಳ ಮೂಲಕ ಹೊಡೆದಾಟ ಮಾಡಲಾಗುತ್ತದೆ. ಸುದೀಪ್ ಸರ್ ಅವರನ್ನು ಆಹ್ವಾನಿಸಲು ಹೋದಾಗ ಅವರು ಮನೆಗೆ ಕರೆಸಿಕೊಂಡು ಚಿತ್ರರಂಗದಲ್ಲಿ ಹೇಗಿರಬೇಕೆಂದು ಸಲಹೆ ನೀಡಿರುತ್ತಾರೆ. ಅಂತಹ ದೊಡ್ಡ ವ್ಯಕ್ತಿ ನಮ್ಮಂತ ಸಣ್ಣವರಿಗೆ ಹಿತವಚನ ನೀಡಿದ್ದರಿಂದಲೇ ವರ್ತಮಾನದಲ್ಲಿ ಕಿಚ್ಚಸುದೀಪ್ ಆಗಿರುವುದು ಎಂದರು. ನಿರ್ಮಾಪಕ ರಘುವರ್ಧನ್ ಮಾತಿನ ಪರಿ ಈ ರೀತಿ ಇತ್ತು. ಒಬ್ಬ ನಿರ್ಮಾಪಕನಾದವನು ಸಿನಿಮಾ ಮಾಡಬೇಕು. ನಿರ್ದೇಶಕನಾದವನು ನಾಯಕನನ್ನು ಹುಟ್ಟುಹಾಕಬೇಕು. ಗುಣವಂತ ನಿರೀಕ್ಷೆಯಂತೆ ಸಿನಿಮಾ ಹೋಗಲಿಲ್ಲ. ಬಿಡುವು ಮಾಡಿಕೊಂಡಿದ್ದೆ. ಸ್ಟಾರ್ ಸಿನಿಮಾಕ್ಕೆ ನಿರ್ಮಾಪಕರನ್ನು ಒಪ್ಪಿಸೋದು ಕಷ್ಟ. ತಂಡದಲ್ಲಿ ಹಣ ಇಲ್ಲ. ಎಲ್ಲರು ಪ್ರೀತಿ, ಶಕ್ತಿ, ಅಭಿಮಾನದಿಂದ ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ಬಂದಾಗ 200 ರೂ. ಕೈಯಲ್ಲಿ ಇತ್ತು. ಇಂದು ಒಂದು ಕೋಟಿ ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ಬಂದಿದ್ದೇನೆ. ಹೊಸ ತಂಡದಲ್ಲಿ ಸುಖವಿದೆ. ಒಳ್ಳೆ ಉದ್ದೇಶದಿಂದ ಬೇಡಿಕೆ ಇಲ್ಲದೆ ಬಂದರೆ ಚಿತ್ರ ಆಗುತ್ತೆ ಎಂಬುದಕ್ಕೆ ಸಾಕ್ಷಿ ಎಲ್‍ಎಲ್‍ಬಿ ಉದಾಹರಣೆಯಾಗಿದೆ. ಚಿತ್ರೀಕರಣ ಸಂದರ್ಭದಲ್ಲಿ ತೊಂದರೆ ಕೊಟ್ಟಿದ್ದರೆ ಸಾರಿ ಎನ್ನುವಾಗ ಸುದೀಪ್ ಆಗಮನ ಸಭೆಗೆ ಮೆರುಗು ಬಂತು.

ಒಂದು ಹಾಡನ್ನು ವೀಕ್ಷಿಸಿ, ಸಿಡಿ ಬಿಡುಗಡೆ ಮಾಡಿದ ಸುದೀಪ್ ಎಂದನಂತೆ ಮಾತಿನ ಲಹರಿಗೆ ಜಾರಿದರು. ಬೇಗನೆ ಬರಬೇಕಂದು 4 ಘಂಟೆಗೆ ಹೊರಟೆ. ಮಳೆ, ಟ್ರಾಫಿಕ್‍ನಿಂದ ಇಷ್ಟುಹೊತ್ತು ಆಗಿದೆ. ಇಂದಿನ ಪರಿಸ್ಥಿತಿಯಲ್ಲಿ ಬೆಂಗಳೂರು ಕೆಟ್ಟದಾಗಿದೆ. ಮನೆಬಿಟ್ಟು ನೀವೆಲ್ಲಾ ಬಂದಿರುವುದು ಸಿನಿಮಾಕ್ಕೆ ಬೆಂಬಲ ನೀಡುವುದಕ್ಕೆ ಅಂತ ತಿಳಿಯಿತು. ಕಾದಿದ್ದಕ್ಕೆ ಥ್ಯಾಂಕ್ಸ್, ಕಾಯಿಸಿದ್ದಕ್ಕೆ ಕ್ಷಮೆ ಇರಲಿ. ಪ್ರತಿ ಸಿನಿಮಾವನ್ನು ಕಲಾವಿದರು, ತಂತ್ರಜ್ಘರು ಶ್ರಮದಿಂದ ಮಾಡುತ್ತಾರೆ. ಶ್ರದ್ದೆ , ಶ್ರಮ ಇರುವ ಕಡೆ ಫಲ ಸಿಗುತ್ತೆ. ಒಳ್ಳೆ ಪ್ರಯತ್ನ ಮಾಡಿದ್ದೀರಾ. ಸಮಯ ನೋಡಿಕೊಂಡು ಬಿಡುಗಡೆ ಮಾಡುವುದು ಸೂಕ್ತ. ಈಗ ಟ್ರಾಫಿಕ್ ಜಾಸ್ತಿ ಇದೆ. ಟ್ವಿಟ್ಟರ್ ಜಾಸ್ತಿ ನೋಡುತ್ತಿರುವುದರಿಂದ ಶಿಶಿರ್ ಹೆಚ್ಚು ಸಲ ವಿಷಯಗಳನ್ನು ಹರಿಬಿಟ್ಟಾಗ ಇವರ ಮೇಲೆ ಅಕ್ಕರೆ ಬಂತು. ಇಲ್ಲಿಗೆ ಬಂದಾಗ ಸಿನಿಮಾದ ವಿವರ ತಿಳಿಯಿತು. ಇವರ ಸಲುವಾಗಿ ಖುದ್ದು ಆಗಮಿಸಬೇಕಾಯಿತು. ಹುಡುಗಿ ಏನಾದರೂ ಆಗಿದ್ದರೆ ಎರಡನೆ ಮದುವೆ ಆಗಿರುತ್ತಿದ್ದೆ ಅಂದು ನಗಿಸಿದರು ಸುದೀಪ್. ಡಾ.ರಾಜ್‍ಕುಮಾರ್ ನಂತರ ಕಲೆ, ಪ್ರೌಡಿಮೆ ಬದ್ದತೆ ಇರುವುದು ಕಿಚ್ಚರಲ್ಲಿ ಮಾತ್ರ. ಬದುಕಿನಲ್ಲಿ ತಲ್ಲಣ, ತುಮುಲಗಳನ್ನು ಎದುರಿಸಿ ಗೆದ್ದು ನಿಂತಿದ್ದಾರೆ. ಅವರ ವೃತಿ ಇದಲ್ಲ. ತಂದೆ ದೊಡ್ಡ ಉದ್ದಿಮೆದಾರರು. ಪ್ರಪಂಚಕ್ಕೆ ಇವರು ಬಾರದೆ ಇದ್ದಲ್ಲಿ ಕನ್ನಡ ಚಿತ್ರರಂಗವು ಇಂತಹ ಮಹಾನ್ ಕಲಾವಿದನನ್ನು ಕಳೆದುಕೊಳ್ಳುತ್ತಿತ್ತು. ಬಿಗ್‍ಬಾಸ್ ನೋಡಿದಾಗಿನಿಂದ ನಮಗೆಲ್ಲರಿಗೂ ಬಾಸ್ ಆಗಿದ್ದಾರೆ ಅಂತ ನಿವೃತ್ತ ಐಎಎಸ್ ಸಿ.ಸೋಮಶೇಖರ್ ಹೇಳಿದಾಗ ಅಭಿಮಾನಿಗಳ ಕೂಗಾಟ, ಶಿಳ್ಳೆ ಕೇಳಿಸಿತು. ಐದು ಹಾಡುಗಳಿಗೆ ಸಂಗೀತ ನೀಡಿರುವ ಮಂಜುಚರಣ್, ಛಾಯಗ್ರಾಹಕ ಸುರೇಶ್‍ಬಾಬು ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದರು. ನಾಯಕಿ ಲೇಖಾಚಂದ್ರ ಗೈರುಹಾಜರಿಗೆ ಕಾರಣ ತಿಳಿಯಲಿಲ್ಲ.
-12/10/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore