HOME
CINEMA NEWS
GALLERY
TV NEWS
REVIEWS
CONTACT US
ಮೌನೇಶ್ವರ ಮಹಾತ್ಮರ ಪವಾಡಗಳು
ಪವಾಡ, ಮಹಿಮೆಗಳನ್ನು ನಡೆಸಿದವರು ಉತ್ತರ ಕರ್ನಾಟಕದಲ್ಲಿ ಹಲವರು ಇದ್ದಾರೆ. ಅದರ ಸಾಲಿಗೆ ಶ್ರೀ ಮೌನೇಶ್ವರ ಸ್ವಾಮೀಜಿ ಕೂಡ ಒಬ್ಬರಾಗಿದ್ದಾರೆ. ಜನತೆಗೆ ಇವರ ಬದುಕು, ಪವಾಡಗಳನ್ನು ತಿಳಿಸಲು ‘ ಶ್ರೀ ಮೌನೇಶ್ವರ ಮಹಾತ್ಮೆ’ ಎನ್ನುವ ಚಿತ್ರವೊಂದು ತೆರೆಗೆ ಬರುತ್ತಿದೆ. ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಭೀಮರಾಜ್.ಎಸ್.ವಜ್ರದ್ ಪ್ರಕಾರ ಭಕ್ತಿ ಗಳಿಸಲು ಆನಂದ ಇರಬೇಕು. ಅದು ಪ್ರೀತಿಯ ಮತ್ತೊಂದು ಮುಖ. ಇದು ಬದುಕಿಗೆ ಬೇಕಾದ ಸ್ಪೂರ್ತಿ ಸಿಗುತ್ತದೆ. ರಾಯಚೂರು, ಬಿಜಾಪುರ, ಯಾದಗೀರ್, ಗದಗ, ಗುಲ್ಬರ್ಗಾ ಸ್ಥಳಗಳಲ್ಲಿ ಇವರ ಹೆಸರು ಜನಜನಿತವಾಗಿದೆ. ಅದರಿಂದಲೇ ಆಯಾ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರಿದವರೆಂದು ಮಹಾತ್ಮನ ಕುರಿತು ಮಾಹಿತಿ ನೀಡಿದರು.

ಮೌನೇಶ್ವರ ಪಾತ್ರ ಮಾಡಿರುವ ಮಹೇಶ್ ಪಥ್ಯ ಮಾಡಿ ಎಲ್ಲವನ್ನು ತ್ಯಜಿಸಿ ಕ್ಯಾಮಾರ ಮುಂದೆ ನಿಂತುಕೊಂಡಿದ್ದರಂತೆ. ಚಿನ್ಮಯ್ ಬಾಲ ಮೌನೇಶ್ವರ, ತಂದೆಯಾಗಿ ರಾಮಸ್ವಾಮಿ, ತಾಯಿ ಪಾತ್ರಕ್ಕೆ ಸ್ಪಂದನಾಪ್ರಸಾದ್, ಭಕ್ತನಾಗಿ ಶಿವಕುಮಾರಾರಾಧ್ಯ , ಹಾಸ್ಯ ಪುರೋಹಿತನಾಗಿ ಕಾಮಿಡಿಕಿಲಾಡಿಗಳು ಖ್ಯಾತಿಯ ಮಿಮಿಕ್ರಿರಾಜು ನಟಿಸಿದ್ದಾರೆ. ಸಂಗೀತ ಹರ್ಷಕೋಗೋಡ್, ಸಂಕಲನ ಶ್ರೀಜವಳಿ, ಛಾಯಗ್ರಹಣ ಜಯಪ್ರಕಾಶ್ ಅವರದಾಗಿದೆ. ಚಂದ್ರಶೇಖರ ವಜ್ರದ್ ನಿರ್ಮಾಣ ಮಾಡಿರುವ ಚಿತ್ರವು ಬೆಂಗಳೂರು ಒಂದು ಕೇಂದ್ರದಲ್ಲಿ ಉಳಿದಂತೆ ಆ ಭಾಗದ ಚಿತ್ರಮಂದರಗಳಲ್ಲಿ ಹೆಚ್ಚಾಗಿ ಇದೇ ಶುಕ್ರವಾರದಂದು ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/01/19

ಶ್ರೀ ಮೌನೇಶ್ವರ ಮಹಾತ್ಮೆ ಹಾಡುಗಳ ಅನಾವರಣ
ಉತ್ತರ ಕರ್ನಾಟಕ ಭಾಗದಲ್ಲಿ ಪವಾಡ, ಮಹಿಮೆಗಳನ್ನು ನಡೆಸಿದವರು ಹಲವರು ಇದ್ದಾರೆ. ಅದರ ಸಾಲಿಗೆ ಶ್ರೀ ಮೌನೇಶ್ವರ ಸ್ವಾಮೀಜಿ ಕೂಡ ಒಬ್ಬರಾಗಿದ್ದಾರೆ. ಜನತೆಗೆ ಇವರ ಬದುಕು, ಪವಾಡಗಳನ್ನು ತಿಳಿಸಲು ‘ಮೌನೇಶ್ವರ ಮಹಾತ್ಮೆ’ ಎನ್ನುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ. ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಭೀಮರಾಜ್.ಎಸ್.ವಜ್ರದ್ ಪ್ರಕಾರ ಭಕ್ತಿ ಗಳಿಸಲು ಆನಂದ ಇರಬೇಕು. ಅದು ಪ್ರೀತಿಯ ಮತ್ತೊಂದು ಮುಖ. ಇದು ಬದುಕಿಗೆ ಬೇಕಾದ ಸ್ಪೂರ್ತಿ ಸಿಗುತ್ತದೆ. ಬಿಜಾಪುರ, ರಾಯಚೂರು, ಯಾದಗೀರ್, ಗುಲ್ಬರ್ಗಾ, ಗದಗ ಸ್ಥಳಗಳಲ್ಲಿ ಇವರ ಹೆಸರು ಚಿರಪರಿಚಿತವಾಗಿದೆ. ಅದರಿಂದಲೇ ಆಯಾ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಸಾರಿದವರು. ಅದಕ್ಕಾಗಿ ಇಸ್ಲಾಂ ಧರ್ಮಗುರುಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆಂದು ಮಹಾತ್ಮನ ಕುರಿತು ಮಾಹಿತಿ ನೀಡಿದರು. ಮೌನೇಶ್ವರ ಪಾತ್ರ ಮಾಡಿರುವ ಮಹೇಶ್ ಪಥ್ಯ ಮಾಡಿ ಎಲ್ಲವನ್ನು ತ್ಯಜಿಸಿ ಕ್ಯಾಮಾರ ಮುಂದೆ ನಿಂತುಕೊಂಡಿದ್ದರಂತೆ. ಬಾಲಕನಾಗಿ ಚಿನ್ಮಯ್, ಮೌನೇಶ್ ತಂದೆಯಾಗಿ ರಾಮಸ್ವಾಮಿ, ತಾಯಿ ಪಾತ್ರಕ್ಕೆ ಸ್ಪಂದನಾಪ್ರಸಾದ್, ಭಕ್ತನಾಗಿ ಶಿವಕುಮಾರಾರಾಧ್ಯ ಅಭಿನಯವಿದೆ. .

ಧ್ವನಿಸಾಂದ್ರಿಕೆ ಅನಾವರಣಗೊಳಿಸಿ ಮಾತನಾಡಿದ ಪದ್ಮಶ್ರೀ ದೊಡ್ಡರಂಗೇಗೌಡರು ಮಹಾತ್ಮರು 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಆದಮೇಲೆ ಬದುಕನ್ನು ಅರಸಲು ಅಡಗಿದ್ದರು. ಇವರು ವಿಶಾಲವಾದ ಧರ್ಮಚಿಂತಕರು. ಶಿಶುನಾಳಷರೀಫರಂತೆ ಬದುಕಿನ ನೋಟ ಗ್ರಹಿಸಿದವರು. ನಮ್ಮದು ಅನುಭವ ಇದ್ದರೆ, ಅವರು ಅನುಭಾವ ಹೊಂದಿದ್ದರು. ಅವರ ಆಯ್ದ ವಚನಗಳನ್ನು ಚಿತ್ರದಲ್ಲಿ ವ್ಯಾಖ್ಯಾನ ಮಾಡಿದ್ದಾರೆಂದು ತಿಳಿದುಬಂದಿದೆ. ಪ್ರಚಲಿತ ಭಕ್ತಿ ಪ್ರಧಾನ ಚಿತ್ರಗಳ ಅವಕಾಶಗಳು ಕಡಿಮೆ ಆಗುತ್ತಾ ಇದೆ. ಇವತ್ತಿನ ವಿಷಮ ಪರಿಸರದಲ್ಲಿ ಇಂತಹ ಚಿತ್ರಗಳು ಭಕ್ತಿ ಭಾವೋದ್ವೇಗಕ್ಕೆ ಕರೆದುಕೊಂಡು ಹೋಗಲಿ ಎಂದು ಅಭಿಪ್ರಾಯಪಟ್ಟರು. ಸಂಗೀತ ಹರ್ಷಕೋಗೋಡ್, ಸಂಕಲನ ಶ್ರೀಜವಳಿ, ಛಾಯಗ್ರಹಣ ಜಯಪ್ರಕಾಶ್ ಅವರದಾಗಿದೆ. ಸಹೋದರ ಚಂದ್ರಶೇಖರ್‍ವಜ್ರದ್ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
17/04/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore