HOME
CINEMA NEWS
GALLERY
TV NEWS
REVIEWS
CONTACT US
ಕೀರ್ತಿ ಬಂದರೆ ಬೀಗಬೇಡಿ, ಬಾಗಿ ನಡೀರಿ – ದೊಡ್ಡಣ್ಣ
ಹಿರಿಯ ನಟ ದೊಡ್ಡಣ್ಣ ಹೆಸರಿಗೆ ತಕ್ಕಂತೆ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಹೊಸ ತಂಡದವರಿದ್ದರೆ ಅಲ್ಲೊಂದು ಕಿವಿ ಮಾತು ಹೇಳುತ್ತಾರೆ. ಸೋಮವಾರ ಕಲಾವಿದರ ಸಂಘದಲ್ಲಿ ‘ಮೂರ್ಕಲ್ ಎಸ್ಟೇಟ್ ‘ ಸಿನಿಮಾದ ಧ್ವನಿಸಾಂದ್ರಿಕೆ ಅನಾವರಣ ಮಾಡಿದ ದೊಡ್ಡಣ್ಣ ಮಾತನಾಡಿ ನಿರ್ಮಾಪಕರು ಭದ್ರಾವತಿ ಅಂತ ತಿಳಿದು ಸಂತಸವಾಯಿತು. ಅದೇ ಊರಲ್ಲಿ 1967ರಂದು ಕೆಲಸಕ್ಕೆ ಸೇರಿ, ಮುಂದೆ ನಟನಾಗಿ ಇಲ್ಲಿಯತನಕ ಬಂದಿದ್ದೇನೆ. ಹೊಸ ಪೀಳಿಗೆ ಚಿತ್ರರಂಗಕ್ಕೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ಸತತವಾದ ಸಹನೆ,ಸಾಧನೆ ಇದ್ದರೆ ಗುರಿ ಮುಟ್ಟಲು ಸಾದ್ಯ. ಅಂತಹ ಸಾತ್ವಿಕ ಗುಣಗಳು ಡಾ.ರಾಜ್‍ಕುಮಾರ್ ಅವರಿಗೆ ಲಭಿಸಿತ್ತು. ಹಣ, ಹೆಸರು ಬಂದಾಗ ಬೀಗಬೇಡಿ, ಬಾಗಿ ನಡೆಯಿರಿ. ಸಿನಿಮಾವು ಯಶಸ್ಸು ಕಾಣಲಿ, ಇದೇ ಜಾಗದಲ್ಲಿ ಶತದಿನೋತ್ಸವ ಕಾರ್ಯಕ್ರಮಕ್ಕೆ ಬರುವುದಾಗಿ ಹೇಳಿದರು.

ಸಕರಾತ್ಮಕ ಮತ್ತು ನಕರಾತ್ಮಕ ಶಕ್ತಿ ಮೇಲೆ ಕತೆ ಏಣೆಯಲಾಗಿದೆ. ಸೆಸ್ಪನ್ಸ್, ಥ್ರಿಲ್ಲರ್ ಮತ್ತು ಹಾರರ್ ಎಂದ ಮಾತ್ರಕ್ಕೆ ದೆವ್ವದ ಚಿತ್ರವಾಗಿಲ್ಲ. ಇದರ ಬದಲು ಶಕ್ತಿಗಳನ್ನು ಬಳಸಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ನಾಲ್ಕು ಸ್ನೇಹಿತರು ಎಸ್ಟೇಟ್‍ಗೆ ಹೋದಾಗ ಏನೇನು ನಡೆಯುತ್ತವೆ ಎಂಬುದನ್ನು ಎರಡು ಘಂಟೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದರ ಮಾಹಿತಿ ನೀಡಿದ್ದು ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವ ಪ್ರಮೋದ್‍ಕುಮಾರ್.

ಇದೊಂದು ತಂತ್ರಜ್ಘರ ಚಿತ್ರವೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಚಿತ್ರೀಕರಣ ಸಂದರ್ಭದಲ್ಲಿ ಗಡಿಯಾರವೊಂದು ಬ್ಲಾಸ್ಟ್ ಆಯಿತು. ಹಾಗೂ ಹೀಗೂ ಎಲ್ಲರ ಸಹಕಾರದಿಂದ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಸುದ್ದುರಾಯ್ ನಾಲ್ಕು ಹಾಡುಗಳಿಗೆ ಉತ್ತಮ ರಾಗ ಸಂಯೋಜಿಸಿದ್ದು, ಇವರು ಕರ್ನಾಟಕದ ಸೋನು ನಿಗಮ್ ಅಂತಾರೆ ನಿರ್ಮಾಪಕ ಎನ್.ಕುಮಾರ್‍ಭದ್ರಾವತಿ ಟಗರು ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಸಿನಿಪಂಡಿತರು ಉಪಸ್ತಿತರಿದ್ದರು. ನಾಯಕ ಪ್ರವೀಣ್, ನಾಯಕಿ ಪ್ರಕೃತಿವಿಜಯ್‍ಕುಮಾರ್ ಕಾರ್ಯಕ್ರಮ ಮುಗಿದ ನಂತರ ಪೋಟೋಗೆ ಫೋಸ್ ಕೊಟ್ಟರು. ಇದಕ್ಕೂ ಮುನ್ನ ಟ್ರೈಲರ್‍ನ್ನು ತೋರಿಸಲಾಯಿತು.
ಸಿನಿ ಸರ್ಕಲ್.ಇನ್ ನ್ಯೂಸ್
10/07/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore