HOME
CINEMA NEWS
GALLERY
TV NEWS
REVIEWS
CONTACT US

ದೃಶ್ಯರೂಪದಲ್ಲಿಕಾರಂತರಕಾದಂಬರಿ
ಹಿರಿಯ ಸಾಹಿತಿ ಡಾ.ಶಿವರಾಮಕಾರಂತ ವಿರಚಿತ ‘ಮೂಕಜ್ಜಿಯ ಕನಸುಗಳು’ ಚಿತ್ರವಾಗಿ ಪ್ರೇಕ್ಷಕರಎದುರು ಬಂದಿದೆ.ಒಂದು ಸಣ್ಣ ಬದುಕನ್ನು ಮನೆಯಕತ್ತಲ ಕೋಣೆಗಳಲ್ಲಿಯೇ ಕಳೆದರೂ ಅದನ್ನೆತಪಸ್ಸಾಗಿಬದಲಾಯಿಸಿಕೊಂಡು ಭೂತಕಾಲದಲ್ಲಿ ನಡೆದು, ಭವಿಷ್ಯತ್‍ದಲ್ಲಿಆಗುವುದನ್ನುಅನುಭವದಿಂದಲೇ ರೂಡಿಸಿಕೊಳ್ಳುವ ಶಕ್ತಿ ಮೂಕಜ್ಜಿಗೆಇದೆ. ನಂಬಿಕೆ, ದೇವರು, ಶ್ರದ್ದೆ, ಹುಟ್ಟು, ಸಾವು, ಭೂತ, ಕಾಮ ಹಾಗೂ ಅದರಾಚೆಗಿನ ಪ್ರೀತಿ ಹೀಗೆ ಹೇಳುತ್ತಾ ಹೋದರೆ ಬದುಕಿನಎಲ್ಲಾ ಸ್ಥರಗಳ ಪರಾಮರ್ಶೆಯುಅಜ್ಜಿ ಮೂಲಕ ತೆರೆದುಕೊಳ್ಳುತ್ತದೆ. ದೇವರುಎಲ್ಲವನ್ನು ನೀಡಿರುವಾಗ, ಆತನಲ್ಲಿ ಕೇಳುವುದು ಇನ್ನೇನು ಉಳಿದಿದೆ ಎನ್ನುವ ಪ್ರಶ್ನೆಗೆಅಜ್ಜಿಯುದೇವರು ಮತ್ತು ಮನುಷ್ಯನ ನಡುವೆಇರುವ ಕೊಡು-ಕೊಳ್ಳುವಿಕೆಯ ನಂಬಿಕೆಯನ್ನೇ ಅಲುಗಾಡಿಸಿ ಬಿಡುತ್ತಾಳೆ. ಒಳಗೊಂದು, ಹೊರಗೊಂದುಇರುವ ಮನುಷ್ಯಜಾತಿಗೆ ಮಾತಿನಿಂದಲೇಚಾಟಿಏಟುಕೊಟ್ಟು ನೀನು ಇರುವಂತೆ ನಡೆದುಕೊಂಡಾಗ ಮಾತ್ರ ನಿನಗೆ ಬೆಲೆ, ನೆಲೆ ಎಂದು ಮೂಕಜ್ಜಿ ಹೇಳುವ ಇಂತಹ ಹಲವು ಪ್ರಸಂಗಗಳು ಚಿತ್ರದಲ್ಲಿಇರುವುದು ಹೆಮ್ಮೆಯ ವಿಷಯವಾಗಿದೆ.

ಪಿ.ಶೇಷಾದ್ರಿ ನಿರ್ದೇಶನಕ್ಕೆತಕ್ಕಂತೆ ಮೂಕಜ್ಜಿಯಾಗಿ ಹಿರಿಯ ನಟಿ ಬಿ.ಜಯಶ್ರೀ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಅದು ಪಾತ್ರವಲ್ಲ, ಬದಲಾಗಿತಾನೇಅಜ್ಜಿಎನ್ನುವಂತೆ ಅಭಿನಯಿಸಿರುವುದು ಇಡೀ ಸಿನಿಮಾಕ್ಕೆ ಕಳಸವಿಟ್ಟಂತೆ ಆಗಿದೆ.ಉಳಿದಂತೆ ಗೆಳತಿಯಾಗಿ ರಾಮೇಶ್ವರಿಶರ್ಮ, ಅರವಿಂದ್‍ಕುಪ್ಲಿಕರ್, ನಂದಿನಿವಿಠಲ್, ಪ್ರಗತಿಪ್ರಭು, ಕಾವ್ಯಶಾ, ಪ್ರಭುದೇವ ಮುಂತಾದವರು ನೀಡಿದ ಕೆಲಸಕ್ಕೆ ಶ್ರಮ ವಹಿಸಿದ್ದಾರೆ.ಇದಕ್ಕೆ ಸರಿಸಾಟಿಯಾಗಿ ಪ್ರವೀಣ್‍ಗೋಡ್ಕಂಡಿ ಸಂಗೀತ, ಜಿ.ಎಸ್. ಭಾಸ್ಕರ್‍ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ ಇವೆಲ್ಲಕ್ಕೂ ಪೂರಕವಾಗಿದೆ. ಜ್ಘಾನ ಪೀಠ ಪ್ರಶಸ್ತಿ ತಂದಕಾದಂಬರಿ ಬಗ್ಗೆ ತಿಳಿದುಕೊಳ್ಳುವವರು ಚಿತ್ರ ನೋಡಬಹುದು.
ನಿರ್ಮಾಣ: ನವ್ಯಚಿತ್ರಕ್ರಿಯೆಶನ್ಸ್
***
ಸಿನಿ ಸರ್ಕಲ್.ಇನ್ ವಿಮರ್ಶೆ
30/11/19

ಮೂಕಜ್ಜಿಯ ಕನಸುಗಳು ಬಿಡುಗಡೆ ಕಷ್ಟಗಳು
ಕಾದಂಬರಿ ‘ಮೂಕಜ್ಜಿಯ ಕನಸುಗಳು’ ಬರೆದಿದ್ದು ಡಾ.ಶಿವರಾಮಕಾರಂತ. . ಇದೇಕೃತಿಗೆಜ್ಘಾನಪೀಠ ಪ್ರಶಸ್ತಿ ಲಭಿಸಿ ಐವತ್ತು ವರ್ಷವಾಗಿದೆ.ಅಲ್ಲದೆಪಠ್ಯಪುಸ್ತಕವಾಗಿ ಬಂದಿತ್ತು. ಆ ಕಾಲಕ್ಕೆ ಸ್ತ್ರೀ ಸ್ವಾತಂತ್ರ ಪ್ರತಿನಿಧಿಯಾಗಿ ಮೂಕಜ್ಜಿಗೆಒಂದುಅತೀಂದ್ರಿಯ ಶಕ್ತಿಯನ್ನುಕೊಟ್ಟು, ಅವಳ ಕನಸುಗಳ ಮೂಲಕ ಮಾನವಇತಿಹಾಸದ ದೃಶ್ಯಗಳನ್ನು ಮೂರ್ತಿಕರಿಸುವಕಲ್ಪನೆಯನ್ನುಕೃತಿಯಲ್ಲಿ ಹೇಳಿದ್ದರು.ಅದು ಪ್ರಸಕ್ತಕಾಲಘಟ್ಟಕ್ಕೆಅನ್ವಯವಾಗುತ್ತದೆ. ಇಂತಹ ಮೇರುಕಾದಂಬರಿಯುಚಿತ್ರರೂಪದಲ್ಲಿ ಬರಲು ಸಿದ್ದವಾಗಿದೆ.ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನಿರ್ದೇಶಕ ಪಿ.ಶೇಷಾದ್ರಿಆಕ್ಷನ್‍ಕಟ್ ಹೇಳಿ ಸಮಾನ ಮನಸ್ಕರು ಮತ್ತುತಂತ್ರಜ್ಘರೊಂದಿಗೆ ಸೇರಿಕೊಂಡುನವ್ಯಶ್ರೀ ಕ್ರಿಯೇಶನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ.

ಪ್ರತಿ ಶುಕ್ರವಾರ5-6 ಚಿತ್ರಗಳು ಬಿಡುಗಡೆಯಾಗುತ್ತಿದೆ.ಇದುಅತಿವೃಷ್ಟಿ-ಅನಾವೃಷ್ಟಿಅಂತ ಹೇಳಲು ಆಗುವುದಿಲ್ಲ. ಖಾತೆಯಲ್ಲಿ ಹನ್ನೊಂದನೇಚಿತ್ರವಾಗಿದೆ.ಕಾದಂಬರಿಯನ್ನು ಸಿನಿಮಾ ಮಾಡುವುದುಕಷ್ಟವೆಂದು ಹಲವರು ಹೇಳಿದ್ದರು.ಇದಕ್ಕೂ ಮುಂಚೆ ಇದುನಾಟಕರೂಪದಲ್ಲಿ ಗಮನ ಸೆಳೆದಿತ್ತು.ಈಗ ಇದನ್ನುದೃಶ್ಯರೂಪದಲ್ಲಿಕಾಣಿಸುವಪ್ರಯತ್ನ ಮಾಡಲಾಗಿದೆ.ಸಿಂಗಲ್ ಚಿತ್ರಮಂದಿರ ಸಿಗುವುದು ಕಷ್ಟವಾಗಿದೆ. ಮಾಲ್‍ಗಳು ಸರಿಯಾದ ಸಮಯದಲ್ಲಿ ಷೋ ಕೊಡುವುದಿಲ್ಲ. ಇದರಿಂದ ಸಾಂಪ್ರದಾಯಿಕವಲ್ಲದಕ್ರಮವಾಗಿ ಬಿಡುಗಡೆಮಾಡಲು ಸಿದ್ದತೆ ಮಾಡಿಕೊಂಡಿದೆ. ಕಾಲೇಜು ಮಟ್ಟದಲ್ಲಿಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ತೋರಿಸುವ ಸಲುವಾಗಿ ಇಲಾಖೆಯನ್ನು ಸಂಪರ್ಕಿಸಲಾಗಿದೆ.ಅವರು ಸೂಕ್ತ ಸ್ಪಂದನೆ ನೀಡಿಇದನ್ನು ವೀಕ್ಷಿಸಲುಅಂದಾಜುಎರಡು ಸಾವಿರ ಕಾಲೇಜುಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ಧಾರೆ. ಸಾಹಿತ್ಯ ಪರಿಷತ್‍ದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸದಸ್ಯರುಇದ್ದಾರೆ.ಅವರುಗಳಿಗೆ ಸಿನಿಮಾ ನೋಡಲು ಪತ್ರ ಬರೆಯಲಾಗುತ್ತಿದೆ.ಆ ನಿಟ್ಟಿನಲ್ಲಿಇನ್ನು ಬೇರೆರೀತಿಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದುಶೇಷಾದ್ರಿಹೇಳುತ್ತಾ ಹೋದರು.

ಮೂಕಜ್ಜಿ ಪಾತ್ರ ನಿರ್ವಹಿಸಿರುವ ಬಿ.ಜಯಶ್ರೀ, ಗೆಳತಿಯಾಗಿ ಹಿರಿಯರಂಗಭೂಮಿ ಪ್ರತಿಭೆರಾಮೇಶ್ವರಿವರ್ಮ, ಸುಬ್ಬರಾಯನಾಗಿಅರವಿಂದ್‍ಕುಪ್ಲಿಕರ್, ಪತ್ನಿಯಾಗಿ ನಂದಿನಿವಿಠಲ್, ಪ್ರಕೃತಿ ವಿರೋಧಿ ಸಿದ್ದಾರ್ಥ್, ಕಾವ್ಯಷಾ ಉಪಸ್ತಿತರಿದ್ದು ಅನುಭವಗಳನ್ನು ಹಂಚಿಕೊಂಡರು. ಸಂಗೀತ ಪ್ರವೀಣ್‍ಗೋಡ್ಕಂಡಿ, ಛಾಯಾಗ್ರಹಣಜಿ.ಎಸ್. ಭಾಸ್ಕರ್, ಸಂಕಲನ ಬಿ.ಎಸ್.ಕೆಂಪರಾಜುಅವರದಾಗಿದೆ. ನವೆಂಬರ್ 29ರಂದು ಚಿತ್ರವು ಬಿಡುಗಡೆಯಾಗುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
23/11/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore