HOME
CINEMA NEWS
GALLERY
TV NEWS
REVIEWS
CONTACT US
ಜನರ ಎದುರು ಮೋಜೊ
ಆರನೆ ಸೆನ್ಸ್ ಅಂದರೆ ಪೂರ್ವ ವಿಷಯದ ಜ್ಘಾನ ಹೊಂದಿರುವ ಥ್ರಿಲ್ಲರ್ ಚಿತ್ರ ‘ಮೋಜೊ’ ಅಡಿಬರಹದಲ್ಲಿ ಮಾಯ-ವಾಸ್ತವ ನಡುವಿನ ಹೋರಾಟ ಎಂದು ಹೇಳಿಕೊಂಡಿರುವ ಕತೆಯು ವಿನೂತನವಾಗಿದೆ. ನಾಯಕನಿಗೆ ಪೂರ್ವಯೋಜಿತ ಬಗ್ಗೆ ತಿಳಿದಿರುವುದರಿಂದ ಒಂದು ಕೊಲೆ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗುತ್ತಾನೆ. ಬೇಬಿ ಆನ್ಯಶೆಟ್ಟಿ ಎನ್ನುವ ಆರು ವರ್ಷದ ಮಗು ಸನ್ನಿವೇಶಗಳಲ್ಲಿ ಬಂದು ಹೋಗಲಿದ್ದು, ಆರು ನಿಮಿಷಗಳ ಕಾಲ ಕಾಣ ಸಿಕೊಂಡು ಈಕೆಯ ಮುಖಾಂತರ ಕತೆಯು ತೆರೆದುಕೊಳ್ಳುತ್ತದೆ. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಸೋಜಿಗದ ಅಂಶಗಳು ಸಿನಿಮಾಗೆ ತಿರುವು ಕೊಡುವುದರಿಂದ ಪ್ರೇಕ್ಷಕರಿಗೆ ಕುತೂಹಲ ಹುಟ್ಟಿಸುತ್ತದೆ. ಲಾಸ್‍ಏಂಜಲೀಸ್, ಗೋಲ್ಡನ್‍ಗೇಟ್ಸ್ ಸೇರಿದಂತೆ ಹಲವು ಕಡೆ ಪ್ರದರ್ಶನಗೊಂಡು ಪ್ರಶಸ್ತಿಗಳನ್ನು ಬಾಚಿಕೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ರಂಗಭೂಮಿ ನಟ ಮನು ಪತ್ರಕರ್ತನ ಪಾತ್ರದಲ್ಲಿ ನಾಯಕ. ಸೈಕ್ರಿಯಾಟಿಕ್ ಡಾಕ್ಟರ್ ಆಗಿ ಅನುಷಾ ನಾಯಕಿ. ಇವರಿಬ್ಬರಿಗೂ ಹಿರಿತೆರೆ ಹೊಸ ಅನುಭವ. ಇವರುಗಳ ಜೊತೆಗೆ 23 ಪಾತ್ರಗಳು ಬರುತ್ತವೆ.

ರಚನೆ, ನಿರ್ದೇಶನ ಮಾಡಿರುವ ಶ್ರೀಶಬೆಳಕವಾಡಿ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿsಸಿರುವುದು ಎಸ್.ಡಿ.ಅರವಿಂದ್. ಹಿನ್ನಲೆ ಸಂಗೀತವನ್ನು ಅಜನೀಶ್‍ಲೋಕನಾಥ್ ನಿರ್ವಹಿಸಿದ್ದಾರೆ. ಚಿತ್ರದ ಪ್ರಾರಂಭದಲ್ಲಿ ಬರುವ ದೃಶ್ಯಗಳಿಗೆ ಯೋಗರಾಜ್‍ಭಟ್ ಕಂಠದಾನ ಮಾಡಿದ್ದಾರೆ. ವಿದೇಶದಲ್ಲಿರುವ ಕನ್ನಡಿಗರು ಭಾಷೆಯ ಮೇಲಿನ ಮೋಹದಿಂದ ಗೆಳಯರೇ ಸೇರಿಕೊಂಡು ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಒಂದು ಘಂಟೆ ಐವತ್ತು ನಿಮಿಷದ ಅವಧಿಯ ಸಿನಿಮಾವು ಅಕ್ಟೋಬರ್ ಕೊನೆವಾರದಂದು ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಸುಮಾರು 30 ಕೇಂದ್ರಗಳಲ್ಲಿ ತೆರೆಕಾಣಲಿದೆ.
-10/10/17
ಸಂಗೀತಕ್ಕೆ ಚಿತ್ರ ಗೆಲ್ಲಿಸುವ ಶಕ್ತಿ ಇದೆ
ಆಫ್ರಿಕನ್ ಪದವನ್ನು ಬಳಸಿಕೊಂಡ ‘ಮೋಜೊ’ ಟ್ಯಾಗ್‍ಲೈನ್ ಆಗಿ ಮಾಯೆ-ವಾಸ್ತವ ನಡುವಿನ ಹೋರಾಟವೆಂದು ಹೇಳಿಕೊಂಡಿರುವ ಸಿನಿಮಾವೊಂದು ತೆರೆಗೆ ಬರಲು ಸಜ್ಜಾಗಿದೆ. ಪ್ರಚಾರದ ಎರಡನೆ ಅಂಗವಾಗಿ ಚಿತ್ರದ ಧ್ವನಿಸಾಂದ್ರಿಕೆಯ ಅನಾವರಣ ಕಾರ್ಯಕ್ರಮ ನಡೆಯಿತು. ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದ ಹಿರಿಯ ನಿರ್ದೇಶಕ ಸುನಿಲ್‍ಕುಮಾರ್ ದೇಸಾಯಿ ಮಾತನಾಡುತ್ತಾ ಸಸ್ಪೆನ್ಸ್,ಥ್ರಿಲ್ಲರ್ ಚಿತ್ರಗಳು ಜನರಿಗೆ ಬೇಗ ತಲುಪುತ್ತವೆ. ಅದಕ್ಕೆ ತರ್ಕ, ಸಂಘರ್ಷ, ನಿಷ್ಕರ್ಷ ಸಾಕ್ಷಿಯಾಗಿದೆ. ಟೈಟಲ್ ಹಾರರ್ ರೀತಿಯಲ್ಲಿ ಇದೆ. ತಂತ್ರಜ್ಘರು ತಯಾರಿ ಮಾಡಿಕೊಂಡು ಸಿನಿಮಾ ಮಾಡಿದರೆ ನಾಳಿನ ಯಶಸ್ಸಿಗೆ ಕಾರಣಕರ್ತರಾಗುತ್ತಾರೆ. ಸಂಗೀತಕ್ಕೆ ಚಿತ್ರವನ್ನು ಗೆಲ್ಲಿಸುವ ತಾಕತ್ತು ಇರುತ್ತದೆ. ಬಾಲಿವುಡ್‍ನಲ್ಲಿ ಚೋಪ್ರರವರ ಸಾಕಷ್ಟು ಸಿನಿಮಾಗಳು ಹಾಡುಗಳಿಂದಲೇ ಹಿಟ್ ಆಗಿದ್ದು ನೆನಪು ಮಾಡಿಕೊಳ್ಳಬಹುದು. ಸಣ್ಣ ಬಜೆಟ್‍ನ ಸಿನಿಮಾವು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಗಳಿಸಲಿ ಎಂದು ಶುಭಹಾರೈಸಿದರು. ಇಳಯರಾಜರವರ ಹಿನ್ನಲೆ ಸಂಗೀತದಿಂದ ಸಂಗೀತ ನಿರ್ದೇಶಕನಾಗಬೇಕೆಂದು ಬಯಸಿದಂತೆ ಇಂದು ಅದೇ ಹಾದಿಯಲ್ಲಿ ಸಾಗುತ್ತಿದ್ದೇನೆ ಎನ್ನುತ್ತಾರೆ ನಾಲ್ಕು ಹಾಡುಗಳಿಗೆ ರಾಗ ಒದಗಿಸಿರುವ ಎಸ್.ಡಿ.ಅರವಿಂದ್.

ಮ್ಯೂಸಿಕ್ ಚಿತ್ರಕ್ಕೆ ಆತ್ಮಶಕ್ತಿ, ಮನೋರಂಜನೆ ಜೀವಕೊಡುತ್ತೆ. ಸಂಗೀತ,ಸಾಹಿತ್ಯ ಭಾವನೆಗಳನ್ನು ಎಳೆದುಕೊಂಡು ಹೋಗುತ್ತದೆ. ಅದಕ್ಕೆ ಸಂಗೀತನಿರ್ದೇಶಕರು ಮುಖ್ಯವಾಗಿ ಕಾಣುತ್ತಾರೆ. ಶೀರ್ಷಿಕೆ ಅದ್ಬುತ, ಅವಿಷ್ಕಾರ ಅರ್ಥ ಕೊಡುತ್ತದೆ ಎಂದರು ಮೊದಲಬಾರಿ ನಿರ್ದೇಶನ, ನಿರ್ಮಾಣದಲ್ಲಿ ಪಾಲುದಾರರಾಗಿರುವ ಶ್ರೀಶ ಬೆಳಕವಾಡಿ. ಪತ್ರಕರ್ತನಾಗಿ 6ನೇ ಸೆನ್ಸ್‍ನಿಂದ ಕೊಲೆಯನ್ನು ಭೇದಿಸುವ ಪಾತ್ರವೆಂದು ನಾಯಕ ಮನು ಹೇಳಿಕೊಂಡರು. ಸೈಕಿಯಾಟ್ರಿಕ್ ಡಾಕ್ಟರ್ ಆಗಿ ಕಾಣ ಸಿಕೊಂಡಿದ್ದೇನೆ ಅಂತಾರೆ ನಾಯಕಿ ಅನುಷ. ಎನ್‍ಆರ್‍ಐ ಗಜಾನನಭಟ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಗಾಯಕರುಗಳಾದ ಅಂಕಿತಾಕುಂಡು, ಮುರಳಿರಾಮನಾಥನ್, ಚಿಂತನ್ , ಅವಿನಾಶ್‍ನರಸಿಂಹರಾಜು ಹಾಜರಿದ್ದರು. ಆನಂದ್ ಆಡಿಯೋ ಹಾಡುಗಳನ್ನು ಹೊರತಂದಿದೆ.
-12/07/17

ಮಾಯ ವಾಸ್ತವ ನಡುವಿನ ಹೋರಾಟ
ಸ್ಯಾಂಡಲ್‍ವುಡ್‍ನಲ್ಲಿ ವಿನೂತನ ರೀತಿಯ ಸಿನಿಮಾಗಳು ತೆರೆಗೆ ಬರುತ್ತಿವೆ. ಇದರ ಸಾಲಿಗೆ ‘ಮೋಜೊ’ ಎನ್ನುವ ಚಿತ್ರವೊಂದು ಬೆಂಗಳೂರು, ಬಿಡದಿ ಸ್ಥಳಗಳಲ್ಲಿ ಚಿತ್ರೀಕರಣ ಮುಗಿಸಿ ಮುಂದಿನ ಕೆಲಸಗಳಲ್ಲಿ ತಲ್ಲೀನವಾಗಿದೆ. ಆಫ್ರಿಕಾದಲ್ಲಿ ಶೀರ್ಷಿಕೆ ಭಾಷೆಯನ್ನು ಬಳಸಲಾಗುತ್ತಿದ್ದು, ಜಾದು, ಚಮತ್ಕಾರ,ವಿಸ್ಮಯ ಅರ್ಥ ಕೊಡುತ್ತದೆ. ನಾಯಕನಿಗೆ ಆರನೇ ಪ್ರಜ್ಘೆಯಲ್ಲಿ ಭವಿಷ್ಯವನ್ನು ನೋಡುವ ಶಕ್ತಿಯನ್ನು ಹೊಂದಲಾಗಿದ್ದು, ಒಂದು ಕೊಲೆ ಅವನ ಸುತ್ತ ಆವರಿಸಿಕೊಳ್ಳುತ್ತದೆ. ಮರ್ಡರ್ ಮಿಸ್ಟ್ರೀ ಥ್ರಿಲ್ಲರ್‍ನಲ್ಲಿ ಕೃತಕ ಅಂಶಗಳು, ಮನಸ್ಸಿನ ಸೂಕ್ಷತೆಗಳು, ಪವಾಡ ಶಕ್ತಿಗಳು ಇದೆ. ವಿರಾಮದ ತರುವಾಯ 5 ವರ್ಷ ಮಗು ಮೋಜೊ ಆಗಮನದೊಂದಿಗೆ ಸಂಬಂದಗಳು ಇದೆ ಎಂದರೆ ಇದೆ. ಇಲ್ಲ ಅಂದರೆ ಇಲ್ಲ. ಕ್ಲೈಮಾಕ್ಸ್‍ನಲ್ಲಿ ನಕರಾತ್ಮಕ ಅಂಶವು ಹೇಗೆ ಸಕರಾತ್ಮಕವಾಗುತ್ತವೆ ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದಂತೆ.

ಹಾಸನದ ಟೆಕ್ಕಿ ರಂಗಭೂಮಿ ನಟ ಮನು ಎರಡನೇ ಅವಕಾಶದಲ್ಲಿ ನಾಯಕನಾಗಿ ಪತ್ರಕರ್ತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಂಕೋಲದ ರಂಗಭೂಮಿ ಕಲಾವಿದೆ ವೃತ್ತಿಯಲ್ಲಿ ಕಂಪೆನಿ ಉದ್ಯೋಗಿ, ಸಮಯ ಹೊಂದಿಸಿಕೊಂಡು ಮನೋವೈದ್ಯೆ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಉಳಿದಂತೆ ಹುಬ್ಬಳ್ಳಿಯ ಸುಷ್ಮಿತಕುಲಕಣ ್ ಕೊರವಂಜಿ, ಸಚಿನ್‍ಸೂರ್ಯ ಅಭಿನಯದ ಜೊತೆಗೆ ಕಲಾ ನಿರ್ದೇಶನದ ವಿಭಾಗದಲ್ಲಿ ಸಕ್ರಿಯವಾಗಿ ಪಾಲ್ಗೋಂಡಿದ್ದಾರೆ. ಪ್ರದೀಪ್‍ಗೌತಂ ಸಾಹಿತ್ಯದ ಮೂರು ಗೀತೆಗಳಿಗೆ ಎಸ್.ಡಿ.ಅರವಿಂದ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶಬೆಳವಾಡಿ ನಿರ್ದೇಶನ, ಗಜಾನನ ಭಟ್ ನಿರ್ಮಾಪಕರಾಗಿ ಇಬ್ಬರಿಗೂ ಹೊಸ ಅನುಭವ. ಆನಂದ್ ಆಡಿಯೋ ಹಾಡುಗಳನ್ನು ಹೊರತರಲಿದ್ದು, ಸದ್ಯದಲ್ಲೆ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ, ತರುವಾಯ ತೆರೆಗೆ ತರಲು ತಂಡವು ಯೋಜನೆ ಹಾಕಿಕೊಂಡಿದೆ.
-13/05/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore