HOME
CINEMA NEWS
GALLERY
TV NEWS
REVIEWS
CONTACT US
ಸಂವೇದನೆಯಲ್ಲಿ ಸಾಗುವ ಕಥನ
ಹೊಸಬರ ‘ಮೋಡ ಕವಿದ ವಾತವರಣ’ ಸಿನಿಮಾ ಅಡಿಬರಹದಲ್ಲಿ ಸಾಧಾರಣ ಮಳೆ ಅಂತ ಹೇಳಿಕೊಂಡಿದೆ. ಮೋಡ ಕವಿದರೆ ಅನುಭವಗಳು ಜಾಸ್ತಿಯಾಗುತ್ತದಂತೆ. ಅದರಂತೆ ಕತೆಯು ಇದೇ ಮಾದರಿಯಲ್ಲಿ ತೆಗೆದುಕೊಂಡು ಹೋಗುತ್ತದೆ. ಮೂರು ಪಥಗಳಲ್ಲಿ ಚಿತ್ರವು ಸಾಗುತ್ತದೆ. ಇಂದಿನ ಹದಿ ಹರೆಯದ ಹುಡುಗ ಹುಡುಗಿ ಗೆಳತನ ಮಾಡಿದರೆ ಅವರು ಪ್ರೀತಿ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸುತ್ತಾರೆ. ಲವ್ ಮಾಡೋರೆಲ್ಲಾ ಮೋಸ ಮಾಡ್ತಾರೆ. ಆದರೆ ಅವರು ಮೋಸ ಮಾಡದೆ, ಸನ್ನಿವೇಶಗಳು ಈ ರೀತಿ ಆಗುವಂತೆ ಮಾಡುತ್ತದೆ. ಕೊನೆಯಲ್ಲಿ ತಾಯಿ ಇಲ್ಲದ ತಬ್ಬಲಿ ಮಗಳು ಮಲತಾಯಿ ಕೊಡುವ ಶೋಷಣೆಯನ್ನು ಹೇಗೆ ನಿಭಾಯಿಸುತ್ತಾಳೆ. ಮತ್ತೋಂದು ಕಡೆ ನಾಯಕ ಹುಡುಗಿಯಿಂದ ಮೋಸ ಹೋಗಿ, ಬೇಸರದಲ್ಲಿ ಇರುವಾಗ ಮತ್ತೋಬ್ಬಳ ಪ್ರವೇಶವಾಗುತ್ತದೆ. ಆ ಪಾತ್ರವನ್ನು ಗುಟ್ಟಾಗಿ ಇಡಲಾಗಿದೆಯಂತೆ. ರಚನೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವುದು ಅಂಜನಿಕುಮಾರ್.

ನಿತಿನ್.ಎನ್.ರಾಜ್ ನಾಯಕನಾಗಿ ಮೂರು ಶೇಡ್‍ಗಳ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಬ್ಬಲಿಯಾಗಿ ಅರ್ಚನಾ ನಾಯಕಿ. ಇವರೊಂದಿಗೆ ಲಕ್ಷೀಸಿದ್ದಯ್ಯ, ಅಚ್ಯುತ್‍ಕುಮಾರ್ ಮುಂತಾದವರ ನಟನೆ ಇದೆ. ದಿಲೀಪ್‍ಮರೀಚಿ ಸಾಹಿತ್ಯದ ಆರು ಹಾಡುಗಳಿಗೆ ರಾಜೇಶ್‍ಭಟ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಗ್ರಹಣ ಅನಿಲ್, ಸಾಹಸ ಡಿಫರೆಂಟ್‍ಡ್ಯಾನಿ, ನೃತ್ಯ ರಾಕೇಶ್ ನಿರ್ವಹಿಸುತ್ತಿದ್ದಾರೆ. ಇವರನ್ನು ನಂಬಿಕೊಂಡು ಶಂಕರೆಗೌಡ್ರು ಹಣ ಸುರಿಯಲು ಮನಸ್ಸು ಮಾಡಿದ್ದಾರೆ. ಶುಕ್ರವಾರದಂದು ಸಿಗಂದೂರು ಚೌಡೇಶ್ವರಿ ದೇವಿ ಸನ್ನಿದಿಯಲ್ಲಿ ಮಹೂರ್ತ ಆಚರಿಸಿಕೊಂಡ ನಂತರ ಅಲ್ಲಿನ ಭಾಗಗಳು, ಕುಮುಟಾ, ಮಂಡ್ಯಾ, ಕುಕ್ಕೆಸುಬ್ರಮಣ್ಯ ಹೀಗೆ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/09/18


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore