HOME
CINEMA NEWS
GALLERY
TV NEWS
REVIEWS
CONTACT US

ಪ್ರಚಲಿತ ಯುವ ಸಮಾಜದ ಕಥನ
ಇಂದು ಎಲ್ಲರು ಫೇಸ್‍ಬುಕ್,ಮೊಬೈಲ್. ಟ್ವಿಟರ್‍ದಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರೇಮಿಗಳು ಸಹ ಇದರಲ್ಲೆ ಚಾಟ್ ಮಾಡುತ್ತಾ, ಒಂದಾಗುವುದು, ಬೇರೆಯಾಗುತ್ತಿದ್ದಾರೆ. ಇಂತಹುದೆ ಪ್ರೇಮಕತೆಯುಳ್ಳ ನಾಲ್ಕು ನಿಮಿಷದ ವಿಡಿಯೋ ಯುಟ್ಯೂಬ್‍ದಲ್ಲಿ ಹರಿದಾಡುತ್ತಾ ಹಿಟ್ ಆಗಿದೆ. ಯಾವ ಮಟ್ಟಿಗೆ ಎಂದರೆ ಒಂದಷ್ಟು ಟೆಕ್ಕಿಗಳು ನಿರ್ಮಾಣ ಮಾಡಲು ಆಸಕ್ತಿ ತೋರಿಸಿದ್ದಾರೆ. ಇದರಿಂತ ಉತ್ತೇಜಿತರಾದ ಜ್ಯೋತಿರಾವ್‍ಮೋಹಿತ್ ಎರಡನೆ ಬಾರಿ ಗೆಲ್ಲಲೇ ಬೇಕೆಂಬ ಹಠದಿಂದ, ಇಂದಿನ ತಲೆಮಾರಿನವರು ಇಷ್ಟಪಡುವ ಹಾಗೆ ‘ಮೀಸೆ ಮತ್ತು ಜಡೆ’ ಎನ್ನುವ ಚಿತ್ರಕ್ಕೆ ಕತೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಬ್ಯೂಟಿಫುಲ್ ಕಾಂಟ್ರವರ್ಸಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದ್ದಾರೆ. ಎರಡು ಗಂಟೆಯ ಸಿನಿಮಾದಲ್ಲಿ 56 ದೃಶ್ಯಗಳಿಗೆ ಚಿತ್ರಕತೆಯನ್ನು ಸಿದ್ದಪಡಿಸಿಕೊಂಡು ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಇದ್ದಾರೆ. ನಾಲ್ಕು ಹುಡುಗರು, ಹುಡುಗಿಯರ ಕತೆಯು ಸಾಗುತ್ತದೆ.

ವಿಡಿಯೋದಲ್ಲಿ ಅಭಿನಯಿಸಿದ್ದ ಪ್ರತೀಕ್‍ಶೆಟ್ಟಿ ನಾಯಕ, ಪೋಷಕ ಪಾತ್ರದಲ್ಲಿ ಆನಂದ್ ವೈಭವ್ ಮೊದಲ ಹಂತದಲ್ಲಿ ಆಯ್ಕೆಯಾಗಿದ್ದಾರೆ. ಉಳಿದಂತೆ ನಾಯಕಿ, ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ತಂತ್ರಜ್ಘರ ಪೈಕಿ ಛಾಯಾಗ್ರಹಣ ಮಂಜುನಾಥ್, ಸಂಗೀತ ಮಿಥುನ್..ಎಂ.ಎಸ್., ಸಂಕಲನ ಕಿರಣ್‍ಕುಮಾರ್ ಕೆಲಸ ಮಾಡಲು ಸನ್ನದ್ದರಾಗಿದ್ದಾರೆ. ಇವೆಂಟ್ ಮ್ಯಾನೇಜ್‍ಮೆಂಟ್ ನಡೆಸುತ್ತಿರುವ ಆದಿತ್ಯಗಣೇಶ್ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/03/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore