HOME
CINEMA NEWS
GALLERY
TV NEWS
REVIEWS
CONTACT US

ಕೂಡ್ಲುರಾಮಕೃಷ್ಣರಮತ್ತೆಉಧ್ಭವಆಯ್ತು
90ರ ದಶಕದಲ್ಲಿ ಹಿಟ್‍ಆಗಿದ್ದಉಧ್ಭವಚಿತ್ರ ಮುಂದುವರೆದ ಭಾಗದಂತೆ ‘ಮತ್ತೆಉಧ್ಭವ’ ಹೆಸರಿನೊಂದಿಗೆ ಬರುತ್ತಿದೆ. ಕತೆಯಲ್ಲಿಅನಂತನಾಗ್ ಮಾಡಿದ ಪಾತ್ರವನ್ನುರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿಅಪ್ಪನಿಗೆ ಸಹಾಯ ಮಾಡುತ್ತಾರೆ. ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪಕಾಪೋರೇಶನ್ ಲೆವಲ್‍ದಲ್ಲಿಇದ್ದರೆ ಮಗ ವಿಧಾನಸೌದ ಸಂಪರ್ಕ ಬೆಳಸಿಕೊಂಡಿರುವ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಹಿರಿಮಗ. ವಕೀಲನಾಗಿ ಮಂಡ್ಯಾರವಿಕಿರಿಮಗ. ಚಿತ್ರದಲ್ಲಿ ನಾಯಕಿಯಾಗಿಅದೇರೀತಿಯಾಗಿಮತ್ತುಪರಿಸರ ಪ್ರೇಮಿ,ರಾಜಕಾರಿಣಿ ಹೀಗೆ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಿಲನನಾಗರಾಜು. ಶೃಂಗಾರಸ್ವಾಮೀಜಿಯಾಗಿ ಮೋಹನ್‍ನಟನೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ.

ನಿರ್ದೇಶಕಕೂಡ್ಲುರಾಮಕೃಷ್ಣ ಹೇಳುವಂತೆ ಅನಂತ್‍ನಾಗ್‍ಒಟ್ಟಾರೆ ದಿನಾಂಕಗಳು ಸಿಗದ ಕಾರಣರಂಗಾಯಣರಘುಬಂದಿದ್ದಾರೆ.ಅದುಕ್ಲಾಸ್‍ಅಗಿತ್ತು.ಇದರಲ್ಲಿಡ್ಯಾನ್ಸ್, ಫೈಟು, ಕಾಮಿಡಿಇರುವುದರಿಂದ ಮಾಸ್‍ಎನ್ನಬಹುದು.ಪಾತ್ರಗಳನ್ನು ಹಾಗಯೇ ಉಳಿಸಿಕೊಂಡು ಕಲಾವಿದರನ್ನು ಬದಲಾವಣೆ ಮಾಡಿಕೊಂಡಿದೆ. ಮೊದಲಭಾಗದಲ್ಲಿದೇವರನ್ನುತೋರಿಸಲಾಗಿ, ಎರಡನೆಯದರಲ್ಲಿದೇವರಿಗಿಂತದೊಡ್ಡದುಉಧ್ಭವವಾಗುತ್ತೆ. ಅದು ಏನು ಎಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕು.

ತಾರಗಣದಲ್ಲಿ ಸುಧಾಬೆಳವಾಡಿ,ಅವಿನಾಶ್, ಪಿ.ಡಿ.ಸತೀಶ್, ಗಿರೀಶ್‍ಭಟ್, ಚೇತನ್‍ಚಮನ್, ನರೇಶ್, ಶಂಕರ್‍ಅಶ್ವಥ್, ನಿರಂಜನ್ ಮುಂತಾದವರು ನಟಿಸುತ್ತಿದ್ದಾರೆ. ಜಯಂತ್‍ಕಾಯ್ಕಣಿ-ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಮೋಹನ್, ಸಂಕಲನ ಕೆಂಪರಾಜು, ಸಾಹಸ ಥ್ರಿಲ್ಲರ್‍ಮಂಜು, ನೃತ್ಯತ್ರಿಭುವನ್ ನಿರ್ವಹಿಸುತ್ತಿದ್ದಾರೆ. ನಟಿಅಪೇಕ್ಷಾಪುರೋಹಿತ್‍ಮೊದಲಬಾರಿಕಾಸ್ಟ್ಯೂಮ್‍ಡಿಸೈನರ್ ಆಗಿ ತೆರೆ ಹಿಂದೆ ಕೆಲಸ ಮಾಡುತ್ತಿರುವುದು ವಿಶೇಷ. ನಿತ್ಯಾನಂದಭಟ್,ಸತ್ಯ, ಮಹೇಶ್‍ಮುದ್ಗಲ್ ಮತ್ತುರಾಜೇಶ್‍ಸಿನಿಮಾ ಕೃಷಿಗೆ ಹಣ ಹೂಡುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
6/06/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore