HOME
CINEMA NEWS
GALLERY
TV NEWS
REVIEWS
CONTACT US
ಹೊಸಬರ ಮಾರ್ಲಾಮಿ
ಹಿರಿಯರನ್ನುನೆನಸಿಕೊಳ್ಳಲು ಮಹಾಲಯಅಮಾವಾಸ್ಯೆಯೆಂದುಪಟ್ದಣದಲ್ಲಿ ನಡೆಸುತ್ತಾರೆ. ಇದನ್ನೆ ಹಳ್ಳಿಯಲ್ಲಿ ಮಾಡಿದಾಗ ‘ಮಾರ್ಲಾಮಿ’ ಎಂದುಕರೆಯುತ್ತಾರೆ.ಚಾಮರಾಜನಗರ,ಮಂಡ್ಯಾ, ಮದ್ದೂರು, ಹಾಸನ, ಚನ್ನರಾಯಪಟ್ಟಣ ಮುಂತಾದ ಕಡೆಗಳಲ್ಲಿ ಹೆಚ್ಚಾಗಿ ದಸರಾ, ಗೌರಿ ಹಬ್ಬದಲ್ಲಿಆಚರಿಸುವುದರಿಂದಇದೇ ಹೆಸರನಲ್ಲಿಚಿತ್ರವೊಂದು ಬರುತ್ತಿದೆ. ಸಾಮಾಜಿಕಜಾಲತಾಣದಲ್ಲಿ ಮಾಹಿತಿ ಲಭ್ಯವಾಗಿಲ್ಲದಕಾರಣಸಿಟಿ ಜನರಿಗೆಇದರಕುರಿತಂತೆವಿಷಯ ತಿಳಿದಿರುವುದಿಲ್ಲ. ಅದರಿಂದಲೇ ಈ ಸಿನಿಮಾದ ಮೂಲಕ ಎಲ್ಲವನ್ನುಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಭಯ ಭಕ್ತಿಯಿಂದ ಪೂಜೆಯನ್ನು ಸಂಪ್ರದಾಯವಾಗಿ ಮಾಡುವುದು, ಹಳ್ಳಿಯ ಸಂಸ್ಕ್ರತಿಯನ್ನು ತಿಳಿಸುವುದು ಜೊತೆಗೆ ಹಾರರ್, ಥ್ರಿಲ್ಲರ್ ಮಾದರಿಯಲ್ಲಿ ಸಿನಿಮಾವು ಮೂಡಿ ಬರುತ್ತಿರುವುದು ವಿಶೇಷವಾಗಿದೆ.

ಸರಿಗಮಪ ಸೀಸನ್ 11ರ ವಿಜೇತಚನ್ನಪ್ಪಹುದ್ದಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಭಾಷಣೆಗಳನ್ನು ಹಾಡಿನ ಮೂಲಕವೇ ಹೇಳುವುದು ಈತನಕಾಯಕವಾಗಿರುತ್ತದೆ. ಹಳ್ಳಿ ಹುಡುಗಿಯಾಗಿ ವರ್ಷಿತಾವರ್ಮ ನಾಯಕಿ. ಭವಿಷ್ಯ ಹೇಳುತ್ತಿದ್ದ ದಿನೇಶ್‍ಗುರೂಜಿ ನಾಯಕಿತಂದೆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.ಇವರೊಂದಿಗೆ ಹಾಸ್ಯನಟ ಮುತ್ತುರಾಜ್, ಮಜಾಟಾಕೀಸ್, ಮಜಾಭಾರತ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.ಐದು ಹಾಡುಗಳಿಗೆ ಅರುಣ್‍ಆಂಡ್ರು ಸಂಗೀತವಿದೆ. ಮೂಲತ: ಕೊರಿಯೋಗ್ರಾಫರ್‍ಆಗಿರುವ ಟಿ.ವಿನಯ್‍ಕುಮಾರ್‍ಚಿತ್ರಕತೆ ಬರೆದು ಮೊದಲಬಾರಿ ನಿರ್ದೇಶನದಚುಕ್ಕಾಣಿ ಹಿಡಿಯುತ್ತಿದ್ದಾರೆ. ಮಂಡ್ಯಾದ ವಿ.ಕುಮಾರ್ ನಿರ್ಮಾಪಕರಾಗಿ ಹೊಸ ಅನುಭವ. ಮಂಜು.ಎಸ್.ಪಾಟೀಲ್,ಬಸವರಾಜು ಮತ್ತು ಯಶಸ್ವಿನಿ.ಕೆ.ಗೌಡ ಸಹನಿರ್ಮಾಪಕರಾಗಿ ಹಣ ಹೂಡುತ್ತಿದ್ದಾರೆ. ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆನಟ,ನಿರ್ದೇಶಕ ಪ್ರಥಮ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರು.
ಸಿನಿ ಸರ್ಕಲ್.ಇನ್ ನ್ಯೂಸ್
10/06/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore