HOME
CINEMA NEWS
GALLERY
TV NEWS
REVIEWS
CONTACT US

ಗ್ರಾಮಕ್ಕೆ ರಸ್ತೆಯೊಂದು ಬಂದಾಗ...!!
ಹಳ್ಳಿಯಲ್ಲಿ ಹೊಸ ರಸ್ತೆಯೊಂದು ಬಂದಾಗ ಅದರಿಂದ ಕೆಲವರಿಗೆ ಉಪಯೋಗವಾದರೆ ಮತ್ತೆ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಕೇವಲ ನೂರು ರೂ. ನೋಟಿಗಾಗಿ ವೋಟನ್ನು ಮಾರಿಕೊಳ್ಳುವ ಮತದಾರರು ನಮ್ಮಲ್ಲಿ ಸಾಕಷ್ಟಿದ್ದಾರೆ. ಸಮಾಜದಲ್ಲಿನ ಹಿಂದುಳಿದ ಸಮುದಾಯಗಳ ಜನರು ತಮ್ಮ ಅರಿವಿಗೆ ಬಾರದಂತೆ ತಮ್ಮನ್ನು ತಾವೇ ಹೇಗೆ ಮಾರಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನಿರ್ದೇಶಕ ಕೆ. ಶಿವರುದ್ರಯ್ಯ ಮಾರಿಕೊಂಡವರು ಚಿತ್ರದಲ್ಲಿ ತೋರಿಸಿz್ದÁರೆ. ನಮ್ಮಲ್ಲಿನ ಜಾತಿ ವ್ಯವಸ್ಥೆಯ ಸೂP್ಷÀ್ಮತೆಯನ್ನು ಹೇಳುತ್ತಲೇ ಸಮಾನತೆಯ ಸಂದೇಶವನ್ನೂ ಹೇಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿz್ದÁರೆ. ಸಮಕಾಲೀನ ಸಮಸ್ಯೆಯಾದ ಮರಳುದಂಧೆಯ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿz್ದÁರೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಈ ಚಿತ್ರದ ಮೂಲಕ ಪ್ರತಿಕ್ರಿಯಿಸುವ ಅವರ ಪ್ರಯತ್ನ ನಿಜಕ್ಕೂ ಮೆಚ್ಚುವಂಥಾದ್ದೇ. ಎಂಎಸ್.ವೆಂಕಟೇಶ್ ಹಾಗೂ ಗುರುರಾಜ ಶೇಠ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಮಾಡ್ರನ್ ಯುಗದಲ್ಲೂ ಗ್ರಾಮಗಳಲ್ಲಿ ಹಾದುಹೋಗುವ ರಸ್ತೆಗಳು ದಲಿತ ಮನುಷ್ಯರ ಜೀವನ-ಬದುಕನ್ನು ಇಬ್ಛಾಗವಾಗಿಸಿವೆ. ಇಂದಿಗೂ ಕೆಲವು ಕುಗ್ರಾಮಗಳಲ್ಲಿ ದಲಿತರ ಕೇರಿಗಳನ್ನು ದಾಟಿಕೊಂಡೇ ಮೇಲ್ವರ್ಗದವರು ತಮ್ಮ ಏರಿಯಾಗಳಿಗೆ ಹೋಗಬೇಕಿರುವುದು ಅನಿವಾರ್ಯವಾಗಿದೆ. ಈ ಚಿತ್ರದಲ್ಲಿ ಇಂಥ ಅನೇಕ ಅಂಶಗಳು ಅನಾವರಣಗೊಂಡಿವೆ. ಸಾಹಿತಿ ದೇವನೂರ ಮಹಾದೇವ ಅವರ ಮೂರು ಕಥೆಗಳನ್ನು ಸೇರಿಸಿ ನಿರ್ಮಾಣ ಮಾಡಿರುವ ಚಿತ್ರ ಮಾರಿಕೊಂಡವರು. ತುರ್ತುಪರಿಸ್ಥಿತಿಯ ನಂತರದ ದಿನಗಳಲ್ಲಿ ದೇವನೂರು ಎಂಬ ಕುಗ್ರಾಮದಲ್ಲಿ ನಡೆದ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ಆ ಊರಿನ ಪಟೇಲನ ಹೆಸರು ದೇವೀರಪ್ಪ, ಆತನ ಒಬ್ಬನೇ ಮಗ ಕಿಟ್ಟಪ್ಪನಿಗೆ ಹೆಣ್ಣು, ಕುಡಿತದ ಹುಚ್ಚು. ನಾಯಕ ಶಿವು, ಅದೇ ಹಳ್ಳಿಯ ವಿಧವೆ ತಾಯವ್ವನ ಪುತ್ರ ಎಂ.ಎ.ಪದವೀಧರ. ಮಠಾಧಿಪತಿಯೊಬ್ಬರ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದ ಆತ, ಅಲ್ಲಿನ ಜಾತಿಭೇದ ಪ್ರಸಂಗದಿಂದ ಬೇಸತ್ತು ರಾಜೀನಾಮೆ ನೀಡಿ ಹುಟ್ಟೂರಿಗೆ ಮರಳುತ್ತಾನೆ. ಬೀರ ಮತ್ತು ಲಚುಮಿ ಪಟೇಲನ ತೋಟದಲ್ಲಿ ಕೆಲಸದಾಳುಗಳಾಗಿರುತ್ತಾರೆ. ದೇವೀರಪ್ಪನಿಗೆ ನದಿದಂಡೆಯ ರಸ್ತೆಗೆ ಡಾಂಬರು ಹಾಕಿಸುವ ಆತುರ,. ಇದರಿಂದ ಕೆಳಜಾತಿಯ ಜನರಿಗೆ ಜಮೀನು ಕಳೆದುಕೊಳ್ಳುವ ಭೀತಿ. ಪಟೇಲನ ಈ ಕುತಂತ್ರಕ್ಕೆ ಶಿವು ಮತ್ತು ಸ್ನೇಹಿತರು ವಿರೋಧಿಸುತ್ತಾರೆ. ಕೊನೆಗೆ, ಪಂಚಾಯಿತಿ ಸಭೆಯಲ್ಲಿ ಸಿಲಿಕಾನ್‍ಯುಕ್ತ ಮರಳನ್ನು ಸಾಗಿಲು ಪಟೇಲ ನಡೆಸುತ್ತಿರುವ ಸಂಚು ಬಯಲಾಗುತ್ತದೆ. ಮರುದಿನ ಬಾಲಕ ರಾಜು ಡಾಂಬರಿನಲ್ಲಿ ಸಿಕ್ಕಿಬಿದ್ದಿರುತ್ತಾನೆ. ಕಾಯುತ್ತಿದ್ದ ಡಾಂಬರಿನಿಂದ ರಾಜುನನ್ನು ರಕ್ಷಿಸಲು ಅಲ್ಲಿ ದಲಿತ ಮಹಿಳೆಯರು ತಾವು ಉಟ್ಟಿದ್ದ ಸೀರೆಯನ್ನೇ ಬಿಚ್ಚಿ ಆ ಮಗುವಿನ ರP್ಷÀಣೆ ಮಾಡುತ್ತಾರೆ. ಆಗ ಅಲ್ಲಿದ್ದ ಉಳಿದ ಮಹಿಳೆಯರೂ ಜಾತಿಭೇದ ಮರೆತು ತಾವುಟ್ಟಿದ್ದ ಸೀರೆಯನ್ನು ಬಿಚ್ಚಿ ನೆರಳು ನೀಡುತ್ತಾರೆ. ಮಗುವನ್ನು ಕಾಪಾಡುತ್ತಾರೆ.
ದೇವನೂರ ಮಹಾದೇವ ಅವರ ಪಾತ್ರದಲ್ಲಿ ಸುನಿಲ್‍ಕುಮಾರ್ ಅಚ್ಚುಕಟ್ಟಾಗಿ ಅಭಿನಯ ನೀಡಿದ್ದಾರೆ. ಸಂಚಾರಿ ವಿಜಯ್, ದಿಲೀಪ್‍ರಾಜ್, ಸದಾರ್ ಸತ್ಯ, ಸೋನುಗೌಡ, ಸಂಯುಕ್ತಾ ಹೊರನಾಡು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿz್ದÁರೆ. ಲಕ್ಷ್ಮೀಪತಿ ಕೋಲಾರ ಮತ್ತು ದೇವನೂರು ಬಸವರಾಜು ಅವರ ಸಂಭಾಷಣೆಯಲ್ಲಿ ಗಟ್ಟಿತನವಿದೆ. ಮುರಳಿ ಕೃಷ್ಣ ಅವರ ಕ್ಯಾಮೆರಾ ಕೈಚಳಕ ಪ್ರೇP್ಷÀಕರನ್ನು ಸೆಳೆಯುತ್ತದೆ.
-Cine Circle News
-19/08/17

MARI KONDAVARU TO RELEASE ON AUGUST 18
T
he much-delayed and much-acclaimed Kannada film Mari Kondavaru is set to release theatres at Bengaluru, Kolar, Chamarajanagar, Kollegal, Mysuru and Mandya on August 18.

Directed by K Shivarudraiah, who handled the megaphone for eight feature films, 150 short films and 200 documentaries, the film Mari Kondavaru is about Deveerappa, the Patela (Landlord) of Devanuru living with son Kittappa. Shivu is the only son of a Dalit widow, a confident, self-respecting and sensitive young man. Deveerappa is engaged in the business illegal sand mining and wishes to widen a road and coat it with Tar to ensure smooth movement of his trucks. Shivu and his friends oppose it. During the work, a poor boy is trapped in a pool of molten tar. Shivu and his friends jump into the pool to rescue child. They do reach the trapped child who keeps blinking his dreamy eyes and the life around goes on as usual.

“My film has a message to society on the importance of safeguarding and protecting natural resources. It also conveys a message to society against the ill-effects of illegal sand mining on the nature. We shot the film at 32 locations around Mysuru, Srirangapattana, Kollegal, Chamarajanagar. It took us two years to complete the shooting since we have to wait for three seasons (summer, monsoon, and winter) for the shooting of this film. I have to thank the artistes and technicians for cooperating with me,’’ director Shivarudriah said.

Speaking on the occasion, Satya alias Sardar Satya, has thanked director Shivarudriah for giving him an opportunity to act in this film. “I was very happy to act in this film. The director has a good concept and he made me to act as per his expectations. I wish the entire team of Mari Kondavaru a great success,’’ Satya said.

Thanking the director for selecting to play the role of Lakshmi in Mari Kondavaru, Samyukta Hornad recalled how director Shivarudriah has explained to her all scenes in details. “I am very happy to act in this film. I played the role of Lakshmi who will be always in confusion. Director made me to express my feelings through body language instead of dialogues. He respects women a lot,’’ said Samyukta Hornad.

Sonu Gowda has recalled how her father advised her to accept whatever role the director offers to her. “My father and director Shivarudriah are close friends. There were two roles to select but I preferred to play the role of Sishira,’’ Sonu Gowda said.
-Cine Circle News
-17/08/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore