HOME
CINEMA NEWS
GALLERY
TV NEWS
REVIEWS
CONTACT US
ಹೊಸಬರ ಕನ್ನಡ, ಹಿಂದಿ ವಿಡಿಯೋ ಆಲ್ಬಂ
ಬೆಂಗಳೂರಿನಲ್ಲಿ ‘ಶರಣ್ಸ್ ಮ್ಯೂಸಿಕ್ ಅಕಾಡೆಮಿ (ರಿ)’ ಸಂಗೀತ ತರಭೇತಿ ಶಾಲೆಯಲ್ಲಿ ಸಾಕಷ್ಟು ಪ್ರತಿಭೆಗಳು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗ ಇದೇ ಸಂಸ್ಥೆಯಿಂದ ಕನ್ನಡದಲ್ಲಿ ‘ಮನಸೇ ನಿನ್ನಾ ದಾರಿಯು ಎಲ್ಲಿಗೆ’, ಹಿಂದಿಯಲ್ಲಿ ‘ಏ ಮನ್ ಕಹಾನ್ ಚಲಾ’ ಎನ್ನುವ ವಿಡಿಯೋ ಆಲ್ಬಂ ಸಿದ್ದಗೊಂಡಿದೆ. ಸಂಸ್ಥೆಯ ಮಖ್ಯಸ್ಥ ಶರಣಬಸವಚೌದರಿ ನಿರ್ಮಾಣ, ನಿರ್ದೇಶನ ಮಾಡಿದ್ದು, ಅವರು ಹೇಳುವಂತೆ ಹಾಡಿಗೆ ಗಾಯಕಿ ಅನುರಾಧಭಟ್ ಮತ್ತು ಗಾಯಕ ರುಮಿತ್ ಕಂಠದಾನ ಮಾಡಿರುತ್ತಾರೆ. ಹಾಡಿನಲ್ಲಿ ರುಮಿತ್, ಹೊಸ ಪರಿಚಯ ಧನುಶ್ರೀ ನಟಿಸಿದ್ದಾರೆ. ಅತ್ಯನ್ನುತ ಗುಣಮಟ್ಟದೊಂದಿಗೆ ಕೇವಲ ನಲವತ್ತೈದು ನಿಮಿಷದಲ್ಲಿ ಸಂಯೋಜನೆ ಮಾಡಿರುವುದು ವಿಶೇಷ. ಬಳ್ಳಾರಿ ಹಾಗೂ ಜಿಂದಾಲ್ ಕಾರ್ಖಾನೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿಡಿ, ಡಿವಿಡಿ ಮೂಲಕ ಹೊರತರುವ ಬದಲು, ಯುಟ್ಯೂಬ್‍ನಲ್ಲಿ ಅಳವಡಿಸಿದರೆ ಆರು ತಿಂಗಳಲ್ಲಿ ಬಂಡವಾಳ ಬರುವುದೆಂಬ ನಿರೀಕ್ಷೆ ಇದೆ ಎಂದು ಮಾಹಿತಿ ಒದಗಿಸಿದರು.

ಶನಿವಾರ ಎಸ್‍ಆರ್‍ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಗಣ್ಯರುಗಳಾದ ಐಪಿಎಸ್ ಅಧಿಕಾರಿ ರವಿ.ಡಿ.ಚನ್ನಣ್ಣನವರ್, ನವೀನ್‍ಚಂದ್ರ, ವಿಶ್ವಕಾರ್ಯಪ್ಪ, ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಪೂರ್ಣಚಂದ್ರತೇಜಸ್ವಿ ಒಕ್ಕರೂಲದಿಂದ ಹಾಡಿಗೆ ಚಾಲನೆ ನೀಡಿ ತಂಡದ ಕೆಲಸವನ್ನು ಶ್ಲಾಘಿಸಿದರು. ಇದೇ ಸಂಸ್ಥೆಯಿಂದ ಕಳೆದ ವರ್ಷ ಕನ್ನಡದ ಗೆಳೆತನ, ಹಿಂದಿಯ ದೋಸ್ತಿ ಆಲ್ಬಂನ್ನು ಹಂಸಲೇಖಾ ಅನಾವರಣಗೊಳಿಸಿದ್ದು, ಇಲ್ಲಿಯವರೆವಿಗೂ 85000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರಂತೆ. ವಿಜಯ್ ಸಾಹಿತ್ಯ, ನೃತ್ಯ ಟಗರು ಖ್ಯಾತಿಯ ರಾಜು, ಛಾಯಗ್ರಹಣ ಚಂದನ್ ನಿರ್ವಹಿಸಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್

11/06/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore