HOME
CINEMA NEWS
GALLERY
TV NEWS
REVIEWS
CONTACT US
ಹಾಸ್ಯ ಚಿತ್ರ ಮಜ್ಜಿಗೆ ಹುಳಿ
ಹಾಸ್ಯ ಚಿತ್ರ ‘ಮಜ್ಜಿಗೆ ಹುಳಿ’ ಚಿತ್ರಕ್ಕೆ ರಚನೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿರುವ ರವೀಂದ್ರಕೊಟಕಿ ಹೇಳುವಂತೆ ಒಂದು ರಾತ್ರಿ, ಕೋಣೆಯೊಳಗೆ ನಡೆಯುವ ಕತೆಯಲ್ಲಿ 28 ಪಾತ್ರಗಳು ಬರುತ್ತವೆ. ನವಜೋಡಿಗಳು ಮೊದಲ ರಾತ್ರಿ ಸುಖವನ್ನು ಅನುಭವಿಸಲು ಹೋಟೆಲ್‍ಗೆ ಬಂದಾಗ ಅವರ ಬದುಕು ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ಹಾಸ್ಯಮಯವಾಗಿ ತೋರಿಸಲಾಗಿದೆ. ಬಾಡೂಟ ಅಂತ ಬಂದವರಿಗೆ ಮಜ್ಜಿಗಹುಳಿ ಸಿಗುವುದು ಖಾತ್ರಿ. ಚಿತ್ರಕ್ಕೆ ತೂಕ ಬರಲು ಯೋಗರಾಜಭಟ್ಟರು ಒನ್ ಲೈನ್ ಸ್ಟೋರಿ ಕೇಳಿ ಪ್ರಾರಂಭ-ಅಂತ್ಯಕ್ಕೆ ಹಿನ್ನಲೆ ಧ್ವನಿ ನೀಡಿದ್ದಾರೆಂದು ವಿವರ ಒಪ್ಪಿಸಿದರು.

ಕೊಳ್ಳೆಗಾಲದಲ್ಲಿ ಮಾಸ್ ಹೀರೋ ಆಗಿದ್ದು, ಇದರಲ್ಲಿ ಮುಗ್ದ, ಸೂಕ್ಷತೆ ಇರುವ ಹುಡುಗನಾಗಿ ಅಭಿನಯಿಸಿದ್ದೇನೆಂದು ನಾಯಕ ದಿಕ್ಷಿತ್‍ವೆಂಕಟೇಶ್ ಹೇಳಿಕೊಂಡರು. ಡ್ಯಾನ್ಸರ್ ಆಗಿದ್ದ ಕಾರಣ ಚೂಚ್ಚಲಬಾರಿ ಟಪ್ಪಾಂಗುಚ್ಚಿ ‘ಮಚ್ಚಾ-ಮಚ್ಚಿ’ ಹಾಡಿಗೆ ಹೆಜ್ಜೆ ಹಾಕಲಾಗಿದೆ ಮತ್ತು ಕಾಮಿಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಖುಷಿ ನೀಡಿದೆ. ಹೆಣ್ಣು ಮಕ್ಕಳು ಮತ್ತು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಹೇಳಲಾಗಿದೆ. ಒಂದು ರಾತ್ರಿಯಲ್ಲಿ ನಡೆಯುವುದು ಆದರೂ ಹಾಡನ್ನು ಕಾರವಾರದಲ್ಲಿ ಚಿತ್ರೀಕರಿಸಲಾಗಿದೆ. ಸಂಭಾಷಣೆಯಲ್ಲಿ ಬೋಲ್ಡ್ ಆಗಿದ್ದು, ಗಂಡನಿಗೆ ಕಷ್ಟಬಂದಾಗ ಅವರಿಗೆ ರಕ್ಷಣೆ ನೀಡುವ ಪಾತ್ರವೆಂದು ನಾಯಕಿ ರೂಪಿಕಾ ಹೇಳಿದರು.

ದಾವಣಗೆರೆಯಲ್ಲಿ ಮಾದ್ಯಮದವರಿಗೆ ನಮಸ್ಕಾರ ಸಾಹೆಬ್ರೇ ಅಂತ ಹೇಳುವುದನ್ನು ಮರೆತಿದ್ದೆ. ಅದಕ್ಕಾಗಿ ಡಬ್ಬಲ್ ನಮಸ್ಕಾರವೆಂದು ಲಹರಿವೇಲು ಪ್ರಾರಂಭದಲ್ಲಿ ಮಾತು ಶುರುಮಾಡಿದರು. ಮುಂದುವರೆಸುತ್ತಾ ಮಜ್ಜಿಗೆಹುಳಿಯಲ್ಲಿ ಬಾಡೂಟ ಇರುವುದಿಲ್ಲ. ಬಾಡೂಟದಲ್ಲಿ ಮಜ್ಜಿಗೆ ಹುಳಿ ಇರೋಲ್ಲವೆಂದು ಕೇಳಿದ್ದೇನೆಂದು ಗುರುಕಿರಣ್ ಲಿರಿಕಲ್ ವಿಡಿಯೋ ಗೀತೆಗೆ ಚಾಲನೆ ನೀಡಿದರು. ಟಗರು ಹಾಡಿಗೆ ಧ್ವನಿಯಾಗಿದ್ದ ಅಂತೋನಿದಾಸ್ ದ್ವಿತೀಯ ಬಾರಿ ಕನ್ನಡದಲ್ಲಿ ಹಾಡಿದ್ದಾರೆಂದು ಐದು ಗೀತೆಗಳಿಗೆ ರಾಗ ಸಂಯೋಜಿಸಿರುವ ಸಂಜೀವ್‍ರಾವ್ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಮಾತೃಭಾಷೆ ತೆಲುಗು. ಆದರೂ ಇಲ್ಲಿ ಚಿತ್ರ ಮಾಡಿದ್ದೇವೆಂದು ನಿರ್ಮಾಪಕ ಎಸ್.ರಾಮಚಂದ್ರ ಅಚ್ಚ ಕನ್ನಡದಲ್ಲಿ ಹೇಳಿಕೊಂಡಿದ್ದಕ್ಕೆ ಸಹ ನಿರ್ಮಾಪಕ ಎ.ಆರ್.ಗಂಗಾಧರ್ ದಸ್‍ಕತ್ ಹಾಕಿದರು. ಸದ್ಯ ಚಿತ್ರವು ಸೆನ್ಸಾರ್ ಅಂಗಳದಲ್ಲಿದ್ದು, ಮಾರ್ಚ್‍ದಲ್ಲಿ ತೆರೆಗೆ ತರಲು ಯೋಜನೆ ಹಾಕಲಾಗಿದೆಯಂತೆ. ಸಿನಿಮಾದಲ್ಲಿ ನಟನೆ ಮಾಡಿರುವ ಯತಿರಾಜ್, ಮಾನಸಗೌಡ, ಸುಚೇಂದ್ರಪ್ರಸಾದ್, ಕುರಿಸುನಿಲ್. ಶಂಕರ್‍ನಾರಾಯಣ್ ಮತ್ತು ತಂತ್ರಜ್ಘರುಗಳಾದ ಗಾಯಕಿ ದೀಪ್ತಿಪ್ರಶಾಂತ್, ಕೋರಿಯೋಗ್ರಾಫರ್ ಹೈಟ್‍ಮಂಜು, ಛಾಯಾಗ್ರಾಹಕ ಮೂರ್ತಿ ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/02/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore