HOME
CINEMA NEWS
GALLERY
TV NEWS
REVIEWS
CONTACT US
ಮಜಾಭಾರತದ ಶೈನಿಂಗ್ ಸೀತಾರಾಮ್
ಕಿರಿತೆರೆಕಲಾವಿದರಿಗೆ ಹಿರಿತೆರೆಗೆ ಹೋಗಲು ವೇದಿಕೆಯಾಗುತ್ತಿದೆ.ಇಲ್ಲಿಂದ ಗುರುತಿಸಿಕೊಂಡವರು ಪ್ರಚಲಿತಹಲವರುಉತ್ತಂಗಕ್ಕೆ ಹೋಗಿದ್ದಾರೆ.ಅದರಂತೆಕೋಲಾರಜಿಲ್ಲೆ, ಬಂಗಾರಪೇಟೆತಾಲ್ಲೂಕು, ಬೂದಿಕೋಟೆಗ್ರಾಮದ ಸೀತಾರಾಮ್ ಎಂದರೆಯಾರಿಗೂ ತಿಳಿಯೊಲ್ಲ. ಮಜಾಭಾರತ ಶೈನಿಂಗ್ ಸೀತಾರಾಮ್ ಅಂದರೆ ಹಾಸ್ಯನಟನೆಂದುಕರೆಯುತ್ತಾರೆ.ತಂದೆರೈತ, ತಾಯಿಗೃಹಿಣಿ. ಬಾಲ್ಯದಲ್ಲಿ ಬೀದಿ ಬೀದಿ ಹೂ ಮಾರುವಾಗಲೇ ಸೈನ್ಯಕ್ಕೆ ಸೇರಬೇಕೆಂಬ ಕನಸು ಬಿತ್ತಿಕೊಂಡಿದೆ.ಬೆಂಗಳೂರಿಗೆ ಬಂದುಅರೆಕಾಲಿಕಉದ್ಯೋಗ ಮಾಡುತ್ತಾ ಪಿಯುಸಿ ಮುಗಿಸಿದ್ದಾರೆ. ಎನ್‍ಸಿಸಿ ಸೇರುವುದಕ್ಕೆ ಆರ್.ಸಿ.ಕಾಲೇಜೆಗೆ ಸೇರಿಕೊಂಡುಅಖಂಡ ಭಾರತಾದ್ಯಂತ 14 ರಾಷ್ಟ್ರೀಯ ಕ್ಯಾಂಪ್‍ಗಳನ್ನು ಮಾಡಿ ‘ಸಿ’ ಸೆಟ್, ಡಿಗ್ರಿಯನ್ನು ‘ಎ’ ಗ್ರೇಡ್‍ನಲ್ಲಿ ಮುಗಿಸುತ್ತಾರೆ.

ಮನೆಯಲ್ಲಿ ಸೈನ್ಕಕ್ಕೆ ಸೇರಲುಅನುಮತಿ ನೀಡಲಿಲ್ಲ. ಭವಿಷ್ಯದಲ್ಲಿಏನಾದರೂ ಮಾಡಬೇಕೆಂಬ ಛಲದಿಂದ ನಾಟಕ ಮಾಡುತ್ತಾ, ಕರೆ ಬಂದಕಡೆಯಲ್ಲಾಅಡಿಷನ್‍ಗೆ ಹೋಗುತ್ತಾರೆ.ಕೊನೆಗೂ ಫಲ ಸಿಕ್ಕಿತು ಎನ್ನುವಂತೆ 2017ರಲ್ಲಿ ಮಜಾಭಾರತ ಸೀಸನ್-1ರಲ್ಲಿ ಆಯ್ಕೆಯಾಗುತ್ತಾರೆ.ಇವರಅಭಿನಯಕಂಡು ‘ಕಾಮಿಡಿಟಾಕೀಸ್’ ದಲ್ಲಿ ಅವಕಾಶ ಸಿಕ್ಕಿದೆ. ಮುಂದೆ ಮಜಾಭಾರತ ಸೀಸನ್-2 ಹಾಗೂ 3ರಲ್ಲಿ ಶೈನಿಂಗ್ ಸೀತಾರಾಮ್ ಅಂತಲೇ ಪ್ರಸಿದ್ದಿಯಾದರು.ಇದರಿಂದಒಂದಷ್ಟು ಸಿನಿಮಾ ನಿರ್ದೇಶಕರುಕರೆ ಮಾಡಿದ್ದಾರೆ.ಇತ್ತೀಚೆಗೆ ಬಿಡುಗಡೆಯಾಗಿರುವ ‘ಸಿಂಗ’ ಚಿತ್ರದಲ್ಲಿವೈನೋಧಿಕ ಪಾತ್ರ ಮಾಡಿದ್ದಾರೆ.ಮುಂಬರುವ ಬ್ರಹ್ಮಚಾರಿ, ಕನ್ನೇರಿ, ರಾಜಲಕ್ಷಿಚಿತ್ರಗಳಲ್ಲಿ ಇವರನ್ನುಕಾಣಬಹುದು. ಹೊಸ ಪ್ರತಿಭೆಗಳಿಗೆ ಚಂದನವನವು ಪ್ರೋತ್ಸಾಹ ನೀಡುತ್ತಾ ಬಂದಿದೆಎಂಬುದಕ್ಕೆ ಸಾಕ್ಷಿಯಾಗಿಇವರುಕಣ್ಣ ಮುಂದೆ ಬರುತ್ತಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
8/08/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore