HOME
CINEMA NEWS
GALLERY
TV NEWS
REVIEWS
CONTACT US
ಬಿಡುಗಡೆಯ ಸನಿಹದಲ್ಲಿ ಮಹಿರ
ಲಂಡನ್ ಕನ್ನಡಿಗ ವಿವೇಕ್‍ಕೊಡಪ್ಪ ನಿರ್ಮಾಣ ಮಾಡಿರುವ ‘ಮಹಿರ’ ಮಾದ್ಯಮ ಗೋಷ್ಟಿಯಲ್ಲಿ ಚಿತ್ರದ ಮೂರು ಟ್ರೈಲರ್‍ನ್ನು ತೋರಿಸಲಾಯಿತು. ಇಂಜಿನಿಯರ್ ಮಹೇಶ್‍ಗೌಡ ಲಂಡನ್‍ದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಚಿತ್ರ ಮಾಡುವ ಬಯಕೆಯಿಂದ ಬಿಡುವಿನ ಸಮಯದಲ್ಲಿ ಗೆಳಯರೊಂದಿಗೆ ಚರ್ಚಿಸುತ್ತಾ ಕತೆ ಬರೆದು ಮುಗಿಸಿದ್ದಾರೆ. ಮುಂದೆ ಕೆಲಸಕ್ಕೆ ರಾಜಿನಾಮೆ ನೀಡಿ, 2013ರಲ್ಲಿ ತಾಯ್ನಾಡಿಗೆ ಬಂದು ಸುನಿಲ್‍ಕುಮಾರ್‍ದೇಸಾಯಿ ಬಳಿ ನಿರ್ದೇಶನದ ವಿಭಾಗಕ್ಕೆ ಸೇರಿಕೊಂಡಿದ್ದಾರೆ. ಚಿತ್ರದ ಕುರಿತು ಹೇಳುವುದಾದರೆ ಶೀರ್ಷಿಕಯು ಸಂಸ್ಕ್ರತ ಪದವಾಗಿದ್ದು, ಹೆಣ್ಣಿನ ಶಕ್ತಿ, ಬುದ್ದಿ, ಎಂದಿಗೂ ಬಿಟ್ಟು ಕೊಡುವುದಿಲ್ಲ ಎಂಬರ್ಥ ಕೊಡುತ್ತದೆ. ಮೂರು ದಿನದಲ್ಲಿ ನಡೆಯುವ ಕತೆಯಲ್ಲಿ ಮುಖ್ಯವಾಗಿ ಅಮ್ಮ-ಮಗಳ ರೋಚಕ ಸಂಬಂದವು ಪ್ರಾರಂಭದಲ್ಲಿ ಸೈಲೆಂಟ್ ಆಗಿದ್ದು, ವಿರಾಮದ ನಂತರ ಆಕ್ಷನ್, ಥ್ರಿಲ್ಲರ್ ಕ್ಲೈಮಾಕ್ಸ್ ಬೇರೆ ರೂಪ ಪಡೆದುಕೊಳ್ಳುತ್ತದೆ. ಸಮುದ್ರ ದಡದಲ್ಲಿ ಅಂಗಡಿ ನಡೆಸುವ ಆಕೆಯ ಬಾಳಿನಲ್ಲಿ ಘಟನೆಯೊಂದು ನಡೆಯುತ್ತದೆ. ಮೊದಲ ಐದು ನಿಮಿಷಗಳು ಪಾತ್ರಗಳ ಪರಿಚಯವಾಗಲಿದ್ದು, ನಂತರ ಕತೆಯು ತೆರೆದುಕೊಳ್ಳುತ್ತದೆ. ಒಂದು ಹಂತದಲ್ಲ್ಲಿ ತಾಯಿಯ ವಿಶೇಷ ಗುಣಗಳು ಆಕೆಗೆ ಗೊತ್ತಿಲ್ಲದ ವಿಷಯಗಳು ಮಗಳಿಗೆ ತಿಳಿಯುತ್ತದೆ. ಯಾರಿಂದ, ಯಾರು, ಯಾತಕ್ಕೋಸ್ಕರ ಮಾಡ್ತಾರೆ ಎಂಬುದರ ಅನಿರೀಕ್ಷತ ತಿರುವುಗಳು ಇರಲಿದೆ.

ಮಂಗಳೂರಿನ ರಂಗಭೂಮಿ ನಟಿ ವರ್ಜೀನಿಯರಾಡ್ರಗೇಸ್ ತಾಯಿಯಾಗಿ ಕನ್ನಡ ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದಾರೆ. ಚೈತ್ರಆಚಾರ್ ಮಗಳ ಪಾತ್ರ. ಇಂಡಿಯನ್ ಇಂಟಿಗ್ರೇಟಡ್ ಇಲಾಖೆಯ ಮುಖ್ಯಸ್ಥನಾಗಿ ಬಾಲಾಜಿಮನೋಹರ್, ತನಿಖಾದಿಕಾರಿಯಾಗಿ ರಾಜ್.ಬಿ.ಶೆಟ್ಟಿ ನಟನೆ ಇದೆ. ಸನ್ನಿವೇಶದಲ್ಲಿ ಆಕ್ಷನ್ ದೃಶ್ಯಗಳು ಹೆಚ್ಚಿಗೆ ಬರುವುದರಿಂದ ವರ್ಜೀನಿಯಾ ಅವರು ಚೇತನ್‍ಡಿಸೋಜ ಬಳಿ ತರಭೇತಿ ಪಡೆದುಕೊಂಡು ಡ್ಯಾಪ್ ಇಲ್ಲದೆ ಸಾಹಸ ಮಾಡಿದ್ದಾರೆ. ಬೆಂಗಳೂರು, ಪುತ್ತೂರು, ಹೊನ್ನಾವರ, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳಿಗೆ ನಿಲಿಮರಾವ್-ರಾಕೇಶ್.ಯು.ಪಿ ರಾಗ ಸಂಯೋಜಿಸಿದ್ದರೆ, ಮಿಧುನ್‍ಮುಕುಂದನ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಸಂಕಲನ ಆಶಿಕ್‍ಕೂಸು, ಸಾಹಿತ್ಯ ವಿಶ್ವಜಿತ್‍ರಾವ್.-ಪ್ರತಾಪ್‍ಭಟ್ ನಿರ್ವಹಿಸಿದ್ದಾರೆ. ಗೋಷ್ಟಿಯಲ್ಲಿ ಚಮಕ್, ಅಯೋಗ್ಯ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಶುಭಹಾರೈಸಿದರೆ, ಶ್ರೇಯಆಚಾರ್ಯ ಕುಂಚಕಲೆಯಲ್ಲಿ ದರಾಬೇಂದ್ರೆ ಅವರನ್ನು ಸೃಷ್ಟಿಸಿದ್ದು ರೋಚಕ ಅನಿಸಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/11/18ಅನಿವಾಸಿ ಭಾರತಿಯರ ಮಹಿರ
ಹೊರ ದೇಶದಲ್ಲಿರುವ ಕನ್ನಡಿಗರು ಭಾಷೆಯ ಅಭಿಮಾನದ ಮೇಲೆ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಇದರ ಸಾಲಿಗೆ ‘ಮಹಿರ’ ಸಿನಿಮಾ ಸೇರ್ಪಡೆಯಾಗಿದೆ. ಇಂಜಿನಿಯರ್ ಮಹೇಶ್‍ಗೌಡ ಲಂಡನ್‍ದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಚಿತ್ರ ಮಾಡುವ ಬಯಕೆಯಿಂದ ಬಿಡುವಿನ ಸಮಯದಲ್ಲಿ ಗೆಳಯರೊಂದಿಗೆ ಚರ್ಚಿಸುತ್ತಾ ಕತೆ ಬರೆದು ಮುಗಿಸಿದ್ದಾರೆ. ಮುಂದೆ ಕೆಲಸಕ್ಕೆ ರಾಜಿನಾಮೆ ನೀಡಿ, 2013ರಲ್ಲಿ ತಾಯ್ನಾಡಿಗೆ ಬಂದು ಸುನಿಲ್‍ಕುಮಾರ್‍ದೇಸಾಯಿ ಬಳಿ ನಿರ್ದೇಶನದ ವಿಭಾಗಕ್ಕೆ ಸೇರಿಕೊಂಡಿದ್ದಾರೆ. ಚಿತ್ರದ ಕುರಿತು ಹೇಳುವುದಾದರೆ ಶೀರ್ಷಿಕಯು ಸಂಸ್ಕ್ರತ ಪದವಾಗಿದ್ದು, ಹೆಣ್ಣಿನ ಶಕ್ತಿ, ಬುದ್ದಿ, ಎಂದಿಗೂ ಬಿಟ್ಟು ಕೊಡುವುದಿಲ್ಲ ಎಂಬರ್ಥ ಕೊಡುತ್ತದೆ. ಮೂರು ದಿನದಲ್ಲಿ ನಡೆಯುವ ಕತೆಯಲ್ಲಿ ಮುಖ್ಯವಾಗಿ ಅಮ್ಮ-ಮಗಳ ರೋಚಕ ಸಂಬಂದವು ಪ್ರಾರಂಭದಲ್ಲಿ ಸೈಲೆಂಟ್ ಆಗಿದ್ದು, ವಿರಾಮದ ನಂತರ ಆಕ್ಷನ್, ಥ್ರಿಲ್ಲರ್ ಕ್ಲೈಮಾಕ್ಸ್ ಬೇರೆ ರೂಪ ಪಡೆದುಕೊಳ್ಳುತ್ತದೆ. ಸಮುದ್ರ ದಡದಲ್ಲಿ ಅಂಗಡಿ ನಡೆಸುವ ಆಕೆಯ ಬಾಳಿನಲ್ಲಿ ಘಟನೆಯೊಂದು ನಡೆಯುತ್ತದೆ. ಮೊದಲ ಐದು ನಿಮಿಷಗಳು ಪಾತ್ರಗಳ ಪರಿಚಯವಾಗಲಿದ್ದು, ನಂತರ ಕತೆಯು ತೆರೆದುಕೊಳ್ಳುತ್ತದೆ. ಒಂದು ಹಂತದಲ್ಲ್ಲಿ ತಾಯಿಯ ವಿಶೇಷ ಗುಣಗಳು ಆಕೆಗೆ ಗೊತ್ತಿಲ್ಲದ ವಿಷಯಗಳು ಮಗಳಿಗೆ ತಿಳಿಯುತ್ತದೆ. ಯಾರಿಂದ, ಯಾರು, ಯಾತಕ್ಕೋಸ್ಕರ ಮಾಡ್ತಾರೆ ಎಂಬುದರ ಅನಿರೀಕ್ಷತ ತಿರುವುಗಳು ಇರಲಿದೆ.

ಮಂಗಳೂರಿನ ರಂಗಭೂಮಿ ನಟಿ ವರ್ಜೀನಿಯರಾಡ್ರಗೇಸ್ ತಾಯಿಯಾಗಿ ಕನ್ನಡ ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದಾರೆ. ಚೈತ್ರಆಚಾರ್ ಮಗಳ ಪಾತ್ರ. ಇಂಡಿಯನ್ ಇಂಟಿಗ್ರೇಟಡ್ ಇಲಾಖೆಯ ಮುಖ್ಯಸ್ಥನಾಗಿ ಬಾಲಾಜಿಮನೋಹರ್, ತನಿಖಾದಿಕಾರಿಯಾಗಿ ರಾಜ್.ಬಿ.ಶೆಟ್ಟಿ ನಟನೆ ಇದೆ. ಸನ್ನಿವೇಶದಲ್ಲಿ ಆಕ್ಷನ್ ದೃಶ್ಯಗಳು ಹೆಚ್ಚಿಗೆ ಬರುವುದರಿಂದ ವರ್ಜೀನಿಯಾ ಅವರು ಚೇತನ್‍ಡಿಸೋಜ ಬಳಿ ತರಭೇತಿ ಪಡೆದುಕೊಂಡು ಡ್ಯಾಪ್ ಇಲ್ಲದೆ ಸಾಹಸ ಮಾಡಿದ್ದಾರೆ. ಬೆಂಗಳೂರು, ಪುತ್ತೂರು, ಹೊನ್ನಾವರ, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳಿಗೆ ನಿಲಿಮರಾವ್-ರಾಕೇಶ್.ಯು.ಪಿ ರಾಗ ಸಂಯೋಜಿಸಿದ್ದರೆ, ಮಿಧುನ್‍ಮುಕುಂದನ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಸಂಕಲನ ಆಶಿಕ್‍ಕೂಸು, ಸಾಹಿತ್ಯ ವಿಶ್ವಜಿತ್‍ರಾವ್.-ಪ್ರತಾಪ್‍ಭಟ್ ನಿರ್ವಹಿಸಿದ್ದಾರೆ. ಲಂಡನ್‍ದಲ್ಲಿರುವ ವಿವೇಕ್‍ಕೊಡಪ್ಪ ನಿರ್ಮಾಣ ಮಾಡಿರುವ ಚಿತ್ರವು ಮೊದಲು ಅಲ್ಲಿ ಪ್ರದರ್ಶನಗೊಂಡು, ಮುಂದಾ ಕರ್ನಾಟಕದಲ್ಲಿ ನವೆಂಬರ್‍ದಂದು ಬಿಡುಗಡೆ ಮಾಡಲಾಗುವುದೆಂದು ತಂಡವು ಹೇಳಿಕೊಂಡಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/09/18


For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore