HOME
CINEMA NEWS
GALLERY
TV NEWS
REVIEWS
CONTACT US
ಹಾರಲು ಸಿದ್ದ ಮೂಕ ಹಕ್ಕಿ
ಮೂಕ ಜನಾಂಗವೊಂದರ ಅಂತರಂಗದ ಕತೆಯಾಗಿರುವ ‘ಮೂಕ ಹಕ್ಕಿ’ ಅಡಿಬರಹದಲ್ಲಿ ನಾನು ಮಾತನಾಡಬೇಕು ಎನ್ನುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಸಮಾಜದ ಕೆಳವರ್ಗದ ಜನಾಂಗದ ಧ್ವನಿಯನ್ನು ಕೇಳುವವರು ಯಾರು ಇಲ್ಲ. ಈ ಜನಾಂಗದ ಏಕೈಕ ಆಸ್ತಿಯಾದ ‘ರಾಮ-ಸೀತೆ’ ಹೆಸರಿನ ಕಾಲೇತ್ತುಗಳನ್ನು ಹಿಂದಿಟ್ಟುಕೊಂಡು ಸ್ವಂತ ಸೂರಿಲ್ಲದೆ ವರ್ಷವೆಲ್ಲಾ ಊರಿಂದ ಊರಿಗೆ ಸಂಚರಿಸುತ್ತಾ ಸೀತಾ ಕಲ್ಯಾಣ ಆಟವಾಡಿತ್ತಾ ಬದುಕನ್ನು ನಡೆಸುತ್ತಾರೆ. ಇದರ ಮಧ್ಯೆ ಶ್ರೀಮಂತ ದುಷ್ಟ ಶಕ್ತಿಗಳಿಂದ ಹುಡುಗಿಯ ಮೇಲೆ ಕಣ್ಣು ಬೀಳುತ್ತದೆ. ಕತೆಯಲ್ಲಿ ನಾಲ್ಕು ಪಾತ್ರಗಳು ಮುಖ್ಯವಾಗಿ ಬರಲಿದ್ದು, ಅದನ್ನು ರಂಗಭೂಮಿ ನಟ ಸಂಪತ್, ತಿಥಿ ಖ್ಯಾತಿ ಪೂಜಾಕಾವೇರಿ, ಸತೀಶ್ ಹಾಗೂ ನಿರ್ಮಾಪಕರಿಯ ಪುತ್ರ ಮಾಸ್ಟರ್ ನಿಶಾಂತ್ ಅಭಿನಯಿಸಿದ್ದಾರೆ. ಕ್ಲೈಮಾಕ್ಸ್ ದೃಶ್ಯವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಎತ್ತು ಪೂಜಾಗೆ ಗುಮ್ಮಿದ ಕಾರಣ ಹೊಟ್ಟಭಾಗದಲ್ಲಿ ದೊಡ್ಡದಾದ ಗಾಯವಾಗಿದೆ. ಆದರೂ ಚೇತರಿಸಿಕೊಂಡು ತಮ್ಮ ಭಾಗದ ಕೆಲಸ ಮುಗಿಸಿ ಆಸ್ಪತ್ರೆಗೆ ದಾಖಲಾಗಿದ್ದನ್ನು ನಿರ್ದೇಶಕ ನೀನಾಸಂ ಮಂಜು ನೆನಸಿಕೊಂಡು ಅವರ ಕರ್ತವ್ಯಪ್ರಜ್ಘೆಯನ್ನು ಮೆಚ್ಚಿ ಕೊಂಡಿದ್ದಾರೆ.

ಸಹ ನಿರ್ದೇಶಕ, ಎರಡು ಹಾಡಿಗೆ ಸಾಹಿತ್ಯ ಹಾಗೂ ನಾಯಕನಾಗಿ ನಟಿಸಿರುವ ಸತೀಶ್ ಚಿತ್ರವು ಭರವಸೆಯನ್ನು ನೀಡಲಿದೆ ಅಂತ ನಂಬಿದ್ದಾರೆ. ಗ್ಯಾಪ್ ನಂತರ ಕೆಲಸ ಮಾಡಿರುವ ಹಿರಿಯ ಸಾಹಿತಿ,ರಂಗಭೂಮಿ ಕರ್ಮಿ ಕೊಡಿಗೇನಹಳ್ಳೀ ರಾಮಯ್ಯ ಕತೆ, ಸಾಹಿತ್ಯ, ಸಂಭಾಷಣೆ ಬರೆದಿರುವುದು ವಿಶೇಷವಾಗಿದೆ. ಮಣ ಕಾಂತ್‍ಕದ್ರಿ ಸಂಗೀತದಲ್ಲಿ ಎರಡು ಹಾಡುಗಳು ಹಿಟ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಕಳೆದ ವರ್ಷ ಅಗಲಿದ ಅನಿಲ್ ಮುಖ್ಯ ಖಳನಾಯಕನಾಗಿ ಅಭಿನಯಿಸುವುದರ ಜೊತೆಗೆ ತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಛಾಯಗ್ರಹಣ ಚಿದಾನಂದ್, ಸಂಖಲನ ಸುಜಿತ್‍ನಾಯರ್ ಅವರದಾಗಿದೆ. ಮೊದಲಬಾರಿ ಸಿನಿಮಾ ಕೃಷಿಗೆ 50 ಲಕ್ಷ ಖರ್ಚು ಮಾಡಿರುವ ಟಿ.ಆರ್.ಚಂದ್ರಕಲಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ರಾಜ್ ಮೂವೀಸ್ ಮುಖಾಂತರ ಇದೇ ತಿಂಗಳಲ್ಲಿ ಸುಮಾರು 40 ಕೇಂದ್ರಗಳಲ್ಲಿ ಹಕ್ಕಿಯು ಹಾರಾಡಲಿದೆ.
-13/11/17
ಮೂಕ ಹಕ್ಕಿಯು ಹಾಡಿದೆ
ಕೋಲೆ ಬಸವ ಸಮುದಾಯದ ಕುರಿತ ‘ಮೂಕ ಹಕ್ಕಿ’ ಚಿತ್ರದ ಆಡಿಯೋ ಸಿಡಿಯು ರೇಣುಕಾಂಬ ಪ್ರಿವ್ಯೂ ಚಿತ್ರಮಂದಿರದಲ್ಲಿ ಸರಳವಾಗಿ ಅನಾವರಣಗೊಂಡಿತು. ಸಿಡಿ ಬಿಡುಗಡೆ ಮಾಡಿದ ಶಾಸಕ ಪಿ.ರಾಜು ಸಮಾಜದಲ್ಲಿ ಆಲೋಚನೆ ಇರುವ ಸಿನಿಮಾಗಳು ಬರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿ ತಂಡಕ್ಕೆ ಶುಭಹಾರೈಸಿದರು. ಕೆಳವರ್ಗದ ಜನಾಂಗದ ಧ್ವನಿಯನ್ನು ಕೇಳುವವರು ಯಾರು ಇಲ್ಲ. ಸಮಾಜಮುಖಿಯಾಗಿ ಸಂದೇಶಸಾರುವ ಚಿತ್ರಕ್ಕೆ ಹಣ ಹೊಡಿರುವ ನಿರ್ಮಾಪಕ ಒಲವು ಮೆಚ್ಚತಕ್ಕದು ಎನ್ನುತ್ತಾರೆ ಸಾಹಿತ್ಯ ಸಂಭಾಷಣೆ ಬರೆದಿರುವ ಕೋಟಿಗಾನಹಳ್ಳಿ ರಾಮಯ್ಯ. ಕದ್ರಿ ಅಭಿಮಾನಿಯಾಗಿ ಅವರ ಹಾಡುಗಳನ್ನು ಇಷ್ಟಪಡುತ್ತೇನೆ. ಮೂರು ಗೀತೆ ಹಾಡಲು ಅವಕಾಶ ನೀಡಿರುವುದಕ್ಕೆ ಥ್ಯಾಂಕ್ಸ್ ಎಂದರು ವಾಣ ಹರಿಕೃಷ್ಣ. ಗೆಳಯರೆ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರವಾಗಿರುವುದರಿಂದ ನನ್ನ ಕಡೆಯಿಂದ ಆದಷ್ಟು ಮಟ್ಟಿಗೆ ಪ್ರೋತ್ಸಾಹ ನೀಡಿದ್ದೇನೆ ಎನ್ನುವುದು ಸಂಗೀತ ನಿರ್ದೇಶಕ ಕದ್ರಿಮಣ ಕಾಂತ್ ನುಡಿ.

ತಿಥಿ ನಂತರ ಸಾಕಷ್ಟು ಕತೆಗಳು ಬಂದವು. ಇದನ್ನು ಕೇಳಿದಾಗ ಒಳ್ಳೆಯ ಸಿನಿಮಾವಾಗಬಹುದೆಂಬ ನಂಬಿಕೆಯಿಂದಲೇ ನಟಿಸಿದ್ದೇನೆ. ಹಿಂದಿನ ಚಿತ್ರದಂತೆ ಇಲ್ಲಿಯೂ ಕಾಣ ಸಿಕೊಂಡಿದ್ದೇನೆ ಅಂತ ನಕ್ಕರು ಪೂಜಾ. ನಿರ್ಮಾಪಕರಿಗೆ ಒಂದು ಏಳೆ ಕತೆ ಹೇಳಿದಾಕ್ಷಣ ನಿರ್ಮಾಣ ಮಾಡುವುದಾಗಿ ಧೈರ್ಯ ತುಂಬಿದರು. ಕೋಲೆತ್ತಿ ಜನಾಂಗದ ಹೆಣ್ಣು ಮಕ್ಕಳನ್ನು ನೋಡುತ್ತಿರುವ ರೀತಿ ಬೇಸರ ತರಿಸುತ್ತದೆ. ಗೆಳಯ ಅನಿಲ್ ಸಾಕಷ್ಟು ಸಹಾಯ ಮಾಡಿದ್ದಾರೆಂದು ಭಾವುಕರಾದರು ನಿರ್ದೇಶಕ ನೀನಾಸಂಮಂಜು. ಗಾಯಕಿ ಶಾಂತಕುಣ ್, ನಿರ್ಮಾಪಕರಾದ ಯೋಗೀಶ್‍ಕುಮಾರ್, ಸುಂದರ್.ಪಿ.ಗೌಡ್ರು, ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ನಿರ್ಮಾಪಕಿ ಚಂದ್ರಕಲಾ.ಟಿ.ಆರ್. ಅವರು ಅನಿಲ್ ಕುಟುಂಬಕ್ಕೆ ಧನಸಹಾಯ ಮಾಡುವದರೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
-03/11/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore