HOME
CINEMA NEWS
GALLERY
TV NEWS
REVIEWS
CONTACT US
ನಾಲ್ಕು ಅಕ್ಷರಕ್ಕೆ ನಾಲ್ಕು ಹುಡುಗಿಯರು
ಚಿತ್ರದ ಹೆಸರು ‘ಎಂಎಂಸಿಹೆಚ್’. ಇದಕ್ಕೆ ಅರ್ಥ ಮಂಗಳೂರು, ಮೈಸೂರು, ಚಾಮರಾಜನಗರ ಮತ್ತು ಹಾಸನ ಎಂಬುದಾಗಿ ನಿರ್ದೇಶಕ ಮುಸ್ಸಂಜೆ ಮಹೇಶ್ ಹೇಳಿದ್ದಾರೆ. 80ರಲ್ಲಿ ನಡೆದ ನೈಜ ಘಟನೆಗೆ ಸಿನಿಮಾ ರೂಪ ನೀಡಿದ್ದಾರೆ. ಈ ನಗರಗಳಿಂದ ಓದಲು ಬರುವ ನಾಲ್ಕು ಹುಡುಗೀರು ಗಳತನವಾಗಿ, ಮುಂದೆ ಸ್ನೇಹಕ್ಕೂ ಸೈ ಹೊಡೆದಾಟಕ್ಕೂ ಸೈ ಎನ್ನುವಂತೆ ಆಪ್ತರಾಗುತ್ತಾರೆ. ಮೂವರಿಗೆ ಗೊತ್ತಾಗದಂತೆ ಒಬ್ಬಳು ಕಾಲೇಜು ಎದುರಿಗಿರುವ ಹುಡುಗನನ್ನು ಪ್ರೀತಿಸುತ್ತಾಳೆ. ನಂತರ ಅವನು ಮೋಸಮಾಡಿದಾಗ ಆತನ ಇನ್ನೋಂದು ಕರಾಳ ಮುಖ ಕಾಣಿಸುತ್ತದೆ. ಆಗ ಒಂದು ಘಟನೆ ನಡೆಯುತ್ತದೆ. ಅದರ ತಿರುವುನಿಂದ ಕತೆ ಮುಂದೆ ಸಾಗುತ್ತದೆ. ಕತೆಯಲ್ಲಿ ನಿಚ್ಚಳವಾದ ಸ್ನೇಹ, ಪ್ರೀತಿ, ನೋವು ಆಕ್ರೋಶ, ಅನುಕಂಪ ಎಲ್ಲವು ತುಂಬಿಕೊಂಡಿದೆ. ಮಹಿಳೆಯ ವಿರುದ್ದ ಅನ್ಯಾಯವನ್ನು ತಡೆಗಟ್ಟುವ ಪ್ರಸ್ತಾಪದಿಂದ ಹಿಡಿದು ನ್ಯಾಯ ವ್ಯವಸ್ಥೆಯನ್ನೆ ಬುಡಮೇಲು ಮಾಡುವ ಆಲೋಚನೆ. ಹೀಗೆ ಎಲ್ಲವನ್ನು ಟಚ್ ಮಾಡಿಸಿರುವುದು ಕಂಡು ಬರುತ್ತದೆ. ನಾಲ್ವರು ಹುಡುಗಿಯರು ಒಂದು ಕೊಲೆಗೆ ಕಾರಣವಾಗುತ್ತಾರೆ. ಅದರ ರಹಸ್ಯವನ್ನು ಭೇದಿಸಲು ಬರುವ ಮಹಿಳಾ ಪೋಲೀಸ್ ಅಧಿಕಾರಿ ಅಪರಾಧಿಗಳನ್ನು ನ್ಯಾಯಲಯದಲ್ಲಿ ನಿಲ್ಲಿಸುತ್ತಾಳೆ. ತೀರ್ಪಿನ ನಂತರ ನಾಲ್ವರು ‘ಬಾಯ್ಸ್ ಹುಡುಗಿಯರಿದ್ದಾರೆ ಎಚ್ಚರಿಕೆ’ ಎಂದು ಹೇಳಿದಾಗ ಚಿತ್ರಮಂದಿರದ ಲೈಟ್ಸ್‍ಗಳು ಆನ್ ಆಗುತ್ತದೆ.

ಹಿರಿಯ ನಟಿಯರ ಪುತ್ರಿಯರು ಅಭಿನಯಿಸಿದ್ದರಿಂದ ಸಹಜವಾಗಿ ನೋಡುಗರಿಗೆ ಕುತೂಹಲ ಇತ್ತು. ಅದಕ್ಕೆ ಮೋಸಮಾಡದೆ ಮೇಘನಾರಾಜ್, ಸಂಯುಕ್ತಹೊರನಾಡು, ಪ್ರಥಮಪ್ರಸಾದ್ ಮತ್ತು ದೀಪ್ತಿ ಅಭಿನಯ, ಹೊಡೆದಾಟದಲ್ಲಿ ಮಿಂಚಿದ್ದಾರೆ. ಸ್ಟೈಲಿಶ್ ಆಗಿ ಸಿಗರೇಟ್ ಸೇದುತ್ತಾ, ಶಿಳ್ಳೆ ಹೊಡೆಯುವಂತೆ ಡೈಲಾಗ್ ಹೇಳಿರುವ ರಾಗಿಣಿದ್ವಿವೇದಿ ಪೋಲೀಸ್ ಖದರ್ ಕೆಲವು ಕಡೆ ನೀರಸ ಅನಿಸುತ್ತದೆ. ಹುಡುಗರುಗಳಾಗಿ ಯುವರಾಜ್, ರಘುಭಟ್ ಇವರಿಗೆ ಅವಕಾಶ ಕಡಿಮೆ. ಪದ್ಮವಾಸಂತಿ, ಗೋಪಾಲಕೃಷ್ಣದೇಶಪಾಂಡೆ ಕೊಟ್ಟ ಕೆಲಸಕ್ಕೆ ಮೋಸಮಾಡಿಲ್ಲ. ಶ್ರೀಧರ್‍ಸಂಭ್ರಮ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಮಹಿಳಾ ಪ್ರಧಾನ ಚಿತ್ರದಲ್ಲಿ ಆಕ್ಷನ್, ಸೆಂಟಿಮೆಂಟ್ ಇರುವುದರಿಂದ ಫುಲ್ ಮೀಲ್ಸ್ ಚಿತ್ರ ಎನ್ನಬಹುದಾಗಿದೆ.
ನಿರ್ಮಾಣ: ಎಸ್.ಪುರುಷೋತ್ತಮ್, ಜಾನಕಿರಾಮ್, ಎಂ.ಅರವಿಂದ್
*** ಸಿನಿ ಸರ್ಕಲ್.ಇನ್ ವಿಮರ್ಶೆ
16/07/18

ಎಂಎಂಸಿಹೆಚ್ ತೆರೆಗೆ ಸಿದ್ದ
1989-90ರ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ನೈಜ ಘಟನೆ ಕುರಿತಾದ ‘ಎಂಎಂಸಿಹೆಚ್’ ಚಿತ್ರದ ಒಂದು ಏಳೆ ಹೇಳಿದರೂ ಇಲ್ಲೆ ನಡೆದಿದೆ ಅಂತ ಗೊತ್ತಾಗುತ್ತದೆ. ಅದಕ್ಕಾಗಿ ತಂಡವು ಇಲ್ಲಿಯವರೆಗೂ ಕುತೂಹಲ ಕಾಪಾಡಿಕೊಂಡಿದೆ. ಕತೆಗೆ ಪೂರಕವಾಗಿ ಟೈಟಲ್ ಇಡಲಾಗಿದೆ. ಚಂದನವನದ ಹಿರಿಯ ಕಲಾವಿದೆಯರ ನಾಲ್ಕು ಸುಪುತ್ರಿಯರು, ಖಡಕ್ ಪೋಲೀಸ್ ಅಧಿಕಾರಿಯಾಗಿ ರಾಗಿಣಿದ್ವಿವೇದಿ ನಟಿಸಿದ್ದಾರೆ. ಥ್ರಿಲ್ಲರ್, ಮರ್ಡರ್ ಮಿಸ್ಟ್ರೀ ಇರಲಿದೆ. ಸುಮಾರು ಹತ್ತು ವರ್ಷಗಳ ನಂತರ ನಿರ್ದೇಶಕ ಮುಸ್ಸಂಜೆಮಹೇಶ್ ಮತ್ತು ಸಂಗೀತ ನಿರ್ದೇಶಕ ಶ್ರೀಧರ್‍ಸಂಭ್ರಮ್ ಜೋಡಿಯಾಗಿರುವುದು ವಿಶೇಷ. ಬಿಡುಗಡೆಗೆ ಮುಂಚೆ ತೆಲುಗು, ತಮಿಳು ರಿಮೇಕ್ ಹಕ್ಕುಗಳು ಮಾರಾಟವಾಗಿದೆ. ನಾಲ್ಕು ಹಾಡುಗಳಿಗೆ ಶ್ರೇಯಾಘೋಷಾಲ್, ವಿಜಯಪ್ರಕಾಶ್ ಮತ್ತು ರೈಲ್ವೆ ಅಧಿಕಾರಿ ಅನೂಪ್‍ದಯಾನಂದ್ ಕಂಠದಾನ ಮಾಡಿದ್ದಾರೆ. ಮಹಿಳಾ ಪ್ರಧಾನ ಚಿತ್ರದಲ್ಲಿ ಮೇಘನಾರಾಜ್, ಪ್ರಥಮಾಪ್ರಸಾದ್, ಸಂಯುಕ್ತಹೂರನಾಡು ಮತ್ತು ನಕ್ಷತ್ರಾ ಇವರುಗಳೊಂದಿಗೆ ಸುಚೇಂದ್ರಪ್ರಸಾರ್ಧ, ಯುವರಾಜ್, ರಘುಭಟ್ ನಟನೆ ಇದೆ. ಪುರೋಷತ್ತಮ್, ಜಾನಕಿರಾಮ್ ಹಾಗೂ ಅರವಿಂದ್ ನಿರ್ಮಾಣ ಮಾಡಿರುವ ಚಿತ್ರವು ಶುಕ್ರವಾರದಂದು 160 ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
12/07/18ಎಂಎಂಸಿಹೆಚ್ ಶೀರ್ಷಿಕೆಗೆ ಸಂಕೀರ್ಣ ಅರ್ಥಗಳು
ಶೀರ್ಷಿಕೆಯಲ್ಲಿ ಗಮನ ಸೆಳೆದಿರುವ ‘ಎಂಎಂಸಿಹೆಚ್’ ಎಂದರೆ ವಿನಯಪ್ರಸಾದ್ ಹೇಳುವಂತೆ ಮಾತೆಯ ಮಮತೆಯರ ಚಂದದ ಹೆಣ್ಣುಮಕ್ಕಳು. ಸುಧಾಬೆಳವಾಡಿ ಪ್ರಕಾರ ಮೈಸೂರಿನ ಮುಗ್ದತೆ, ಮಂಡ್ಯಾದ ಮಮತೆ, ಚಾಮರಾಜನಗರದ ಚಲ, ಹಾಸನದ ಹುಮ್ಮಸ್ಸು. ಆದರೆ ನಿರ್ದೇಶಕ ಮುಸ್ಸಂಜೆ ಮಹೇಶ್ ಪ್ರಕಾರ ಇದೆಲ್ಲಾವನ್ನು ತಿಳಿದುಕೊಳ್ಳಬೇಕಾದರೆ ಸಿನಿಮಾ ನೋಡಿ ಅಂತಾರೆ. ಚಿತ್ರದ ಧ್ವನಿಸಾಂದ್ರಿಕೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಇವಿಷ್ಟು ನಡೆಯಿತು. 1989-90ರ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ನೈಜ ಘಟನೆಯಾಗಿದೆ. ಒಂದು ಏಳೆ ಹೇಳಿದರೂ ಇಲ್ಲೆ ನಡೆದಿದೆ ಅಂತ ಗೊತ್ತಾಗುತ್ತದೆ. ಕತೆಗೆ ಪೂರಕವಾಗಿ ಟೈಟಲ್ ಇಡಲಾಗಿದೆ. ಚಂದನವನದ ಹಿರಿಯ ಕಲಾವಿದೆಯರ ನಾಲ್ಕು ಸುಪುತ್ರಿಯರು, ಖಡಕ್ ಪೋಲೀಸ್ ಅಧಿಕಾರಿಯಾಗಿ ರಾಗಿಣಿದ್ವಿವೇದಿ ನಟಿಸಿದ್ದಾರೆ. ಥ್ರಿಲ್ಲರ್, ಮರ್ಡರ್ ಮಿಸ್ಟ್ರೀ ಇರಲಿದೆ ಎಂದಷ್ಟೇ ಹೇಳಿ ನಿರ್ದೆಶಕರು ಕುತೂಹಲವನ್ನು ಕಾಯ್ದರಿಸಿದರು .

ಕಷ್ಟವಾದ ವಿಷಯವನ್ನು ತೆರೆ ಮೇಲೆ ತರುವುದು ತ್ರಾಸವಾಗಿದೆ. ಅಂತಹ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ ಎಂದು ಸುಮಿತ್ರಾ ಹೇಳಿದರು. ಮಗಳು ನಕ್ಷತ್ರ ಗ್ಯಾಪ್ ನಂತರ ನಟಿಸಿದ ಚಿತ್ರವಾಗಿದೆ. ನಾಲ್ಕು ನಾಯಕಿಯರು ಇದ್ದಾರೆ ಎಂದಾಗ ಹಿಂಜರಿದಿದ್ದೆ. ಕತೆ ಕೇಳಿದಾಗ ಖುಷಿಯಾಗಿ ನಟಿಸಲಾಯಿತು ಎಂದರು.

ವಿನಯ್‍ಪ್ರಸಾದ್ ಮಗಳಾದ ಪ್ರಥಮಾಪ್ರಸಾದ್ ಕತೆ ಕೇಳಿ ಎರಡು ದಿವಸ ನಿದ್ದೆ ಮಾಡಲಿಲ್ಲ. ವಸುದೈವ ಕುಟುಂಬದಂತೆ ಈ ಚಿತ್ರದಿಂದ ನಾಲ್ಕು ಬೆಲೆ ಕಟ್ಟಲಾಗದ ಗೆಳತಿಯರು ಸಿಕ್ಕರು ಅಂತ ಸಂತಸ ಪಟ್ಟರು.

ನಿರ್ದೇಶಕರ ಪರಿಕಲ್ಪನೆ ಚೆನ್ನಾಗಿದ್ದು, ಕನ್ನಡ ಕಲಾವಿದರ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಿರೆಂದು ಸಲಹೆ ನೀಡಿದಂತೆ ಅದೇ ರೀತಿ ನಮ್ಮ ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕ್ಲೈಮಾಕ್ಸ್ ಕಣ್ಣನ್ನು ಒದ್ದೆ ಮಾಡುವ ಜೊತೆಗೆ ದೃಶ್ಯಗಳು ಹೆದರಿಸುತ್ತವೆ ಎಂಬುದು ಪ್ರಮೀಳಾಜೋಷಾಯ್ ನುಡಿ. ಅಮ್ಮನ ಸಲಹೆ ಕೇಳಲು ಬರುತ್ತಿದ್ದ ನಿರ್ದೇಶಕರ ಕತೆ ಕೇಳಿದಾಗ ಈ ತರಹ ಸಿನಮಾ ಮಾಡಬಹುದಾ ಅಂತ ಪ್ರಶ್ನೆ ಕಾಡಿತ್ತು. ಸಂಗೀತ ನಿರ್ದೇಶಕರೊಂದಿಗೆ ಮೂರನೆ ಚಿತ್ರವಾಗಿದೆ ಎಂದು ಹೇಳಿಕೊಂಡಿದ್ದು ಮೇಘನಾರಾಜ್.
ಸುಧಾಬೆಳವಾಡಿ ಮಗಳು ಸಂಯುಕ್ತಹೂರನಾಡು ಮಾತನಾಡಿ ಚಿತ್ರದಲ್ಲಿ ಹುಡುಗರನ್ನು ಚೆನ್ನಾಗಿ ಹೊಡೆದಿದ್ದೇವೆ. ಕಿಕ್‍ಬಾಕ್ಷಿಂಗ್, ಕರಾಟ್ ಕಲಿತಿದ್ದು ಉಪಯೋಗಕ್ಕೆ ಬಂತು ಎಂದರು.

ನಾಲ್ಕು ಹಾಡುಗಳಲ್ಲಿ ನನಗೆ ಅಂತಲೇ ಒಂದು ಇಲ್ಲವೆಂದು ತುಸು ಬೇಸರ ವ್ಯಕ್ತಪಡಿಸಿದ ರಾಗಿಣಿ, ನಿರ್ದೇಶಕರಿಂದ ಕರೆ ಬಂದಾಗ ರೋಮಾನ್ಸ್ ಪಾತ್ರವಿದೆ ಅಂದುಕೊಂಡರೆ ಪೋಲೀಸ್ ಅಧಿಕಾರಿಣಿ ಕೊಟ್ಟಿದ್ದಾರೆ. ನಾಲ್ಕು ಅಮ್ಮಂದಿರು ಇರುವುದು ನೋಡಿದಾಗ ಖುಷಿಯಾಗುತ್ತದೆ. ಅಮ್ಮ ಮರವಾದರೆ, ನಾವುಗಳು ಕೊಂಬೆಯಂತೆ ಇರುತ್ತೇವೆ ಎಂದು ಅವರೊಂದಿಗೆ ಫೋಟೋಗೆ ಫೋಸ್ ಕೊಟ್ಟರು.

ನಟರಾದ ಯುವರಾಜ್, ರಘುಭಟ್, ಲೆಕ್ಚರರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪದ್ಮವಾಸಂತಿ, ಸಂಗೀತ ನಿರ್ದೇಶಕ ಶ್ರೀಧರ್‍ಸಂಭ್ರಮ್, ಮಹಾಪೌರರಾದ ಸಂಪತ್‍ರಾಜ್, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು, ಮೊದಲಬಾರಿ ಒಂದು ಹಾಡಿಗೆ ಧ್ವನಿಯಾಗಿರುವ ರೈಲ್ವೆ ಅಧಿಕಾರಿ ಅನೂಪ್‍ದಯಾನಂದ್, ನಿರ್ಮಾಪಕರುಗಳಾದ ಎಸ್.ಪುರೋಷತ್ತಮ್, ಜೆ.ಜಾನಕಿರಾಮ್, ಅರವಿಂದ್ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
5/06/18

ಎಂಎಂಸಿಹೆಚ್‍ಗೆ ಸರ್ಕಾರಿ ಅಧಿಕಾರಿಯಿಂದ ಹಾಡು
ಮುಸ್ಸಂಜೆ ಮಹೇಶ್ ನಿರ್ದೇಶನದ ‘ಎಂಎಂಸಿಹೆಚ್’ ಚಿತ್ರದಲ್ಲಿ ನಾಲ್ವರು ಹಿರಿಯ ಕಲಾವಿದೆಯರ ಪುತ್ರಿಯರು ನಟಿಸಿದ್ದಾರೆಂದು ಸುದ್ದಿಯಾಗಿತ್ತು. ಚಿತ್ರೀಕರಣ ಮುಗಿಸಿರುವ ತಂಡವು ಮತ್ತೋಂದು ವಿಶೇಷತೆಯನ್ನು ಸೇರಿಸಿಕೊಂಡಿದೆ. ಸಾಹಿತಿ ಗೌಸ್‍ಪೀರ್ ರಚನೆಯ ‘ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ’ ಎಂಬ ಗೀತೆಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿರುವ ದಯಾನಂದ್ ಅವರು ಧ್ವನಿಯಾಗಿದ್ದಾರೆ. ರಾಜಾಜಿನಗರದ ಆದರ್ಶ ಸುಡಿಯೋದಲ್ಲಿ ಸಂಗೀತ ನಿರ್ದೇಶಕ ಶ್ರೀಧರ್‍ಸಂಭ್ರಮ್ ಸಾರಥ್ಯದಲ್ಲಿ ಹಾಡಿನ ಧ್ವನಿಮುದ್ರಣ ಕಾರ್ಯ ನಡೆಯಿತು. ಸದರಿ ಅಧಿಕಾರಿ ಈ ಹಿಂದೆ ಹಲವು ಭಾವಗೀತೆ, ಭಕ್ತಿಗೀತೆಗಳನ್ನು ಹಾಡಿದ್ದು, ಮೊದಲ ಸಲ ಚಿತ್ರಕ್ಕೆ ಕಂಠದಾನ ಮಾಡಿದ್ದಾರೆ. ಮೇಘನಾರಾಜ್, ಪ್ರಥಮಾಪ್ರಸಾದ್, ಸಂಯುಕ್ತಾಹೊರನಾಡು ಮತ್ತು ನಕ್ಷತ್ರ ನಾಯಕಿಯರಾಗಿ ನಟಿಸಿದ್ದಾರೆ. ಎಸ್.ಪುರುಷೋತ್ತಮ್, ಜಾನಕಿರಾಮ್ ಮತ್ತು ಅರವಿಂದ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ವಾಹಿನಿ ಪತ್ರಕರ್ತ ರಜನಿಕಾಂತ್ ಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
3/03/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore