HOME
CINEMA NEWS
GALLERY
TV NEWS
REVIEWS
CONTACT US
ಹೊಡೆದಾಟಕ್ಕೆ ಮರಿ ಟೈಗರ್ ಸೂಪರ್
ಆತನಿಗೆ ದುಡ್ಡು ಮುಖ್ಯ. ಅದಕ್ಕೋಸ್ಕರ ಏನು ಬೇಕಾದರೂ ಮಾಡ ಬಲ್ಲ ತುಂಟ ಪೋರ. ಲಕ್ಷ ಕೊಟ್ಟರೆ ಮರ್ಡರ್, ಜಾಸ್ತಿ ನೀಡಿದರೆ ಮರ್ಡರ್ ಮಾಡುವವರನ್ನು ತದಕುತ್ತಾನೆ. ಇದು ‘ಮರಿ ಟೈಗರ್’ ಚಿತ್ರದ ಒಂದು ಏಳೆಯ ಕತೆ. ಹೆಸರೆ ಹೇಳುವಂತೆ ಪಕ್ಕಾ ಮಾಸ್ ಅಂಶಗಳನ್ನು ಇಟ್ಟುಕೊಂಡು ಕತೆಯನ್ನು ಬರೆದಿರುವುದು ಅಜಯ್‍ಕುಮಾರ್. ಸುಖದ ಜೀವನ ಹಿಂದೆ ಹೊರಟ ಹೆತ್ತವರಿಂದಲೇ ಅನಾಥನಾಗುತ್ತಾನೆ ನಾಯಕ. ಅದೇ ರೀತಿಯಲ್ಲಿ ಆಸ್ತಿ ಆಸೆಗಾಗಿ ತಂದೆಯಿಂದಲೇ ಮಲೆತಾಯಿ ಶ್ರೀಮಂತನಿಗೆ ಮಾರಾಟಗೊಂಡು ಬಲಿಗೆ ಸಿದ್ದವಾದವಳು ನಾಯಕಿ. ಇಬ್ಬರು ಸೇರಿಕೊಂಡರೆ ಮುಂದೇನು ಆಗುತ್ತದೆ ಎಂಬುದನ್ನು ಸಿನಿಮಾ ನೋಡಬೇಕು. ಹಣದ ಆಸೆಗಾಗಿ ಇವಳನ್ನು ಹುಡುಕುವ ಜನರು, ದುಡ್ಡ ಮುಖ್ಯವೆಂದು ತಿಳಿದಿದ್ದ ಆತ ಅಡ್ಡದಾರಿಗೆ ಹೋಗುತ್ತಾನೆ. ಮುಂದೆ ದುರುಳರು ಈಕೆ ಹಿಂದೆ ಬಿದ್ದಾಗ ಇದು ಮುಖ್ಯವಲ್ಲವೆಂದು ಅರಿವಾಗುತ್ತದೆ. ವಿರಾಮದವರೆಗೆ ಕತೆ ಮುಂದುವರೆಯದೆ ಬರೀ ಡೀಲು, ಹೊಡೆದಾಟ, ಲಾಂಗ್,ಟಪ್ಪಾಂಗುಚ್ಚು ಹಾಡು ಇವೆಲ್ಲವು ಮಾಸ್ ಪ್ರಿಯರಿಗೆ ತೆಗೆದಂತೆ ಭಾಸವಾಗುತ್ತದೆ. ನಂತರ ಒಂಚೂರು ಕತೆಯು ಬಿಚ್ಚಿಕೊಳ್ಳುತ್ತದೆ. ಅಲ್ಲಲ್ಲಿ ಸೀನಿಯರ್ ಪ್ರಭಾಕರ್ ಅವರ ದೃಶ್ಯಗಳು, ಸಾಹಸ ತೋರಿಸಲಾಗಿದೆ. ಇದರಿಂದ ಇಬ್ಬರು ನಾಯಕರುಗಳ ಹಾಡು, ಕುಣ ತವನ್ನು ಕಣ್ತುಂಬಿಕೊಳ್ಳಬಹುದು.

ವಿನೋಧ್‍ಪ್ರಭಾಕರ್ ಅಭಿಮಾನಿಗಳಿಗೆ ಬೇಸರ ತರಿಸದೆ ಜಬರ್‍ದಸ್ತ್ ಫೈಟ್ ಜೊತೆಗೆ ಸಂಭಾಷಣೆ ಹೇಳಿ, ದೇಹವನ್ನು ಪ್ರದರ್ಶಿಸಿರುವುದು ಕಂಡುಬರುತ್ತದೆ. ತನಗೆ ಸಿಕ್ಕ ಅವಕಾಶದಲ್ಲಿ ಎಲ್ಲವನ್ನು ತೋರಿಸಿರುವ ಅವರ ಪ್ರಯತ್ನಕ್ಕೆ ಫಲ ನೀಡಿದೆ ಅಂತ ಹೇಳಬಹುದು. ಅಸಹಾಯಕ ಹುಡುಗಿಯಾಗಿ ನಾಯಕಿ ತೇಜು ನಟನೆ ಸುಮಾರಾಗಿದೆ. ಒನ್ಸ್ ಮೋರ್ ಕೌರವ ನರೇಶ್‍ಗೌಡ ಪೋಲೀಸ್ ಆಫೀಸರ್ ಎಂಟ್ರಿಕೊಟ್ಟು ಮುಂದೆ ತಣ್ಣಗಾಗುತ್ತಾರೆ. ಪರಭಾಷೆಯ ಖಳನಟರಾಗಿರುವುದರಿಂದ ಒಂದೊಂದು ಸಲ ಬೇರೆ ಭಾಷೆಯ ಚಿತ್ರ ನೋಡುತ್ತಿರುವಂತೆ ಆಗುತ್ತದೆ. ರಾಕ್‍ರವಿ ಸಂಗೀತವು ನೆನಪಿನಲ್ಲಿ ಉಳಿಯುವುದಿಲ್ಲ. ಥ್ರಿಲ್ಲರ್‍ಮಂಜು, ಡಿಫರೆಂಟ್ ಡ್ಯಾನಿ ಸಾಹಸ ಚಿತ್ರಕ್ಕೆ ಬೆನ್ನಲುಬಾಗಿದೆ. ಜೈಆನಂದ್ ಕ್ಯಾಮಾರ ಕೆಲಸ ಕೆಲವು ಕಡೆ ಕೆಲಸ ಮಾಡಿದೆ. ಆಕ್ಷನ್ ಚಿತ್ರಗಳ ನಿರ್ದೇಶಕರೆಂದು ಖ್ಯಾತರಾಗಿರುವ ಪಿ.ಎನ್.ಸತ್ಯಾ ಅದನ್ನು ಮುಂದುವರೆಸಿರುವುದರಿಂದ ಇವರ ಬಗ್ಗೆ ಏನು ಹೇಳಲು ಆಗದು.
ನಿರ್ಮಾಪಕ: ರಮೇಶ್‍ಕಶ್ಯಪ್
-14/01/18

ಮರಿ ಟೈಗರ್ 12ರಿಂದ ಘರ್ಜಿಸಲಿದ್ದಾನೆ
ಟೈಗರ್ ಚಿತ್ರದಲ್ಲಿ ಟೈಗರ್‍ಪ್ರಭಾಕರ್ ನಟಿಸಿದ ಸಿನಿಮಾವು 80ರ ದಶಕದಲ್ಲಿ ಬಿಡುಗಡೆಗೊಂಡು ಹಣ ಮಾಡಿತ್ತು. ಈಗ ಪುತ್ರ ವಿನೋಧ್‍ಪ್ರಭಾಕರ್ ಕ್ರ್ಯಾಕ್ ಯಶಸ್ಸಿನ ನಂತರ ‘ಮರಿ ಟೈಗರ್’ದಲ್ಲಿ ವಿಭಿನ್ನ ಲುಕ್‍ನಲ್ಲಿ ಕಾಣ ಸಿಕೊಂಡಿದ್ದಾರೆ. ಚಿತ್ರದಲ್ಲಿ ಹಲವು ವಿಶೇಷತೆಗಳು ಕೊಡಿವೆ. ಆಕ್ಷನ್ ಚಿತ್ರಗಳ ಖ್ಯಾತಿಯ ಪಿ.ಎನ್.ಸತ್ಯಾ ನಿರ್ದೇಶನ, ನಂದ ಲವ್ಸ್ ನಂದಿತಾ ಹಿಟ್ ಸಿನಿಮಾ ನಿರ್ಮಾಣ ಮಾಡಿರುವ ರಮೇಶ್‍ಕಶ್ಯಪ್ ಹಣ ಹೂಡಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಹೈದರಾಬಾದ್ ಯುವಕ, ಮುಂಬೈ ಹುಡುಗಿ ಮದ್ಯೆ ಪ್ರೀತಿ ಬೆಸತು ಗಂಡು ಮಗು ಜನನವಾಗುತ್ತದೆ. ನಂತರ ಇಬ್ಬರಲ್ಲೂ ಸಂಬಂದ ಕಡಿದುಹೋಗಿ ಮಗುವನ್ನು ನಿಲ್ದಾಣದಲ್ಲಿ ಬಿಟ್ಟು ಹೋಗುತ್ತಾರೆ. ಮಗು ಬೆಳ:ದು ದೊಡ್ಡವನಾಗುತ್ತಾನೆ. ಮುಂದೆ ಹಲವು ಅನೂಹ್ಯ ತಿರುವುಗಳು ಬರಲಿದ್ದು ಅದನ್ನು ನಾಯಕ ಹೇಗೆ ಎದುರಿಸುತ್ತಾನೆ ಎಂಬುದು ಸಿನಿಮಾದ ತಿರುಳು. ಜೋಗಿ ಪ್ರೇಮ್ ಹಾಡಿರುವ ಒಂದು ಗೀತೆಯನ್ನು ರೈಲು ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ.

ಚಿಂಗಾರಿ ಮೂಲಕ ಪಾದಾರ್ಪಣೆ ಮಾಡಿ, ಮುಂಬೈದಲ್ಲಿ ನಾಯಕಿಯಾಗಿದ್ದ ತೇಜು ನಾಯಕನಿಗೆ ಜೋಡಿಯಾಗಿದ್ದಾರೆ. ಉಳಿದಂತೆ ಕೋಟೆಪ್ರಭಾಕರ್, ಶಂಖನಾದ ಅರವಿಂದ್, ಉದಯ ಟಿವಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ. ನಟಿ ನೀತು ಐಟಂ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ. ಬೆಂಗಳೂರು ಸುತ್ತಮುತ್ತ 80 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಆರು ಸಾಹಸ ದೃಶ್ಯಗಳಿಗೆ ಥ್ರಿಲ್ಲರ್‍ಮಂಜು ಮತ್ತು ಡಿಫರೆಂಟ್ ಡ್ಯಾನಿ ಕಾರ್ಯ ನಿರ್ವಹಿಸಿದ್ದಾರೆ. ಕತೆ ಅಜಯ್‍ಕುಮಾರ್, ಛಾಯಗ್ರಹಣ ಜೈಆನಂದ್, ಹಾಡುಗಳಿಗೆ ಮಲೇಶಿಯಾದ ರಾಕ್ ರವಿ ಸಂಗೀತ ಸಂಯೋಜನೆ ಇದೆ. ಸಿಂಹಾದ್ರಿ ಪ್ರೊಡಕ್ಷನ್ ಬ್ಯಾನರ್‍ನಡಿಯಲ್ಲಿ ಸಿದ್ದಗೊಂಡಿರುವ ಚಿತ್ರವು ಸುಮಾರು 200ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಕಾಣಲಿದೆ.
-6/01/18


`ಮರಿ ಟೈಗರ್’ ಟ್ರೇಲರ್ ಅಬ್ಬರ
ಸ್ಯಾಂಡಲ್‍ವುಡ್ ವರ್ಜಿನಲ್ ಟೈಗರ್ ವಿನೋದ್ ಪ್ರಭಾಕರ್ ನಟನೆಯ `ಮರಿ ಟೈಗರ್’ ಚಿತ್ರದ ಟ್ರೇಲರ್ ರಾಜಾಜಿನಗರದಲ್ಲಿರುವ ನಿರ್ಮಾಪಕ ರಮೇಶ್ ಕಶ್ಯಪ್ ಅವರ ನೂತನ ಕಚೇರಿಯಲ್ಲಿ ಇಂದು ಬಿಡುಗಡೆಯಾಯಿತು. ವಿನೋದ್ ಪ್ರಭಾಕರ್ ಯೂಟ್ಯೂಬ್‍ಗೆ ಅಪ್‍ಲೋಡ್ ಮಾಡುವುದರ ಮೂಲಕ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ರಮೇಶ್ ಕಶ್ಯಪ್ ಹಾಗೂ ಚಿತ್ರಕ್ಕೆ ಕಥೆ ಬರೆದಿರುವ ಅಜಯ್ ಕುಮಾರ್ ಅವರು ಉಪಸ್ಥಿತರಿದ್ದರು.
`ಮರಿ ಟೈಗರ್’ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಲಿದ್ದು, ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

`ನಂದ ಲವ್ಸ್ ನಂದಿತಾ', `ಭಾಗ್ಯದ ಬಳೆಗಾರ' ಚಿತ್ರಗಳ ನಿರ್ಮಾಪಕ ರಮೇಶ್ ಕಷ್ಯಪ್ ಸಿಂಹಾದ್ರಿ ಪೆÇ್ರಡಕ್ಷನ್ಸ್ ಮೂಲಕ ನಿರ್ಮಿಸಿರುವ ಈ ಚಿತ್ರವನ್ನು ಪಿ.ಎನ್ ಸತ್ಯ ನಿರ್ದೇಶಿಸಿದ್ದಾರೆ.

ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ `ಚಿಂಗಾರಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಎರಡನೇ ನಾಯಕಿಯಾಗಿದ್ದ ತೇಜು ಅಭಿನಯಿಸಿದ್ದಾರೆ. ಅಜಯ್ ಕುಮಾರ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಮಲೇಷಿಯಾದ ರಾಕ್ ರವಿ ಸಂಗೀತ ನಿರ್ದೇಶನ, ಜೈ ಆನಂದ್ ಛಾಯಾಗ್ರಹಣ ಹಾಗೂ ಕೆ.ಎಂಪ್ರಕಾಶ್ ಸಂಕಲನವಿದೆ.
-8/10/17
ಗವಿಪುರಂನಲ್ಲಿ `ಮರಿಟೈಗರ್' ಸಾಹಸ
ನಾಯಕ -ನಾಯಕಿ ರಾತ್ರಿ ವೇಳೆ ಸಿನಿಮಾ ಮುಗಿಸಿಕೊಂಡು ಹಿಂತಿರುಗುತ್ತಿರುತ್ತಾರೆ. ಅವರನ್ನು ಖಳನಾಯಕನ ಪಡೆ ಹಿಂಬಾಲಿಸುಸುತ್ತದೆ. ಈ ಸಮಯದಲ್ಲಿ ನಾಯಕ ಹಾಗೂ ಖಳನಾಯಕನ ನಡುವೆ ಮಾರಾಮಾರಿ ನಡೆಯುತ್ತದೆ. ಈ ಸನ್ನಿವೇಶವನ್ನು ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್‌ಕಶ್ಯಪ್ ನಿರ್ಮಿಸುತ್ತಿರುವ `ಮರಿಟೈಗರ್' ಚಿತ್ರಕ್ಕಾಗಿ ನಿರ್ದೇಶಕ ಪಿ.ಎನ್.ಸತ್ಯ ಗವಿಪುರಂನಲ್ಲಿ ಚಿತ್ರಿಸಿಕೊಂಡರು. ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ ಈ ಸನ್ನಿವೇಶದಲ್ಲಿ ವಿನೋದ್ ಪ್ರಭಾಕರ್, ತೇಜು, ಭರತ್ ಹಾಗೂ ಸಾಹಸ ಕಲಾವಿದರು ಭಾಗವಹಿಸಿದ್ದರು.

ವಿನೋದ್‌ಪ್ರಭಾಕರ್ ನಾಯಕರಾಗಿರುವ ಈ ಚಿತ್ರದ ನಾಯಕಿ ತೇಜು. ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ಭರತ್, ಮನೋಜ್‌ಸಿಂಗ್, ಶಂಖನಾದ ಅರವಿಂದ್, ನಾಗರಾಜು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.

ಚಿತ್ರಕ್ಕೆ ಅಜಯಕುಮಾರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ರಾಕ್‌ರವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜೈಆನಂದ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಈಶ್ವರಿಕುಮಾರ್ ಕಲಾನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ನಾಗೇಂದ್ರಪ್ರಸಾದ್, ಕವಿರಾಜ್, ಕಮಲಸಾರಥಿ ತಂಗಾಳಿ ನಾಗರಾಜ್, ರಚಿಸಿದ್ದಾರೆ. ಕಮಲಸಾರಥಿ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ.
-3/10/12

PREM SINGS FOR ‘MARI TIGER
T
he director of high prominence and actor too from ‘Preethi Eke Bhumi Melide’ Prem and mother sentiment dates back to the ‘Jogi’ time – remember the bangles and the song Beduvenu Varavanna Kode Thaaye Janmavanu…was richly popular as haunting tune when ‘Jogi’ released in 2004.

For the ‘Mari Tiger’ director cum actor Prem rendered his voice for Yaava Kaviya Thande Thaayiya Devendu Karedubittano, baligella Belaku needuva Soorya Chandr endu bittaru….penned by Kamalasarathi

At the Rajesh Ramanath Sthai studio director of ‘Mari Tiger’ PN Sathya, actor Vinod Prabhakar, story writer Ajay Kumar, producer Ramesh Kashyap and cameraman Jai Anand received popular director Prem and took him to the studio room.

‘Mari Tiger’ stars Vinod Prabhakar and Tejaswini in the lead roles. Ramesh Kashyap is the producer of this film.

-17/09/12

MARI TIGER’- TIGER BARLILLA FOR SIMHADRI PRODUCTION
T
he ‘Mari Tiger’ did not turn up before the media. He (Tiger Prabhakar son – Vinod Prabhakar) is the hero of the film but did not have the courtesy to be at the media briefing at Doddaganapathi Temple on Independence Day.

‘Mari Tiger’ is the comeback for Simhadriya Productions Ashok Kashyap after ‘Bhagyada Balegara’ three years ago. Known for soft films story writer Ajay Kumar has written the story and screenplay. PN Sathya is only director of the film six songs and six action scenes are part of this film. After three years gap Ajay Kumar is back to his work. There will be definitely inspiration from Tiger Prabhakar for the protagonist in the film.

30 percent of the shooting will be held at Railway station surrounding. This portion will be shot in Mysore where the backdrop feel is a slum. This is what required for the film.

Like for ‘Agraja’ for ‘Mari Tiger’ also a non Kannadiga is the music director. He is Rock Ravi from Malaysia. Kamalasarathi is the dialogue writer of the film.
According to PN Sathya when he took up ‘Majestic’ Darshan father was very big villain and today he is taking up a film for big villain Tiger Prabhakar son.

Ramesh Kashyap wanted to get PN Sathya as director from the days of Majestic and Daasa. It is happening now in ‘Mari Tiger’.

Theju noticed for her performance in ‘Chingari’ is heroine. She plays a homely girl. Not only songs but acting there is scope she says.
Jai Anand is the cameraman shooting in 535 camera.
-15/08/12

 
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore