HOME
CINEMA NEWS
GALLERY
TV NEWS
REVIEWS
CONTACT US

ಸಾಮಾಜಿಕ ಕಳಕಳಿಯ ಮಾರ್ಚ್ 22 ವಿಮರ್ಶೆ
ಚಿತ್ರ: ಮಾರ್ಚ್ 22
ನಿರ್ದೇಶನ: ಕೋಡ್ಲು ರಾಮಕೃಷ್ಣ
ತಾರಾಗಣ: ಅನಂತ್ ನಾಗ್,ಗೀತಾ,ಜೈ ಜಗದೀಶ್,ಶರತ್ ಲೋಹಿತಾಶ್ವ, ಆರ್ಯವರ್ಧನ್, ಕಿರಣ್ ರಾಜ್,ಮೇಘಶ್ರೀ,ದೀಪ್ತಿ ಶೆಟ್ಟಿ, ವಿನಯಾ ಪ್ರಸಾದ್,ರವಿಕಾಳೆ ಮತ್ತಿತರರು
ದೇವರು,ಧರ್ಮ,ಜಾತಿ, ಮತಕ್ಕಿಂತ ಮಾನವೀಯತೆ ಮುಖ್ಯ ಎನ್ನುವ‌ ಸಾಮಾಜಿಕ ಕಳಕಳಿ ಮತ್ತು ಸಂದೇಶ ಸಾರಿವ ಚಿತ್ರ "ಮಾರ್ಚ್ 22."

ಹಿಂದೂ,ಮುಸ್ಲಿಂ ಸೂಕ್ಷ್ಮ ‌ವಿಷಯವನ್ನು‌ ಮುಂದಿಟ್ಟುಕೊಂಡು ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ,ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದಾರೆ .ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ರಾಮದುರ್ಗ ಹಿಂದೂ,ಮುಸ್ಮಿಂ ಸಮುದಾಯ ಕೂಡಿ ಬಾಳುತ್ತಿರುವ ಊರು. ಇಲ್ಲಿ ಹಿಂದು,ಮುಸ್ಲಿಂ ಹುಡುಗ ಹುಡುಗಿಯರು ಪರಸ್ಪರ ಕೊಟ್ಟು ತೆಗೆದುಕೊಂಡು ಸಂಬಂಧ‌ ಬೆಳೆಸುವ ಸಮನ್ವಯತೆ ಬೀಡು. ಇಲ್ಲಿ ಯಾವುದೇ ಲವ್ ಜಿಹಾದ್ ಗೆ ಅವಕಾಶವಿಲ್ಲ.‌ ಎಲ್ಲರೂ ಒಟ್ಟಾಗಿ ಬಾಳುವ ಮೂಲಕ‌ ಇತರರಿಗೆ ಮಾದರಿಯಾದವರು.

ಇಂತಹ ಊರಿನಲ್ಲಿ‌ ಆಯ್ಕೆಯಾದ ಶಾಸಕ ಬರಿ ರಾಜಕಾರಣದ ‌ಲೆಕ್ಕಚಾರ. ಅದೇ ಊರಿನ‌ ಸಲ್ಮಾನ್ ( ಆರ್ಯವರ್ಧನ್) ರಾಹುಲ್ ಕಿರಣ್ ರಾಜ್ ಸ್ನೇಹಿತರು. ಊರ ಜನರಿಗೆ ನೀರು ಒದಗಿಸಲು ಪಣತೊಡುತ್ತಾರೆ. ಸಲ್ಮಾನ್ ಶಾಸಕನಾಗಿ ಆಯ್ಕೆಯೂ ಆಗುತ್ತಾನೆ. ಈ ವೇಳೆ ಭೂ ವಿಜ್ಞಾನಿ ಡಾ.ರಘುನಂದನ್ ( ಅನಂತ್ ನಾಗ್) ಕರೆ ತಂದು ಜಲಮೂಲ ‌ಪತ್ತೆ ಹಚ್ಚುತ್ತಾರೆ. ನೀರಿನ‌ ಮೂಲ ಮಸೀದಿ ಕೆಳಗೆ ಪತ್ತೆಯಾದಾಗ‌ ಮಸೀದಿ ಕೆಡವಲು ಮುಸ್ಲಿಂ ಮಂದಿ ನಿರಾಕರಿಸುತ್ತಾರೆ.‌ಮೊದಲೇ‌ ನೀರಿಲ್ಲದೆ ಕಂಗಾಲಾಗಿ ಹೋಗಿದ್ದ ಮಂದಿ ಗೆ ತಹದೊಂದು‌ ‌‌ನಿರ್ದಾರ ಬೇಸರ ತರಿಸುತ್ತದೆ. ಅನೋನ್ಯವಾಗಿದ್ದ ಹಿಂದೂ ‌ಮುಸ್ಲಿಂ ಸಮುದಾಯದ ನಡುವೆ ಬೆಂಕಿ ಹತ್ತಿಕೊಳ್ಳುತ್ತದೆ.ಇಂತಹ ಸಮಯದಲ್ಲಿ ಸಲ್ಮಾನ್ ,ರಾಹುಲ್ ಯಾವ‌ ನಿರ್ದಾರ‌ ಕೈಗೊಳ್ಳುತ್ತಾರೆ ಮುಂದೆ ಏನಾಗುತ್ತದೆ ಎನ್ನುವುದು ಚಿತ್ರದ‌ ತಿರುಳು.

ಹಿರಿಯ ಕಲಾವಿದರಾದ ಜೈಗದೀಶ್,ವಿನಯ ಪ್ರಸಾದ್,ಶರತ್ ಲೋಹಿತಾಶ್ವ,ಆಶಿಶ್ ವಿದ್ಯಾರ್ಥಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಯುವ ನಟರಾದ ಆರ್ಯವರ್ಧನ್, ಕಿರಣ್ ರಾಜ್,ನಟಿಯರಾದ ದೀಪ್ತಿ ಶೆಟ್ಟಿ,ಮೇಘ ಶ್ರೀ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ

ಮಣಿಕಾಂತ್ ಕದ್ರಿ ಸಂಗೀತದಲ್ಲಿ ಹಾಡುಗಳು ಹಿಂಪಾಗಿ ಮೂಡಿ ಬಂದಿವೆ
-Cine Circle News
-25/08/17ಈ ವಾರ ತೆರೆಗೆ `ಮಾರ್ಚ್ 22'
ಂಅಒಇ ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಹರೀಶ್ ಶೇರಿಗಾರ್ ಹಾಗೂ ಶರ್ಮಿಳಾ ಶೇರಿಗಾರ್ ಅವರು ನಿರ್ಮಿಸಿರುವ `ಮಾರ್ಚ್ 22` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಕೋಡ್ಲು ರಾಮಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮೋಹನ್ ಅವರ ಛಾಯಾಗ್ರಹಣವಿದೆ. ರವಿಶೇಖರ್ ಹಾಗೂ ಮಣ ಕಾಂತ್ ಕದ್ರಿ ಸಂಗೀತ ನಿರ್ದೇಶನ, ಬಸವರಾಜ್ ಅರಸ್ ಸಂಕಲನ, ಥ್ರಿಲ್ಲರ್ ಮಂಜು, ಕುಂಗ್¥sóÀÇ ಚಂದ್ರು ಸಾಹಸ ನಿರ್ದೇಶನ, ಮದನ್ - ಹರಿಣ ನೃತ್ಯ ನಿರ್ದೇಶನ ಹಾಗೂ ವಸಂತರಾವ್ ಕುಲಕಣ ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅನಂತ್‍ನಾಗ್, ಆಶೀಶ್ ವಿದ್ಯಾರ್ಥಿ, ಶರತ್ ಲೋಹಿತಾಶ್ವ, ರವಿ ಕಾಳೆ, ಜೈಜಗದೀಶ್, ಆರ್ಯವರ್ಧನ್ , ಕಿರಣ್ ರಾಜ್, ಗೀತಾ, ವಿನಯ ಪ್ರಸಾದ್, ಪದ್ಮಜ ರಾವ್, ಮೇಘಾ ಶ್ರೀ, ದೀಪ್ತಿ ಶೆಟ್ಟಿ, ಸಾಧು ಕೋಕಿಲಾ, ರವೀಂದ್ರನಾಥ್, ರಮೇಶ್ ಭಟ್, ಶ್ರೀನಿವಾಸ ಮೂರ್ತಿ ಮುಂತಾದವರಿದ್ದಾರೆ. ಖ್ಯಾತ ಉದ್ಯಮಿ, ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ ಪ್ರಪ್ರಥಮವಾಗಿ ಈ ಸಿನೆಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಿ.ಎ.ಮಧು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
-Cine Circle News
-22/08/17

ಗಣೇಶನ ಹಬ್ಬಕ್ಕೆ ಮಾರ್ಚ್ 22
‘ಮಾರ್ಚ್ 22’ ವಿಶ್ವ ಜಲದಿನವನ್ನು ಆಚರಿಸಿಕೊಳ್ಳುತ್ತಾರೆ. ಇದರ ಹೆಸರಿನಲ್ಲಿ ಚಿತ್ರವೊಂದು ಬರುತ್ತಿರುವುದು ತಿಳಿದಿರುವ ವಿಷಯವಾಗಿದೆ. ಇದರನ್ವಯ ಕೊನೆ ಬಾರಿ ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಸರದಿಯಂತೆ ಮೊದಲು ಮಾತನಾಡಿದ ಅನಂತ್‍ನಾಗ್ ನಿರ್ದೇಶಕರೊಂದಿಗೆ 30 ವರ್ಷದ ಗೆಳತನದಲ್ಲಿ 5 ಸಿನಿಮಾಗಳಲ್ಲಿ ನಟಿಸಿದ್ದೇನೆ. ಮೂರು ವರ್ಷಗಳ ಕೆಳಗೆ ಕತೆಯನ್ನು ಹೇಳಿದ್ದರು. ಒಳ್ಳೆ ನಿರ್ಮಾಪಕರು ಸಿಗುವವರೆಗೂ ಶುರುಮಾಡಬೇಡಿ ಎಂದು ಹೇಳಿದ್ದೆ. ಭೂ ವಿಜ್ಘಾನಿ ಪಾತ್ರದಲ್ಲಿ ಕಾಣ ಸಿಕೊಂಡಿದ್ದು, ನೀರು ಸಿಗುವ ಜಾಗವನ್ನು ಹುಡುಕಿದ ಮೇಲೆ ಏನಾಗುತ್ತದೆ ಎಂಬುದು ಕಥಾವಸ್ತು ಎಂದು ಹೇಳಿದರು. ಜಗತ್ತು ಹುಟ್ಟಿದಾಗ. ಅದು ಕೊನೆಯಾಗುವಾಗ ನೋಡಲೇ ಬೇಕಾದ ಸಿನಿಮಾ. ನೀರು ಇಲ್ಲವೆಂದರೆ ಜನವಸತಿ, ಜೀವಜಲ ಇರೋಲ್ಲ. ಅದು ನಿರ್ಗುಣ, ನಿರಾಕಾರ, ನಿರ್ಭಾವ ಅಂತ ಬಣ್ಣನೆ ಮಾಡಿದ್ದು ಮುಸ್ಲಿಂ ಹೆಂಗಸಾಗಿ ನಟಿಸಿರುವ ವಿನಯಪ್ರಕಾಶ್. ಪ್ರತಿ ಪಾತ್ರವು ಮುಖ್ಯವಾಗಿದೆ. ಬದುಕು ಮುಖ್ಯ. ಜಾತಿ ಭೇದ ಬೇಡ ಹಾಗೆಯೇ ಜಲ ಮನುಷ್ಯನಿಗೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಸುಂದರವಾಗಿ ತೋರಿಸಿದ್ದಾರೆ ಎಂದು ಹೇಳಿದರು ಜೈಜಗದೀಶ್. ಪ್ರತಿಷ್ಟೆಗಾಗಿ ಅವಶ್ಯಕವಾದುದನ್ನು ಬಿಟ್ಟು ಅನಾವಶ್ಯಕ್ಕೆ ಒಡಾಡ್ತಾ ಇರುವ ರಾಜಕೀಯವ್ಯಕ್ತಿಯಾಗಿ ಅಭಿನಯಿಸಿರುವುದು ಶರತ್‍ಲೋಹಿತಾಶ್ವ. ಅಡುಗೆ ಮಾಡಿದ್ದೇವೆ. ಅದನ್ನು ಸರಿಯಾಗಿ ಬಡಿಸುವ ಜವಬ್ದಾರಿ ಇರುವುದು ಮಾದ್ಯಮಗಳಿಂದ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು ಪದ್ಮಜರಾವ್.

ಇಲ್ಲಿಯವರೆಗಿನ 26 ಸಿನಿಮಾಗಳಲ್ಲಿ ಇದು ವಿಶೇಷವಾಗಿದೆ. ನಿರ್ಮಾಪಕರು ಎಲ್ಲದರಲ್ಲೂ ಕೊರತೆ ಮಾಡಿಲ್ಲ. ಪ್ರೇಕ್ಷಕರಿಗೆ ಚಿತ್ರವು ಕೆಲವು ದಿನ ಕಾಡುತ್ತೆ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತೆ ಎನ್ನುವ ನಂಬಿಕೆ ಇದೆ. ಪ್ರೀತಿ, ಭಾವೈಕ್ಯತೆ, ಭಾವುಕತೆ ಹಾಗೂ ಬದುಕು ಎಷ್ಟು ಮುಖ್ಯ ಎಂಬುದನ್ನು ತೋರಿಸಲಾಗಿದೆ. 80ರ ದಶಕದಲ್ಲಿ ನಡೆದಂತೆ ಇರುವ ಕಾರಣ ಆ ಕಾಲದ ವೇಷಭೂಷಣಗಳನ್ನು ಸಿದ್ದಪಡಿಸಿ ಚಿತ್ರೀಕರಿಸಲಾಗಿಗೆ. ಮಸೀದಿಯಲ್ಲಿ ಸರೆಹಿಡಿಯಲು ಕಷ್ಟವಾಗಿದ್ದರಿಂದ ಸೆಟ್ ಹಾಕಲಾಗಿತ್ತು. ಇದೇ ಚಿತ್ರ ಮಾಡುವುದಾಗಿ ಹಲವರು ಮುಂಗಡ ನೀಡಿ ಹಿಂದೆ ಸರಿದಿದ್ದಾರೆ. ಇದರ ಹಣವೆ 13 ಲಕ್ಷ ಇದೆ. ನನ್ನ ಕನಸಿಗೆ ಜನ್ಮ ನೀಡಿದವರು ನಿರ್ಮಾಪಕರು ಎಂದು ಅವರಿಗೆ ಧನ್ಯವಾದ ಅರ್ಪಿಸಿದರು ನಿರ್ದೇಶಕ ಕೂಡ್ಲುರಾಮಕೃಷ್ಣ. ಬದುಕಿನ ದಾರಿಯನ್ನು ನೆನಪುಮಾಡಿಕೊಂಡ ಹರೀಶ್‍ಶೇರಿಗಾರ್ ಅಮ್ಮನಿಗೆ ಅನಂತ್‍ನಾಗ್ ಕಂಡರೆ ಇಷ್ಟ. ಇಂದು ಅವರ ಅಭಿನಯದ ಸಿನಿಮಾವನ್ನು ನಿರ್ಮಾಣ ಮಾಡಿರುವುದು ನನ್ನ ಸುಕೃತ ಅನ್ನಬಹುದು. 8 ತಿಂಗಳಲ್ಲಿ ಅಂದುಕೊಂಡಂತೆ ಮುಗಿಸಲಾಗಿದೆ. ಒಟ್ಟಾರೆ 6.5 ಕೋಟಿ ಖರ್ಚಾಗಿದೆ. ಮುಂದೆ ಅಮೇರಿಕಾ, ಗಲ್ಫ್, ಯುರೋಪ್, ಸ್ವಿಟ್ಜರ್‍ಲ್ಯಾಂಡ್ ಕಡೆಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳು ನಡೆಯುತ್ತಿವೆ ಅಂತ ಖುಷಿ ಹಂಚಿಕೊಂಡರು. ಹೊಸ ಯುವ ಕಲಾವಿದರಾದ ಕಿರಣ್‍ರಾಜ್, ಮೇಘಶ್ರೀ, ದೀಪ್ತಿಶೆಟ್ಟಿ, ಆರ್ಯವರ್ಧನ್, ಸಂಗೀತ ನಿರ್ದೇಶಕರುಗಳಾದ ಮಣ ಕಾಂತ್‍ಕದ್ರಿ,-ರವಿಶೇಖರ್‍ರಾಜಮಗ, ಸಂಕಲನಕಾರ ಬಸವರಾಜಅರಸು ಉಪಸ್ತಿತರಿದ್ದು ಚುಟುಕು ಮಾತುಗಳನ್ನು ಆಡಿದರು.
-Cine Circle News
-18/08/17


ಮಂಗಳೂರಿನಲ್ಲಿ ಮಾರ್ಚ್-22 ಆಡಿಯೋ ಬಿಡುಗಡೆ
ನೀರಲ್ಲಿಯೂ ಜಾತಿ ಧರ್ಮ ನೋಡುವವರೂ ಇರಬಹುದು. ಆದರೆ ನೀರಿಗೆ ಅಂಥಾದ್ಯಾವ ಕಟ್ಟು ಪಾಡುಗಳೂ ಇಲ್ಲ. ಅದು ಇಡೀ ಜೀವ ಸಂಕುಲದ ಜೀವಧಾತು. ಅದು ಜಾತಿ, ಧರ್ಮ, ಪಂಥಗಳನ್ನು ಮೀರಿದ್ದು. ಇಂಥಾದ್ದೇ ಜೀವಪರ ಆಶಯವುಳ್ಳ ಕಥೆ ಹೊಂದಿರುವ ಈ ಚಿತ್ರಕ್ಕೆ ಈ ಹೆಸರಲ್ಲದೇ ಬೇರ್ಯಾವುದೂ ಸರಿ ಹೊಂದಲಿಕ್ಕಿಲ್ಲ.. ಅದು `ಮಾರ್ಚ್ 22'. ಇದೊಂದೇ ಅಲ್ಲದೇ ನೀರಿನ ಸದ್ಬಳಕೆಯ ಬಗೆಗೆ ಅರಿವು ಮೂಡಿಸುವಂಥಾ ವಿಚಾರವೂ ಈ ಕಥೆಯಲ್ಲಿ ಅಡಕವಾಗಿದೆಯಂತೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ಈ ಚಿತ್ರ ಸಂಪೂರ್ಣಗೊಂಡಿದ್ದು, ಇತ್ತೀಚೆಗೆ ಮಂಗಳೂರಿನಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆ ಕೂಡಾ ನೆರವೇರಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಈ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ನಟ ಅನಂತ್ ನಾಗ್ ಧ್ವನಿಸುರುಳಿಯನ್ನು ಲೋಕಾರ್ಪಣೆ ಮಾಡಿದರು. ಕರ್ನಾಟಕ ಚಲನಚಿತ್ರ ವಾಣ ಜ್ಯಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಟ್ರೇಲರ್ ರಿಲೀಸ್ ಮಾಡಿದರು ಇನ್ನು ಭೀಮೇಶ್ವರ ಜೋಷಿ, ಹರಿಕೃಷ್ಣ ಪುನರೂರು ಮುಂತಾದ ಅನೇಕ ಗಣ್ಯರ ಸಮ್ಮುಖದಲ್ಲಿ ಆಡಿಯೋ ಅನಾವರಣಗೊಂಡಿತು.

ಈ ಚಿತ್ರಕ್ಕೆ ಆರ್ಯವರ್ಧನ, ಕಿರಣ್ ರಾವ್, ಮೇಘಶ್ರೀ, ದೀಪಾ ಶೆಟ್ಟಿ, ಶರತ್ ಲೋಹಿತಾಶ್ವ, ರವಿಶಂಕರ್, ರವಿಕಾಳೆ, ಜೈಜಗದೀಶ್, ವಿನಯಾ ಪ್ರಸಾದ್, ಪದ್ಮಜಾ ರಾವ್, ಪವಿತ್ರ ಲೋಕೇಶ್ ಮುಂತಾದವರ ತಾರಾಗಣವಿದೆ. `ಮಾರ್ಚ್ 22' ಚಿತ್ರ ಚಿತ್ರೀಕರಣ ಪೂರೈಸಿ ಡಬ್ಬಿಂಗ್ ಕಾರ್ಯ ಕೂಡಾ ಸಂಪೂರ್ಣಗೊಂಡಿದೆ. ಇನ್ನು ಬಿಡುಗಡೆಯ ಹಂತದಲ್ಲಿರುವಾಗಲೇ ಹಿಂದಿ ಸೇರಿದಂತೆ ಪರಭಾಷೆಗಳಿಂದ ಡಬ್ಬಿಂಗ್ ಹಕ್ಕು ಪಡೆಯಲು ಅನೇಕರು ಮುಂದೆ ಬಂದಿದ್ದಾರೆ.

ಇನ್ನುಳಿದಂತೆ ರವಿಶೇಖರ್ ಸಂಗೀತ, ಸುಭಾಶ್ ಕಡಕೋಳ ಕಲೆ, ಕೆ ಜಗದೀಶ ರೆಡ್ಡಿ ಸಹಕಾರ ನಿರ್ದೇಶನ, ಬಿ.ಎ ಮಧು ಸಂಭಾಷಣೆ, ಕರ್ವಾ ಖ್ಯಾತಿಯ ಮೋಹನ್ ಅವರ ಛಾಯಾಗ್ರಹಣ, ಬಸವರಾಜ ಅರಸ್ ಸಂಕಲನವಿರುವ ಈ ಚಿತ್ರಕ್ಕೆ ಹರೀಶ್ ಶೇರೆಗಾರ್, ನರೇಂದ್ರ ಹಾಗೂ ರಾಜಶೇಖರ್ ನಿರ್ಮಾಪಕರಾಗಿದ್ದಾರೆ. ಸರವಣ ಮತ್ತು ನಾಗರಾಜ ಹಾಸನ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
-Cine Circle News
-1/08/17

MARCH 22’ COMPLETE
K
annada film ‘March 22’, directed by Kodlu Ramakrishna has completed its shoot and is in its post-production stage. The film is produced by Harish Sheriger and it stars Anant Nag, Geetha, Ramesh Bhat, Ashish Vidyarthi, Ravi Kale, Vinaya Prasad, Sharath Lohitaswa and Padmaja Rao among others.

Director Kodlu Ramakrishna told reporters that March 22 is his 26th film and that he has introduced four newcomers – Arya Vardhan, Kiran Raj, Meghashri and Deepti Shetty in the film. He said B R Shetty, one of Dubai’s richest industrialists is appearing in a song of the movie. Kodlu said as was announced earlier Lakshmi was supposed to do a major role in the film but due to the actress daughter’s examination she couldn’t take up the role. He said Geetha has stepped in and done the role.

Producer Sheriger said B R Shetty had agreed to appear in the song on request despite being busy as an industrialist. He said Shetty was a music lover and he liked the story. The producer said the director was looking for a producer and he agreed to produce it after listening to the story. He said people at home are watchful about caste and creed but people become one when they come out of their homes. He said if this movie succeeds he plans to do one film a year.

Ramesh Bhat said this film is meant to create social awareness and that he plays the head of a religious institution in his 500th film. Sharath Lohitaswa said he plays a politician. Padmaja Rao said director and producer had so much to talk about that they could have held separate press meets to convey all that they could do. She said producer is a godly person and had so many good things to talk about.

Arya Vardhan said acting in the movie was like to going to school. He said he had now written the exams and is waiting for its result.

B R Shetty said he had taken a loan for his sister’s marriage and to repay it he took up a job in Dubai. He said he had made a lot of money and that his business spreads over 32 countries. But, he said he had to make himself free to make an appearance for a five-minute song. He said the atmosphere and infrastructure in Kanteerava Studio was bad and that he was willing to open a studio if he was provided space. He said he had opened a hospital in Udupi in memory of his father.

Vijayalakshmi Singh came to wish the team good luck.
-8/04/17
KODLU BRINGS ANANT NAG, LAKSHMI TOGETHER FOR ‘MARCH 22’ AFTER 15 YRS
D
irector Kodlu Ramakrishna has brought back romantic hit pair of the late 1970s and the 1980s Anant Nag and Lakshmi together for 'March 22', a period film which has completed the first schedule of shoot in Bailahongala. Anant Nag and Lakshmi had last acted together in Putra Vatsalya about 15 years ago which did not see a release. Their last release was Amma which was directed by D Rajendra Babu.

The Kannada film March 22 is being produced by Harish Sheregar and his wife Sharmila. Manikanth Kadri and Ravishekar are scoring the music. Mohan is the cameraman. Madan and Harini are the choreographers.  

Director Kodlu Ramakrishna told reporters on Sunday evening that the film’s subject was scripted about 15 years ago and has been at the back of his mind. He said he had given up on the subject and his dream to make this subject into a film as producers were not happy with the casting or with something else or the other.

He said he waited for 15 years to cast Anant Nag for a movie that he is directing as he didn’t find suitable for the actor all this while. He said when he met Anant Nag for this movie it was suggested to Anant Nag that Lakshmi was to be cast opposite the actor to which Anant agreed without any hesitation.

Kodlu said life is more important than religion or caste. He said March 22 is a water related story without giving solutions. He said the film underscores the importance of water.

Kodlu Ramakrishna said Udbhava had given him recognition as a director while expressing confidence thatMarch 22 as a subject is challenging and will mark his return as a good director. He said 25 days of shoot had been completed and the next schedule will begin in January.

Anant Nag said March 22 will be a topical film with climate change and deforestation becoming hot topics of discussion. He said March 22 is international water day and in recent times water has become a scarce commodity. He said in the future wars and battles may be fought over water. The problem arises when there is scarcity of water and how it can be shared during such circumstances. He urged Kodlu to justify the title given to the film in its depiction. He said he plays a special role in the film.

Dubai-based industrialist Harish Sheregar who is producing the film said he has been in business in Dubai for the last 18 years but his love for Kannada has only risen. He said he is lucky to be producing an Anant Nag’s film of whom he has been a fan. He said he used to sing songs from Anant Nag’s movies and had seen all of the actor’s movies. He also said by producing the film he is serving the Kannada cause.

Meghashri said she plays Amrutha, a north Karnataka girl in the movie that deals with various aspects of water. She said she is mouthing her lines in north Karnataka dialect for the first time with the help of the director. She said she was lucky to be acting with Anant Nag and said she was not even born when the actor had started acting.

Aryavardhan said he is acting in his second film. He said it was priceless to work with senior actors.

Manikanth Kadri said he is scoring the background score and tuning three of the songs in the movie. He said the film’s subject is challenging for him as well that would require some effort from him. Ravishekar said he is composing music for three songs and expressed confidence that people could expect good music in the movie.    

Cameraman Mohan said the film dates back to about 30 years ago which required a lot of pre-production work. The film also stars Kiran Raj, Sharath Lohitaswa, Vinaya Prasad, Deepti Shetty, Ashish Vidyarthi, Jaijagadish, Padmaja Rao, Shantha Acharya, Dubai Suvarna, Prashobitha and Sadhu Kokila among others. B A Madhu has written the dialogues.

Vinaya Prasad who compered the press meet said the film has an interesting premise and did not reveal anything more.
-19/12/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore