HOME
CINEMA NEWS
GALLERY
TV NEWS
REVIEWS
CONTACT US
ಉಳಿದ ಪ್ರಶ್ನಗಳಿಗೆ ಮಂತ್ರಂ-2 ಉತ್ತರ
ಕಳೆದವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಮಂತ್ರಂ’ ಹಾರರ್ ಸಿನಿಮಾದ ಕ್ಲೈಮಾಕ್ಸ್ ಪ್ರೇಕ್ಷಕನಿಗೆ ದ್ವಂದ್ವ ರೀತಿಯಲ್ಲಿ ಕಂಡುಬಂದಿತ್ತು. ಉಳಿದು ಹೋದ ಪ್ರಶ್ನೆಗಳು ಹಾಗಯೇ ಉಳಿದುಕೊಂಡಿತ್ತು. ಇದಕ್ಕೆಲ್ಲಾ ಉತ್ತರ ಹೇಳುವ ಕೆಲಸವನ್ನು ‘ಮಂತ್ರಂ-2’ದಲ್ಲಿ ತೋರಿಸಲಿದ್ದಾರೆ. ಮೊದಲ ಭಾಗದಲ್ಲಿ ಆತ್ಮಕ್ಕೆ ನ್ಯಾಯ ಸಿಕ್ಕಿಲ್ಲ. ವ್ಯವಸ್ಥೆ ಸರಿಯಿಲ್ಲವೆಂದು ಹೇಳಲಾಗಿತ್ತು. ಎರಡನೆ ಭಾಗದಲ್ಲಿ ಹಾರರ್, ಥ್ರಿಲ್ಲರ್ ಮಾದರಿಯಲ್ಲಿ ಇರದೆ ಇವೆಲ್ಲದಕ್ಕೂ ಪರಿಹಾರವನ್ನು ಹೇಳಲಿದ್ದಾರೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡ ತಂದೆ ಏನು ಮಾಡುತ್ತಾನೆ. ನ್ಯಾಯಕ್ಕಾಗಿ ಎಲ್ಲಗೆ ಹೋಗುತ್ತಾನೆ. ಸಮಾಜದಲ್ಲಿ ನಡೆಯುತ್ತಿರುವ ಕೆಟ್ಟ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಚಿತ್ರ ಮೂಡಿಬರಲಿದೆಯಂತೆ. ನಾಯಕನಾಗಿ ನಟಿಸಿರುವ ಶಮಂತ್‍ಶೆಟ್ಟಿ ಎರಡನೆಯದರಲ್ಲಿ ದೆವ್ವ ರೂಪದಲ್ಲಿ ಕಾಣ ಸದೆ, ಮಾಮೂಲಿ ಮನುಷ್ಯನಾಗಿ ಹೆದರಿಸುವುದಿಲ್ಲ. ಎಲ್ಲಾ ಗೊಂದಲಗಳಿಗೆ ಅರ್ಥವಾಗುವಂತೆ ಸನ್ನಿವೇಶಗಳು ಬರಲಿದೆ ಎನ್ನುತ್ತಾರೆ.

ನಾಯಕಿ ಪಲ್ಲವಿರಾಜು ಅವರಿಗೆ ಎರಡನೆ ಭಾಗದಲ್ಲಿ ಪಾತ್ರ ಮೃಧುವಾಗಿದೆಯಂತೆ. ಚಿತ್ರವನ್ನು ವಿತರಣೆ ಮಾಡಿರುವ ನವರಸನ್ ಹಿಂದಿಗೆ 30 ಲಕ್ಷ, ತೆಲುಗು 13 ಲಕ್ಷ ಡಬ್ಬಿಂಗ್ ಹಕ್ಕುಗಳಿಂದ ಬಂದಿದೆ. ಬಹುಶ: 25 ಲಕ್ಷ ಗಳಿಕೆ ಬರಬಹುದೆಂಬ ಅಂದಾಜು ಹಾಕಿದ್ದಾರೆ. ರಚನೆ,ನಿರ್ದೇಶನ ಎಸ್.ಎಸ್.ಸಜ್ಜನ್ ಮತ್ತು ನಿರ್ಮಾಪಕ ಅಮರ್‍ಚೌದರಿ ಇಬ್ಬರಿಗೂ ಹೊಸ ಅನುಭವವಾಗಿದೆ. ಮೊದಲ ಪ್ರಯತ್ನದಲ್ಲಿ ಸಕ್ಸಸ್ ಕಂಡಿರುವುದರಿಂದ ಮುಂದುವರೆದ ಸಿನಿಮಾವನ್ನು ಆದಷ್ಟು ಬೇಗನೆ ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ. ಎಂದಿನಂತೆ ರವಿಬಸ್ರೂರು ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನವಿದೆ.

-6/12/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore