HOME
CINEMA NEWS
GALLERY
TV NEWS
REVIEWS
CONTACT US
ಮನಸುಗಳ ಮಂಥನ ಚಿಂತನ
ಮನೋವಿಜ್ಞಾನದ ಕಥಾನಕಗಳನ್ನು ತೆರೆಮೇಲೆ ಮೂಡಿಸುವಲ್ಲಿ ಹೆಸರಾಗಿರುವ ಹಿರಿಯ ನಿರ್ದೇಶಕ ಮತ್ತು ಪರಿಸರವಾದಿ ಸುರೇಶ್ ಹೆಬ್ಳೀಕರ್ ಅವರು ಬಹಳ ವರ್ಷಗಳ ನಂತರ ನಿರ್ದೇಶಿಸಿರುವ ಚಿತ್ರ ಮನ ಮಂಥನ. ಮಾನಸಿಕ ತಜ್ಞ ಡಾ. ಅಶೋಕ್ ಪೈ ಅವರ ಕಥೆಯನ್ನಾಧರಿಸಿ ಈ ಚಿತ್ರ ನಿರ್ಮಿಸಲಾಗಿದೆ.

ಶಿವಮೊಗ್ಗದ ವ್ಯಾಪಾರಿಯೊಬ್ಬರ ಮಗನಾದ ಅಜಯ್‍ಗೆ(ಕಿರಣ್ ರಜಪೂತ್) ತನ್ನ ತಾಯಿಯ ಆಸೆಯಂತೆ ಸಂಗೀತ ಕ್ಷೇತ್ರದಲ್ಲಿ ಅಥವಾ ಜಿನೆಟಿಕ್ ಸೈನ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆ. ಆದರೆ ತಂದೆಗೆ ತನ್ನ ಮಗ ಸಿಎ ಓದಿ ತನ್ನೆಲ್ಲಾ ವ್ಯವಹಾರಗಳನ್ನು ನೋಡಿಕೊಂಡಿರಬೇಕೆಂಬ ಆಸೆ. ಒಲ್ಲದ ಮನಸ್ಸಿನಿಂದ ಬಿ.ಕಾಂ ಪದವಿ ಮುಗಿಸಿ ಸಿಎ ಮಾಡಲು ಬೆಂಗಳೂರಿಗೆ ಬರುತ್ತಾನೆ. ಆದರೆ ತನ್ನ ತಂದೆಗೆದುರಾದ ಕ್ರಿಮಿನಲ್ ಕೇಸಿನ ಸಲುವಾಗಿ ಮರಳಿ ಊರಿಗೆ ಬರುವ ಅಜಯ್‍ಗೆ ಅಲ್ಲಿಯೇ ಮಾಧುರಿ(ಅರ್ಪಿತ) ಎಂಬ ಹುಡುಗಿಯ ಪರಿಚಯವಾಗುತ್ತದೆ.

ಕೆಲವೇ ದಿನಗಳಲ್ಲಿ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ಅಗಲಿರಲಾರದಷ್ಟು ಹತ್ತಿರವಾಗುತ್ತಾರೆ. ಆದರೆ ಅಲ್ಲಿ ವಿಧಿಯಾಟವೇ ಬೇರೆಯಾಗಿರುತ್ತದೆ. ಇವರಿಬ್ಬರ ಪ್ರೀತಿಗೆ ಬರಸಿಡಿಲು ಬಡಿಯುತ್ತದೆ. ಅರಗಿಸಿಕೊಳ್ಳಲಾಗದ ಒಂದು ಸತ್ಯದಿಂದಾಗಿ ಗಾಢವಾಗಿ ಪ್ರೀತಿಸುತ್ತಿದ್ದ ಇಬ್ಬರೂ ಬೇರೆಯಾಗುತ್ತಾರೆ. ಈ ಆಘಾತದಿಂದ ಮಾನಸಿಕವಾಗಿ ನೊಂದ ಅಜಯ್, ಹೋಟೆಲೊಂದರಲ್ಲಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಯ ಯತ್ನಕ್ಕೆ ಮುಂದಾಗುತ್ತಾನೆ. ಆ ಹೋಟೆಲ್‍ನವರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರಿಂದ ಸೂಕ್ತಸಮಯದಲ್ಲಿ ಚಿಕಿತ್ಸೆ ದೊರಕಿದ್ದರಿಂದ ಅಜಯ್, ಅದೃಷ್ಠವಶಾತ್ ಪ್ರಾಣಪಾಯದಿಂದ ಪಾರಾಗುತ್ತಾನೆ. ಆ ವೇಳೆಗೆ ಅಜಯ್‍ನ ಮಾನಸಿಕ ಸ್ಥಿತಿ ಕಂಡ ವೈದ್ಯರು ಆತನಿಗೆ ಕೌನ್ಸಿಲ್ ಮೂಲಕ ಚಿಕಿತ್ಸೆಗೆ ಮುಂದಾಗುತ್ತದೆ. ಅಜಯ್‍ನ ಆ ಮಾನಸಿಕ ಸಮಸ್ಯೆಗೆ ಕಾರಣವೇನು...ಕೊನೆಗೂ ಇಬ್ಬರೂ ಒಂದಾಗುತ್ತಾರಾ, ಇಲ್ವಾ ಎಂಬುದೇ ಮನ ಮಂಥನ ಚಿತ್ರದ ಕ್ಲೈಮಾಕ್ಸ್.

ಶಿವಮೊಗ್ಗದ ಶ್ರೀಮಂತ ಕುಟುಂಬವೊಂದರಲ್ಲಿ ನಡೆದ ಈ ಸತ್ಯಕಥೆಯನ್ನು ಹಿನ್ನೆಯಾಗಿಸಿಕೊಂಡು ಖ್ಯಾತ ಮನೋವೈದ್ಯ ಡಾ.ಕೆ.ಎ. ಅಶೋಕ ಪೈ ಕಥೆ ಬರೆದು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸುರೇಶ್ ಹೆಬ್ಳೀಕರ್ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪೂರಕವಾಗಿ ಪ್ರವೀಣ್.ಡಿ.ರಾವ್ ಅವರ ಹಿನ್ನೆಲೆ ಸಂಗೀತ, ಪಿ. ರಾಜನ್ ಅವರ ಛಾಯಾಗ್ರಹಣ ಮೂಡಿಬಂದಿದೆ. ಹಿರಿಯ ನಟ ರಮೇಶ್ ಭಟ್, ಸುರೇಶ್ ಹೆಬ್ಳೀಕರ್, ಕಿರಣ್ ರಜಪೂತ್, ಅರ್ಪಿತಾ, ಸಂಗೀತ, ಕೆ.ಶ್ರೀಧರ್ ಸೇರಿದಂತೆ ಬಹುತೇಕ ಕಲಾವಿದರು ಉತ್ತಮವಾದಂಥ ಅಭಿನಯವನ್ನು ನೀಡಿದ್ದಾರೆ. ಕುಂದಾದ್ರಿ ಬೆಟ್ಟ, ಆಗುಂಬೆಯ ಸೌಂದರ್ಯ, ತೀರ್ಥಹಳ್ಳಿ, ಶಿವಮೊಗ್ಗ ಸೇರಿದಂತೆ ಮಲೆನಾಡಿದ ಸುಂದರ ತಾಣಗಳನ್ನು ಚಿತ್ರದಲ್ಲಿ ಸುಂದರವಾಗಿ ಮೂಡಿಸಲಾಗಿದೆ.
-18/02/17

SURESH HEBLIKAR BACK WITH MANA MANTHANA, FILM DUE ON FEB 17
F
ilm-maker, environmentalist and activist Suresh Heblikar is ready to release his directorial film Mana Manthana, a psychological film on Feb 17 all over Karnataka. The film is produced by Dr Ashok Pai, a leading psychiatrist in Shivamogga who passed away in Europe recently. The film stars Ramesh Bhat, Suresh Heblikar, Arpita, Kiran Raajut, Suman, K S Sridhar and Sangeetha among others.

Director Suresh Heblikar told reporters that Mana Manthana is a psychological film and it is Dr Ashok Pai’s 4th film who unfortunately passed away about two months back in Europe resulting in the delaying the release of this film. He said India has undergone a change ever since the economy was liberalized in 1991 and Bengaluru has undergone a change in the last 10 to 12 years with economic and social conditions changing dramatically. He said all of these changes have impacted human relationships and had even resulted in depression, schizophrenia, sleep disorders and other mental disorders among youths which is a result of higher disposable incomes. He said he plays a senior psychiatrist in the film.

Kiran Rajput said he was surprised with the character that was offered to him. He said it was more than a film environment being on the sets. He said he plays an innocent guy who is pampered without disclosing much about his role. Arpita said she plays an innocent girl who is dependent on her mother and vice-versa. She said it is her second film.

Sangeetha said the film has a message for society. She said it was a good film and was surprised with director’s patience in drawing out a good performance from his artistes. She said the director made all the artistes feel comfortable and that she plays the heroine’s mother in the film.

Ramesh Bhat said the film has no melodrama and other unnecessary elements that a commercial film wants. He said the film is based on real incidents and has been pictured realistically. The film has clashes between parents and children due to generation gap in ideas and that also results in putting a lot of mental stress in family ties.

Director Ramadas Naidu who was present as a guest said he had seen the film and appreciated Suresh Heblikar for making a sensitive film which is also educative for today’s society.  
-13/02/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore