HOME
CINEMA NEWS
GALLERY
TV NEWS
REVIEWS
CONTACT US

ಮೆಜಸ್ಟಿಕ್ ಎಕ್ಸ್‌ಪ್ರೆಸ್ ಕುಂಬಳಕಾಯಿ
ರಾಜಾಜಿನಗರ ೫ನೇ ಬ್ಲಾಕಿನಲ್ಲಿ ಮಹೂರ್ತ ಆಚರಿಸಿಕೊಂಡಿದ್ದ 'ಮೆಜಸ್ಟಿಕ್ ಎಕ್ಸ್‌ಪ್ರೆಸ್' ಚಿತ್ರವು ಅದೇ ಜಾಗದಲ್ಲಿ ಕುಂಬಳಕಾಯಿ ಒಡೆಯುವುದರೊಂದಿಗೆ ಚಿತ್ರೀಕರಣವನ್ನು ಸರಾಗವಾಗಿ ಮುಗಿಸಿದೆ. ಮಾದ್ಯಮದವರು ಆರ್‌ಪಿಎ ಕಾಲೇಜು ಮೈದಾನಕ್ಕೆ ಭೇಟಿ ನೀಡಿದಾಗ ನಾಯಕ ಉಮೇಶ್‌ಬಣಕಾರ್ ಹನುಮಾನ್ ಪ್ರತಿಮೆ ಎದುರು ಭಾಮಾಹರೀಶ್, ದೀಪಕ್ ಹಾಗೂ ಸಂಗಡದೊಂದಿಗೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಬಿಡುವು ಮಾಢಿಕೊಂಡು ತಂಡವು ಮಾತಿಗೆ ಕುಳಿತುಕೊಂಡರು. ನಿರ್ದೇಶಕ ಸುನಿಲ್‌ಮುಕಾಶಿ ಚಿತ್ರವನ್ನು ಬಣ್ಣಿಸಿದ್ದು ಹೀಗೆ: ಪ್ರತಿಯೊಬ್ಬ ಯುವಕರಲ್ಲಿ ಸಾಮರ್ಥ್ಯ ಇರುವುದು ಅವರಿಗೆ ತಿಳಿದಿರುವುದಿಲ್ಲ. ಅದನ್ನು ಚಿತ್ರದಲ್ಲಿ ಕಾಮಿಡಿ, ಮನರಂಜನೆಯ ಮೂಲಕ ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಸ್ಪರ್ಶ, ಮೆಜೆಸ್ಟಿಕ್ ಚಿತ್ರದಲ್ಲಿ ನಟಿಸಿದ್ದ ರೇಖಾ ನಾಯಕಿ. ಇವರ ಪಾತ್ರ ಹೇಳಿದರೆ ಕತೆ ಗೊತ್ತಾಗುತ್ತದೆ. ಹಲವು ನಿರ್ಮಾಪಕರು ಚಿತ್ರದಲ್ಲಿ ನಟಿಸಿರುವುದು ವಿಶೇಷ. ನಾಯಕನಿಗೆ ಪ್ರೋತ್ಸಾಹ ನೀಡುವ ಪಾತ್ರದಲ್ಲಿ ರಾಕ್‌ಲೈನ್‌ಸುಧಾಕರ್ ಪ್ರಾರಂಭದಿಂದ ಕೊನೆಯ ದೃಶ್ಯದವರೆಗೂ ಕಾಣಿಸಿಕೊಳ್ಳುತ್ತಾರೆ. ಸಾಯಿಪ್ರಕಾಶ್, ಪದ್ಮವಾಸಂತಿ ತಾರಬಳಗದಲ್ಲಿ ಇದ್ದಾರೆ. ಬೆಂಗಳೂರು ದೇವರಾಯನದುರ್ಗ ಸ್ಥಳಗಳಲ್ಲಿ ಶೂಟಿಂಗ್ ನಡೆಸಲಾಗಿದೆ ಅಂತ ವಾಖ್ಯಾನ ನೀಡಿದರು.

ಎಂಬಿಎ ಪದವಿ ಪಡೆದು ನಿರುದ್ಯೋಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅಂದುಕೊಂಡಂತೆ ಎಲ್ಲಾ ಕೆಲಸಗಳು ಮುಗಿದಿದೆ. ಏಪ್ರಿಲ್‌ನಲ್ಲಿ ತೆರೆಕಾಣುವ ಸಾದ್ಯತೆ ಇದೆ ಅಂತಾರೆ ಉಮೇಶ್‌ಬಣಕಾರ್. ಜಯಂತ್‌ಕಾಯ್ಕಿಣಿ ಮತ್ತು ನಿರ್ದೇಶಕರು ಸೇರಿದಂತೆ ರಚನೆ ಮಾಡಿರುವ ಆರು ಗೀತೆಗಳಿಗೆ ಚೈತನ್ಯ ಸಂಗೀತ ಸಂಯೋಜಸಿದ್ದಾರೆ. ಪವನ್‌ಕುಮಾರ್ ಛಾಯಗ್ರಹಣ, ಸಂಕಲನ ಸಂತು, ಸಾಹಸ ಅಲ್ಟಿಮೇಟ್ ಶಿವು, ಸಂಭಾಷಣೆ ರಾಜುಬೆಳಗೆರೆ ಅವರದಾಗಿದೆ. ಸಮಾಜಕಲ್ಯಾಣ ಮತ್ತು ರಿಯಲ್ ಎಸ್ಟೆಟ್ ನಡೆಸುತ್ತಿರುವ ರಾಜುಗೌಡ ನಿರ್ಮಾಣ ಮಾಡುತ್ತಿದ್ದು ಎಲ್ಲವನ್ನು ಭಾಮಾಹರೀಶ್ ಸುಪರ್ದಿಗೆ ಬಿಟ್ಟಿದ್ದೇನೆ. ಅವರು ಹೇಳಿದಂತೆ ಕೇಳವುದಷ್ಟ್ಟೆ ನನ್ನ ಕೆಲಸ ಎಂಬ ಮುಗ್ದತೆ ಮಾತು ಅವರದಾಗಿತ್ತು. ಭಾಮಾಹರೀಶ್ ಪುತ್ರ ಉಲ್ಲಾಸ್ ಗೀತೆಯಲ್ಲಿ ಮೊದಲಬಾರಿ ಕಾಣಿಸಿಕೊಂಡಿದ್ದಾರೆ. ಯೋಗರಾಜ್‌ಭಟ್ ರಚಿಸಿರುವ ಒಂದು ಐಟಂ ಹಾಡಿಗೆ ಆಲಿಶಾ ಹೆಜ್ಜೆ ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ನೂರು ಚಿತ್ರಗಳನ್ನು ಪೂರೈಸಿದ ರಾಕ್‌ಲೈನ್ ಸುಧಾಕರ್‌ರವರನ್ನು ತಂಡವು ಸನ್ಮಾನಿಸಿತು.
-28/02/16

'


ಉಮೇಶ್ ಬಣಕಾರ್ ಆಸ್ಪತ್ರೆಗೆ ದಾಖಲು
ನಟ, ನಿರ್ಮಾಪಕ ಉಮೇಶ್ ಬಣಕಾರ್ ಜಾರಿ ಬಿದ್ದು ತಲೆಗೆ ಪೆಟ್ಟಾಗಿರುವ ಘಟನೆ ಇಂದು ನಡೆದಿದೆ. ಅವರನ್ನು ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೆಟ್ಟಿನಿಂದ ತಲೆಯಲ್ಲಿ ರಕ್ತವು ಹೆಪ್ಪುಗಟ್ಟಿದ್ದರಿಂದ ಅವರಿಗೆ ಕಿರು ಶಸ್ತ್ರಚಿಕಿತ್ಸೆಯೊಂದನ್ನು ಮಾಡಲಾಗಿದೆ. ಅವರು ಸೋಮವಾರ(ನವೆಂಬರ್ 18)ದಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದ್ದಾರೆ. ಉಮೇಶ್ ಬಣಕಾರ್ ಇತ್ತೀಚೆಗಷ್ಟೇ ಭಾ.ಮ.ಹರೀಶ್ ನಿರ್ಮಾಣ, ಸುನೀಲ್ ಮೊಕಾಶಿ ನಿರ್ದೇಶನದ `ಮೆಜೆಸ್ಟಿಕ್ ಎಕ್ಸ್ ಪ್ರೆಸ್' ಚಿತ್ರದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದರು. ಆ ಚಿತ್ರದ ಮುಹೂರ್ತ ಒಂದು ತಿಂಗಳ ಹಿಂದೆಯಷ್ಟೇ ನೆರವೇರಿತ್ತು. ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಕೆಲವು ಚಿತ್ರಗಳನ್ನೂ ನಿರ್ಮಾಣ ಮಾಡಿದ್ದಾರೆ.
-ಕೆ.ಎನ್.ಎನ್. ಸಿನಿಸರ್ಕಲ್ ನ್ಯೂಸ್.
ಚಿತ್ರಗಳು: ಕೆ.ಎನ್.ನಾಗೇಶ್ ಕುಮಾರ್
-14/11/13

MAJESTIC EXPRESS UMESH BANAKAR HERO!
A
senior in the Kannada film industry Umesh Banakar, Vice President of KFCC is playing a lead role in ‘Majestic Express’ of Bama Harish and brother’s production.

Umesh Banakar entering the industry as child actor in Dombara Krishna, acted in Ranjitha as Shruthi brother, Gajina Mane and became producer from Mangalya Saakshi. He acted after a long gap in ‘Dandam Dashagunam’, he is in co production film ‘Bahuparak’ as 65 years Excise Minister.

This film is very close to my attitudes and behaviors he says. 15 producers are acting in various characters. There is no need for regular character artists. This is one of the major highlights of the film.

Sushil who directed ‘Atma and Kanasu’ is in to direction again. The character of Umesh Banakar is such that it wants to do good for family and also for society.

LN Shastry is doing situational songs and four is focused on Umesh Banakar he says.  When the films of today are done with crowd funding, the media meet of this film was held with crowd making heavy noise.
-14/10/13


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore