HOME
CINEMA NEWS
GALLERY
TV NEWS
REVIEWS
CONTACT US

ಮಾಚಿದೇವನಿಗೆ ಒಂದು ಸಲ ಬಹುಪರಾಕ್
ಅದೊಂದು ಮಡಿವಾಳ ಸಂಸಾರ ಅವರ ಕಾಯಕದಲ್ಲಿ ನಿಷ್ಠೆಯಿಂದ ಗಂಡ-ಹೆಂಡತಿ ಕೆಲಸ ಮಾಡುತ್ತಿರುತ್ತಾರೆ. ಇವರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರು ಮಕ್ಕಳಾಗಿರುವುದಿಲ್ಲ. ಊರಿನವರೆಲ್ಲ ಬಂಜೆಯೆಂದು ಆ ಹೆಣ್ಣು ಹೃದಯವನ್ನು ಜರಿಯುತ್ತಿರುತ್ತಾರೆ. ಈ ಚುಚ್ಚುವ ಮಾತುಗಳಿಂದ ನೊಂದ ಆ ಹೆಣ್ಣು ತಮ್ಮ ಊರಲ್ಲೆ ಇರುವ ಶಿವನ ದೆವಸ್ಥಾನಕ್ಕೆ ಬಂದು ವಿಧ ವಿಧವಾಗಿ ಬೇಡುತ್ತಾಳೆ. ಆಗ ಅಲ್ಲಿಗೆ ಬರುವ ಗುರುಗಳೊಬ್ಬರು ಬಂದು ಒಳ್ಳೆ ಮಾರ್ಗ ತೋರಿಸುವರು. ಆಗ ಆ ದಂಪತಿಗಳಿಗೆ ಶಿವನ ವರದಿಂದ ಮಾಚಿದೇವ ಹುಟ್ಟುತ್ತಾನೆ. (ಈ ಮಾಚಿದೇವ ಕೈಲಾಸದ ಶಿವನ ಬಂಟ ವೀರಭದ್ರ. ಈ ವೀರಭದ್ರ ಭೂಲೋಕಕ್ಕೆ ಹೇಗೆ ಬಂದ ಎನ್ನುವುದಕ್ಕೆ ಸಿನಿಮಾ ಪ್ರಾರಂಭದಲ್ಲಿ ಗೊತ್ತಾಗುತ್ತದೆ.)

ಹೀಗೆ ಶಿವನ ಕೃಪೆಯಿಂದ ಜನಿಸಿದ ಮಾಚಿದೇವನ ಮೇಲೆ ಊರಿನವರ ವಿಶೇಷ ಪ್ರೀತಿ. ಇದರ ಜೊತೆಯಲ್ಲೇ ದೇವಸ್ಥಾನದ ಗುರುಗಳ ಸನ್ನಿಧಿಯಲ್ಲಿ ಎಲ್ಲಾ ವಿದ್ಯೆಗಳಲ್ಲಿ ಪರಿಣ ತಿ ಹೊಂದುವನು. ಹೀಗೆ ಮಾಚಿ ಬೆಳೆದು ದೊಡ್ಡವನಾದಮೇಲೆ ಅವನಿಗೆ ಮದುವೆ ಮಾಡುವ ವಿಚಾರ ತಂದೆ-ತಾಯಿಗೆ ಬರುತ್ತದೆ. ಅದೇ ಸಮಯಕ್ಕೆ ಪಕ್ಕದ ಊರಿನ ದೇವಸ್ಥಾನವೊಂದರಲ್ಲಿ ನಾಯಕಿ ಮಲ್ಲಿಗೆಯ ಗುಣ ಸ್ವಭಾವಕ್ಕೆ ಮಾರುಹೋಗುತ್ತಾನೆ ಮಾಚಿ. ಅವಳನ್ನು ಮದುವೆಯಾಗಲು ಮುಂದಾಗುವನು. ಮುದ್ದಾದ ಮಡದಿ ಸಿಕ್ಕಿದ ಮೇಲೆ ಮಾಚಿದೇವ ತನ್ನ ಕಾಯಕವನ್ನು ಮರೆಯುತ್ತಾನೆ. ಈ ಸಂದರ್ಭದಲ್ಲಿ ಶಿವ ಪಾರ್ವತಿ ಮಾರು ವೇಶದಲ್ಲಿ ಬಂದು ಮಾಚಿಯನ್ನು ಪರೀಕ್ಷೆಗೆ ಒಡ್ಡುವರು. ಈ ಅದೃಷ್ಟ ಪರೀಕ್ಷೆಯಲ್ಲಿ ಮಾಚಿ ಗೆದ್ದು ಬರುವನೇ? ಏನೆಲ್ಲ ಆಗಬಹುದು ಎನ್ನುವುದಕ್ಕೆ ಸಿನಿಮಾ ನೋಡಿದರೆ ಚಂದ.

ಸುಂದರವಾದ ಈ ಐತಿಹಾಸಿಕ ಚಿತ್ರ ಓಯಾಸಿಸ್‌ನಲ್ಲಿ ನೀರು ಸಿಕ್ಕಂತ್ತಾಗಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಚಿತ್ರವೇನೂ ಸುಂದರವಾಗಿ ಮೂಡಿ ಬಂದಿದ್ದರು ಕೆಲವೊಂದು ಅಂಶಗಳನ್ನು ನಿರ್ದೇಶಕರು ಅರಿಯಬೇಕಿತ್ತು ಮುಖ್ಯವಾಗಿ ಕಾಸ್ಟುಮ್ ಮೇಲೆ ಇನ್ನಷ್ಟು ಗಮನ ಹರಿಸಬಹುದಿತ್ತು. ಒಂದು ವಿಷಯದಲ್ಲಿ ನಿರ್ದೇಶಕರ (ನಂದಿ ಕಾಮೇಶ್ ರೆಡ್ಡಿ) ಧೈರ್ಯ ಮೆಚ್ಚಲೇ ಬೇಕು ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿತ್ರಕ್ಕೆ ಕೈ ಹಾಕಿರುವುದು.

ಇನ್ನು ಚಿತ್ರದಲ್ಲಿ ಇಂಟರೆಸ್ಟ್ ಎಂದರೆ ಸಂಗೀತ. ಹಂಸಲೇಖ ಈ ಹಿಂದೆ ಕಮರ್ಷಿಯಲ್ ಆಗಿ ಪ್ರೇಮ ಲೋಕಕ್ಕೆ ಸರಳ ಪದಗಳ ಮೂಲಕ ಹಾಡುಗಳನ್ನು ಸೃಷ್ಟಿಮಾಡಿದ್ದರು. ಇದರಲ್ಲಿ ವಚನಗಳ ಮೂಲಕ ೧೪ ಹಾಡುಗಳನ್ನು ಸುಂದರವಾಗಿ ಕಂಪೋಸ್ ಮಾಡಿದ್ದಾರೆ. ವಚನಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಹಾಗು ಸಾಯಿಕುಮಾರ್ ಪಾತ್ರ ಕೊನೆವರೆಗೂ ಮನಸ್ಸಿನಲ್ಲಿ ಉಳಿಯುತ್ತದೆ. ಅಂದಹಾಗೆ ಚಿತ್ರದ ಕ್ಲೈಮ್ಯಾಕ್ಸ್ ಸುಂದರವಾಗಿ ಬಂದಿರುವುದು ಪ್ರೇಕ್ಷಕನಿಗೆ ಸಂತಸವಾಗುತ್ತದೆ. ಉಳಿದಂತೆ ಮಾಚಿದೇವನ ಪತ್ನಿ (ಚಾರುಲತಾ)ಗೆ ಹೆಚ್ಚು ಕೆಲಸವಿಲ್ಲ. ತಂದೆ ತಾಯಿಯಾಗಿ ರಮೇಶ್ ಭಟ್ - ಸುಚಿತ್ರಾ ನಟಿಸಿದ್ದು, ಬಿಜ್ಜಳನಾಗಿ ಬಿ ಸಿ ಪಾಟೀಲ್ ಬಂದು ಹೋಗುತ್ತಾರೆ. ಬಸವಣ್ಣನಾಗಿ ವಿಜಯಕಾಶಿ ಗಮನ ಸೆಳೆಯುತ್ತಾರೆ. ಸಾಹಸ ನಿರ್ದೇಶನ ಮಾಡುತ್ತಿದ್ದ ಥ್ರಿಲ್ಲರ್‌ಮಂಜು ಕೆಲಸದ ಜೊತಗೆ ಬಾಲ ಮಾಚಿದೇವನಿಗೆ ತರಭೇತಿ ನೀಡುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಹುಕಾಲದ ನಂತರ ಐತಿಹಾಸಿಕ ಚಿತ್ರವನ್ನು ನಿರ್ಮಾಣ ಮಾಡಿರುವ ಸಿ.ಸಿದ್ದೇಶ್ವರ ಮತ್ತು ಸಹ ನಿರ್ಮಾಪಕರಾದ ಎಂಜೀರಪ್ಪಮಡಿವಾಳರಿಗೆ ಚಿತ್ರ ನೋಡುವುದರ ಮೂಲಕ ಕೃತಜ್ಘತೆ ಅರ್ಪಿಸಬಹುದು.
-18/03/16MAACHIDEVA’ RELEASING ON MARCH 18
M
aachideva, a historical film with social concern will release all over Karnataka on March 18. The film is produced by Siddeshwara and directed by Nandi Kameshwara Reddy. The film stars Saikumar, B C Patil, Ramesh Bhat, Charulatha, Umesh and Suchitra among others. Hamsalekha has scored the music.

Director Nandi Reddy told reporters that Maachideva is about Basavanna’s contemporary who lived in the 12th century. Reddy who is debuting with this family said the film is being released commercially.

Producer Siddeshwara said a story of 12th century is being made in 21st century which is satisfying. He said the film has good actors and technicians. The film has got a U certificate from the censors.

Ramesh Bhat said there were few roles in everyone’s careers as actors that could be remembered and he said his role in the film is one of them. He said Saikumar had acted well.

Saikumar said he was lucky to have played the role of Maachideva. The film has good music, good technical team and is a good film to watch. He said Hamsalekha has scored music for 14 songs and added that this generation must watch such a film as this. He said he got an opportunity to portray all the navarasas.

Hamsalekha said historical and mythological films that are rarely made these days gives technicians and musicians an opportunity to give their best. He said the songs are in the form of vachanas.

B C Patil said he plays Bijjala in the film. He said he had not taken remuneration for his role.

Suchitra and Umesh were also present and spoke about their roles.
-17/03/16For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\