HOME
CINEMA NEWS
GALLERY
TV NEWS
REVIEWS
CONTACT US
ಒಂದು ವಿಕೃತ ಆಟವು ಸಂಬಂದಗಳನ್ನು ಹಾಳು ಮಾಡುತ್ತದೆ
ಒಮ್ಮೆ ಮೊಬೈಲ್ ನೋಡಿದರೆ ತಲೆಯನ್ನು ಮೇಲಕ್ಕೆ ಎತ್ತದಂತೆ ಮಾಡುತ್ತದೆಂದು ಗಂಗಾವತಿ ಪ್ರಾಣೇಶ್ ಹಾಸ್ಯ ಕಾರ್ಯಕ್ರಮದಲ್ಲಿ ಹೇಳಿದ್ದು ‘ಲೌಡ್ ಸ್ಪೀಕರ್’ ಸಿನಿಮಾ ನೋಡುವಾಗ ನೆನಪಿಗೆ ಬರುತ್ತದೆ. ಪ್ರಚಲಿತ ಯುಗದಲ್ಲಿ ಅನ್ನ, ನೀರು ಬಿಟ್ಟರೂ ಮೊಬೈಲ್ ಸಹವಾಸ ಬಿಡುವುದಿಲ್ಲ. ಪ್ರತಿಯೊಬ್ಬನ ಜೀವನದಲ್ಲೂ ಒಂದೊಂದು ರಹಸ್ಯ ಇರುತ್ತದೆ. ಅಂತಹ ರಹಸ್ಯವೊಂದನ್ನು ವ್ಯಕ್ತಿಯೊಬ್ಬ ತನ್ನ ಮೊಬೈಲ್‍ನಲ್ಲಿ ಸ್ಟೋರ್ ಮಾಡಿಕೊಂಡಿರುತ್ತಾನೆ. ಯಾವತ್ತೋ ಒಂದು ದಿನ ಆ ರಹಸ್ಯ ಬಯಲಾಗುತ್ತದೆ. ಮುಂದೆ ಆತನ ಜೀವನ ಏನಾಗುತ್ತದೆ. ಮೂವರು ನಾಯಕಿಯರು, ನಾಲ್ವರು ಹುಡುಗರ ಮದ್ಯೆ ನಡೆಯುವ ಕುತೂಹಲವನ್ನು ಏಳೆ ಏಳೆಯಾಗಿ ತೋರಿಸುವ ಪ್ರಯತ್ನ ಮಾಡಿರುವುದು ಚೆಂದ ಕಾಣಿಸುತ್ತದೆ. ಕೇವಲ ಸಂದೇಶದಲ್ಲಿ ಬರುವ ಮಾಹಿತಿ ನೋಡಿ ಸಂಶಯ ಪಡಬಾರದು. ಪ್ರತ್ಯಕ್ಷವಾಗಿ ಕಂಡದ್ದನ್ನು ಪ್ರಮಾಣಿಸಿನೋಡು ಎಂದು ಹಿರಿಯರು ಹೇಳಿರುವಂತೆ, ಇದನ್ನು ಅನುಕರಿಸಿದರೆ ಸಂಸಾರ ಸುಗಮವಾಗಿರುತ್ತದೆ ಎಂದು ಹೇಳಲಾಗಿದೆ.

ಮೂವರು ಗೆಳಯರು ಮತ್ತು ಪತ್ನಿಯರು ಹಾಗೂ ಬ್ರಹಚಾರಿ ಸ್ನೇಹಿತ ವಿಕೆಂಡ್ ಪಾರ್ಟಿ ಮಾಡಲು ಸ್ನೇಹಿತನ ಮನೆಗೆ ಹೋಗುತ್ತಾರೆ. ಎಲ್ಲರೂ ಸುಂದರ ನೆನಪುಗಳನ್ನು ಹಂಚಿಕೊಳ್ಳುತ್ತಾ ಒಂದು ಆಟವಾಡಲು ಎಲ್ಲರು ನಿರ್ಣಯ ತೆಗೆದುಕೊಳ್ಳುತ್ತಾರೆ. ಅದರಿಂದ ಎಲ್ಲರ ಮುಖವಾಡಗಳು ಬಯಲಾಗುತ್ತಾ ಹೋಗುತ್ತದೆ. ಅಂತಹ ಆಟವಾದರೂ ಏನು ಎಂಬುದನ್ನು ತಿಳಿಯಲು ನೀವುಗಳು ಖಂಡಿತ ಸಿನಿಮಾ ನೋಡಲೇಬೇಕಾಗಿದೆ. ಒಂದು ಚೆಂದದ ಮನೆ, ಪೋಲೀಸ್‍ಠಾಣೆಯಲ್ಲಿ ಇಡೀ ಕತೆಯನ್ನು ಅಚ್ಚುಕಟ್ಟಾಗಿ ತೋರಿಸಿರುವುದು ನಿರ್ದೇಶಕ ಶಿವತೇಜಸ್ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಅಭಿಷೇಕ್‍ಜೈನ್ ಕತೆ ಬರೆದು ಗೆಳಯನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿ ಕಾವ್ಯಷಾ ಹೂರತುಪಡಿಸಿ ಐಶ್ವರ್ಯ, ಡಾ.ದಿಶಾದಿನಕರ್, ವಿಜಯ್,ಭಾಸ್ಕರ್‍ನೀನಾಸಂ ಮತ್ತು ಸುಮಂತ್‍ಭಟ್ ಇವರೆಲ್ಲರಿಗೂ ಹಿರಿತೆರೆ ಹೊಸ ಅನುಭವ. ಆದರೂ ಎಲ್ಲರೂ ಪಾತ್ರಕ್ಕೆ ಮೋಸ ಮಾಡಿಲ್ಲ. ಇನ್ಸೆಪೆಕ್ಟರ್ ಆಗಿ ರಂಗಾಯಣರಘು ಕ್ಲೈಮಾಕ್ಸ್‍ನಲ್ಲಿ ಒಂದಷ್ಟು ಮನಸ್ಸಿಗೆ ನಾಟುವಂತೆ ಡೈಲಾಗ್‍ಗಳನ್ನು ಹೇಳಿದ್ದಾರೆ. ಅದರ ಪೈಕಿ “ಉಪ್ಪನ್ನು ಬಳಸುವಂತೆ ಮೊಬೈಲ್‍ನ್ನು ಉಪಯೋಗಿಸಬೇಕು. ನಿರ್ಜೀವ ವಸ್ತುವಿಗೆ ಬೆಲೆಕೊಡುವಂತೆ, ಜೀವ ಇರುವವರನ್ನು ಅಭಿಮಾನದಿಂದ ನೋಡಿಕೊಳ್ಳಿ. ವಿಕೃತ ಆಟದಿಂದ ಏನೆಲ್ಲಾ ತೊಂದರೆಗಳು ಆಗುತ್ತವೆ. ಸಂಚಾರಿವಾಣಿಯನ್ನು ನಿಯಮಿತವಾಗಿ ಬಳಸಿದಲ್ಲಿ ಮನಸ್ಸು, ದೇಹಕ್ಕೂ ಒಳ್ಳೆಯದು”. ಎಮಿಲ್ ಹಿನ್ನಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಹರ್ಷವರ್ಧನ್‍ರಾಜ್ ಸಂಗೀತದಲ್ಲಿ ಒಂದು ಹಾಡು ಇದೆ ಅಷ್ಟೇ. ಕಿರಣ್‍ಹಂಪಾಪುರ ಸೆರೆಹಿಡಿದಿರುವ ದೃಶ್ಯಗಳಿಗೆ ಕೆ.ಎಂ.ಪ್ರಕಾಶ್ ಚೆನ್ನಾಗಿ ಸಂಕಲನ ಮಾಡಿದ್ದಾರೆ. ಲೌಡ್ ಸ್ಪೀಕರ್‍ನ್ನು ಪ್ರೌಡಾಗಿ ನೋಡಿದರೆ ಖುಷಿ ಹಾಗೂ ಒಂದಷ್ಟು ವಿಷಯಗಳನ್ನು ತಿಳಿಯಬಹುದು.
ನಿರ್ಮಾಣ.: ಡಾ.ಕೆ.ರಾಜು
ಸಿನಿ ಸರ್ಕಲ್.ಇನ್ ವಿಮರ್ಶೆ
***


ಆಗಸ್ಟ್ 10ಕ್ಕೆ ಲೌಡ್ ಸ್ಪೀಕರ್
ಮಳೆ, ಧೈರ್ಯಂ ನಿರ್ದೇಶನ ಮಾಡಿರುವ ಶಿವತೇಜಸ್ ಮತ್ತು ಧೈರ್ಯಂ ಚಿತ್ರಕ್ಕೆ ಹಣ ಹೂಡಿದ್ದ ದಾವಣಗೆರೆಯ ವೈದ್ಯ ರಾಜು ನಿರ್ಮಾಣದ ‘ಲೌಡ್ ಸ್ಪೀಕರ್’ ಕತೆ ವಿನೂತನವಾಗಿದೆ. ಪ್ರತಿಯೊಬ್ಬನ ಜೀವನದಲ್ಲೂ ಒಂದೊಂದು ರಹಸ್ಯ ಇರುತ್ತದೆ. ಅಂತಹ ರಹಸ್ಯವೊಂದನ್ನು ವ್ಯಕ್ತಿಯೊಬ್ಬ ತನ್ನ ಮೊಬೈಲ್‍ನಲ್ಲಿ ಸ್ಟೋರ್ ಮಾಡಿಕೊಂಡಿರುತ್ತಾನೆ. ಯಾವತ್ತೋ ಒಂದು ದಿನ ಆ ರಹಸ್ಯ ಬಯಲಾಗುತ್ತದೆ. ಮುಂದೆ ಆತನ ಜೀವನ ಏನಾಗುತ್ತದೆ. ಮೂವರು ನಾಯಕಿಯರು, ನಾಲ್ವರು ಹುಡುಗರ ಮದ್ಯೆ ನಡೆಯುವ ಕುತೂಹಲ ಒಂದು ಏಳೆಯ ಸಿನಿಮಾವಾಗಿದೆ. ಇದನ್ನು ಮನರಂಜನೆ ರೀತಿಯಲ್ಲಿ ಹೇಳಲಾಗಿದೆಯಂತೆ. ಚಂದನ್‍ಶೆಟ್ಟಿ ಹಾಡಿರುವ ಗೀತೆಯು ವೈರಲ್ ಆಗಿದ್ದು ಪ್ಲಸ್ ಪಾಯಿಂಟ್ ಆಗಿದೆ. ಅಭಿಷೇಕ್‍ಜೈನ್ ಕತೆ ಜೊತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉಳಿದಂತೆ ವಿಜಯ್, ಭಾಸ್ಕರ್‍ನೀನಾಸಂ ಇವರೊಂದಿಗೆ ಐಶ್ವರ್ಯ, ಡಾ.ದಿಶಾದಿನಕರ್, ಸುಮಂತ್‍ಭಟ್ ನಟನೆ ಇದೆ. ಚಿತ್ರವು 100 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
29/07/18

ಧೈರ್ಯದಿಂದ ಇರುವೆ ಬಿಟ್ಟುಕೊಂಡ ನಿರ್ಮಾಪಕ
ಧೈರ್ಯಂ ಚಿತ್ರ ನಿರ್ಮಿಸಿದ್ದ ಡಾ.ಕೆ.ರಾಜು ಮನೆಯವರ ಒತ್ತಾಯಕ್ಕೆ ಚಿತ್ರರಂಗದಿಂದ ದೂರ ಇದ್ದರು. ಒಮ್ಮೆ ಅಭಿಷೇಕ್‍ಜೈನ್ ಎಂಬುವರು 10 ಸೆಕೆಂಡ್‍ನಲ್ಲಿ ಹೇಳಿದ ಕತೆಯನ್ನು ಸ್ನೇಹಿತರಿಗೆ ತಿಳಿಸಿದಾಗ ಎಲ್ಲರೂ ತುಂಬಾ ಚೆನ್ನಾಗಿದೆ ಮುಂದುವರೆಸಿ ಎಂದು ಹೇಳಿದ್ದಾರೆ, ಇದರಿಂದ ಎರಡನೆ ಬಾರಿ ಇರುವೆ ಬಿಟ್ಟುಕೊಂಡೆ ಎಂದು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಂತೆ ‘ಲೌಡ್ ಸ್ಪೀಕರ್’ ಚಿತ್ರವು ಬಿಡುಗಡೆ ಹಂತಕ್ಕೆ ತಲುಪಿದೆ. ಕತೆಗೆ ಹಾಡುಗಳು ಅವಶ್ಯಕವಾಗಿಲ್ಲದ ಕಾರಣ ತುರುಕಿಲ್ಲ. ಕೊನೆಯಲ್ಲಿ ನಿರ್ದೇಶಕರು ಪ್ರಚಾರದ ಸಲುವಾಗಿ ಒಂದು ಹಾಡನ್ನು ಅಳವಡಿಸಿದರೆ ಹೇಗೆ ಅಂತ ತಲೆಗೆ ಹುಳ ಬಿಟ್ಟಿದ್ದಾರೆ. ಅದಕ್ಕೆ ನಿರ್ಮಾಪಕರು ಹಾಡು ಚಿತ್ರಮಂದಿರಕ್ಕೆ ಬರುವಂತೆ ಆಹ್ವಾನವಿರಬೇಕೆಂದು ಷರತ್ತು ಹಾಕಿದ್ದಾರೆ. ಇದನ್ನು ಕ್ಯಾಚ್ ಮಾಡಿಕೊಂಡ ಅಭಿಷೇಕ್ ಹಾಡು ಬರೆದು ತೋರಿಸಿದ್ದಾರೆ. ಮುಂದೆ ಇಷ್ಟಪಟ್ಟಂತೆ ಹರ್ಷವರ್ಧನ್ ಸಂಗೀತದ ಗೀತೆಗೆ ಚಂದನ್‍ಶೆಟ್ಟಿ ಧ್ವನಿಯಾಗಿದ್ದಾರೆ. ಸದರಿ ಹಾಡು ಚಿತ್ರದ ಕೊನೆಯಲ್ಲಿ ಬರಲಿದ್ದು, ಪ್ರೇಕ್ಷಕರು ಇದನ್ನು ನೋಡಿಕೊಂಡು ಹೊರಬಹುದಾಗಿದೆ.

ಎರಡನೆ ಬಾರಿ ಅವಕಾಶ ಪಡೆದ ನಿರ್ದೇಶಕ ಶಿವುತೇಜಸ್ ಹೇಳುವಂತೆ ಪ್ರತಿಯೊಬ್ಬ ಮನುಷ್ಯನಲ್ಲೂ ರಹಸ್ಯ ಎನ್ನುವುದು ಇರುತ್ತದೆ. ಅದೆಲ್ಲವನ್ನು ತನ್ನ ಮೊಬೈಲ್‍ನಲ್ಲಿ ಸ್ಟೋರ್ ಮಾಡಿಟ್ಟುಕೊಂಡಿರುತ್ತಾನೆ. ಒಂದು ಹಂತದಲ್ಲಿ ಎಲ್ಲವು ತೆರೆದುಕೊಂಡಾಗ ಏನಾಗುತ್ತದೆ ಎಂಬುದರ ಸೂಕ್ಷ ವಿಷಯವನ್ನು ಮನರಂಜನೆ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಪೋಸ್ಟರ್‍ನಲ್ಲಿ ಪ್ರಪಂಚದ ಭಯಾನಕ ಆಟವೆಂದು ಹೇಳಿಕೊಂಡಿದೆ. ಅದು ಏನು ಎಂದು ತಿಳಿಯಲು ಸಿನಿಮಾ ನೋಡಬೇಕು. ಎಲ್ಲರು ನೋಡದ, ಕೇಳದ ಆಟ ಇರಲಿದ್ದು, ಪ್ರೇಕ್ಷಕನಿಗೆ ನಾನು ಸಹ ಇದನ್ನು ಆಡಿದ್ದೆನಲ್ಲ ಎಂದು ಅನಿಸುವುದುಂಟು. ಕ್ಲೈಮಾಕ್ಸ್‍ನಲ್ಲಿ ಸದರಿ ಆಟವನ್ನು ಏತಕ್ಕೆ ಆಡಬಾರದೆಂದು ತಿಳಿಯುತ್ತದೆ.

ತಾರಗಣದಲ್ಲಿ ಅಭಿಷೇಕ್‍ಜೈನ್, ವಿಜಯ್, ಐಶ್ವರ್ಯ, ಡಾ.ದಿಶಾದಿನಕರ್, ಸುಮಂತ್‍ಭಟ್, ಭಾಸ್ಕರ್‍ನೀನಾಸಂ ಅಭಿನಯಿಸಿದ್ದಾರೆ. ಕಿರಣ್‍ಹಂಪಾಪುರ ಛಾಯಗ್ರಹಣ,ಕೆ.ಎಂ.ಪ್ರಕಾಶ್ ಸಂಕಲನ, ಎಮಿಲ್ ಹಿನ್ನಲೆ ಸಂಗೀತವಿದೆ. ವಿಜಯ್‍ಈಶ್ವರ್ ಸಂಭಾಷಣೆಗೆ ಪದಗಳನ್ನು ಪೋಣಿಸಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಗುರುವಾರ ಪ್ರೊಮೋಶನಲ್ ಹಾಡಿಗೆ ಕಲಾವಿದರು ಹೆಜ್ಜೆ ಹಾಕಿದರು. ಸತ್ಯ, ಶಿವುಹಿರೇಗೌಡರ್, ಮಹೇಶ್‍ಚಿನ್ನಿಕಟ್ಟಿ, ಪುಷ್ಟಮಹಾಲಿಂಗಪ್ಪ ಸಹ ನಿರ್ಮಾಪಕರಾಗಿರುವ ಚಿತ್ರದ ಮೊದಲ ಪ್ರತಿ ಹೂರಬಂದಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
18/05/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore