HOME
CINEMA NEWS
GALLERY
TV NEWS
REVIEWS
CONTACT US
ಪ್ರೇಕ್ಷಕ ಲಾಕ್ ಆಗುವ ಮುಂಚೆ
ನಮ್ಮ ದೇಶದ ಮಣ್ಣಲ್ಲಿ ಮುಚ್ಚಿ ಹೋಗಿರುವ ಅನೇಕ ಕತೆಗಳಲ್ಲಿ ಒಂದನ್ನು ಹುಡುಕಿ ಅದನ್ನು ತೋರಿಸುತ್ತೆವೆಂದು ಹೊರಟ ಯುವಕರ ತಂಡವೊಂದು ಒಂದು ಹಂತದಲ್ಲಿ ಲಾಕ್ ಆಗುತ್ತಾರೆ. ಅವರ ಬಳಿ ಇರುವ ದೇಶಕ್ಕೆ ಸಂಬಂದಿಸಿದ ಒಂದಷ್ಟು ರಹಸ್ಯ ದಾಖಲೆಗಳನ್ನು ತಿಳಿದ ದುರುಳರು ಅದನ್ನು ಪಡೆಯಲು ಆ ಬ್ಯಾಗ್ ಹಿಂದೆ ಬೀಳುತ್ತಾರೆ. ಅಷ್ಟಕ್ಕೂ ಬ್ಯಾಗ್‍ನಲ್ಲಿ ಇರುವುದಾದರೂ ಏನು? ಅದನ್ನು ಹುಡುಕಲು ಹೋದವರಿಗೆ ಅದು ಸಿಕ್ಕುತ್ತದೆಯಾ ಎನ್ನುವುದು ‘ಲಾಕ್’ ಚಿತ್ರದ ಸಾರಾಂಶ ಮತ್ತು ಕ್ಲೈಮಾಕ್ಸ್ ಆಗಿದೆ. ಕತೆಯ ಕುರಿತು ಹೇಳುವುದಾದರೆ ಅಪ್ರಬುದ್ದನಂತೆ ವರ್ತಿಸುವ ನಾಯಕ, ಮತ್ತೋಂದಡೆ ಸುಭಾಸ್‍ಚಂದ್ರಬೋಸ್ ಅವರ ಪ್ರಬುದ್ದ ಚಿಂತನೆಗಳ ರಹಸ್ಯ. ಅದನ್ನು ಬೋಸ್‍ರವರು ಅಪರಿಚಿತ ಸ್ವಾಮೀಜಿಗೆ ಕೊಡುವುದು. ಅಲ್ಲಿಂದ ಅದು ಬೇರೊಬ್ಬರ ಕೈ ಸೇರುವುದು. ಅಂತಿಮವಾಗಿ ನಾಯಕಿಯ ಬ್ಯಾಗ್‍ಗೆ ಸೇರುತ್ತದೆ. ಹೀಗೆ ಕ್ಲೈಮಾಕ್ಸ್ ಏನಾಗುತ್ತದೆಂದು ನಾವು ಹೇಳುವುದಕ್ಕಿಂತ ಸಿನಿಮಾ ನೋಡಿದರೆ ಎಲ್ಲವು ಸಂಪೂರ್ಣವಾಗಿ ತಿಳಿಯಲಿದೆ.

ನಾಯಕ ಅಭಿಲಾಷ್, ದಂತವೈದ್ಯೆ ಸೌಂದರ್ಯರಮೇಶ್ ನಾಯಕಿ. ಇಬ್ಬರಿಗೂ ಹೊಸ ಅನುಭವವಾಗಿದ್ದರಿಂದ ನಟನೆ ಬಗ್ಗೆ ಹೇಳುವಂತಿಲ್ಲ. ನೇತಾಜಿ ಪಾತ್ರದಲ್ಲಿ ಹಿರಿಯ ನಟ ಶಶಿಕುಮಾರ್, ಸ್ವಾಮೀಜಿಯಾಗಿ ಅವಿನಾಶ್, ಇವರ ಶಿಷ್ಯನಾಗಿ ಎಂ.ಕೆ.ಮಠ ಕೊಟ್ಟ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ದಿಶಾಪೂವಯ್ಯ ಒಂದು ಹಾಡಿಗೆ ಕುಣಿದಿದ್ದಾರೆ. ಪರಶುರಾಮ್ ನಿರ್ದೇಶಕರಾಗಿ ಕೆಲವೊಂದು ಗೊಂದಲಗಳನ್ನು ತರಿಸುತ್ತಾ ಅದನ್ನು ಮುಂದಿನ ಸನ್ನಿವೇಶಕ್ಕೆ ಸರಿಪಡಿಸಿಕೊಂಡಿದ್ದಾರೆ. ಎಂ.ಸಂಜೀವ್ ಸಂಗೀತ ಹಾಡುಗಳು ಒಮ್ಮೆ ಕೇಳಬಹುದು. ವಿನಯ್‍ಚಂದ್ರಪ್ರಸನ್ನ ಕ್ಯಾಮಾರ ಅಲ್ಲಲ್ಲಿ ಕೆಲಸ ಮಾಡಿದೆ. ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ.
ನಿರ್ಮಾಣ: ರೋಹಿತ್‍ಅಶೋಕ್‍ಕುಮಾರ್ ಮತ್ತು ಪಿ.ರಾಮ್
ಸಿನಿ ಸರ್ಕಲ್.ಇನ್ ವಿಮರ್ಶೆ
***
20/01/19

ತೆರೆಗೆ ಸಿದ್ದ ಲಾಕ್
ಹೊಸಬರ ‘ಲಾಕ್’ ಚಿತ್ರ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿ ಹಸಿರು ಮನೆಯಲ್ಲಿ ನಡೆಯಿತು. ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ,ನಿರ್ಮಾಪಕ ಪರಶುರಾಮ್ ದೇಶಕ್ಕೆ ಉಪಯೋಗವಾಂತ ವಿಷಯಗಳು ಸನ್ನಿವೇಶದಲ್ಲಿ ಬರಲಿದೆ. ನನಗೆ ತಿಳಿದಿರುವ ಪರಿಮಿತಿಯಲ್ಲಿ ಹಾಘೂ ಸಮಾಜದ ಹಿತಮಿತಿಯಲ್ಲಿ ಒಳಗೆ ಹೇಗೆ ಬೇಕೋ ಆ ರಈತಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಇದರ ಕತೆಯನ್ನು ಪೂರ್ಣವಾಗಿ ತೆಗೆಯಬೇಕಾದರೆ ನೂರು ಕೋಟಿ ಖರ್ಚಾಗುತ್ತದೆ. ಟ್ರೈಲರ್ ಟೈಪ್ ಅಂತ ಸಿನಿಮಾ ಮಾಡಲಾಗಿದೆ. ಇಂದಿನ ಯುವ ಜನಾಂಗವು ಸಿಸ್ಟಮ್‍ನ್ನು ಹೇಗೆ ಸರಿಪಡಿಸಿಕೊಳ್ಳಬಹುದು. ನೇತಾಜಿ ಸುಭಾಸ್‍ಚಂದ್ರಬೋಸ್ ಹೇಳಿದ್ದನ್ನು ವಿವರವಾಗಿ ತಿಳಿಯಲು ಯುವಕರು ಅದನ್ನು ಸಂಶೋಧನೆ ನಡೆಸಲು ಹೋಗುತ್ತಾರೆ. ಆ ಸಮಯದಲ್ಲಿ ಅದು ಲಾಕ್ ಆಗುತ್ತದೆ. ಕತೆಯಲ್ಲಿ ಶೇಕಡ 15 ರಷ್ಟು ನೇತಾಜಿ ಅವರ ಬೋಧನೆ ಬಳಸಲಾಗಿದ್ದು, ಉಳಿದಂತೆ ಕಮರ್ಷಿಯಲ್ ಫಾರ್ಮೆಟ್‍ನಲ್ಲಿ ಇರಲಿದೆ. ಶಶಿಕುಮಾರ್ ಸುಬಾಸ್‍ಚಂದ್ರಬೋಸ್ ಆಗಿ ಕಾಣಿಸಿದ್ದಾರೆ. ದಿಶಾಪೂವಯ್ಯ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕನಕಪುರ, ಯಾಣ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಮಾಹಿತಿ ಒದಗಿಸಿದರು.

ಒರಟನಾಗಿ ಹುಡುಕಾಟದಲ್ಲಿ ತೊಡಗಿಕೊಂಡಿರುವ ಪಾತ್ರದಲ್ಲಿ ಅಭಿಲಾಷ್ ನಾಯಕ, ಎರಡು ರೀತಿಯಲ್ಲಿ ಕಾಣಿಸಿಕೊಂಡು ಅವನ ಹಿಂದೆ ಹೋಗುವ ಸೌಂದರ್ಯರಮೇಶ್ ನಾಯಕಿ, ದುರಳ ತನಿಖಾಧಿಯಾಗಿ ರಾಜ್‍ಹಿರೇಮಠ್, ಪೋಲೀಸ್ ಅಧಿಕಾರಿಯಾಗಿ ರಾಕ್‍ಸತೀಶ್, ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವುದಾಗಿ ಪರಿಚಯಿಸಿಕೊಂಡರು. ಸಂಗೀತ ಎಂ.ಸಂಜೀವರಾವ್, ಛಾಯಗ್ರಹಣ ವಿನಯ್‍ಚಂದ್ರಪ್ರಸನ್ನ, ಸಂಕಲನ ಗೌತಮ್‍ನಾಯಕ್, ನೃತ್ಯ ಅಕುಲ್ ಅವರದಾಗಿದೆ. ನಿರ್ದೇಶಕರನ್ನು ನಂಬಿಕೊಂಡು ರೋಹಿತ್‍ಅಶೋಕ್‍ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಚಿತ್ರವು ಇದೇ ಶುಕ್ರವಾರದಂದು ರಾಜ್ಯದ್ಯಂತೆ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
13/01/19

ಲಾಕ್ ಮಾತಿನ ಮನೆಯಲ್ಲಿ ಎಲ್ಲವು ಲಾಕ್
ಹೊಸಬರ ‘ಲಾಕ್’ ಚಿತ್ರದ ಮೊದಲ ಸುದ್ದಿಗೋಷ್ಟಿಯು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ,ನಿರ್ಮಾಪಕ ಪರಶುರಾಮ್ ಗೊಂದಲ ಆಗುವಂತೆ ಮಾತನಾಡಿ ಹೆಚ್ಚಿನದನ್ನು ಚಿತ್ರಮಂದಿರದಲ್ಲಿ ನೋಡಬೇಕೆಂದು ಮಾಹಿತಿಗೆ ಲಾಕ್ ಹಾಕಿದರು. ಇದಕ್ಕೆ ಮಾದ್ಯಮದವರಿಂದ ಒರಾತ ಬಂದಾಗ ಒಂದಷ್ಟು ಸುದ್ದಿಯನ್ನು ನೀಡಿದರೂ, ಅದು ಸಹ ಮನದಟ್ಟು ಆಗಲಿಲ್ಲ. ಅವರು ಹೇಳುವಂತೆ. ಇಂದಿನ ಯುವ ಜನಾಂಗವು ಸಿಸ್ಟಮ್‍ನ್ನು ಹೇಗೆ ಸರಿಪಡಿಸಿಕೊಳ್ಳಬಹುದು. ನೇತಾಜಿ ಸುಭಾಸ್‍ಚಂದ್ರಬೋಸ್ ಹೇಳಿದ್ದನ್ನು ವಿವರವಾಗಿ ತಿಳಿಯಲು ಯುವಕರು ಅದನ್ನು ಸಂಶೋಧನೆ ನಡೆಸಲು ಹೋಗುತ್ತಾರೆ. ಆ ಸಮಯದಲ್ಲಿ ಅದು ಲಾಕ್ ಆಗುತ್ತದೆ. ಕತೆಯಲ್ಲಿ ಶೇಕಡ 15 ರಷ್ಟು ನೇತಾಜಿ ಅವರ ಬೋಧನೆ ಬಳಸಲಾಗಿದ್ದು, ಉಳಿದಂತೆ ಕಮರ್ಷಿಯಲ್ ಫಾರ್ಮೆಟ್‍ನಲ್ಲಿ ಇರಲಿದೆ. ಶಶಿಕುಮಾರ್ ಸುಬಾಸ್‍ಚಂದ್ರಬೋಸ್ ಆಗಿ ಕಾಣಿಸಿದ್ದಾರೆ. ಕನಕಪುರ, ಯಾಣ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಅಂತ ತಲೆಗೆ ಹುಳಬಿಟ್ಟರು.

1940 ರಿಂದ 2018ರ ವರೆಗಿನ ಯುವ ಜನಾಂಗವು ಯಾವ ಉದ್ದೇಶಕ್ಕೆ ಹುಡುಗಿಕೊಂಡು ಹೋಗುತ್ತಾರೆ. ಏತಕ್ಕಾಗಿ ಲಾಕ್ ಆಗುತ್ತಾರೆ . ಅದರ ತನಿಖೆಯಲ್ಲಿ ಯಾರ್ಯಾರು ಸೇರಿಕೊಂಡಿರುತ್ತಾರೆ. ಅದನ್ನು ಲಾಕ್‍ಔಟ್ ಮಾಡೋದು ಯಾವಾಗ ಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ ಅಂತ ಮತ್ತಷ್ಟು ಮಾಹಿತಿಯನ್ನು ಹಿನ್ನೆಲೆ ಸಂಗೀತ ಒದಗಿಸಿರುವ ವಿ.ರಾಘವೇಂದ್ರ ಬಿಚ್ಚಿಟ್ಟರು.

ಒರಟನಾಗಿ ಹುಡುಕಾಟದಲ್ಲಿ ತೊಡಗಿಕೊಂಡಿರುವ ಪಾತ್ರದಲ್ಲಿ ಅಭಿಲಾಷ್ ನಾಯಕ, ಎರಡು ರೀತಿಯಲ್ಲಿ ಕಾಣಿಸಿಕೊಂಡು ಅವನ ಹಿಂದೆ ಹೋಗುವ ಸೌಂದರ್ಯರಮೇಶ್ ನಾಯಕಿ, ದುರಳ ತನಿಖಾಧಿಯಾಗಿ ರಾಜ್‍ಹಿರೇಮಠ್, ಪೋಲೀಸ್ ಅಧಿಕಾರಿಯಾಗಿ ರಾಕ್‍ಸತೀಶ್, ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟ ಎಂ.ಕೆ.ಮಠ ಎಲ್ಲರು ನಿರ್ದೇಶಕರು ಕತೆ ಹೇಳದೆ ತಮ್ಮ ಪಾತ್ರವನ್ನಷ್ಟೇ ಮಾಡಿಸಿದ್ದ್ದರಿಂದ ನಾವುಗಳು ಅವರ ಅಧೀನದಲ್ಲಿ ಲಾಕ್ ಆಗಿದ್ದೇವೆಂಬ ಒಕ್ಕರೂಲ ಮಾತಾಗಿತ್ತು.
ಸಂಗೀತ ಎಂ.ಸಂಜೀವರಾವ್, ಛಾಯಗ್ರಹಣ ವಿನಯ್‍ಚಂದ್ರಪ್ರಸನ್ನ, ಸಂಕಲನ ಗೌತಮ್‍ನಾಯಕ್, ನೃತ್ಯ ಅಕುಲ್ ಅವರದಾಗಿದೆ. ನಿರ್ದೇಶಕರನ್ನು ನಂಬಿಕೊಂಡು ರೋಹಿತ್‍ಅಶೋಕ್‍ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/10/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore