HOME
CINEMA NEWS
GALLERY
TV NEWS
REVIEWS
CONTACT US
ಹೊಸಬರ ಲೈಟಾಗಿ ಲವ್ವಾಗಿದೆ
ುತ್ತರಕರ್ನಾಟಕ ಭಾಗದವರ ‘ಲೈಟಾಗಿ ಲವ್ವಾಗಿದೆ’ ಚಿತ್ರವೊಂದು ಸಜ್ಜುಗೊಂಡಿದೆ. ಜನಪದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದ ಗುರುರಾಜಗದಾಡಿ ಬದುಕಿಗಾಗಿಕಿರುಚಿತ್ರ ನಿರ್ದೇಶನ ಮಾಡಿದ್ದರು. ಈಗ ಸಿನಿಮಾಕ್ಕೆಕತೆ,ಚಿತ್ರಕತೆ ಬರೆದುಆಕ್ಷನ್‍ಕಟ್ ಹೇಳಿದ್ದಾರೆ ಮತ್ತು ಪಾಲುದಾರರು. ಹಾಡುಗಳಿಗೆ ತಾನು ಸಾಹಿತ್ಯರಚಿಸದೆಇತರೆ ಹೊಸ ಪ್ರತಿಭೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.ಪ್ರತಿಯೊಬ್ಬರ ಬದುಕಿನಲ್ಲಿ ಲೈಟಾಗಿ ಲವ್ ಆಗಿರುತ್ತದೆ.ಅದನ್ನು ಮರೆಯಲಿಕ್ಕೆ ಸಾದ್ಯವಿಲ್ಲ. ಪ್ರೀತಿ ಮಾಡಿದರೆ ಮೋಸ ಮಾಡೋದಲ್ಲ. ಅದನ್ನು ನಿಯತ್ತಾಗಿ ಮಾಡಬೇಕೆಂದು ಹೇಳಲಾಗಿದೆ. ಶೇಕಡ 90ರಷ್ಟು ಚಿತ್ರೀಕರಣವನ್ನು ಬೆಳಗಾಂ,ಕೊಪ್ಪಳ ಉಳಿದುದನ್ನು ಬೆಂಗಳೂರು, ಹಾಸನ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಸೆರೆಹಿಡಿಯಲಾಗಿದೆ. ನಾಲ್ಕು ಹಾಡುಗಳಿಗೆ ಆಕಾಶ್‍ಪರ್ವ ಸಂಗೀತವಿದೆ.

ಸರಿಗಮಪ ಸೀಸನ್ ಹನ್ನೊಂದರ ವಿಜೇತಚನ್ನಪ್ಪಹುದ್ದಾರÁಯಕ.ಕಿರುತೆರೆಯ ದಿವ್ಯವಾಗುಕರ ನಾಯಕಿ, ಶ್ವೇತಾಧಾರವಾಡಉಪನಾಯಕಿ.ಸಚ್ಚಿನ್‍ತಿಮ್ಮಯ್ಯಉಪನಾಯಕ.ತಾರಗಣದಲ್ಲಿ ಪ್ರದೀಪ್‍ತಿಪಟೂರು, ಅನ್ವಿತಾ, ಯಲ್ಲೇಶ್‍ಕುಮಾರ್, ಚೈತ್ರಾಹಿರೇಮಠ, ರತಿಕಾಗೋಕಾಕ್, ಅಂಕಿತಾ, ಸೋನಿ ಮುಂತಾದವರು ನಟಿಸಿದ್ದಾರೆ. ಆಯರ್‍ಸ್ವಾಮಿ ಸಂಕಲನ ಮಾಡುವಜೊತೆಗೆ ಸಂಭಾಷಣೆಗೆ ಪದಗಳನ್ನು ಪೋಣಿಸಿದ್ದಾರೆ.ಛಾಯಾಗ್ರಹಣ ಶಿವಪುತ್ರ-ವಿನೋಧ, ನೃತ್ಯ ಪವನ್-ನಾಗರಾಜ್, ಸಾಹಸ ರಾಜುಕೊಟ್ಯಾನ್‍ಅವರದಾಗಿದೆ. ನಾರ್ತ್‍ಕರ್ನಾಟಕಜನರನ್ನುಇಷ್ಟಪಡುವ ಲಹರಿವೇಲು ಹಾಡುಗಳ ಹಕ್ಕನ್ನು ಖರೀದಿಸಿದ್ದ್ದಾರೆ. ಇವರು ಹೊಸಬರಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದತಾನೇಕೆಇದನ್ನು ಮಾಡಬಾರದೆಂದು ಯೋಚಿಸಿದ ರಾಜಕುಮಾರಖ್ಯಾತಿಯ ನಿರ್ದೇಶಕ ಸಂತೋಷ್‍ಆನಂದ್‍ರಾಮ್‍ಆಡಿಯೋ ಸಿಡಿಯನ್ಜು ಲೋಕಾರ್ಪಣೆ ಮಾಡಿತಂಡಕ್ಕೆ ಶುಭ ಹಾರೈಸಿದ್ದಾರೆ.ಎನ್.ಆರ್.ರಜಪೂತ, ಕಿಶೋರ್‍ಭಟ್, ಶಫೀಕ್‍ಸನದಿ ಇವರುಗಳು ಜಂಟಿಯಾಗಿಹಣ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
30/09/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore