HOME
CINEMA NEWS
GALLERY
TV NEWS
REVIEWS
CONTACT US
ಲಂಬೋದರನ ದರ್ಶನ
ಬೆಂಗಳೂರಿನಲ್ಲಿ ತುಂಬಾ ಹಳೆಯದಾದ ಏರಿಯಾ ಬಸವನಗುಡಿ, ಮಲ್ಲೇಶ್ವರಂ ಎಂದು ಹಿರಿಯರು ಹೇಳಿದ್ದಾರೆ. ‘ಲಂಬೋದರ’ ಎನ್ನುವ ಸಿನಿಮಾದ ಕತೆಯು ಬಸವನಗುಡಿಯಲ್ಲಿ ನಡೆಯಲಿದೆ. ಕಾಲೇಜು ಮುಗಿಸಿದ ಯುವಕನೊಬ್ಬನ ಬದುಕು ಹೇಗಿರುತ್ತೆ, ಏನಾಗುತ್ತೆ. ಗೆಳೆಯರೊಂದಿಗೆ ತುಂಟತನಗಳನ್ನು ಮಾಡಿಕೊಂಡಿದ್ದ ಇವನ ದಾರಿಗೆ ಒಂದು ಹುಡುಗಿ ಪ್ರವೇಶವಾಗುತ್ತದೆ. ಅವಳಿಂದ ತನ್ನ ಗುಣವನ್ನು ಬದಲಿಸಿಕೊಂಡು, ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದೇ ಕತೆಯ ತಿರುಳಾಗಿದೆ. ಕತೆಗೆ ಪೂರಕವಾಗಿ ಹಳೆ ಏರಿಯಾ ಬೇಕಾಗಿದ್ದರಿಂದ ಬಸವನಗುಡಿಯನ್ನು ಉಪಶೀರ್ಷಿಕೆಯಾಗಿ ಬಳಸಲಾಗಿದೆಯಂತೆ. ಅದರಿಂದಲೇ ಅದೇ ಜಾಗದ ಸುತ್ತ ಮುತ್ತ ಸ್ಥಳಗಳು, ಕಡಳೆಕಾಯಿ ಪರಸೆ ನಡೆದ ಸಂದರ್ಭದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನಾಯಕನಾಗಿ ಲೂಸ್‍ಮಾದ ಯೋಗೇಶ್, ಎನ್‍ಜಿಓದಲ್ಲಿ ವ್ಯವಸ್ಥಾಪಕಿಯಾಗಿರುವ ಆಕಾಂಕ್ಷ ನಾಯಕಿ. ತರಲೆ ಮಾಡುವ ಗೆಳಯರುಗಳಾಗಿ ಧಮೇಂದ್ರ, ಸಿದ್ದುಮೂಲಿಮನೆ ಇವರೊಂದಿಗೆ ಅಚ್ಯುತಕುಮಾರ್, ಕಿರುತೆರೆ ನಟಿ ಭೂಮಿಕಶೆಟ್ಟಿ ತಾರಬಳಗದಲ್ಲಿ ಇದ್ದಾರೆ. ತಾಯಿ ಪಾತ್ರದಲ್ಲಿ ನಟಿಸಿರುವ ಅರುಣಾಬಾಲರಾಜ್ ದೃಶ್ಯದಲ್ಲಿ ಪೊರಕೆಯಿಂದ ಮಗನಿಗೆ ನೈಜವಾಗಿ ಹೊಡೆದಿದ್ದಾರಂತೆ. ನೋಡುಗರಿಗೆ ನಮ್ಮನೆಯಲ್ಲಿ ನಡೆಯುವಂತೆ ಸನ್ನಿವೇಶಗಳು ಇರುತ್ತದೆ. ಜಯಂತ್‍ಕಾಯ್ಕಣಿ, ಯೋಗರಾಜಭಟ್, ಗೌಸ್‍ಪೀರ್, ಹರ್ಷಪ್ರಿಯಾ ಸಾಹಿತ್ಯದ ಐದು ಹಾಡುಗಳಿಗೆ ಕಾರ್ತಿಕ್‍ಶರ್ಮ ಸಂಗೀತ ಸಂಯೋಜಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ಕೆ.ಕೃಷ್ಣರಾಜ್‍ಗೆ ಹೊಸ ಅನುಭವ. ಛಾಯಗ್ರಹಣ ಅರವಿಂದ್.ಎಸ್.ಕಶ್ಯಪ್, ಸಂಕಲನ ಹರೀಶ್.ಗಿರಿಗೌಡ, ಸಾಹರ ವಿಕ್ರಂಮೋರ್, ಸಂಭಾಷಣೆಗೆ ಶೈಲೇಶ್‍ರಾಜ್ ಪೆನ್ನು ಕೆಲಸ ಮಾಡಿದೆ. ಉಡುಪಿ ಮೂಲದ ರಾಘವೇಂದ್ರ.ಭಟ್-ವಿಶ್ವೇಶ್ವರ.ಪಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಜಯಣ್ಣ ಕಂಬೈನ್ಸ್ ಮುಖಾಂತರ 150 ಕೇಂದ್ರಗಳಲ್ಲಿ ಲಂಬೋದರ ಶುಕ್ರವಾರದಂದು ದರ್ಶನ ಮಾಡಲಿದ್ದಾನೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/01/19ಕಲಾವಿದರು ಸಂಘದಲ್ಲಿ ನೊಂದಣಿ ಆಗುವುದು ಒಳಿತು – ಎಸ್.ಎ.ಚಿನ್ನೆಗೌಡ
ಯಾವುದೇ ಹೊಸ, ಹಳೇ ಕಲಾವಿದರು ಚಿತ್ರರಂಗಕ್ಕೆ ಬಂದಲ್ಲಿ ಕಲಾವಿದರ ಸಂಘದಲ್ಲಿ ನೊಂದಣಿ ಮಾಡಿಸಿಕೊಂಡರೆ ಉಪಯೋಗವಾಗುತ್ತದೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ‘ಲಂಬೋದರ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಅನಾವರಣಗೊಳಿಸುತ್ತಾ ಕಿವಿಮಾತನ್ನು ಹೇಳಿದರು. ಕಳೆದವಾರ ಕಲಾವಿದರೊಬ್ಬರು ದೂರು ನೀಡಲು ಮಂಡಳಿಗೆ ಬಂದಿದ್ದರು. ವಿಷಯವನ್ನು ಪ್ರಸ್ತಾಪಿಸಲಾಗಿ ನೊಂದಣಿ ಮಾಡಿಸಿಲ್ಲವೆಂದು ಹೇಳಿದುದನ್ನು ನೆನಪಿಸಿಕೊಂಡು, ಯೋಗಿ ಬೆಳದ ಪರಿಯನ್ನು ವಿವರಿಸುತ್ತಾ ಸಿನಿಮಾಕ್ಕೆ ಶುಭ ಹಾರೈಸಿದರು.

ಕಳೆದ ವರ್ಷ ಇದೇ ತಿಂಗಳು ಮಹೂರ್ತ ಆಚರಿಸಿಕೊಳ್ಳಲಾಗಿತ್ತು. ಈಗ ಆಡಿಯೋ ಸಿಡಿ ಹೊರಬರುತ್ತಿರುವುದು ಖುಷಿಯಾಗಿದೆ. ಸಂಪೂರ್ಣ ಕಾಮಿಡಿಯಾಗಿದ್ದು, ಯೋಗಿ ಅವರಿಗೆ ಅಂತಲೇ ಕತೆ ಬರೆಯಲಾಗಿತ್ತು. ಅಡಿಬರಹದಲ್ಲಿ ಬಸವನಗುಡಿ ಬೆಂಗಳೂರು ಎಂದು ಹೇಳಲಾಗಿದ್ದು, ಸಿನಿಮಾವು ಇದೇ ಭಾಗದಲ್ಲಿ ನಡೆಯುತ್ತದೆ. ಎರಡು ಹಾಡುಗಳನ್ನು ಪುನೀತ್‍ರಾಜ್‍ಕುಮಾರ್, ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಕೇರಳದ ಅಂದ ಪ್ರತಿಭೆ ವೈಕಮ್‍ವಿಜಯಲಕ್ಷೀ ಟೈಟಲ್ ಸಾಂಗ್‍ಗೆ ಧ್ವನಿಯಾಗಿದ್ದಾರೆ ಎಂದು ನಿರ್ದೇಶಕ ಕೆ.ಕೃಷ್ಣರಾಜು ಮಾಹಿತಿ ನೀಡಿದರು.

ಮದುವೆಯಾಗಿ ಮೂರೇ ದಿನಕ್ಕೆ ನಿರ್ದೇಶಕರು ವರಾತ ಮಾಡಿ ಚಿತ್ರೀಕರಣಕ್ಕೆ ಕರೆಸಿಕೊಂಡರು. ಮೂರು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಮದ್ಯಮ ವರ್ಗದ ಪ್ರತಿಯೊಂದು ಮನೆಯಲ್ಲಿ ನಡೆಯುವ ಕತೆಯಾಗಿದೆ. ಆಗ ತಾನೇ ಕಾಲೇಜು ಮುಗಿಸಿ ಏನು ಐಡಿಯಾ ಇಲ್ಲದೆ ಯಾವ ರೀತಿ ಇರುತ್ತಾನೆಂದು ತೋರಿಸಲಾಗಿದೆ. ಹಾಡುಗಳು ಚೆನ್ನಾಗಿ ಬಂದಿರುವುದರಿಂದ ಮುಂದಿನ ಚಿತ್ರಕ್ಕೂ ಇದೇ ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಾರೆಂದು ನಾಯಕ ಯೋಗಿ ಹೇಳಿದರು.

ಗೆಳಯನನ್ನು ಗೊಂದಲಕ್ಕೆ ತಂದು ಹಾಕಿ ತಮಾಷೆ ನೋಡುವ ಪಾತ್ರದಲ್ಲಿ ನಟನೆ ಮಾಡಿರುವುದು ಧರ್ಮಣ್ಣ. ಗುಂಡು ಹಾಕುವವರಿಗೆ ‘ಓ ಮನಸೇ’ ಹಾಡು ಕಿಕ್ ಕೊಡುತ್ತದೆಂದು ಯೋಗಿ ತಂದೆ ಟಿ.ಪಿ.ಸಿದ್ದರಾಜು ಬಣ್ಣನೆ ಮಾಡಿದರು.

ಪುಟ್ಟಗೌರಿಮದುವೆ, ಕಿನ್ನರಿ ಧಾರವಾಹಿ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಮೊದಲ ಬಾರಿ ಕಮರ್ಷಿಯಲ್ ಚಿತ್ರಕ್ಕೆ ಅವಕಾಶ ಸಿಕ್ಕಿದೆ. ಓ ಮನಸೇ ಗೀತೆಯನ್ನು ಹಾಡಿದ್ದೇನೆಂದು ಕಾರ್ತಿಕ್‍ಶರ್ಮ ಸಂತಸ ಹಂಚಿಕೊಂಡರು.

ಸಾಹಿತಿ ಹರ್ಷಪ್ರಿಯಾ, ಸಂಕಲನಕಾರ ಹರೀಶ್, ಕರಿಸುಬ್ಬು, ನಿರ್ಮಾಪಕರಲ್ಲಿ ಒಬ್ಬರಾದ ಉಡುಪಿಯ ರಾಘವೇಂದ್ರಭಟ್ ಚುಟುಕು ಮಾತನಾಡಿದರು. ನಾಯಕಿ ಆಕಾಂಕ್ಷ ಪೋಸ್ಟರ್‍ನಲ್ಲಿ ಕಾಣಿಸಿಕೊಂಡರು.
ಸಿನಿ ಸರ್ಕಲ್.ಇನ್ ನ್ಯೂಸ್
22/12/18

ಲಂಬೋದರನ ಆಟಾಟೋಪಗಳು
ಬೆಂಗಳೂರಿನಲ್ಲಿ ತುಂಬಾ ಹಳೆಯದಾದ ಏರಿಯಾ ಬಸವನಗುಡಿ, ಮಲ್ಲೇಶ್ವರಂ ಎಂದು ಹಿರಿಯರು ಹೇಳಿದ್ದಾರೆ. ‘ಲಂಬೋದರ’ ಎನ್ನುವ ಸಿನಿಮಾದ ಕತೆಯು ಬಸವನಗುಡಿಯಲ್ಲಿ ನಡೆಯಲಿದೆ. ಕಾಲೇಜು ಮುಗಿಸಿದ ಯುವಕನೊಬ್ಬನ ಬದುಕು ಹೇಗಿರುತ್ತೆ, ಏನಾಗುತ್ತೆ. ಗೆಳೆಯರೊಂದಿಗೆ ತುಂಟತನಗಳನ್ನು ಮಾಡಿಕೊಂಡಿದ್ದ ಇವನ ದಾರಿಗೆ ಒಂದು ಹುಡುಗಿ ಪ್ರವೇಶವಾಗುತ್ತದೆ. ಅವಳಿಂದ ತನ್ನ ಗುಣವನ್ನು ಬದಲಿಸಿಕೊಂಡು, ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದೇ ಕತೆಯ ತಿರುಳಾಗಿದೆ. ಕತೆಗೆ ಪೂರಕವಾಗಿ ಹಳೆ ಏರಿಯಾ ಬೇಕಾಗಿದ್ದರಿಂದ ಬಸವನಗುಡಿಯನ್ನು ಉಪಶೀರ್ಷಿಕೆಯಾಗಿ ಬಳಸಲಾಗಿದೆಯಂತೆ. ಅದರಿಂದಲೇ ಅದೇ ಜಾಗದ ಸುತ್ತ ಮುತ್ತ ಸ್ಥಳಗಳು, ಕಡಳೆಕಾಯಿ ಪರಸೆ ನಡೆದ ಸಂದರ್ಭದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎರಡು ಹಾಡುಗಳು ಬಾಕಿ ಇರಲಿದ್ದು, ಸದ್ಯದಲ್ಲೆ ಅದನ್ನು ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ.

ನಾಯಕನಾಗಿ ಲೂಸ್‍ಮಾದ ಯೋಗೇಶ್, ಎನ್‍ಜಿಓದಲ್ಲಿ ವ್ಯವಸ್ಥಾಪಕಿಯಾಗಿರುವ ಆಕಾಂಕ್ಷ ನಾಯಕಿ. ತರಲೆ ಮಾಡುವ ಗೆಳಯರುಗಳಾಗಿ ಧಮೇಂದ್ರ, ಸಿದ್ದು ಇವರೊಂದಿಗೆ ಅಚ್ಯುತಕುಮಾರ್, ಕಿರುತೆರೆ ನಟಿ ಭೂಮಿಕಶೆಟ್ಟಿ ತಾರಬಳಗದಲ್ಲಿ ಇದ್ದಾರೆ.
ಜಯಂತ್‍ಕಾಯ್ಕಣಿ, ಯೋಗರಾಜಭಟ್, ಗೌಸ್‍ಪೀರ್, ಹರ್ಷಪ್ರಿಯಾ ಸಾಹಿತ್ಯದ ಐದು ಹಾಡುಗಳಿಗೆ ಕಾರ್ತಿಕ್‍ಶರ್ಮ ಸಂಗೀತ ಸಂಯೋಜಿಸಿದ್ದಾರೆ. ರಚನೆ, ನಿರ್ದೇಶನ ಮಾಡಿರುವ ಕೆ.ಕೃಷ್ಣರಾಜ್‍ಗೆ ಹೊಸ ಅನುಭವ. ಸಂಕಲನ ಹರೀಶ್.ಗಿರಿಗೌಡ, ಸಾಹರ ವಿಕ್ರಂಮೋರ್, ಸಂಭಾಷಣೆಗೆ ಶೈಲೇಶ್‍ರಾಜ್ ಪೆನ್ನು ಕೆಲಸ ಮಾಡಿದೆ. ಉಡುಪಿ ಮೂಲದವರಾದ ರಾಘವೇಂದ್ರ.ಭಟ್-ವಿಶ್ವೇಶ್ವರ.ಪಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
26/06/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore