HOME
CINEMA NEWS
GALLERY
TV NEWS
REVIEWS
CONTACT US

LENSMEN NAGESH, MANU, MOKSHENDRA TURN CINEMATOGRAPHERS
L
ensmen K N Nagesh Kumar, R Manohar and K S Mokshendra on Sunday created history by becoming the first photojournalists in Kannada cinema to can some actual visuals using the motion camera for the film Phalitamsha. The footage shot by these photojournalists will be used in the movie which is the final stage of production.  Choreographer M R Kapil has turned director for the first time with Phalitamsha.       

Senior actor Jaijagadish, who is in his 40th year of filmdom, debuted in Puttanna Kanagal’s namesake film Phalitamsha in 1976. Jaijagadish is making a special appearance in the 2016 movie under Kapil’s direction. The actor celebrated his 62nd birthday on Sunday and a special cake was cut to mark the occasion on the sets of Phalitamsha by the team.

Jaijagadish has acted in more than 300 Kannada films and is a well-known producer in Kannada cinema. He is currently producing Yaana, a film that will launch his three daughters together. The film is being directed by his actress-wife Vijayalakshmi Singh. 
-20/06/16

“ಫಲಿತಾಂಶ”ದಲ್ಲಿ ಕೆಲಸ ಮಾಡಿದ ಮೂವರು ಸಿನಿಮಾ ಫೊಟೋಗ್ರಾಫರ್
ಪುಟ್ಟಣ್ಣ ಕಣಗಾಲ್‍ರ ನಿರ್ದೇಶನದಲ್ಲಿ ಮೂಡಿಬಂದಿದ್ದ ಫಲಿತಾಂಶ ಚಿತ್ರದ ಹೆಸರು 4 ದಶಕಗಳ ನಂತರ ಮತ್ತೊಮ್ಮೆ ಸ್ಯಾಂಡಲ್‍ವುಡ್‍ನಲ್ಲಿ ಹರಿದಾಡುತ್ತಿದೆ. ಹೊಸ ಕಾನ್ಸೆಪ್ಟ್‍ನೊಂದಿಗೆ ನಿರ್ಮಾಣವಾಗುತ್ತಿರುವ ಈ ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಆ ಚಿತ್ರದಲ್ಲಿ ನಟಿಸಿದ್ದ ಜೈ ಜಗದೀಶ್ ಈ ಚಿತ್ರದಲ್ಲೂ ಗೌರವ ಕಲಾವಿದರಾಗಿ ಕಾಣ ಸಿಕೊಂಡಿದ್ದಾರೆ. ಇದರ ಮತ್ತೊಂದು ವಿಶೇಷ ಎಂದರೆ ಸಿನಿಮಾ ಪತ್ರಿಕಾ ಛಾಯಾಗ್ರಾಹಕರಾದ ಕೆ.ಎನ್.ನಾಗೇಶ್ ಕುಮಾರ್, ಮನು ಹಾಗೂ ಕೆ.ಎಸ್.ಮೋಕ್ಷೇಂದ್ರ ಅವರು ಈ ಚಿತ್ರದಲ್ಲಿ ನಟ ಜೈಜಗದೀಶ್ ಚಿತ್ರದ ಮುನ್ನುಡಿ ಹೇಳುವ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಆಗಿನ ಕಾಲದ ಮಕ್ಕಳು ಹೇಗೆಲ್ಲಾ ಓದಿ ಉತ್ತಮ ಫಲಿತಾಂಶ ಪಡೆಯುತ್ತಿದ್ದರು. ಈಗಿನ ಕಾಲದ ಮಕ್ಕಳು ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಏಕೆ ವಿದ್ಯೆಯಲ್ಲಿ ಹಿಂದುಳಿದಿದ್ದಾರೆ, ಅವರು ಹೇಗೆಲ್ಲಾ ಇರಬೇಕು ಎಂದು ಹೇಳುವಂತಹ ದೃಶ್ಯವದು. ಈ ದೃಶ್ಯದೊಂದಿಗೆ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿತು. ಇದೇ ಸಂದರ್ಭದಲ್ಲಿ ಹಿರಿಯ ನಟ ಜೈಜಗದೀಶ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಕೆ.ಎಫ್.ಸಿ. ಪ್ರೋಡಕ್ಷನ್ ಸಂಸ್ಥೆಯಲ್ಲಿ ಪಿ.ಕಿಶೋರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ರಾಘ ರಮಣ ಸಂಗೀತ, ಪ್ರಸನ್ನ ಛಾಯಾಗ್ರಹಣ, ಸುಶೀಲ್ ಬಾಬು ಚಿತ್ರಕಥೆ ಮತ್ತು ಸಂಭಾಷಣೆ, ಶ್ರೀ ಜೌಳಿ ಸಂಕಲನ, ಡಾ.ದೊಡ್ಡರಂಗೇಗೌಡ, ಡಾ.ಭರತ್ ದೊಡ್ಡರಂಗೇಗೌಡ, ಉದಯಲೇಖ ಸಾಹಿತ್ಯವಿದೆ. ಜೈಜಗದೀಶ್, ವಿಕ್ಟರಿ ವಾಸು, ಗುಬ್ಬಿ ನಟರಾಜ್, ಭಾಗ್ಯಶ್ರೀ, ಸುಶೀಲ್ ಬಾಬು, ಶಂಕರ್ ಭಟ್, ರಾಮು ಕಣಗಾಲ್, ಗೀರಿಶ್, ದೀಪ್ತಿ, ಉಮಾಶಂಕರ್, ಅಪೂರ್ವ, ಮೀನಾಕ್ಷಿ, ಮಂಜುಳ, ಸುಚೇಂದ್ರ ಪ್ರಸಾದ್, ಕು.ಸೌಂದರ್ಯ, ಕೃಷ್ಣವೇಣ , ಪೂಜಾ, ಮಾ.ಭರತ್, ಮಾ.ತೇಜಸ್, ಮಾ.ಹೇಮಂತ್, ಮುಂತಾದವರ ತಾರಾಬಳಗವಿದೆ.
-20/06/16
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\