HOME
CINEMA NEWS
GALLERY
TV NEWS
REVIEWS
CONTACT US

ಸುಯೋಧನ ದುರ್ಯೋಧನ ಆದ ಕಥನ
ಕಮರ್ಷಿಯಲ್ ಚಿತ್ರಗಳನ್ನು ಮಾಡುವುದು ಸುಲಭ. ಅದೇ ಪೌರಾಣಿಕ ಸಿನಿಮಾ ಮಾಡಬೇಕಾದರೆ ಸಾಕಷ್ಟು ಸಿದ್ದತೆಬೇಕು. ಆ ನಿಟ್ಟಿನಲ್ಲಿ ಶುಕ್ರವಾರ ತೆರೆಕಂಡಿರುವ ಅದ್ದೂರಿ ‘ಮುನಿರತ್ನ ಕುರುಕ್ಷೇತ್ರ’ ಚಿತ್ರವು ಇಡೀ ಭಾರತ ತಿರುಗಿ ನೋಡುವಂತೆ ಮಾಡಿದೆ. ಇಂದಿನ ತಂತ್ರಜ್ಘಾನ ಬಳಸಿಕೊಂಡು ಹೇಗೆ ಮೂಡಿಬಂದಿರುತ್ತದೆ ಎನ್ನುವ ಕುತೂಹಲಕ್ಕೆ ಎಳ್ಳಷ್ಟು ಬೇಸರ ತರಿಸದೆ ತೆರೆ ಮೇಲೆ ಕಾಣಿಸಿಕೊಂಡಿರುವುದು ನಿಜಕ್ಕೂ ತಂಡದ ಶ್ರಮವನ್ನು ಮೆಚ್ಚಲೆ ಬೇಕಾಗಿದೆ. ಭಾನುಮತಿ ಸ್ವಯಂವರ, ಭೀಮ-ದುರ್ಯೋಧನರ ಗದಾಯುದ್ದ, ದ್ರೌಪದಿ ವಸ್ತ್ರಾಭರಣ ಮತ್ತು ಕುರುಕ್ಷೇತ್ರ ಯುದ್ದ ಇಡೀ ಚಿತ್ರದ ಹೈಲೈಟ್ ಆಗಿದೆ. ಪ್ರತಿಯೊಂದಕ್ಕೂ ಅದರದ್ದೆ ಆದ ಮಹತ್ವ ಇದೆ. ಅದರಲ್ಲೂ ಇಡೀ ಚಿತ್ರ ಆವರಿಸಿಕೊಂಡಿರುವ ದುರ್ಯೋಧನ ಸಾಹಸ, ಪರಾಕ್ರಮದ ಅನಾವರಣ ಮಾಡಲಾಗಿದೆ. ಕುರುವಂಶದ ದೊರೆ ಈತನ ಸ್ವಾಭಿಮಾನ, ಸೇಡು, ಛಲ. ಸ್ನೇಹ ಪರಾಕ್ರಮವೇ ಮತ್ತೋಂದು ಮುಖ್ಯ ತಿರುಳು ಎನ್ನಬಹುದು. ದುರ್ಯೋಧನನಾಗಿ ದರ್ಶನ್ 50ನೇ ಚಿತ್ರವಾಗಿದ್ದರಿಂದ ದೇಹ ದಂಡಿಸಿ, ಶ್ರಮ ವಹಿಸಿರುವುದು ಪ್ರತಿ ದೃಶ್ಯದಲ್ಲಿ ಕಂಡು ಬರುತ್ತದೆ.

ಇವರ ನಂತರ ಕರ್ಣನ ಪಾತ್ರಧಾರಿ ಅರ್ಜುನ್‍ಸರ್ಜಾ ಚೆಂದದ ನಟನೆ ಗಮನ ಸೆಳಯುತ್ತದೆ. ಅಭಿಮನ್ಯುನಾಗಿ ಜೋರಾಗಿ ಎಂಟ್ರಿ ಕೊಡುವ ನಿಖಿಲ್‍ಕುಮಾರ್ ಯುದ್ದ ಮಾಡುವುದು ಅಲ್ಲದೆ ನಟನೆಯಲ್ಲಿ ಮಿಂಚಿದ್ದಾರೆ. ಮಹಾಭಾರತದಲ್ಲಿ ಹಿರಿಯ ವ್ಯಕ್ತಿ ಅಂತ ಗುರುತಿಸಿಕೊಂಡಿದ್ದು ಭೀಷ್ಮ. ಇದನ್ನು ನಿಭಾಯಿಸಿರುವುದು ಅಂಬರೀಷ್. ಶಕುನಿಯಾಗಿ ರವಿಶಂಕರ್ ಡೈಲಾಗ್ ಡಿಲಿವರಿ ನೋಡಲು, ಕೇಳಲು ಇಷ್ಟವಾಗುತ್ತದೆ. ಕೃಷ್ಣನಾಗಿ ರವಿಚಂದ್ರನ್ ಅವರನ್ನು ಗುರುತು ಹಿಡಿಯುವುದು ಕಷ್ಟ. ದ್ರೌಪದಿಯಾಗಿ ಸ್ನೇಹ, ಅರ್ಜುನನ ಪಾತ್ರಕ್ಕೆ ಸೋನುಸೂದ್, ಭೀಮನಾಗಿ ಡ್ಯಾನಿಷ್‍ಅಕ್ತರ್, ಉಳಿದಂತೆ ಭಾರತಿವಿಷ್ಣುವರ್ಧನ್, ಶ್ರೀನಿವಾಸಮೂರ್ತಿ, ಶ್ರೀನಾಥ್, ರಮೇಶ್‍ಭಟ್, ಪವಿತ್ರಾಲೋಕೇಶ್ ಮುಂತಾದವರು ಜೀವ ತುಂಬಿದ್ದಾರೆ. ಡಾ.ನಾಗೇಂದ್ರಪ್ರಸಾದ್ ಸಾಹಿತ್ಯ, ಕೆ.ಕಲ್ಯಾಣ್ ಪದ್ಯಗಳಿಗೆ ಮನಮಿಡಿಯುವಂತೆ ಸಂಗೀತವನ್ನು ವಿ.ಹರಿಕೃಷ್ಣ ಸಂಯೋಜಿಸಿದ್ದಾರೆ. ಇವರೆಲ್ಲರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ಅಭಿನಯ ತೆಗೆದುಕೊಂಡಿರುವ ನಿರ್ದೇಶಕ ನಾಗಣ್ಣ ಕ್ಯಾಪ್ಟನ್ ಪದಕ್ಕೆ ಅರ್ಥ ತುಂಬಿದ್ದಾರೆ. ಇವರೆಲ್ಲರ ಸಾಹಸಕ್ಕೆ ಧೈರ್ಯ ಮಾಡಿ ಬಂಡವಾಳ ಹೂಡಿರುವ ಗಟ್ಟಿಗರನ್ನು ಮೆಚ್ಚಲೇಬೇಕಾಗಿದೆ. ಪೌರಾಣಿಕ ಸಿನಿಮಾಗಳನ್ನು ಇಲ್ಲಿಯತನಕ ಮಿಸ್ ಮಾಡಿಕೊಂಡವರಿಗೆ ಇದೊಂದು ಸುವರ್ಣಾವಕಾಶ ಸಿಕ್ಕಿದೆ.
ನಿರ್ಮಾಣ: ಮುನಿರತ್ನ
ಸಿನಿ ಸರ್ಕಲ್.ಇನ್ ನ್ಯೂಸ್
****
9/08/19

ಮುನಿರತ್ನಕುರುಕ್ಷೇತ್ರಎರಡು ಚಿತ್ರಗಳು
ಅದ್ದೂರಿಚಿತ್ರ ‘ಮುನಿರತ್ನಕುರುಕ್ಷೇತ್ರ’ 2ಡಿ,3ಡಿಯಲ್ಲಿ ಇರುವುದರಿಂದಎರಡು ಬಾರಿ ನೋಡಬೇಕಾಗಿದೆಎಂದು ನಿರ್ಮಾಪಕ ಮುನಿರತ್ನ ಹೇಳಿದರು. ಅವರು ಬಿಡುಗಡೆ ಪೂರ್ವ ಸುದ್ದಿಗೊಷ್ಟಿಯಲ್ಲಿ ಮಾತನಾಡುತ್ತಾಎರಡನೇತಾರೀಖು ಬರಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ವರಮಹಾಲಕ್ಷೀ ಹಬ್ಬ ಶುಭದಿನವೆಂದು ಹಿತೈಷಿಗಳು ಸಲಹೆ ನೀಡಿದ್ದರಿಂದಒಂದು ವಾರ ಮುಂದಕ್ಕೆ ಹೋಗಲಾಗಿದೆ. ವಿತರಣೆಯನ್ನುರಾಕ್‍ಲೈನ್ ಸಂಸ್ಥೆಯು ವಹಿಸಿಕೊಂಡಿದೆ. 2ಡಿ,3ಡಿಯಲ್ಲಿ ಎರಡು ಸಲ ಚಿತ್ರೀಕರಣ ನಡೆಸಿ, ಡಬ್ಬಿಂಗ್ ಮಾಡಲಾಗಿದೆ. ಇದರಲ್ಲಿದರ್ಶನ್ ಶ್ರಮ ಜಾಸ್ತಿ ಇದೆ.ಅಂಬರೀಷ್ ಕೊನೆ ಚಿತ್ರವೆಂದು ಹೇಳಿಕೊಳ್ಳಲು ಬೇಸರವಾಗುತ್ತದೆ.ಮಹಾಭಾರತದಲ್ಲಿಒಬ್ಬೋರನ್ನುತೆಗೆದುಕೊಂಡರೂಕತೆ ಮಾಡಬಹುದು.ಪರಭಾಷಾ ಚಿತ್ರಗಳ ಎದುರು ನಾವುಗಳು ಪೈಪೋಟಿ ನಡೆಸಬೇಕಾಗಿದೆಎಂದರು.

ರಾಮಾಯಣ, ಮಹಾಭಾರತದಯಾವ ಪಾತ್ರದಲ್ಲರೂ ನಟಿಸಬೇಕೆಂಬ ಬಯಕೆಇದರಿಂದಕೈಗೂಡಿದೆ. ನಂತರಒಂದೇಟೇಕ್,ಶಾಟ್‍ನಲ್ಲಿ ಚಿತ್ರೀಕರಿಸಿದ ದೃಶ್ಯದಡೈಲಾಗ್‍ನ್ನು ಶಕುನಿಯಾಗಿ ಕಾಣಿಸಿಕೊಂಡಿರುವ ರವಿಶಂಕರ್ ಹೇಳಿದರು. ಶಲ್ಯ ಮಹಾರಾಜನಾಗಿ ಕಾಣಿಸಿಕೊಂಡಿದ್ದೇನೆ. ಎಲ್ಲಾ ಕಡೆಗಳಿಂದ ಬೇಡಿಕೆ ಬರುತ್ತಿರುವುದರಿಂದ ವಿತರಣೆ ಮಾಡಲುಕಷ್ಟವಾಗುತ್ತಿಲ್ಲ. 2ಡಿ,3ಡಿಯಲ್ಲಿ ಸಿದ್ದವಾಗಿರುವುದರಿಂದ ಎಲ್ಲರ ಕೆಲಸ ಜಾಸ್ತಿ ಇದೆ.ಮೊದಲ 3ಡಿ ಚಿತ್ರಚೋಟಾಚೇತನ್ ಸಿನಿಮಾವನ್ನುಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.ಅದರಂತೆಕುರುಕ್ಷೇತ್ರಆಗಲಿದೆ.ಪ್ರಸಕ್ತಯುವಜನಾಂಗಕ್ಕೆರಾಮಾಯಣ-ಮಹಾಭಾರತ ತಿಳಿದಿಲ್ಲ. ಇದನ್ನು ನೋಡಿದಾಗ ಮಕ್ಕಳಿಗೆ ಮುಂದೆಯೂಇದುಶಾಶ್ವತವಾಗಿ ಉಳಿಯುತ್ತದೆ.ಮೊದಲುಕನ್ನಡ-ತೆಲುಗು ಬಿಡುಗಡೆ ಮಾಡಲಾಗುವುದು.ಒಂದುವಾರಅಂತರದಂತೆ ತಮಿಳು, ಹಿಂದಿಯಲ್ಲಿಜನರಿಗೆತೋರಿಸಲುಯೋಜನೆ ಹಾಕಲಾಗಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಇಂದಿನಿಂದಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆಕಲ್ಪಿಸಲಾಗಿದೆಅಂತ ಶಲ್ಯ ಪಾತ್ರ ಮಾಡಿರುವರಾಕ್‍ಲೈನ್ ವೆಂಕಟೇಶ್ ಮಾತಾಗಿತ್ತು.

ಸುಯೋಧನದೃಷ್ಟಿಯಿಂದಕುರುಕ್ಷೇತ್ರ ಮುಖ್ಯ ಪಾತ್ರ ಹೋಗುತ್ತದೆ.ಸುಯೋಧನದುಯೋರ್ಧನ ಹೇಗೆ ಆಗುತ್ತಾನೆಂದುತೋರಿಸಲಾಗಿದೆ.ಅದ್ಬುತ ಮಹಾಕಾವ್ಯದಲ್ಲಿ ಕೆಲಸ ಮಾಡಿದ್ದು ಸಂತಸತಂದಿದೆ.ಮೆಜಸ್ಟಿಕ್ ನಿಂದಕುರುಕ್ಷೇತ್ರ ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದು ಹೆಮ್ಮೆ ಅನಿಸಿದೆ.ಎಂಬುದು ಸಾಹಿತ್ಯ, ಸಂಭಾಷಣೆ ರಚಿಸಿರುವ ಡಾ.ನಾಗೇಂದ್ರಪ್ರಸಾದ್ ನುಡಿ.

ನಿಜವಾದ ಹೀರೋ ನಿರ್ಮಾಪಕರು. ಅದ್ದೂರಿಚಿತ್ರಕ್ಕೆ ಹಣ ಹೂಡುವುದು ಸುಲಭದ ಮಾತಲ್ಲ. ಪ್ರತಿ ಪಾತ್ರದ ಲುಕ್ಕು, ಕಾಸ್ಟ್ಯೂಮ್‍ಎಲ್ಲವನ್ನುಅವರೇ ನೋಡಿದ್ದಾರೆ.ಈಗಿನ ತಲೆಮಾರಿಗೆದುಯೋರ್ಧನ, ಭೀಮಯಾರುಅಂತ ತಿಳಿದಿರುವುದಿಲ್ಲ. ನಾಗೇಂದ್ರಪ್ರಸಾದ್ ಸಂಭಾಷಣೆ ಪ್ರತಿ ಪಾತ್ರಕ್ಕೂ ಅಂಕ ಗಳಿಸಲು ಅವಕಾಶ ಸಿಕ್ಕಿದೆ.1970 ರಿಂದ 2019ರ ವರೆಗಿನಕಲಾವಿದರು ನಟನೆ ಮಾಡಿರುವುದು ವಿಶೇಷ, ಅಂಬಿಯಣ್ಣ ಬಣ್ಣ ಹಚ್ಚಿದ ಮೇಲೆ ಎಷ್ಟೇ ಕಷ್ಟ ಇದ್ದರೂ ಪಾತ್ರದಲ್ಲಿತಲ್ಲೀನರಾಗುತ್ತಿದ್ದರು.ಆಗ ಬಣ್ಣದ ಬೆಲೆ ತಿಳಿಯಿತು.ಚಿತ್ರದಲ್ಲಿದೊಡ್ಡವರು,ಚಿಕ್ಕವರುಅಂತ ನೋಡಬೇಡಿ. ಇಂತಹಚಿತ್ರಗೆದ್ದರೆ ನಿರ್ಮಾಪಕರು ಹುಟ್ಟಿಕೊಳ್ತಾರೆ.2ಡಿ, 3ಡಿ ಬೇರೆರೀತಿಇರುವುದರಿಂದಎರಡನ್ನು ಪ್ರತ್ಯೇಕವಾಗಿ ನೋಡಬೇಕು. ನಿರ್ಮಾಪಕರುಒಂದುಚಿತ್ರಕ್ಕೆ ಸಂಭಾವನೆ ನೀಡಿಎರಡು ಕೆಲಸ ಮಾಡಿಸಿಕೊಂಡಿದ್ದಾರೆಂದು ನಗುತ್ತಾಆರೋಪ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮುನಿರತ್ನ ಮಾತನಾಡಿಜನರ ಮೊದಲ ಟಿಕೆಟ್ ನಿರ್ಮಾಪಕರಿಗೆ, ಎರಡನೆಟಿಕೆಟ್‍ದರವನ್ನುದರ್ಶನ್‍ಕೊಡಲಾಗುವುದುಎಂದರು.
ಭೀಮನಾಗಿಡ್ಯಾನಿಷ್‍ಅಕ್ತರ್, ಅರ್ಜುನನಾಗಿ ಸೋನುಸೂದ್, ಭಾನುಮತಿಯಾಗಿ ಮೇಘನಾರಾಜ್, ದುಶ್ಯಾಸನರವಿಚೇತನ್, ದುಷ್ಟನಾಗಿ ವಾಸು, ಸಹದೇವನಾಗಿಯಶಸ್‍ಸೂರ್ಯ, ಭೀಮಡ್ಯಾನಿಅಕ್ತರ್, ಧರ್ಮರಾಯ ಶಶಿಕುಮಾರ್ ಹಾಜರಿದ್ದು ಸಂತಸ ಹಂಚಿಕೊಂಡರು. ನಿರ್ದೇಶಕ ನಾಗಣ್ಣ ನಡೆಸಿಕೊಟ್ಟ ಗೋಷ್ಟಿಯು ಮೆರುಗುತಂದುಕೊಟ್ಟಿತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/08/19
ಮುನಿರತ್ನ ಕುರುಕ್ಷೇತ್ರ ಒಂದು ವಾರ ಮುಂದೂಡಿಕೆ
2019ರ ಅದ್ದೂರಿ ‘ಮುನಿರತ್ನ ಕುರುಕ್ಷೇತ್ರ’ ಚಿತ್ರವು ಆಗಸ್ಟ್ 2ರಂದು ಬಿಡುಗಡೆಯಾಗುವುದಾಗಿ ಸಿದ್ದತೆಗಳನ್ನು ರಾಕ್‍ಲೈನ್ ವೆಂಕಟೇಶ್ ಮಾಡಿಕೊಂಡಿದ್ದರು. ಈಗ ಬಂದಿರುವ ಮಾಹಿತಿಯಂತೆ ಸಿನಿಮಾವು ಒಂದು ವಾರ ಕಾಲ ಮುಂದೂಡಿದೆ. ಅಂದರೆ ಆಗಸ್ಟ್ 9ರಂದು 2ಡಿ,3ಡಿಯಲ್ಲಿ ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ನಿರ್ಮಾಪಕ, ಶಾಸಕ ಮುನಿರತ್ನ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಂದ ಪುಣೆ ಹೋಟೆಲ್‍ದಲ್ಲಿ ಇತರೆ ಶಾಸಕರೊಂದಿಗೆ ತಂಗಿದ್ದಾರೆ. ರಾಜಿನಾಮೆಯನ್ನು ಸ್ಪೀಕರ್ ರಮೇಶ್‍ಕುಮಾರ್ ಅಂಗೀಕರಿಸಲಿದ್ದಾರೆಂದು ಎಲ್ಲಾ ಅತೃಪ್ತ ಶಾಸಕರುಗಳು ಕಾಯುತ್ತಿದ್ದಾರೆ. ಅನಿವಾರ್ಯ ಕಾರಣಗಳಿಂದ ಮಂದೂಡಲಾಗಿದೆ. ಇದಕ್ಕಾಗಿ ದರ್ಶನ್ ಅಭಿಮಾನಿಗಳು ಬೇಸರ ಪಟ್ಟುಕೊಳ್ಳಬಾರದು. ವರಮಹಾಲಕ್ಷೀ ಹಬ್ಬದಂದು ಬರುವುದು ಖಚಿತವೆಂದು ನಿರ್ಮಾಪಕರು ಟ್ವೀಟ್ ಮಾಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
25/07/19
ಅಭಿಮಾನಿಯಿಂದಕುರುಕ್ಷೇತ್ರಟ್ರೈಲರ್ ಬಿಡುಗಡೆ
ಕೋರಮಂಗಳ ಒಳಾಂಗಣದಲ್ಲಿ ‘ಕುರುಕ್ಷೇತ್ರ’ ಚಿತ್ರದಆಡಿಯೋ ಬಿಡುಗಡೆಗೊಂಡಿತು. ನಿರ್ಮಾಪಕ ಮುನಿರತ್ನ ಪ್ರಾರಂಭದಲ್ಲಿ ಮಾತನಾಡಿಕನ್ನಡಚಿತ್ರರಂಗದಲ್ಲಿಎಲ್ಲಾ ಕಲಾವಿದರುಗಳನ್ನು ಒಟ್ಟಿಗೆ ನೋಡುವ ಅವಕಾಶ ಇದರಲ್ಲಿಜನರಿಗೆ ಸಿಗಲಿದೆ. ಬಾಹುಬಲಿ ಚಿತ್ರವು ವಿಶ್ವದಾದ್ಯಂತ ಹೆಸರು ಮಾಡಿತ್ತು.ಆ ಸಂದರ್ಭದಲ್ಲಿಇಂತಹುದೆಚಿತ್ರಯಾಕೆ ಮಾಡಬಾರದೆಂದು ಅನಿಸಿದ್ದೆ ಇಲ್ಲಿಯವರೆಗೂತಂದಿದೆ.ಭೀಷ್ಮನ ಪಾತ್ರ ಮಾಡಿರುವಅಂಬರೀಷ್ ಸಹಕಾರವನ್ನು ಎಂದಿಗೂ ಮರೆಯಲಾಗದು.ಕನ್ನಡಚಿತ್ರರಂಗಅಂದರೆಕುರುಕ್ಷೇತ್ರ, ಈ ಸಿನಿಮಾಇರುವವರೆಗೂ ಭೀಷ್ಮನ ನೆನಪು ಇದ್ದೇಇರುತ್ತದೆ. ವಿಶ್ವದಾದ್ಯಂತ ವಿತರಣೆಯನ್ನುರಾಕ್‍ಲೈನ್ ಸಂಸ್ಥೆಯು ವಹಿಸಿಕೊಂಡಿದೆ.ಆಗಸ್ಟ್ 2ರಂದು ನಮ್ಮ ಭಾಷೆ ಸೇರಿದಂತೆತೆಲುಗು, ಹಿಂದಿ, ತಮಿಳು ಮತ್ತು ಮಲೆಯಾಳಂದಲ್ಲಿ ಬಿಡುಗಡೆಯಾಗಲಿದೆಎಂದರು.

ಹಲವು ವರ್ಷಗಳ ಇಂತಹಅದ್ದೂರಿ, ಅದ್ಬುತ ಸಿನಿಮಾ ಬರುತ್ತಿದೆ. ಧೀಮಂತ ನಿರ್ಮಾಪಕರು, ಎಲ್ಲಕ್ಕಿಂತ ಹೆಚ್ಚಾಗಿ ದುಯೋಧನನಾಗಿ ಕಾಣಿಸಿಕೊಂಡಿರುವ ದರ್ಶನ್‍ಅಭಿನಯವನ್ನುಎನ್‍ಟಿಆರ್‍ಗೆ ಹೋಲಿಸಬಹುದೆಂದುದ್ರೋಣಚಾರ್ಯನಾಗಿ ಕಾಣಿಸಿಕೊಂಡಿರುವ ಶ್ರೀನಿವಾಸಮೂರ್ತಿ ಹೇಳಿದರು.ನಲವತ್ತೈದು ದಿನಗಳ ಕಾಲ ಎಲ್ಲಾ ಪಾತ್ರಧಾರಿಗಳೊಂದಿಗೆ ನಟನೆ ಮಾಡಿದ್ದು ಖುಷಿ ನೀಡಿದೆ.ಇದೊಂದುದಾಖಲೆಚಿತ್ರವಾಗಲಿ ಎಂಬುದು ವಿಧುರನಾಗಿರುವರಮೇಶ್‍ಭಟ್ ಮಾತಾಗಿತ್ತು.

ಸಾಹೋರೆಪದದ್ರಾವಿಡ ಭಾಷೆಯಾಗಿದ್ದುದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಕನ್ನಡದ ಸೊಗಡು, ಹಳೆಗನ್ನಡ, ಸಂಸ್ಕ್ರತಇರುವುದು ವಿಶೇಷವಾಗಿದೆ.ದರ್ಶನ್‍ಅವರ 50 ಸಿನಿಮಾಗಳ ಪೈಕಿ ಅವರ ಮೊದಲ ಸಿನಿಮಾದಿಂದಇಲ್ಲಿಯವರೆಗಿನ ಚಿತ್ರಗಳಿಗೆ ಶೇಕಡ 99ರಷ್ಟು ಸಾಹಿತ್ಯನನ್ನದಾಗಿದೆ. ಮುಂದೇ ನೂರನೇಚಿತ್ರಕ್ಕೂ ಬರೆಯುವ ಆಸೆ ಇದೆ. ಸಾಹಿತ್ಯದ ವಿದ್ಯಾರ್ಥಿಯಾಗಿದ್ದರಿಂದಇಂತಹ ಪದಗಳನ್ನು ಬರೆಯಲು ಸಾಧ್ಯವಾಯಿತುಎಂಬುದುಡಾ.ನಾಗೇಂದ್ರಪ್ರಸಾದ್ ನುಡಿ. ರಕ್ತಕಣ್ಣೀರು, ಅನಾಥರುಚಿತ್ರಕ್ಕೆ ನಿರ್ದೇಶನ ಮಾಡಲು ಅವಕಾಶ ನೀಡಿದ್ದ ನಿರ್ಮಾಪಕರು ನಮ್ಮಂತವರನ್ನುಚೆನ್ನಾಗಿ ನೋಡಿಕೊಂಡಿದ್ದರು. ಪ್ರತಿಯೊಂದು ಪಾತ್ರಗಳು ಕಣ್ಣಿಗೆತಂಪುಕೊಡುತ್ತದೆ.ಕೈಮಾಕ್ಸ್‍ಗದಾಯುದ್ದ ನೋಡುವುದೇಚೆಂದಎಂದು ಸಾಧುಕೋಕಿಲ ಬಣ್ಣನೆ ಮಾಡಿದರು.

ನಿನ್ನೆಯತನಕಆಮುರ್ಗಂ, ಇನ್ನು ಮುಂದೆ ಶಕುನಿ ಮಾಮಎಂದುಕರೆಯುತ್ತಾರೆ. ಎಲ್ಲರಿಗೂರಾಮಾಯಣ-ಮಹಾಭಾರತಇಲ್ಲದೆ ಬಾಲ್ಯವಿಲ್ಲ. ಅದರಂತೆ ನನಗೂ ಆಗಿದೆ. ಕಲಾವಿದರಕುಟುಂಬದಿಂದ ಬಂದವನಾಗಿದ್ದರಿಂದ ನಟನೆ ಮಾಡಲು ಸುಲಭವಾಯಿತು.ಡ.ರಾಜ್‍ಕುಮಾರ್, ಎನ್‍ಟಿಆರ್, ಶಿವಾಜಿಗಣೇಶನ್ ಅವರಅಭಿನಯವನ್ನು ನೋಡಿ ಬೆಳದವನು. ಶಕುನಿ ಯಾಕೆ ಹೀಗಾದ, ಯಾವಕಾರಣಕ್ಕಾಗಿಎಂಬುದನ್ನು ಹೇಳಲಾಗಿದೆ. ಗಾಂಧಾರರಾಜನ ಬೆನ್ನುಮೂಳೆಯಿಂದ ಪಗಡೆಯನ್ನು ಮಾಡಲಾಗಿರುವುದರಿಂದಇದಕ್ಕೆ ವಿಶೇಷವಿದೆಎನ್ನುತ್ತಾಚಿತ್ರದಡೈಲಾಗ್‍ನ್ನುರವಿಶಂಕರ್ ಹೇಳಿದರು.

ಕುರುಕ್ಷೇತ್ರದಲ್ಲಿಇಲ್ಲಿಯವರೆಗೂಯಾರೂಹೇಳದ ಭಾಗವನ್ನುತೋರಿಸಲಾಗಿದೆ.ಗಾಂಧಾರರಾಜ್ಯದ ಮೇಲೆ ಯುದ್ದಯಾಕೆ ನಡೀತು. ಶಕುನಿ ಕೌರವರನ್ನು ನಾಶ ಮಾಡಲುಕಾರಣವೇನು?ಎಲ್ಲವನ್ನು ಸವಿವರವಾಗಿತೆರೆದಿಟ್ಟಿದೆಎಂದುಗಾಂಧಾರರಾಜನಾಗಿ ಅಭಿನಯಿಸಿರುವ ಅವಿನಾಶ್ ಮಾಹಿತಿ ಹರಿಬಿಟ್ಟರು.ಪಾಂಡವರುಗಳಾದ ಶಶಿಕುಮಾರ್, ಸೋನುಸೂದ್, ಡ್ಯಾನಿಷ್‍ಅಕ್ತರ್, ಯಶಸ್‍ಸೂರ್ಯ, ದುಶ್ಯಾಸನಆಗಿರುವರವಿಚೇತನ್‍ಇನ್ನು ಮುಂತಾದವರು ಆಗಮಿಸಿ ಖುಷಿ ಹಂಚಿಕೊಂಡರು. ಹರಿಪ್ರಿಯಾ ಹೆಜ್ಜೆ ಹಾಕಿ ರಸದೌತಣ ನೀಡಿದರು.

ಅವಸಾನದಲ್ಲಿಕೃತಕಆನೆಯಲ್ಲಿವೇದಿಕೆಗೆ ಆಗಮಿಸಿದ ದರ್ಶನ್‍ಚಿತ್ರದಕುರಿತಂತೆಒಂದಷ್ಟು ವಿಷಯಗಳನ್ನು ಬಿಚ್ಚಿಟ್ಟರು. ಭಕ್ತ ಪ್ರಹ್ಮಾದದಲ್ಲಿತಂದೆಯವರು ನಟಿಸಿದ್ದ ಪಾತ್ರಇಷ್ಟವಾಗಿತ್ತು.1970ರಿಂದ 2018ರ ವರೆಗಿನಎಲ್ಲಾಕಲಾವಿದರು ನಟಿಸಿದ್ದಾರೆ.ನನ್ನೊಬ್ಬನಿಂದಕುರುಕ್ಷೇತ್ರಆಗಿಲ್ಲ. ಎಲ್ಲರ ಶ್ರಮ ಸೇರಿಕೊಂಡಿದೆ.ನನಗೆ ಅಭಿಮಾನಿಗಳೇ ಸೆಲೆಬ್ರಟಿಗಳು ಎಂದುಒಬ್ಬರನ್ನುಕರೆದುಅವರಿಂದಲೇಟ್ರೈಲರ್ ಬಿಡುಗಡೆ ಮಾಡಿಸಿ ಎಲ್ಲರ ಸಹಕಾರಇರಲೆಂದುಕೋರಿದರು.ನಿಖಿಲ್‍ಕುಮಾರ್‍ಗೈರು ಹಾಜರಿಗೆಕಾರಣ ತಿಳಿಯಲಿಲ್ಲ.
ಸಿನಿ ಸರ್ಕಲ್.ಇನ್ ನ್ಯೂಸ್
11/07/19

ರೆಬಲ್ ಧರಿಸಿದ್ದ ಕಾಸ್ಟ್ಯೂಮ್ ಸಂರಕ್ಷಣೆ
ರೆಬಲ್‍ಸ್ಟಾರ್ ಅಂಬರೀಷ್ ‘ಕುರುಕ್ಷೇತ್ರ’ ಚಿತ್ರದಲ್ಲಿ ಭೀಷ್ಮನಾಗಿ ಕಾಣಸಿಕೊಂಡಿದ್ದು, ಅಲ್ಲದೆ ನಿರ್ಮಾಪಕರಿಗೆ ತೊಂದರೆಯಾಗಬಾರದೆಂದು ತಮ್ಮ ಪಾತ್ರಕ್ಕೆ ಕಂಠದಾನ ಮಾಡಿದ್ದರು. ಇದಕ್ಕೂ ಮುನ್ನ ನಿರ್ಮಾಪಕ ಮುನಿರತ್ನ ಅವರಿಗಾಗಿಯೇ ವಿಶೇಷ ಬಗೆಯ ವಸ್ತ್ರಗಳು, ಆಭರಣಗಳನ್ನು ಸಿದ್ದಗೊಳಿಸಲು ನಿರ್ದೇಶಕ ನಾಗಣ್ಣರಿಗೆ ಹೇಳಿದ್ದರು. ಈಗ ಚಿತ್ರವು ವರಮಹಾಲಕ್ಷೀ ಹಬ್ಬದಂದು ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ಏಕ ಕಾಲಕ್ಕೆ ತೆರೆಕಾಣುತ್ತಿದೆ. ಅಂಬರೀಷ್ ಕೊನೆಯ ಸಿನಿಮಾ ಎಲ್ಲರ ನೆನಪಿನಲ್ಲಿ ಉಳಿಯಲಿ ಎಂಬ ಕಾರಣಕ್ಕಾಗಿ ಅವರು ಧರಿಸಿದ್ದ ಕಾಸ್ಟ್ಯೂಮ್‍ನ್ನು ಸಂರಕ್ಷಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಚೈನಾ ಕಂಪೆನಿಯೊಂದರ ಜೊತೆ ಮಾತು ಕತೆ ನಡೆಸಿದ್ದಾರೆ. ರೆಬಲ್ ಪ್ರತಿಮೆಯನ್ನು ತಯಾರಿಸಿ, ಅದಕ್ಕೆ ಭೀಷ್ಮ ಪಾತ್ರದ ಕಾಸ್ಟ್ಯೂಮ್ ಹಾಕಲಾಗುತ್ತದೆ. ಸದರಿ ಪ್ರತಿಮೆಯನ್ನು ಕಂಠೀರವ ಸ್ಟುಡಿಯೋದ ಅವರ ಸಮಾಧಿ ಬಳಿ ಪ್ರದರ್ಶನಕ್ಕೆ ಇಡುವ ವ್ಯವಸ್ಥೆ ಮಾಡಲಾಗುವುದು. ಅಂತೂ ಚಂದನವನದ ನಟರೊಬ್ಬರ ಪ್ರತಿಮೆಯೊಂದು ಸಿಲಿಕಾನ್ ಸ್ಟ್ರಕ್ಚರ್‍ದಲ್ಲಿ ಸಿದ್ದಗೊಳ್ಳುತ್ತಿರುವುದು ಮೊದಲು ಎನ್ನಬಹುದು.
ಸಿನಿ ಸರ್ಕಲ್. ಇನ್ ನ್ಯೂಸ್
25/05/19
ಮುನಿರತ್ನ ಕುರುಕ್ಷೇತ್ರಕ್ಕೆ ಬಿಡುಗಡೆ ಭಾಗ್ಯ
ಸೆಟ್ಟೇರಿದ ದಿನದಿಂದಲೂ ಸಾಕಷ್ಟು ಸುದ್ದಿ ಮಾಡಿದ ಅದ್ದೂರಿ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೂ ವರಮಹಾಲಕ್ಷೀ ಹಬ್ಬದೆಂದು ತೆರೆ ಕಾಣುತ್ತಿದೆ. ವಿಳಂಬವಾಗಿರುವುದಕ್ಕೆ 3ಡಿ ಕಾರಣವಾಗಿದೆ. ಸಾಮಾಜಿಕ ಸಿನಿಮಾವನ್ನು 3ಡಿ ಮಾಡುವುದು ಸುಲಭ. ಆದರೆ ಪೌರಾಣಿಕ ಚಿತ್ರಕ್ಕೆ ಇದನ್ನು ಮಾಡಲು ಶ್ರಮ, ಸಮಯ ಜಾಸ್ತಿ ತೆಗೆದುಕೊಂಡಿದೆ. ದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಅರ್ಜುನ್‍ಸರ್ಜಾ, ರವಿಚಂದ್ರನ್, ಮೇಘನಾರಾಜ್, ನಿಖಿಲ್‍ಕುಮಾರಸ್ವಾಮಿ, ಸೋನುಸೂದ್, ಸ್ನೇಹ, ಮೇಘನಾರಾಜ್ ಮುಂತಾದವರ ದೊಡ್ಡ ತಾರಬಳಗವಿದೆ. ಭೀಷ್ಮನಾಗಿ ಅಂಬರೀಷ್ ಇಷ್ಟಪಟ್ಟು ನಟಿಸಿ, ಡಬ್ ಮಾಡಿದ ಕೊನೆ ಸಿನಿಮಾವಾಗಿದೆ. ಹಿಂದಿ ಡಬ್ಬಿಂಗ್ , ಕನ್ನಡ ವಾಹಿನಿಗೆ ಹೀಗೆ ಪ್ರತ್ಯೇಕವಾಗಿ ಒಂಬತ್ತು ಕೋಟಿ, ಇಲ್ಲಿನ ಭಾಷೆಯ ಆಡಿಯೋ ಹಕ್ಕುಗಳಿಗೆ ಲಹರಿ ಸಂಸ್ಥೆ ಒಂದೂವರೆ ಕೋಟಿ ನೀಡಿದೆ.

ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಡಬ್ಬಿಂಗ್ ಕಾರ್ಯ ಮುಗಿದಿದೆ. ತಾಂತ್ರಿಕ ಕಾರಣಗಳಿಂದ ತಡವಾಗಿದೆ ಹೂರತುಪಡಿಸಿದರೆ ಬೇರೆ ಯಾವುದೇ ತೊಂದರೆಗಳು ಆಗಿರುವುದಿಲ್ಲ. ಏನೇ ಆದರೂ ವರಮಹಾಲಕ್ಷೀ ಹಬ್ಬಕ್ಕೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡುವುದು ಖಚಿತವೆಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಅಂದೇ ಸುದೀಪ್ ಅಭಿನಯದ ಪೈಲ್ವಾನ್ ಬರುತ್ತಿದೆ ಎಂದರೆ, ಅದು ನಮ್ಮ ಭಾಷೆಯ ಚಿತ್ರ. ಎರಡು ಕಡೆ ಗೃಹಪ್ರವೇಶ ನಡೆಯುತ್ತಿದೆ. ಬೆಳಗಿನ ಆಟ, ಮಧ್ಯಾಹ್ನದ ಷೋ ಎಂದು ಎರಡು ಚಿತ್ರಗಳನ್ನು ನೋಡುತ್ತಾರೆ. ಎರಡು ಕನ್ನಡ ಸಿನಿಮಾಗಳು ಬರುತ್ತಿದೆ. ಇದನ್ನು ಸ್ಪರ್ಧೆ ಅಂತ ಬಣ್ಣಿಸುವುದು ಬೇಡವೆಂದು ಮಾದ್ಯಮದ ಪ್ರಶ್ನಗೆಳಿಗೆ ಉತ್ತರವಾದರು. ಇದೇ ಸಂದರ್ಭದಲ್ಲಿ ನಿರ್ದೇಶಕ ನಾಗಣ್ಣ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಸಂಕಲನಕಾರ ಜೋನಿಹರ್ಷ ಉಪಸ್ತಿತರಿದ್ದು ಚುಟುಕು ಮಾತನಾಡಿದರು. ಲಹರಿವೇಲು ಜುಲೈ ಒಂಬತ್ತಕ್ಕೆ ಆಡಿಯೋ ರಿಲೀಸ್ ಎಂದು ಹೇಳಿದರು.
ಚಿತ್ರಗಳು: ಕೆ.ಎನ್.ನಾಗೇಶ್ ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
20/05/19


ಕೃಷ್ಣನಾಗಿ ರವಿಚಂದ್ರನ್ ಫಸ್ಟ್ ಲುಕ್
ಮಹಾಭಾರತದಲ್ಲಿ ಕೃಷ್ಣ ಪಾತ್ರ ಮುಖ್ಯವಾಗಿರುತ್ತದೆ. ಇದರ ಕುರಿತು ಯಾವುದೇ ಚಿತ್ರ ಬಂದಲ್ಲಿ ಕೃಷ್ಣನ ಪಾತ್ರವು ಇರುತ್ತದೆ. ಅದರಂತೆ ಅದ್ದೂರಿ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ಕೃಷ್ಣನಾಗಿ ರವಿಚಂದ್ರನ್ ಕಾಣ ಸಿಕೊಳ್ಳುತ್ತಾರೆಂದು ಮಹೂರ್ತ ಸಂದರ್ಭದಲ್ಲಿ ನಿರ್ಮಾಪಕ ಮುನಿರತ್ನ ಮಾಹಿತಿ ನೀಡಿದ್ದರು. ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದರೂ ಕ್ರೇಜಿಸ್ಟಾರ್‍ನ ಲುಕ್ ಹೇಗಿರುತ್ತದೆಂದು ತಂಡವು ಬಿಟ್ಟುಕೊಟ್ಟಿರಲಿಲ್ಲ. ಜನವರಿ ಐದಕ್ಕೆ ಕುಂಬಳಕಾಯಿ ಒಡೆಯಲಿದ್ದು, ಮಾರ್ಚ್ 10ಕ್ಕೆ ಬಿಡುಗಡೆಯಾಗಲಿದ್ದು, ಅಭಿಮಾನಿಗಳಿಗೆ ರವಿಚಂದ್ರನ್ ಕೃಷ್ಣನಾಗಿ ಹೇಗೆ ಕಾಣಸಿಕೊಳ್ಳುತ್ತಾರೆಂದು ಅವರು ನಿಂತಿರುವ ಪೋಟೋಗಳು ವೈರಲ್ ಆಗಿದೆ. ಅಂತೂ ಇಷ್ಟು ದಿವಸ ದಾಡಿ, ಮೀಸೆಯಲ್ಲಿ ನೋಡಿದ್ದ ರವಿ ಅವರನ್ನು ಹೊಸ ಲುಕ್‍ನಲ್ಲಿ ನೋಡಲು ಚೆಂದ ಕಾಣ ಸುತ್ತದೆ.
-31/12/17
ಕುರುಕ್ಷೇತ್ರಕ್ಕೆ ಚಿತ್ರಕ್ಕೆ ಇಬ್ಬರು ನಿರ್ದೇಶಕರು – ಮುನಿರತ್ನ
ಅದ್ದೂರಿ ವೆಚ್ಚದ ‘ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ನಾಗಣ್ಣ, ಡಾ.ವಿ.ನಾಗೇಂದ್ರಪ್ರಸಾದ್ ಇಬ್ಬರು ನಿರ್ದೇಶಕರು ಅಂತ ಸ್ಪಷ್ಟಪಡಿಸುತ್ತಾರೆ ನಿರ್ಮಾಪಕ ಮುನಿರತ್ನ. ಅವರು ಮಾದ್ಯಮದೊಂದಿಗೆ ಮಾತನಾಡುತ್ತಾ ಕನ್ನಡ ಚಿತ್ರರಂಗವನ್ನು ಬೇರೆ ಭಾಷೆಯುವರು ನೋಡುವಂತ ಸಿನಿಮಾ ಮಾಡಲಾಗುತ್ತಿದೆ. ಏಕಕಾಲಕ್ಕೆ ಫೈಟು, ನೃತ್ಯ, ಟಾಕಿ ಭಾಗದ ಚಿತ್ರೀಕರಣವನ್ನು ನಾಲ್ಕು ಕಡೆಗಳಲ್ಲಿ ಚಿತ್ರೀಕರಿಸಲಾಗುತ್ತಿದೆ. ಇದನ್ನು ಗಣನೆಗೆ ತೆಗೆದುಕೊಂಡರೆ 500 ದಿನಗಳ ಕಾಲ ಶೂಟಿಂಗ್ ಆಗಿದೆ ಎನ್ನಬಹುದು. ನಮ್ಮ ಪಕ್ಕದಲ್ಲೆ ಬಾಹುಬಲಿ ಸೆಟ್ ಇದೆ. ಅಲ್ಲಿನ ಸ್ಥಳವನ್ನು ಉಪಯೋಗಿಸಿಕೊಂಡಿಲ್ಲ. ನಮ್ಮದೆ ಶ್ರೀಮಂತಿಕೆಯಿಂದ ಕೂಡಿರುವಾಗ ಅಲ್ಲಿಗೆ ಯಾಕೆ ಹೋಗಬೇಕು. ಕೇವಲ ಒಂದರೆಡು ಏಕರೆಯಲ್ಲಿ ಇಡೀ ಚಿತ್ರದ ಸೆಟ್ ಹಾಕಿ ಬಾಹುಯಬಲಿಯನ್ನು ತೋರಿಸಿದ್ದಾರೆ. ಕುರುಕ್ಷೇತ್ರ ಚಿತ್ರಕ್ಕೆ ನಾನಾ ಕಡೆಗಳಲ್ಲಿ ದೊಡ್ಡ ಮಟ್ಟದ ಸೆಟ್, ಅದರಲ್ಲೂ ದರ್ಬಾರ್ ಹಾಲ್ ನೋಡುವುದಕ್ಕೆ ಚೆಂದ ಕಾಣ ಸುತ್ತದೆ. ಕಲಾವಿದರುಗಳು ಕಷ್ಟಪಡಪಾರದೆಂದು ಎಸಿ ಹಾಕಿಸಲಾಗಿದ್ದು, 365 ಡಿಗ್ರಿ ಇರುವುದು ಮತ್ತೋಂದು ವಿಶೇಷ. ಇಂದು ಅಂಬಾರಿ ಮೇಲೆ ದರ್ಶನ್ ಕೂತು ಹೋಗುವ ದೃಶ್ಯ ಇದೆ. ಇದನ್ನು ಸರಿಯಾಗಿ ಮಾಡಿದ್ದಾರಾ ಅಂತ ಖುದ್ದಾಗಿ ಅಂಬಾರಿ ಮೇಲೆ ಕುಳಿತುಕೊಂಡು ಪರೀಕ್ಷಿಸಲಾಗಿದೆ.

ದರ್ಶನ್ ಕಾಸ್ಟ್ಯೂಮ್, ಒಡವೆ, ಕಿರೀಟ ಸೇರಿದರೆ 50 ಕೆ.ಜಿ ಇದೆ. ಆದರೂ ಅವರು ಬೇಸರ ಮಾಡಿಕೊಳ್ಳದೆ ಅಭಿನಯಿಸಿರುವುದು ಅವರ ದೊಡ್ಡ ಗುಣ. ಐದು ತಿಂಗಳು ಯಾವುದೇ ವಿವಾದ ನಡೆಯದೆ ಚಿತ್ರೀಕರಣ ಸಾಗಿದೆ. ನಾಲ್ಕು ಗಂಟೆಗಳ ಕಾಲ ನಿದ್ರೆಗೆ ಜಾರುತ್ತೇನೆ. ಶಂಕರ್‍ನಾಗ್ ನನಗೆ ಪ್ರೇರಣೆಯಾಗಿದ್ದಾರೆ. ಒಮ್ಮೆ ಅವರು ಸುದ್ದಿಮೂಲ ಪತ್ರಿಕೆಗೆ ಸಂದರ್ಶನ ನೀಡುವಾಗ ಇದೇ ಮಾತನ್ನು ಹೇಳಿದ್ದರು. ಅದನ್ನು ಓದಿದ ಬಳಿಕ ಅವರಂತೆ ನಡೆದುಕೊಳ್ಳುತ್ತಿದ್ದೇನೆ. ಭೀಗರಾದ ರಾಕ್‍ಲೈನ್‍ವೆಂಕಟೇಶ್, ಮೊಮ್ಮಗಳು ನಟಿಸಿದ್ದಾರೆ. ಜನವರಿ 5ಕ್ಕೆ ಕುಂಬಳಕಾಯಿ, ಮಾರ್ಚ್ 10ಕ್ಕೆ ಬಿಡುಗಡೆಯಾಗಲಿದೆ. ಚಿತ್ರರಂಗಕ್ಕೆ ಭಾಷೆ ಇಲ್ಲ. ಚಿತ್ರಗಳಿಗೆ ಭಾಷೆ ಇದೆ ಅಂತ ಅಭಿಪ್ರಾಯಪಟ್ಟರು ಶಾಸಕ, ನಿರ್ಮಾಪಕ ಮುನಿರತ್ನ.
-31/12/17


ಯಾರ ಸ್ವರೂಪವನ್ನು ಯಾರು ಬದಲಿಸಲಿಕ್ಕೆ ಆಗದು - ದರ್ಶನ್
‘ಮುನಿರತ್ನ ಕುರುಕ್ಷೇತ್ರ’ ಶುರುವಾದಾಗಿನಿಂದ ದುಯೋರ್ಧನನಾಗಿ ದರ್ಶನ್ ಯಾರ ಕೈಗೂ ಸಿಕ್ಕಿರಲಿಲ್ಲ. ಶುಕ್ರವಾರ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡುವೆಯೂ ಮಾತಿಗೆ ಸಿಕ್ಕ ಅವರು ‘ಸಿನಿ ಸರ್ಕಲ್ ಡಾಟ್ ಇನ್’ ಜೊತೆ ಹಲವು ವಿಷಯಗಳನ್ನು ಹೇಳುತ್ತಾ ಪ್ರಶ್ನೆಗಳಿಗೆ ಉತ್ತರವಾದರು.

ಕುರುಕ್ಷೇತ್ರದಿಂದ ಚಿತ್ರದಿಂದ ಏನನ್ನು ಅರಿತುಕೊಂಡಿದ್ದೀರಿ?
ದ: (ನಗುತ್ತಾ) ತಾಳ್ಮೆ. ಸತತ ಐದು ತಿಂಗಳು ಒಂದೇ ಜಾಗದಲ್ಲಿ ತಂಗುವುದು ಅಂದರೆ ಸಾಮಾನ್ಯದ ಮಾತಲ್ಲ. ಪೌರಾಣ ಕ ಚಿತ್ರವೆಂದ ಮೇಲೆ ಸಾಕಷ್ಟು ಸಮಯ ಬೇಕಾಗುತ್ತದೆ. ಇದರಿಂದ ಸಹನೆ ಕಳೆದುಕೊಳ್ಳದೆ ತಾಳ್ಮೆಯಿಂದ ಕೆಲಸ ಮಾಡಿದ್ದೇನೆ.

ಈ ಸಿನಿಮಾದ ವಿಶೇಷತೆಗಳು ಏನಿದೆ?
ದ: 2ಡಿ, 3ಡಿ ಯಲ್ಲಿ ಚಿತ್ರೀಕರಣ, ಎರಡು ಬಾರಿ ಅಭಿನಯ, ಡಬ್ಬಿಂಗ್ ಮಾಡಬೇಕಾಗಿದೆ. 70,80,90 ತೆಲಮಾರಿನ ಕಲಾವಿದರನ್ನು ಒಂದೇ ತೆರೆ ಮೇಲೆ ನೋಡುವ ಅವಕಾಶ ಸಿಗುತ್ತದೆ.

ನಿಮ್ಮ ಎದುರಾಳಿ ಭೀಮನ ಜೊತೆ ಗದಾಯುದ್ದ ಸನ್ನಿವೇಶ ಹೇಗೆ ಮೂಡಿಬಂದಿದೆ
ದ: ಚಕ್ರವರ್ತಿ ಚಿತ್ರೀಕರಣ ಸಂದರ್ಭದಲ್ಲಿ ಒಮ್ಮೆ ಜಿಮ್‍ನಲ್ಲಿ 6.5 ಅಡಿ ಎತ್ತರದ ದಾನಿಶ್‍ಅಕ್ತರ್ ಅವರನ್ನು ನೋಡಿದಾಗ ಮೊದಲು ಅವರು ಬೌನ್ಸರ್ ಇರಬೇಕೆಂದು ಸುಮ್ಮನಾದೆ. ನಂತರ ಹಿಂದಿ ಧಾರಿವಾಹಿಯಲ್ಲಿ ಆಂಜನೇಯ ಪಾತ್ರ ಮಾಡಿರುವುದಾಗಿ ತಿಳಿದು ಭೀಮನ ಪಾತ್ರಕ್ಕೆ ಇವರೇ ಸೂಕ್ತವೆಂದು ಗೆರೆ ಏಳೆದೆ. ಮೊನ್ನೆ ಸೆಟ್‍ನಲ್ಲಿ ಅವರ 25 ವರ್ಷ ಹುಟ್ಟು ಹಬ್ಬವನ್ನು ಆಚರಸಿಲಾಯಿತು. ನಮ್ಮಿಬ್ಬರ ಯುದ್ದದ ಸನ್ನಿವೇಶ 8 ನಿಮಿಷ ಇರಬಹುದು.

ದರ್ಬಾರ್ ಹಾಲ್‍ನಲ್ಲಿ ಆದ ಅನಭವಗಳೇನು?
ದ: ಅದನ್ನು ಮರೆಯಲಿಕ್ಕೆ ಆಗುವುದಿಲ್ಲ. ಅಂಬಿ ಮಾಮ ಸೇರಿದಂತೆ ಘಟಾನುಘಟಿ ಕಲಾವಿದರು ಸೇರಿದ್ದರು. 30 ದಿನಗಳ ಕಾಲ ಶೂಟಿಂಗ್‍ನಲ್ಲಿ ಪಾಲ್ಗೋಂಡಿದ್ದೇವೆ. 360 ಡಿಗ್ರಿ ವಿಸ್ತಾರದಲ್ಲಿ ಸೆಟ್ ಅಲ್ಲದೆ ಎಸಿ ಇರುವುದು ಮತ್ತೋಂದು ವಿಶೇಷ.

ಚಿತ್ರೀಕರಣದಲ್ಲಿ ಮರೆಯಲಾಗದ ಘಟನೆಗಳು ಏನಾದರೂ ಇದೆಯೇ?
ದ: ಎಲ್ಲವು ಮರೆಯಲಾಗದ ಪ್ರಸಂಗಗಳು ಇವೆ. ಇದು ಕನ್ನಡ ಚಿತ್ರರಂಗದ ಮೈಲಿಗಲ್ಲಾಗಲಿದೆ. ಇದರಲ್ಲಿ ನಾನು ಭಾಗಿಯಾಗಿರುವುದು ಸುಕೃತ ಅನ್ನಬಹುದು.

ಪೌರಾಣ ಕ, ಐತಿಹಾಸಿಕ ಚಿತ್ರಗಳಿಗೆ ಆದ್ಯತೆ ಕೊಡುವುದಾಗಿ ಹೇಳಿದ್ದೀರಿ. ಇದರ ಬಗ್ಗೆ ನಿಮ್ಮ ಅನಿಸಿಕೆ;
ದ: ಕಮರ್ಷಿಯಲ್ ಸಿನಿಮಾವನ್ನು ಯಾರು ಬೇಕಾದರೂ ಮಾಡಬಹುದು. ಇಂತಹ ಚಿತ್ರಗಳನ್ನು ನಿರ್ಮಿಸಿಬೇಕಾದರೆ ದಮ್ ಇರಬೇಕು. ಇದನ್ನು ನಿರ್ಮಾಣ ಮಾಡುವವರು ಮುಂದೆ ಬಂದಲ್ಲಿ ಸರದಿಯಲ್ಲಿರುವ ನಿರ್ಮಾಪಕರನ್ನು ಪಕ್ಕಕ್ಕೆ ಇಟ್ಟು, ಇವರಿಗೆ ಮೊದಲು ಕಾಲ್‍ಶೀಟ್ ಕೊಡುತ್ತೇನೆ.

ಐದು ತಿಂಗಳಲ್ಲಿ ಶೂಟಿಂಗ್ ಮುಗಿಸಿದ್ದೀರಿ. ಇದರ ತಯಾರಿ ಹೇಗಿತ್ತು?

ದ: ಮುನಿರತ್ನ ಸರ್ ಒಮ್ಮೆ ಬಂದು ಕುರುಕ್ಷೇತ್ರ ಸಿನಿಮಾ ಮಾಡುತ್ತೇನೆ ಎಂದಾಗ ಮೊದಲು ನಂಬಲಾಗಲಿಲ್ಲ. ನಂತರ ಅವರು ಸೀರಿಯಸ್ ಅಂದಾಗ ಭಯ, ಖುಷಿ ಎರಡು ಒಮ್ಮೆಗೆ ಆಯಿತು. 2-3 ವರ್ಷಗಳ ಸಮಯ ಬೇಕಾಗುತ್ತದೆ. ನಿರ್ಮಾಪಕರು ಧೈರ್ಯ ತುಂಬಿದ್ದರಿಂದ ದೇಹಕ್ಕೆ ಕಸರತ್ತು ಕೊಟ್ಟು ಪಾತ್ರಕ್ಕೆ ಸಿದ್ದಗೊಂಡೆ.

ಪರ ಭಾಷ ಚಿತ್ರಗಳು ಈ ಸಿನಿಮಾ ಕುರಿತು ಏನು ಹೇಳುತ್ತಿದ್ದಾರೆ?
ದ: ಕೆಲವು ಇಲ್ಲಿನ ನಿರ್ಮಾಪಕ, ನಿದೇಶಕರುಗಳು ಸೆಟ್‍ಗೆ ಭೇಟಿ ಕನ್ನಡ ಚಿತ್ರರಂಗ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದಿಯಾ ಅಂತ ಅಚ್ಚರಿ ಆಗಿದ್ದಾರೆ. ಅವರುಗಳಿಗೆ ಬಿಡುಗಡೆ ನಂತರ ಇದರ ಬೆಲೆ ಏನೆಂದು ಗೊತ್ತಾಗುತ್ತದೆ.

ಈ ಚಿತ್ರಕ್ಕೆ ಹೆಚ್ಚಿನ ದಿನಾಂಕ ನೀಡಿರುವುದಾಗಿ ಸುದ್ದಿ ಇದೆ.
ದ: ಹೌದು. ಇಂತಹ ಚಿತ್ರಕ್ಕೆ ಇಂತಿಷ್ಟೇ ದಿನಾಂಕ ಅಂತ ಹೇಳಲಾಗುವುದಿಲ್ಲ. ನಿರ್ದೇಶಕರು ಹೆಚ್ಚಿನ ಡೇಟ್ಸ್ ಬೇಕು ಎಂದಾಗ ಇಲ್ಲ ಅನ್ನದೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ.

ಚಿತ್ರೀಕರಣದಲ್ಲಿ ನೀವು ಹೇಳಿದ ಡೈಲಾಗ್ ಪರಿ ಹೇಗಿತ್ತು?
ದ: ಒಂದು ಸನ್ನಿವೇಶದಲ್ಲಿ ಒಂದೂಮುಕ್ಕಾಲು ಪುಟದಷ್ಟು ಸಂಭಾಷಣೆಗಳನ್ನು ಒಂದೇ ಟೇಕ್ ಅದು ಹಳಗನ್ನಡದಲ್ಲಿ ಹೇಳಿದ್ದು ಖುಷಿ ತಂದಿದೆ. ನೀನಾಸಂದಲ್ಲಿ ಅಭಿನಯಿಸಿದ್ದು ಈಗ ಉಪಯೋಗವಾಗಿದೆ.

ಒಂದೇ ಜಾಗದಲ್ಲಿ ತಿಂಗಳುಗಟ್ಟಲೆ ಇರುವುದು ಬೇಜಾರು ಆಗಿದೆಯಾ?
ದ: ರಾಮೋಜಿ ರಾವ್ ಸ್ಟುಡಿಯೋ ಒಂಥರ ಜೈಲು ಇದ್ದಂಗೆ. ಕೆಲಸ ಮುಗಿದ ಬಳಿಕ ಹೋಟೆಲ್‍ಗೆ ಹೋದರೆ ಕನ್ನಡ ಹೂರತುಪಡಿಸಿ ಎಲ್ಲಾ ಭಾಷೆಯ ಚಾನಲ್‍ಗಳು ಬರುತ್ತದೆ. ಹಠಮಾಡಿ ಕನ್ನಡ ಚಾಲನ್‍ನ್ನು ಹಾಕಿಸಿಕೊಂಡೆ. ಗೆಳಯರು ಸಿಕ್ಕರೆ ಸಮಯ ಕಳೆಯಬಹುದು. ಇಲ್ಲದಿದ್ದಲ್ಲಿ ತುಂಬಾ ಕಷ್ಟವಾಗುತ್ತದೆ.

ನೆಗಟೀವ್ ಶೇಡ್ ದುಯೋರ್ಧನ ಪಾತ್ರವಾಗಿರುವುದರಿಂದ ನಿಮ್ಮ ಇಮೇಜ್‍ಗೆ ಧಕ್ಕೆಯಾಗುವುದಿಲ್ಲವೆ?
ದ: (ನಗುತ್ತಾ) ಚಿತ್ರರಂಗದಲ್ಲಿ ಯಾರ ಇಮೇಜ್‍ನ್ನು ಯಾರು ಬದಲಾಯಸಲಿಕ್ಕೆ ಸಾದ್ಯವಿಲ್ಲ. ಎಲ್ಲವು ವಿಧಿಬರಹ.
-31/12/17

ಕೊನೆ ಹಂತದಲ್ಲಿ ಮುನಿರತ್ನ ಕುರುಕ್ಷೇತ್ರ
ಆಗಸ್ಟ್ ತಿಂಗಳಲ್ಲಿ ಅದ್ದೂರಿಯಾಗಿ ಮಹೂರ್ತ ಆಚರಿಸಿಕೊಂಡ ಪೌರಾಣ ಕ ಚಿತ್ರ ’ಮುನಿರತ್ನ ಕುರುಕ್ಷೇತ್ರ’ ನಂತರ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಸಂಪೂರ್ಣ ಚಿತ್ರೀಕರಣವು ಹೈದಾರಬಾದ್‍ನಲ್ಲಿ ನಡೆಯುತ್ತಿದ್ದು, ಈಗ ಕೊನೆ ಹಂತಕ್ಕೆ ಬಂದಿದೆ. ಇದರನ್ವಯ ನಿರ್ಮಾಪಕರು ಮಾದ್ಯಮದವರನ್ನು ಸೆಟ್‍ಗೆ ಅಹ್ವಾನಿಸಿದ್ದರು. ಪತ್ರಕರ್ತರು ದೂರದ ರಾಮೋಜಿರಾವ್ ಸ್ಟುಡಿಯೋ ಚಿತ್ರೀಕರಣದ ಜಾಗಕ್ಕೆ ತಲುಪಿದಾಗ ದುರ್ಯೋಧನ ಪರಿಚಯದ ಹಾಡಿನ ಶೂಟಿಂಗ್ ನಡೆಯುತ್ತಿತ್ತು. ಸಾಹಾರೋ ಸಾಹೋ ಸುಯೋಧರ ಗೀತೆಯಲ್ಲಿ ಕಲಾವಿದರು, ಕುದರೆಗಳ ಜೊತೆಯಲ್ಲಿ ಅಂಬಾರಿ ಮೇಲೆ ದುಯೋರ್ಧನ ಕುಳಿತುಕೊಂಡು ಬರುವ ದೃಶ್ಯವನ್ನು ಸೆರೆಹಿಡಿಯಲು ತಾಲೀಮು ನಡೆಸುತ್ತಿದ್ದರು. ನಂತರ ದುಯೋಧನ ಪಾತ್ರ ಮಾಡುತ್ತಿರುವ ದರ್ಶನ್ ತಂಡಕ್ಕೆ ಸೇರಿಕೊಂಡು ಮೂರು ಬಾರಿ ಟೇಕ್ ತೆಗೆದುಕೊಂಡು, ಕೊನಗೆ ನಿರ್ದೇಶಕರಿಂದ ಹಸಿರು ನಿಶಾನೆ ಬಂದಾಗ ಸೆಟ್‍ನಲ್ಲಿ ಎಲ್ಲರಿಗೂ ನಿರಾಳವಾಯಿತು. .

ಡಾ.ರಾಜ್‍ಕುಮಾರ್ ಕಾಲದಲ್ಲಿ ಐತಿಹಾಸಿಕ,ಪೌರಾಣ ಕ ಸಿನಿಮಾಗಳು ಬಂದ ನಂತರ ದರ್ಶನ್ ಅವರ ಸಂಗೋಳ್ಳಿರಾಯಣ್ಣ ಬಂದಿತ್ತು. ಬೇರೆ ಭಾಷೆಯವರು ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತ ಸಿನಿಮಾ ಮಾಡಬೇಕೆಂಬ ಬಯಕೆ ಇತ್ತು. ಅದರಂತೆ ಈ ಸಾಹಕ್ಕೆ ಕೈ ಹಾಕಿದ್ದೇನೆ. ಇಲ್ಲಿನ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಮಾರುಕಟ್ಟೆ ಯಾವ ರೀತಿ ಮಾಡುತ್ತಿರಾ ಎಂದು ಕೇಳಿದ್ದಾರೆ. ಕನ್ನಡ ಚಿತ್ರರಂಗ ಸಣ್ಣದಾಗಿರುವುದರಿಂದ ಇದನ್ನು ಕೇಳಿರಬಹುದು. ಅವರುಗಳಿಗೆ ನಮ್ಮದು ದೊಡ್ಡದಿದೆ ಅಂತ ತೋರಿಸಲಾಗುವುದು. ಭೀಮನ ಪಾತ್ರ ಹೂರತುಪಡಿಸಿದರೆ ಎಲ್ಲರು ಕನ್ನಡದವರು ಅಂತ ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಚಿತ್ರದಲ್ಲಿ ಶೇಕಡ 40 ರಷ್ಟು ಗ್ರಾಫಿಕ್ಸ್ ಬರುವುದು. 2ಡಿ,3ಡಿ ಮಾದರಿಯಲ್ಲಿ ಬರುತ್ತಿರುವ ಕಾರಣ ಎರಡು ಬಾರಿ ಚಿತ್ರೀಕರಣ ನಡೆಸಬೇಕು. ಇದಕ್ಕಾಗಿ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಪ್ರಕೃತಿ ವಿಳಂಭದಿಂದ ಜನವರಿಗೆ ಬಿಡುಗಡೆ ಮಾಡುವುದು ತಡವಾಯಿತು. ಭೀಮ-ದುಯೋರ್ಧನ ಗಧಾ ಯುದ್ದದಲ್ಲಿ ದರ್ಶನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಲ್ಲಿಯವರೆವಿಗೂ ಯಾವುದೇ ಲೋಪ ಬಾರದಂತೆ ಕೆಲಸ ಮುಗಿದಿದೆ. ನಾಗಣ್ಣ, ಡಾ.ವಿ.ನಾಗೇಂದ್ರಪ್ರಸಾಧ್ ಇಬ್ಬರು ನಿರ್ದೇಶಕರು ಅಂತ ಹೇಳಬಹುದು. ಜನವರಿ ಐದಕ್ಕೆ ಕುಂಬಳಕಾಯಿ, ಫೆಬ್ರವರಿ ಎರಡರಂದು ಸೆನ್ಸಾರ್, ಮಾರ್ಚ್ ಐದಕ್ಕೆ ಜನರಿಗೆ ತೋರಿಸಲಾಗುವುದು ಇದು ಪಕ್ಕಾ ಎನ್ನುತ್ತಾರೆ ನಿರ್ಮಾಪಕ ಮುನಿರತ್ನ.
ಎಲ್ಲಾ ಕಲಾವಿದೆಗೂ ಪೌರಾಣ ಕ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇರುತ್ತದೆ. ಇಂದು ಕನಸು ನನಸಾಗಿದೆ. ದುಯೋರ್ಧನ ಹೆಂಡತಿ ಭಾನುಮತಿಯಾಗಿ ದರ್ಶನ್ ಅವರೊಂದಿಗೆ ಮೊದಲಬಾರಿ, ಅದರಲ್ಲೂ ಅವರ ಐವತ್ತನೆ ಸಿನಿಮಾದಲ್ಲಿ ನಟಿಸಿದ್ದು ಖುಷಿ ತಂದಿದೆ. ಪ್ರತಿ ದೃಶ್ಯಗಳು ಪೈಟಿಂಗ್ ತರಹ ಬಂದಿದೆ. ಹದಿನೈದು ದಿವಸ ಕೆಲಸ ಮಾಡಿದ್ದೇನೆ. ಧಿಮಾಕು, ಅಹಂ ರಾಜಕುಮಾರಿಯಾಗಿ ತನ್ನದೆ ಧೋರಣೆ ಇರುವ ಪಾತ್ರ. ರೋಮಾಂಟಿಕ್ ಹಾಡಿನಲ್ಲಿ ಕಾಣ ಸಿಕೊಂಡಿದ್ದು ಇಬ್ಬರಿಗೂ ಇದೇ ಮೊದಲಿರಬಹುದೆಂದು ದರ್ಶನ್ ಅವರನ್ನು ನೋಡುತ್ತಾ ಹೇಳಿದರು ಮೇಘನಾರಾಜ್. ಇಂತಹ ಸಿನಿಮಾದಲ್ಲಿ ಸೇರಿಕೊಂಡಿದ್ದು ಪುಣ್ಯದ ದಾರಿಗೆ ಸೇರಿದ್ದೇವೆ ಅನ್ನಬಹುದಾಗಿದೆ. ದರ್ಶನ್ ಅವರು ಬೆಳಿಗ್ಗೆ 5 ಗಂಟೆಗೆ ಎದ್ದು ಮೂರು ಗಂಟೆ ವ್ಯಾಯಮ ಮಾಡಿ ಪಾತ್ರಕ್ಕೆ ಸಿದ್ದರಾಗುತ್ತಿದ್ದರು. ಕ್ಲೈಮಾಕ್ಸ್‍ನ್ನು ಹದಿನಾರು ದಿವಸ ತೆಗೆಯಲಾಗಿದೆ. ಯುದ್ದ, ನೃತ್ಯ, ಅಭಿನಯ ಇವುಗಳನ್ನು ಏಕಕಾಲಕ್ಕೆ ಚಿತ್ರೀಕರಣ ನಡೆಸುತ್ತಿದ್ದು, ಆನ್‍ಲೈನ್ ಸಂಖಲನ ನಡೆಯುತ್ತಿದೆ. ಬೆಂಗಳೂರು, ಚೆನ್ನೈ, ಬಾಂಬೆ, ಕೇರಳ, ಹೈದರಾಬಾದ್ ಕಡೆಗಳಲ್ಲಿ ದೃಶ್ಯಗಳಿಗೆ ಗ್ರಾಫಿಕ್ಸ್‍ನ್ನು ಅಳವಡಿಸಲಾಗುತ್ತಿದೆ ಎಂಬುದರ ಮಾಹಿತಿ ಬಚ್ಚಿಟ್ಟರು ನಿರ್ದೇಶಕ ನಾಗಣ್ಣ.

ಪೌರಾಣ ಕ, ಐತಿಹಾಸಿಕ ಸಿನಿಮಾ ನಿರ್ಮಾಣ ಮಾಡುವವರಿಗೆ ಮೊದಲು ಆದ್ಯತೆ ನೀಡುತ್ತೇನೆ. ಮುಂದಿನ ತೆಲಮಾರಿನವರಿಗೆ ಭೀಮ, ದುಯೋರ್ಧನ ಯಾರೆಂದು ತಿಳಿದಿರುವುದಿಲ್ಲ. ಇಂತಹ ಚಿತ್ರಗಳು ಅವರಿಗೆ ಮಹಭಾರತ, ರಾಮಾಯಣ ಬಗ್ಗೆ ವಿಷಯಗಳು ಗೊತ್ತಾಗುತ್ತದೆ. ರಾಮೋಜಿರಾವ್ ಸ್ಟುಡಿಯೋ ಒಂಥರ ಜೈಲು ಇದ್ದಂತೆ. ಸಿನಿಮಾದಲ್ಲಿ ನಾವೆಲ್ಲಾ ನಿಮಿತ್ತ. ಎರಡು ಬಾರಿ ಡಬ್ಬಿಂಗ್ ಮಾಡಬೇಕಾಗಿದೆ. ನಾಗಣ್ಣ, ಜಾನ್‍ವಿನ್ಸೆಂಟ್ ಅದ್ಬುತವಾಗಿ ಕೆಲಸ ಮಾಡಿದ್ದಾರೆ. ನಿರ್ಮಾಪಕರು ಧೈರ್ಯ ಮಾಡಿ ಇಂತಹ ಸಾಹಸಕ್ಕೆ ಕೈ ಹಾಕಿದಾಗ ನಾವೆಲ್ಲರೂ ಸಹಕಾರ ನೀಡುವುದು ಕರ್ತವ್ಯವಾಗಿದೆ ಅಂತಾರೆ ದರ್ಶನ್.

ಕಾರ್ಯಕಾರಿ ನಿರ್ಮಾಪಕಿ ಜಯಶ್ರೀದೇವಿ, ದುಶ್ಯಾಸನ ಪಾತ್ರದಾರಿ ಚೇತನ್, ಭೀಮನಾಗಿರುವ ದಾನಿಶ್‍ಅಕ್ತರ್, ಗ್ರಾಫಿಕ್ಸ್ ದುರ್ಗಾಪ್ರಸಾದ್, ಛಾಯಗ್ರಾಹಕ ಜಾನ್‍ವೆನ್ಸಂಟ್, ಕಲಾ ನಿರ್ದೇಶಕ ಕಿರಣ್ ಉಪಸ್ತಿತರಿದ್ದರು.
-31/12/17


CHIEF MINISTER SIDDARAMAIAH LAUNCHES SHOOTING OF KURUKSHETRA
T
he big-budget film Kurukshetra was launched officially on Sunday by Chief Minister Siddaramaiah at Prabhakar Kore Convention Hall on Tumakuru Road. Challenging Star Darshan, Rebel Star Ambareesh, Crazy Star Ravi Chandran, Shashikumar, Arjun Sarja, Haripriya, Ravishankar, Nikhil Kumar Gowda, Chethan, Yashash and others were present on the occasion. Srinath and Ananth Nag, Srinivasamurthy are also acting in this film.

The shooting of Kurukshetra is scheduled to be held at Ramoji Film City. While MLA Munirathna is the producer, well-known producer Jayashree Devi is the executive producer. Naganna is the director.

Speaking with media persons, producer Munirathna said that he wanted to prove the capacity of Kannada film industry to other language film industries that are known making for big-budget films. “In the last 75 years, no one has made film on Mahabharatha in Kannada. I want to make it and prove that Kannada people also can make big-budget films. It will be Challenging Star Darshan’s 50th film. I happened to sound the clapboard for Darshan’s first film Majestic and never thought of doing his 50th film,’’ Munirathna said.

He said that he had selected Danish for Bheema role in Kurukshetra since he thought Danish would be right option to be on par with Duryodhana (Darshan) in Kurukshetra.

On the budget of the film, Munirathna said he was ready to provide whatever Kuruskhetra demands. On the absence of other artistes like Shivarajkumar, Puneeth Rajkumar, Upendra and Yash, he said all of them would have acted in this film if he had contacted them two years ago. “I decided to make this film two months ago. So, I do not want to disturb or trouble other producers who wanted to make Kannada films with Shivarajkumar, Puneeth Rajkumar, Upendra and Yash. I am trying to have almost all the artistes from Karnataka,’’ he said.

Speaking on the occasion, director Naganna said the shooting of the film will be held at Ramoji Film City for more than 100 days. “Arrangements are being made to commence the regular shooting from August 9. Around 16 different sets were put up at Ramoji Film City for the shooting of Kurukshetra. Every day shooting will be held at four different sets in the Ramoji Film Studio. CG work has already begun for this film,’’ director Naganna said.
-Cine Circle News
-5/08/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore