HOME
CINEMA NEWS
GALLERY
TV NEWS
REVIEWS
CONTACT US
`ಕೃಷ್ಣ ತುಳಸಿ' ಚಿತ್ರ ಸಂತೆಯಲ್ಲಿ
ಚಿತ್ರಕಲಾ ಪರಿಷತ್ತಿನ ಆಸುಪಾಸಲ್ಲೆಲ್ಲ ಚಿತ್ರಸಂತೆಯ ಸಂಭ್ರಮ, ಜನಸಾಗರ ನೆರೆದಿದೆ. ಕೃಷ್ಣ ತುಳಸಿ ಚಿತ್ರತಂಡ ಆ ಜನಸಾಗರದ ನಡುವೆಯೇ ಟೀಸರ್ ಬಿಡುಗಡೆ ಮಾಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದೆ.

ಸಂಚಾರಿ ವಿಜಯ್ ಮತ್ತು ಮೇಘಶ್ರೀ ಮುಖ್ಯಭೂಮಿಕೆಯಲ್ಲಿರೋ ಕೃಷ್ಣ ತುಳಸಿ ಚಿತ್ರ ತಂಡ ಚಿತ್ರ ಸಂತೆಗೆ ಬಂದಿದ್ದ ಜನರ ಸಮ್ಮುಖದಲ್ಲಿಯೇ ಟೀಸರ್ ಅನ್ನು ಅನಾವರಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಚಿತ್ರ ತಂಡ ಜನರ ಜೊತೆ ಬೆರೆತು ಸಂಭ್ರಮಿಸಿದೆ.
ಈ ಚಿತ್ರವನ್ನು ಸುಖೇಶ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಯೋಗರಾಜಭಟ್, ಜಯಂತ್‍ಕಾಯ್ಕಣಿ, ಹೃದಯಶಿವ ರಚಿಸಿರುವ ನಾಲ್ಕು ಹಾಡುಗಳಿಗೆ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯ ಛಾಯಗ್ರಾಹಕ ಮಾಪಾಕ್ಷಿ ಬಳಿ ಕೆಲಸ ಮಾಡಿರುವ ನವೀನ್.ಎಸ್.ಅಕ್ಷಿ ಚಿತ್ರಕ್ಕೆ ಕ್ಯಾಮೆರಾ ಕಣ್ಣಾಗಿದ್ದಾರೆ. ದೇವನಹಳ್ಳಿಯಲ್ಲಿ ರಿಯಲ್ ಎಸ್ಟೆಟ್ ನಡೆಸುತ್ತಿರುವ ಎಂ.ನಾರಾಯಣಸ್ವಾಮಿ ಪ್ರಥಮ ಅನುಭವ ಎನ್ನುವಂತೆ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಪರಿಚಯವಾಗುತ್ತಿದ್ದಾರೆ.

ಇದೀಗ ಈ ಚಿತ್ರ ವಿಭಿನ್ನವಾಗಿ ಬಿಡುಗಡೆಯಾಗಿರುವ ಟೀಸರ್ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದೆ.
-11/01/18
\
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore