HOME
CINEMA NEWS
GALLERY
TV NEWS
REVIEWS
CONTACT US
ಹೊಸ ಜಾನರ್ ಕುತೂಹಲದ ಸಿನಿಮಾ
ವಿನೂತನ ಟೈಟಲ್ ಇರುವ ‘ಕೃಷ್ಣ ಗಾರ್ಮೆಟ್ಸ್’ ಸಿನಿಮಾಗೆ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಸಿದ್ದ್ದುಪೂರ್ಣಚಂದ್ರ ಅವರ ಪ್ರಕಾರ ಇದು ಸೆಸ್ಪನ್ಸ್, ಥ್ರಿಲ್ಲರ್ ಆಗಿರದೆ, ಯಾವುದೇ ಜಾನರ್ ಸಿನಿಮಾಕ್ಕೆ ಸೀಮಿತವಾಗಿರುವುದಿಲ್ಲ. ಪ್ರೇಕ್ಷಕನಿಗೆ ಕೊನೆಯಲ್ಲಿ ಇದೊಂದು ಕುತೂಹಲದ ಚಿತ್ರ ಅನಿಸಿಬಹುದು. ನೋಡುಗರ ನಾಡಿ,ಮಿಡಿತ ಅರಿತುಕೊಂಡು ಕತೆಯನ್ನು ಬರೆಯಲಾಗಿದೆ. ಕೊನೆವರೆಗೂ ಗೊತ್ತಾಗದಂತೆ ನೋಡಿಸಿಕೊಂಡೇ ಹೋಗುತ್ತದೆ. ಪ್ರಾರಂಭದಿಂದ ಕ್ಲೈಮಾಕ್ಸ್‍ವರೆಗೂ ಎಲ್ಲಾ ಪಾತ್ರಗಳು ಪರಿಚಯವಾಗುತ್ತದೆ. ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ನಡೆಯುವ ಘಟನೆಯು ಉಪಕತೆಯಾಗಿ ಬರುತ್ತದೆ.

ಹಾಸನ, ಚನ್ನರಾಯಪಟ್ಟಣ, ಕನಕಪುರ,ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಭಾಸ್ಕರ್‍ನೀನಾಸಂ ನಾಯಕ. ಕಿರುತೆರೆ ನಟಿ ಚಿಕ್ಕಮಗಳೂರಿನ ರಶ್ಮಿತಾ ಕಾಲೇಜು ಹುಡುಗಿಯಾಗಿ ನಾಯಕಿ. ಮತ್ತೋಂದು ಮುಖ್ಯ ಪಾತ್ರದಲ್ಲಿ ರಾಜೇಶ್‍ನಟರಂಗ ಅಭಿನಯವಿದೆ. ಗಾರ್ಮೆಂಟ್ಸ್ ಮಾಲೀಕನಾಗಿ ಚಂದೂಗೌಡ ಖಳನಟ, ಉಳಿದಂತೆ ವರ್ಧನ್‍ತೀರ್ಥಹಳ್ಳಿ, ಕುಲ್‍ದೀಪ್, ರಜನಿಕಾಂತ್, ಕಿರಣ್‍ನಾಯಕ್ ಅಭಿನಯಿಸಿದ್ದಾರೆ. ಛಾಯಾಗ್ರಹಣ ಚಿದಾನಂದ್‍ಚಂದ್ರಶೇಖರ್. ಹಂಸಲೇಖಾ ಶಿಷ್ಯ ರಘುಧನ್ವಂತ್ರಿ ಮೂರು ಹಾಡುಗಳಿಗೆ ರಾಗ ಹೊಸೆದಿದ್ದು, ರಾಜೇಶ್‍ಕೃಷ್ಣನ್, ಮೆಹಬೂಬ್, ದೇಸಿಮೋಹನ್-ಶ್ವೇತಾದೇವನಹಳ್ಳಿ-ದಿವಾಕರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಪ್ರಶಾಂತ್‍ರಾವ್‍ವರ್ಕು ಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡರೆ, ಕೇಂದ್ರ ಸರ್ಕಾರಿ ಇಲಾಖೆಗೆ ಸಾಮಾನುಗಳನ್ನು ಸರಬರಾಜು ಮಾಡುವ ಷಣ್ಮುಗ.ಜಿ.ಬೆಂಡೀಗೇರಿ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
23/04/19
ಕೃಷ್ಣ ಗಾರ್ಮೆಂಟ್ಸ್ ಫಸ್ಟ್ ಲುಕ್
ಕಿರುತೆರೆಯಲ್ಲಿ ಅನುಭವ ಪಡೆದ ಮಂದಿಯ ಮುಂದಿನ ಪಯಣ ಆರಂಭವಾಗೋದು ಹಿರಿತೆರೆಯಲ್ಲಿ. ಅದು ನಟ-ನಟಿಯರು, ತಂತ್ರಜ್ಘರು ಸೇರಿಕೊಂಡಿ ಅದೃಷ್ಟ ಪರೀಕ್ಷೆಗೆ ಬರುತ್ತಾರೆ. ಅದರ ಸಾಲಿಗೆ ‘ಕೃಷ್ಣ ಗಾರ್ಮೆಂಟ್ಸ್’ ಚಿತ್ರವು ಒಂದಾಗಿದೆ. ಪ್ರೀತಿ ಮತ್ತು ಸೆಸ್ಪನ್ಸ್ ಥ್ರಿಲ್ಲರ್ ಕಥಾಹಂದರಲ್ಲಿ ಮನರಂಜನೆಯೇ ಮುಖ್ಯವಾಗಿದೆ. `ಶ್ರೀಮಾನ್ ಶ್ರೀಮತಿ` ಧಾರಾವಾಹಿ ಖ್ಯಾತಿಯ ಭಾಸ್ಕರ್‍ನೀನಾಸಂ ನಾಯಕ, `ಬ್ರಹ್ಮಾಸ್ತ್ರ` ಧಾರಾವಾಹಿಯ ರಶ್ಮಿತ ನಾಯಕಿ. ಇವರೊಂದಿಗೆ ರಾಜೇಶ್ ನಟರಂಗ, ಹೆಚ್.ಎಂ.ಟಿ ವಿಜಯ್,ರಾಮರಾವ್,ಪ್ರಮಿಳಾಸುಬ್ರಮಣ್ಯ,ವರ್ಧನ್‍ತೀರ್ಥಹಳ್ಳಿ, ಕಿರಣ್‍ಹೊನ್ನಾವರ ತಾರಾಬಳಗದಲ್ಲಿದ್ದಾರೆ.

ಮನೆಮಗಳು, ಯಶೋಧರ ಸೇರಿದಂತೆ ಹತ್ತಾರು ಧಾರವಾಹಿಗಳಗೆ ಆಕ್ಷನ್À ಕಟ್ ಹೇಳಿರುವ ಸಿದ್ದುಪೂರ್ಣಚಂದ್ರ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಘುಧನ್ವಂತ್ರಿ ಸಂಗೀತ, ಛಾಯಗ್ರಹಣ ಚಿದಾನಂದ್‍ಚಂದ್ರಶೇಖರ್, ಹಿನ್ನಲೆ ಸಂಗೀತ ನಂದು.ಜೆ.ಜಬೇಜ್ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಶ್ರವಣಬೆಳಗೊಳ, ಚೆನ್ನರಾಯಪಟ್ಟಣ, ಹಾಸನ ಮುಂತಾದ ಕಡೆ ಚಿತ್ರೀಕರಣ ನಡೆಯತ್ತಿದೆ. ಸುಮುಖ ಪಿಕ್ಚರ್ಸ್ ಲಾಂಛನದಲ್ಲಿ ಕೆ.ಶ್ರೀನಿವಾಸಮೂರ್ತಿ ನಿರ್ಮಿಸುತ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಮಹೂರ್ತ ನಡೆದ ನಂತರ ಚಿತ್ರದ ಮಾಹಿತಿ ಲಭ್ಯವಾಗಿರಲಿಲ್ಲ. ಈಗ ಪ್ರಚಾರದ ಮೊದಲ ಹಂತವಾಗಿ ನಾಯಕ-ನಾಯಕಿಯ ಫಸ್ಟ್ ಲುಕ್‍ದಲ್ಲಿ ದಕ್ಷಿಣ ಭಾರತೀಯ ವಧು-ವರ ಧರಿಸುವ ಕಾಸ್ಟ್ಯೂಮ್‍ನಂತೆ ಇರಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
4/12/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore