HOME
CINEMA NEWS
GALLERY
TV NEWS
REVIEWS
CONTACT US
ಕಿರು ಮಿನ್ಕಣಜ ಮತ್ತೋಂದು ಹೆಸರು ಪೆನ್‍ಡ್ರೈವ್
‘ಕಿರು ಮನ್ಕಣಜ’ ಚಿತ್ರಕ್ಕೆಅರ್ಥ ವಸ್ತುವಿನ ಹೆಸರುಆಗುತ್ತದೆ. ಆಂಗ್ಲ ಭಾಷೆಯಲ್ಲಿ ಪೆನ್‍ಡ್ರೈವ್‍ಎನ್ನುತ್ರಾರೆ.ಮೀನು ಚಿಕ್ಕದಾಗಿದ್ದರೂಅದರ ಹೊಟ್ಟೆ ಒಳಗೆ ಎಷ್ಟು ಮೊಟ್ಟೆಗಳು ಇರುತ್ತದೆಂದುಯಾರುಅಂದಾಜು ಮಾಡಲಿಕ್ಕೆ ಆಗುವುದಿಲ್ಲ. ಅದೇರೀತಿ ಪೆನ್‍ಡ್ರೈವ್‍ಒಬ್ಬೋಬ್ಬರಜೀವನದಲ್ಲಿಇರುತ್ತದೆ.ಅದಕ್ಕೆ ಪುರಾವೆಗಳು ಏನು ಬೇಕಾದರೂಇರಬಹುದು.ಪ್ರತಿಯೊಬ್ಬರಲ್ಲಿಅದು ಆಳವಾಗಿ ತುಂಬಿರುತ್ತದೆ.ಇದೇರೀತಿ ಸನ್ನಿವೇಶಗಳು ದಾಖಲಿಸುತ್ತಾ ಹೋಗುತ್ತದೆ.ಒಂದು ವಸ್ತುವಿನ ಮೇಲೆ ಕೇಂದ್ರಿಕೃತಗೊಂಡು, ಅಪರಾಧಗಳು ಆಗುತ್ತಾ ಹೋಗುತ್ತದೆ.ಕ್ಲೈಮಾಕ್ಸ್‍ದಲ್ಲಿಇದನ್ನುಇಡಲುಕಾರಣವನ್ನು ಹೇಳಲಾಗಿದೆ.ಜನಾರ್ಧನ್‍ದಾಸುಡಿ ನಿರ್ಮಾಪಕರಾಗಿ ಹೊಸ ಅನುಭವ.

ರವಿಚಂದ್ರನಾಯಕ, ಅರ್ಜುನ್‍ರಮೇಶ್ ಪೋಲೀಸ್‍ಇನ್ಸೆಪೆಕ್ಟರ್, ವರ್ಷಿತ ನಾಯಕಿ. ಖಳನಾಯಕನಾಗಿ ಜೀವನ್‍ನೀನಾಸಂಇವರೊಂದಿಗೆ ಶ್ರೀಧರನಾಯಕ್, ಹರೀಶ್ ಮುಂತಾದವರು ನಟಿಸಿದ್ದಾರೆ. ಮಂಜು.ಎಂ ನಿರ್ದೇಶಕನಾಗಿ ಪ್ರಥಮಅನುಭವ. ಐದು ಹಾಡುಗಳಿಗೆ ಧ್ರುವರಾಜ್-ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ.ರಚನೆಗೋಪಾಲ್‍ಮಹರಾಜ್, ಛಾಯಾಗ್ರಹಣ ಸುರೇಶ್‍ಬಾಬು, ಸಂಕಲನ ಸುಪ್ರಿತ್, ಸಂಭಾಷಣೆ ಹರ್ಷ, ನೃತ್ಯ ಭೂಷಣ್-ಮಂಜು, ಸಾಹಸ ಕೌರವವೆಂಕಟೇಶ್‍ಅವರದಾಗಿದೆ.ಮಂಡ್ಯಾ, ಪಾಂಡವಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಸುಚಿತ್ ಫಿಲಿಂಸ್ ಮುಖಾಂತರಚಿತ್ರವುಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
26/11/19


ಹೊಸಬರಕಿರು ಮಿನ್ಕಣಜ
ವಿನೂತನ ಹೆಸರಿನ ‘ಕಿರು ಮನ್ಕಣಜ’ ಚಿತ್ರವೊಂದು ಸೆನ್ಸಾರ್ ಅಂಗಳದಲ್ಲಿದೆ. ಪ್ರಚಾದರ ಮೊದಲ ಹಂತವಾಗಿಒಂದು ಹಾಡುಅನಾವರಣಗೊಂಡಿತು.ಇಲ್ಲಿ ಮಾತನಾಡಿದ ನಿರ್ದೇಶಕ ಎಂ.ಮಂಜು ಈ ಪದವುಇಂಗ್ಲೀಷಿನಲ್ಲಿಇರಲಿದ್ದು, ಕನ್ನಡದಲ್ಲಿಯಾರು ಬಳಸಿಲ್ಲ. ಕ್ಯಾಚಿಇರಲೆಂದುಇದನ್ನೇಉಪಯೋಗಿಸಲಾಗಿದೆ. ಇದರ ಬಗ್ಗೆ ಹೇಳಿದರೆ ಕತೆಯ ಸಾಲನ್ನು ಬಿಟ್ಟುಕೊಟ್ಟಂತೆಆಗುತ್ತದೆ.ಸೆಸ್ಪನ್ಸ್, ಥ್ರಿಲ್ಲರ್‍ಜೊತೆಗೊಂದು ಸುಂದರ ಪ್ರೇಮಕತೆಇರಲಿದೆ.ಒಂದು ವಸ್ತುವಿನ ಮೇಲೆ ಕೇಂದ್ರಿಕೃತಗೊಂಡು, ಅಪರಾಧಗಳು ಆಗುತ್ತಾ ಹೋಗುತ್ತದೆ.ಮಂಡ್ಯಾ, ಪಾಂಡವಪುರ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆಎಂದರು.

ಸಹ ಕಲಾವಿದನಾಗಿ ಗುರುತಿಸಿಕೊಂಡಿದ್ದ ರವಿಚಂದ್ರ ಪಾತ್ರದ ಪರಿಚಯ ಮಾಡಿಕೊಳ್ಳಲಿಲ್ಲ. ಮತ್ತೋಬ್ಬ ನಾಯಕಅರ್ಜುನ್‍ರಿಯಾಲಿಟಿ ಷೋದಲ್ಲಿ ಪಾಲ್ಗೋಂಡುಇನ್ಸ್‍ಪೆಕ್ಟರ್ ಆಗಿ ಮೂರನೇಚಿತ್ರವಂತೆ.ನಾಯಕಿ ವರ್ಷಿಕಾನಾಗರಾಜ್‍ಗೈರುಹಾಜರಿಗೆಕಾರಣ ತಿಳಿಯಲಿಲ್ಲ. ಉಳಿದಂತೆ ಖಳನಾಗಿ ಜೀವನ್‍ನೀನಾಸಂ, ಶ್ರೀಧರನಾಯಕ್, ಹರೀಶ್ ಮುಂತಾದವರು ನಟಿಸಿದ್ದಾರೆ.ಐದು ಹಾಡುಗಳಿಗೆ ಧ್ರುವರಾಜ್-ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ.ಆಡಿಯೋ ಲೋಕಾರ್ಪಣೆ ಮಾಡಿದ ಹಿರಿಯ ಸಾಹಿತಿಡಾ.ನಾಗೇಂದ್ರಪ್ರಸಾದ್ ಮಾತನಾಡಿ ಹೆಸರಿನಲ್ಲಿಕಾವ್ಯರಚನೆ, ಪದ್ಯಅಡಗಿದೆ.ಇದರಿಂದಲೇ ನಿರ್ದೇಶಕರಿಗೆ ಸಾಹಿತ್ಯದಅಭಿರುಚಿಇರುವುದುಗೊತ್ತಾಗುತ್ತದೆ. ರೆಕ್ಕಇರದ, ನಿದ್ದೆ ಮಾಡದಜೀವಂತ ಪ್ರಾಣಿ ಮೀನು ಆಗುತ್ತದೆ. ಸಿನಿಮಾದಲ್ಲಿ ಏನು ಹೇಳಿದ್ದಾರೆಂದು ತಿಳಿಯದು.ತಂಡಕ್ಕೆ ಒಳ್ಳೆಯದಾಗಲಿ ಎಂದರು.ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕರಿಸುಬ್ಬು, ದಿನೇಶ್‍ಗಾಂಧಿಕಾರ್ಯಕ್ರಮದಲ್ಲಿ ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು. ಹಣ ಹೂಡಿರುವಜನಾರ್ಧನ್‍ದಾಸುಡಿಅವರಿಗೆಚಿತ್ರರಂಗ ಹೊಸ ಅನುಭವವೆಂದು ಹೇಳಿಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/06/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore