HOME
CINEMA NEWS
GALLERY
TV NEWS
REVIEWS
CONTACT US

ಖಾಕಿ ಸಾಮಾನ್ಯ ಮನುಷ್ಯನಕತೆ
‘ಖಾಕಿ’ ಹೆಸರು ಕೇಳಿದೊಡನೆ ತಕ್ಷಣ ಪೋಲೀಸ್ ನೆನಪಿಗೆ ಬರುತ್ತಾರೆ. ಈಗ ಇದೇ ಹೆಸರಿನಲ್ಲಿಚಿತ್ರವೊಂದು ಬರುತ್ತಿದೆ.ಸಮಾಜದಲ್ಲಿಪ್ರತಿಯೊಬ್ಬರಿಗೂರಕ್ಷಣೆ ಮಾಡಲುಆರಕ್ಷಕರುಇರುವುದಿಲ್ಲ. ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಅದರಜೊತೆಗೆಇತರರಿಗೂ ಸಹಾಯ ಮಾqಬೇಕು.ನಮಗೆ ಒದಗಿಬರುವ ಸಮಸ್ಯೆಗೆ ಪೋಲೀಸ್, ಸರ್ಕಾರವನ್ನುಕಾಯದೆಅದನ್ನು ನಾವೇ ಬಗೆ ಹರಿಸಿಕೊಳ್ಳಬಹುದು.ಅದಕ್ಕಾಗಿ ದಿ ಪವರ್‍ಆಫ್‍ಕಾಮನ್ ಮ್ಯಾನ್‍ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ನಮ್ಮಗಳ ಸುತ್ತಲೂ ನಡೆಯುವ ಸಮಕಾಲೀನ ವಿಷಯಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.ನಮ್ಮ ಮಧ್ಯೆಎಲ್ಲರಿಗೂ ತಿಳಿಯದಯೇ ಸಮಾಜಘಾತುಕ ಶಕ್ತಿಗಳು ಹೇಗೆ ಉಪಯೋಗಿಸಿ ಕೊಳ್ಳುತ್ತಾರೆ.ಇದುರಾಜ್ಯದಲ್ಲಿಅಲ್ಲದೆಇಡೀ ಭಾರತದಲ್ಲಿ ನಡೆಯುತ್ತಿದೆ.ಇದಕ್ಕೆ ನಾವು ಏನು ಮಾಡಬಹುದೆಂಬುದನ್ನು ಪಾತ್ರಗಳ ಮೂಲಕ ಹೇಳಲಾಗಿದೆ..

ನಾಯಕನಾಗಿಚಿರಜೀವಿಸರ್ಜಾಕೇಬಲ್ ಆಪರೇಟರ್ ಪಾತ್ರ.ಶಕ್ತಿಶಾಲಿ ಹುಡುಗಿ, ನಾಯಕನಿಗೆ ಸಹಾಯ ಮಾಡುವತಾನ್ಯಾಹೋಪ್ ನಾಯಕಿ.ಡಿಸಿಪಿಯಾಗಿ ಛಾಯಾಸಿಂಗ್, ಸಾಮಾನ್ಯನಾಗಿದ್ದುಕುತಂತ್ರದಿಂದ ಪುಡಾರಿಯಾಗುವ ಶಿವಮಣಿ, ಯುವಕನಾಗಿ ಶಶಿ, ಹಣದ ಆಸೆಗೆ ದುರಳರಿಗೆ ಸಹಾಯ ಮಾಡುವರಘುರಾಮಪ್ಪ ಮುಂತಾದವರು ನಟಿಸಿದ್ದಾರೆ.ರಚನೆ,ನಿರ್ದೇಶನ ಮಾಡಿರುವ ನವೀನ್‍ರೆಡ್ಡಿಅವರಿಗೆ ಹೊಸ ಅನುಭವ. ನಾಲ್ಕು ಹಾಡುಗಳಿಗೆ ರುತ್ವಿಕ್‍ಮುರಳಿಧರ್ ಸಂಗೀತ, ಹೆಸರಿಗೆತಕ್ಕಂತೆ ಮಾಸ್ ಡೈಲಾಗ್‍ಗಳಿಗೆ ಮಾಸ್ತಿ ಲೇಖನಿ ಕೆಲಸ ಮಾಡಿದೆ. ಛಾಯಾಗ್ರಹಣ ಬಾಲ, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ವಿನೋಧ್-ಮಾಸ್‍ಮಾದಅವರದಾಗಿದೆ. ಬೆಂಗಳೂರು ಸುತ್ತಮುತ್ತಚಿತ್ರೀಕರಣ ನಡೆಸಲಾಗಿದೆ.ತರುಣ್‍ಟಾಕೀಸ್ ಬ್ಯಾನರ್‍ಅಡಿಯಲ್ಲಿ ನಾಲ್ಕನೇ ಚಿತ್ರಕ್ಕೆ ಹಣ ಹೂಡಿರುವುದು ತರುಣ್‍ಶಿವಪ್ಪ-ಮಾನಸತÀರಣ್. ಕೆ.ಮಂಜು ಮುಖಾಂತರಅಂದಾಜು 225ಸೆಂಟರ್‍ಗಳಲ್ಲಿ ಜನವರಿ 24ರಂದು ತೆರೆಕಾಣುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/01/20For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore