HOME
CINEMA NEWS
GALLERY
TV NEWS
REVIEWS
CONTACT US
ಕೌಟಂಬಿಕ ದೆವ್ವಗಳ ಕಥನ
ಹಾರರ್ ಚಿತ್ರವೆಂದರೆ ಒಂದು ದೆವ್ವ ಇಡೀ ಸಿನಿಮಾ ಆವರಿಸಿಕೊಂಡು ಬೆಚ್ಚಿ ಬೀಳುಸುವುದು ನೋಡಿದ್ದೇವೆ. ಹೊಸಬರ ‘ಕೆಲವು ದಿನಗಳ ನಂತರ’ ಚಿತ್ರದಲ್ಲಿ ಒಂದರಲ್ಲ ಎರಡಲ್ಲ ನಾಲ್ಕು ದೆವ್ವಗಳು ಬರುತ್ತವೆ. ಗಂಡ, ಹೆಂಡತಿ, ಮಗಳು, ಸಣ್ಣಮಗು ಹೀಗೆ ದೆವ್ವಗಳು ಇರುವುದು ವಿಶೇಷ. ಕತೆಯಲ್ಲಿ ಐದು ಸ್ನೇಹಿತ ಸಾಫ್ಟ್‍ವೇರ್ ಇಂಜಿನಿಯರ್‍ಗಳು ಸ್ನೇಹಿತೆಯ ವಿವಾಹ ವಾರ್ಷಿಕೋತ್ಸವಕ್ಕೆಂದು ದೂರದ ಸ್ಥಳಕ್ಕೆ ಹೋಗುತ್ತಾರೆ. ಮಧ್ಯೆ ದಾರಿಯಲ್ಲಿ ಕತ್ತಲಾಗಿ ಪಕ್ಕದಲ್ಲಿರುವ ಲಾಡ್ಜ್‍ನಲ್ಲಿ ತಂಗುತ್ತಾರೆ. ಮುಂದೆ ಮಾಮೂಲಿ ಸಿನಿಮಾಗಳಂತಯೇ ದೆವ್ವಗಳು ಕಾಟ ಕೊಡಲು ಶುರು ಮಾಡುತ್ತವೆ. ಅವುಗಳು ಯಾಕೆ ಕಾಟ ಕೊಡುತ್ತವೆ ಎನ್ನುವುದು ನಾವು ಹೇಳಿದರೆ ಥ್ರಿಲ್ ಸಿಗುವುದಿಲ್ಲ. ಅದಕ್ಕಾಗಿ ಚಿತ್ರಮಂದಿರದಲ್ಲಿ ಹಾಗಾಗಿ ಬರುವ ಸೌಂಡ್, ದೃಶ್ಯಗಳು ನೋಡಿದರೆ ಚೆನ್ನಾಗಿರುತ್ತದೆ. ನಿರ್ದೇಶಕ ಶ್ರೀನಿ ಮೂರು ಭಾಗಗಳಲ್ಲಿ ಕತೆಗಳನ್ನು ಸೃಷ್ಟಿಸಿದ್ದಾರೆ. ಮೊದಲನೆ ಭಾಗ ಹಾಸ್ಯ, ಎರಡನೆಯದು ದೆವ್ವಗಳ ಅಟ್ಟಹಾಸ, ಮೂರನೆಯದರಲ್ಲಿ ಒಂದು ಆರ್ಥಪೂರ್ಣ ಸಂದೇಶದಲ್ಲಿ ನಾವುಗಳು ಎಂಥ ತಪ್ಪು ಮಾಡುತ್ತಿದ್ದೇವೆ ಎಂದು ಬೋದನೆ ಇಲ್ಲದೆ ಹೇಳಿರುವುದು ಪ್ಲಸ್ ಪಾಯಿಂಟ್ ಆಗಿದೆ.

ತಾರಗಣದಲ್ಲಿ ನಾಯಕಿಯಾಗಿ ಶುಭಾಪೂಂಜಾ ಇವರೊಂದಿಗೆ ಸೋನುಪಾಟೀಲ್, ದ್ರವ್ಯಶೆಟ್ಟಿ, ಮಜಾಟಾಕೀಸ್ ಲೋಕೇಶ್, ಪವನ್, ಶರಣಯ್ಯ , ಜಗದೀಶ್ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹೊಸತನ ಅಲ್ಲದಿದ್ದರೂ ವಿಭಿನ್ನ ಚಿತ್ರಕತೆ ಗಮನ ಸೆಳೆಯುತ್ತದೆ. ಕ್ಲೈಮಾಕ್ಸ್‍ನಲ್ಲಿ ಬರುವ ಆಕ್ಸಿಡೆಂಟ್ ನೈಜ ಘಟನೆಗಳು ನೋಡುಗರ ಮನಸ್ಸನ್ನು ಕದಡುತ್ತದೆ. ಮುರಳೀಧರ್ ಛಾಯಗ್ರಹಣ ಅಲ್ಲಲ್ಲಿ ಕೆಲಸ ಮಾಡಿದೆ. ಹಿನ್ನಲೆ ಸಂಗೀತ ಒದಗಿಸಿರುವ ರಾಕಿಸೋನು ಚಿತ್ರಕ್ಕೆ ಪೂರಕವಾಗಿದ್ದಾರೆ. ಕೆಲವು ಗಂಟೆಗಳನ್ನು ಎಂಜಾಯ್ ಮಾಡಸಲು ಬಯಸುವವರು ಒಮ್ಮೆ ಟಾಕೀಸ್‍ಗೆ ಹೋಗಬಹುದು.
ನಿರ್ಮಾಣ: ಮುತ್ತುರಾಜ್, ವಸಂತ್‍ಕುಮಾರ್, ಚಂದ್ರಕುಮಾರ್
ಸಿನಿ ಸರ್ಕಲ್.ಇನ ವಿಮರ್ಶೆ
23/06/18

ಭಯದ ಜೊತೆಗೆ ಹಾಸ್ಯದ ಮಿಶ್ರಣವಿದೆ
‘ಕೆಲವು ದಿನಗಳ ನಂತರ’ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಮೊದಲಬಾರಿ ನಿರ್ದೇಶನ ಮಾಡಿರುವ ಶ್ರೀನಿ ಚಿತ್ರದಲ್ಲಿ ಭಯ ಪಡಿಸುವ ಶಬ್ದ, ಹಾರರ್ ಆಂಶಗಳು ಇರುವುದರಿಂದ ಜೀವ ಜಲ್ ಅನಿಸುತ್ತದೆ. ಅದಕ್ಕಾಗಿ ಗರ್ಭಿಣಿಯರು ಮತ್ತು ಹೃದಯಘಾತದ ತೊಂದರೆ ಇರುವವರಿಗೆ ಪ್ರವೇಶ ನಿಷೇದಿಸಿದೆ. ಭಯಾನಕ ಅಂಶಗಳು ಇರುವುದರಿಂದ ಸೆನ್ಸಾರ್‍ನವರು ಯಾವುದೇ ದೃಶ್ಯಕ್ಕೆ ಕಟ್ ಹೇಳದೆ ಎ ಪ್ರಮಾಣಪತ್ರ ನೀಡಿದ್ದಾರೆ ಎಂದರು. ಪ್ರಾರಂಭದಲ್ಲೆ ಭಯದ ಚಿತ್ರ ಅಂತ ಹೇಳಿದರೆ ಚಿತ್ರಮಂದಿರಕ್ಕೆ ಜನರು ಬರುವುದಾದರೂ ಹೇಗೆ ಎಂಬ ಪ್ರಶ್ನೆ ಮಾದ್ಯಮದವರಿಂದ ತೂರಿಬಂತು. ಭಯದ ಜೊತೆ ಹಾಸ್ಯವು ಇರಲಿರುವ ಸಿನಿಮಾ. ಕೊನೆಯ ಹತ್ತು ನಿಮಿಷದ ಅನೂಹ್ಯ ದೃಶ್ಯಗಳಲ್ಲಿ ಏನು, ಯಾಕೆ, ಹ್ಯಾಗೆ ಎಂಬುದು ತೆರೆದುಕೊಳ್ಳುತ್ತದೆಂದು ಸಮರ್ಥನೆ ಉತ್ತರವನ್ನು ನಿರ್ದೇಶಕರು ನೀಡಿದರು.

ಐದು ಟೆಕ್ಕಿಗಳು ದೂರದ ಸ್ಥಳಕ್ಕೆ ಪ್ರಯಾಣ ಮಾಡುತ್ತಾರೆ. ಅಲ್ಲಿ ಅರಿಯದೆ ತಪ್ಪುಗಳು ನಡೆದು ಅನಾಹುತಗಳು ಆಗುತ್ತದೆ. ಇದು ಜಗತ್ತಿನಲ್ಲೆ ಎಲ್ಲಾ ಕಡೆ ನಡೆಯುತ್ತಿದ್ದು, 2016ರ ನೈಜ ಘಟನೆಗೆ ಚಿತ್ರರೂಪ ಕೂಡಲಾಗಿದೆ ಅಂತ ಇಂಜಿನಿಯರ್ ಪಾತ್ರ ಮಾಡಿರುವ ನಾಯಕಿ ಶುಭಾಪೂಂಜಾ ಒಂದಷ್ಟು ತಿರುಳನ್ನು ಬಿಟ್ಟುಕೊಟ್ಟರು. ಮೊಬೈಲ್, ಮೀಡಿಯಾದಿಂದ ಸಾಕಷ್ಟು ದುರಪಯೋಗ ಆಗುತ್ತಿದೆ. ಹಾರರ್ ಚಿತ್ರದಲ್ಲಿ ಯುವಜನತೆಗೊಂದು ಅರ್ಥಪೂರ್ಣ ಸಂದೇಶವಿರುವುದು ಪ್ಲಸ್ ಪಾಯಿಂಟ್ ಆಗಿದೆ ಎನ್ನುತ್ತಾರೆ ನವತಾರೆ ದ್ರವ್ಯಾಶೆಟ್ಟಿ.

ಉತ್ತರ ಕರ್ನಾಟಕದ ಪ್ರತಿಭೆ ಸೋನುಪಾಟೀಲ್ ಅವರದು ಒಂಬತ್ತನೆ ಚಿತ್ರವಂತೆ. ಇವರೊಂದಿಗೆ ಜಗದೀಶ್‍ಆಲ್ಕೋಡ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಮುಂತಾದವರ ಅಭಿನಯವಿದೆ. ಅಲ್ಲದೆ ಚಂದನವನದಲ್ಲಿ ಮೊದಲು ಎನ್ನುವಂತೆ ‘ಜೋಂಬೀ’ ಪಾತ್ರ ಮಾಡಿರುವ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ 3ಡಿಯಲ್ಲಿ ರೂಪಿಸಿರುವುದು ಇದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತದಂತೆ.

ಮುತ್ತುರಾಜ್.ಹೆಚ್.ಪಿ, ವಸಂತ್‍ಕುಮಾರ್.ಬಿ.ಎಂ, ಚಂದ್ರಕುಮಾರ್.ಟಿ.ಸಿ ನಿರ್ಮಾಣ ಮಾಡಿರುವ ಚಿತ್ರವು ಇದೇ ಶುಕ್ರವಾರದಂದು 60 ಕ್ಕೂ ಹಚ್ಚು ಚಿತ್ರಮಂದಿರಗಳಲ್ಲಿ ಸದ್ದು ಮಾಡಲು ಬರುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
19/06/18
ತೆರೆಗೆ ಸಿದ್ದ ಕೆಲವು ದಿನಗಳ ನಂತರ
‘ಕೆಲವು ದಿನಗಳ ನಂತರ’ ವಿಭಿನ್ನ ಹಾರರ್ ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಶ್ರೀನಿ ಹೇಳುವಂತೆ ಪ್ರಸಕ್ತ ಸಮಾಜದ ಯುವ ಜನಾಂಗವು ಅರಿಯದೆ ತಪ್ಪು ಮಾಡುವುದರಿಂದ ಅನಾಹುತಗಳು ಆಗುತ್ತವೆ. ಇಂತಹ ಎರಡು ಪ್ರಮುಖ ವಿಷಯಗಳ ಸುತ್ತ ಎಣೆದಿರುವ ಸತ್ಯ ಘಟನೆಗಳನ್ನು ಹೆಕ್ಕಿಕೊಂಡು ಸಾರ್ವತ್ರಿಕ ಕಾಲ್ಪನಿಕ ಕಥೆಗೆ ಹಾರರ್ ಟಚ್ ನೀಡಲಾಗಿದೆ. ಚಿತ್ರರಂಗದಲ್ಲಿ ಮೊದಲಬಾರಿ ಪ್ರಮುಖ ಪಾತ್ರದಲ್ಲಿ ಬರುವ ಆರು ತಿಂಗಳ ಮಗುವನ್ನು ಸಿಜಿ ಮೂಲಕ ಸೃಷ್ಟಿಸಲಾಗಿದೆ ಎಂಬುದರ ವ್ಯಾಖ್ಯನ ಬಿಚ್ಚಿಡುತ್ತಾರೆ. ನಾಯಕಿಯಾಗಿ ಶುಭಾಪೂಂಜಾ, ದ್ರವ್ಯಶೆಟ್ಟಿ, ಹೋಟೆಲ್ ಸರ್ವರ್ ಪಾತ್ರ ಮಾಡಿರುವ ಪವನ್‍ಕುಮಾರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್‍ಕುಮಾರ್ ಮುಂತಾದವರ ಅಭಿನಯವಿದೆ.

ರಾಕಿಸೋನು ಹಾಡುಗಳಿಗೆ ರಾಗ ಸಂಯೋಜಸಿದ್ದಾರೆ. ಮುತ್ತುರಾಜ್.ಹೆಚ್.ಪಿ, ವಸಂತ್‍ಕುಮಾರ್.ಬಿ.ಎಂ ಮತ್ತು ಸಹ ನಿರ್ಮಾಪಕರುಗಳಾಗಿ ಚಂದ್ರಕುಮಾರ್.ಟಿ.ಸಿ, ಪುಟ್ಟರಾಜು.ಹೆಚ್.ಪಿ ಸಿನಿಮಾ ಕೃಷಿಗೆ ಹಣ ಹೂಡಿರುವುದು ಹೊಸ ಅನುಭವ. ಇದೇ 22ರಂದು ಚಿತ್ರವನ್ನು ಜನರಿಗೆ ತೋರಿಸಲು ತಂಡವು ಸಿದ್ದತೆಗಳನ್ನು ಮಾಡಿಕೊಂಡಿದ್ದು, ಮಾರ್ಸ್ ವಿತರಣಾ ಸಂಸ್ಥೆಯು ಬಿಡುಗಡೆಯ ಜವಬ್ದಾರಿಯನ್ನು ಹೊತ್ತಿಕೊಂಡಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/06/18

ಕೆಲವು ದಿನಗಳ ತಂಡದಿಂದ ಸಗಟು ನೇತ್ರದಾನ
ಹಾಡುಗಳ ಬಿಡುಗಡೆ ಎನ್ನುವುದು ಜನರಿಗೆ ಚಿತ್ರದ ಮೊದಲ ಆಹ್ವಾನ ಪತ್ರಿಕೆ ಎನ್ನುತ್ತಾರೆ. ಅದರಂತೆ ‘ಕೆಲವು ದಿನಗಳ ನಂತರ’ ವಿಭಿನ್ನ ಹಾರರ್ ಚಿತ್ರದ ಆಡಿಯೋ ಸಿಡಿಯು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಲೋಕಾರ್ಪಣೆಗೊಂಡಿತು. ಎರಡು ಬಾರಿ ಟ್ರೈಲರ್ ತೋರಿಸಿದ ನಂತರ ಎಲ್ಲರು ವೇದಿಕಗೆ ಆಸೀನರಾದರು. ಕತೆ, ಚಿತ್ರಕತೆ ಬರೆದು ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಶ್ರೀನಿ ಮಾತನಾಡಿ ಪ್ರಸಕ್ತ ಸಮಾಜದ ಯುವ ಜನಾಂಗವು ಅರಿಯದೆ ತಪ್ಪು ಮಾಡುವುದರಿಂದ ಅನಾಹುತಗಳು ಆಗುತ್ತವೆ. ಇಂತಹ ಎರಡು ಪ್ರಮುಖ ವಿಷಯಗಳ ಸುತ್ತ ಎಣೆದಿರುವ ಸತ್ಯ ಘಟನೆಗಳನ್ನು ಹೆಕ್ಕಿಕೊಂಡು ಸಾರ್ವತ್ರಿಕ ಕಾಲ್ಪನಿಕ ಕಥೆಗೆ ಹಾರರ್ ಟಚ್ ನೀಡಲಾಗಿದೆ. ಚಿಕ್ಕಮಗಳೂರು, ಸಾವನದುರ್ಗ, ಮಾಗಡಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳು ಇರಲಿದೆ. ಅಣ್ಣಾವ್ರರ ಪ್ರೇರಪಣೆಯಿಂದ ತಂಡದ 100 ಜನರು ನೇತ್ರದಾನ ಮಾಡಿದ್ದೇವೆ. ಚಿತ್ರರಂಗದಲ್ಲಿ ಮೊದಲಬಾರಿ ಪ್ರಮುಖ ಪಾತ್ರದಲ್ಲಿ ಬರುವ ಆರು ತಿಂಗಳ ಮಗುವನ್ನು ಸಿಜಿ ಮೂಲಕ ಸೃಷ್ಟಿಸಲಾಗಿದೆ ಎಂಬುದರ ವ್ಯಾಖ್ಯನ ಬಿಚ್ಚಿಟ್ಟರು.

ಎಲೆಕ್ಟ್ರಾನಿಕ್ ಡ್ಯಾನ್ಸ್ ಮ್ಯೂಸಿಕ್ ಮೂಲಕ ಎರಡು ಹಾಡುಗಳನ್ನು ಸಂಯೋಜಿಸಲಾಗಿದೆ. ಭವವಿಶ್ರಾಂತ ಪದಗಳನ್ನು ಬಳಸಿಕೊಂಡು ಬ.ಲ.ಸುರೇಶ್ ಸಾಹಿತ್ಯ ಒದಗಿಸದ್ದಾರೆಂದು ಮಾಹಿತಿ ನೀಡಿದರು ರಾಕಿಸೋನು. ನಾಯಕಿ ಶುಭಾಪೂಂಜಾ, ಹೋಟೆಲ್ ಸರ್ವರ್ ಪಾತ್ರ ಮಾಡಿರುವ ಪವನ್‍ಕುಮಾರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್‍ಕುಮಾರ್ ಎಲ್ಲರೂ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಕೊನೆಯಲ್ಲಿ ಮೈಕ್ ರಾಘವೇಂದ್ರರಾಜ್‍ಕುಮಾರ್ ಕೈಗೆ ತಲುಪಿದಾಗ ಅವರ ನುಡಿಗಳು ಈ ರೀತಿ ಇತ್ತು. ನಿಮಗೆಲ್ಲಾ ಇದು ಸ್ಟುಡಿಯೋ ಆಗಿರಬಹುದು. ನಮಗೆ ದೇವಸ್ಥಾನವಾಗಿದೆ. ಅಪ್ಪಾಜಿ ಸೇರಿದಂತೆ ನಾವೆಲ್ಲರೂ ಮೊದಲು ಗೀತೆಯನ್ನು ಹಾಡಿದ್ದು ಇದೇ ಜಾಗದಲ್ಲಿ. ಚಿತ್ರತಂಡವು ನೇತ್ರದಾನ ಮಾಡಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಬದುಕಿದ್ದಾಗ ನಾವೇನು ಮಾಡಿಲ್ಲ. ಸತ್ತ ಮೇಲಾದರೂ ಕಣ್ಣುಗಳು ಭೂಮಿ ಪಾಲಾಗುವುದಕ್ಕಿಂತ ಮುಂಚೆ ಬೇರೆಯವರಿಗೆ ಪ್ರಯೋಜನವಾಗುತ್ತದೆ. ಭಾರತದಲ್ಲಿ ಕರ್ನಾಟಕ ರಾಜ್ಯ ನೇತ್ರದಾನದಲ್ಲಿ ದಾಖಲೆ ಮಾಡಿದೆ. ನಾವು ನಮ್ಮ ಸಿನಿಮಾ ಅದ್ಬುತ ಎನ್ನುಬಹುದು. ಅದನ್ನು ಹೇಳಬೇಕಾದುದು ಜನರು. ಕಲಾವಿದರಿಗೆ ಸಾವಿಲ್ಲವೆಂದು ಅಪ್ಪಾಜಿ ಹೇಳುತ್ತಿದ್ದರು. ಅದರಂತೆ ಅವರ ಚಿತ್ರಗಳು ಬದುಕಿರುವುದರಿಂದ ಅವರು ನಮ್ಮಲ್ಲೆ ಇದ್ದಾರೆ. ಶ್ರಾವಣಮಾಸ, ಆಷಾಡಮಾಸ ಕೇಳಿದ್ದೇವೆ. ಏಪ್ರಿಲ್ ಬಂತು ಎಂದರೆ ರಾಜ್‍ಕುಮಾರ್ ಮಾಸ ಎಂದು ಎಲ್ಲಾ ವಾಹಿನಿಗಳಲ್ಲಿ ಅಪ್ಪಾಜಿ ಚಿತ್ರಗಳ ಹಾಡು, ಸಿನಿಮಾ ಪ್ರಸಾರವಾಗುತ್ತಲೆ ಇರುತ್ತದೆ ಎಂದು ಆಡಿಸಿ ನೋಡು ಬೀಳಿಸಿ ನೋಡಿ ಗೀತೆಯ ಸಾಲನ್ನು ಹಾಡಿದರು.
ನಿರ್ಮಾಪಕರುಗಳಾದ ಮುತ್ತುರಾಜ್.ಹೆಚ್.ಪಿ, ವಸಂತ್‍ಕುಮಾರ್.ಬಿ.ಎಂ ಮತ್ತು ಚಂದ್ರಕುಮಾರ್.ಟಿ.ಸಿ ಉಪಸ್ತಿತರಿದ್ದು ಚುಟುಕು ಮಾತನಾಡಿದರು. ನಾರಾಯಣ ನೇತ್ರಾಲಯುದ ವೀರೇಶ್, ಎನ್.ಕೆ.ಕೃಷ್ಣ ಮುಂತಾದವರು ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
30/04/18


ವಿನೂತನ ಶೀರ್ಷಿಕೆ ಕೆಲವು ದಿನಗಳ ನಂತರ
ಪ್ರಚಲಿತ ವಿದ್ಯಾಮಾನದಲ್ಲಿ ಚಂದನವನಕ್ಕೆ ಹೊಸ ನಿರ್ದೇಶಕಗಳ ಆಗಮನದಂತೆ, ಅವರ ಜೊತೆಗೆ ನಾವೀನ್ಯತೆಯಿಂದ ಕೂಡಿದ ಶೀರ್ಷಿಕೆಗಳು ಬರುತ್ತಿವೆ. ಇದರ ಸಾಲಿಗೆ ‘ಕೆಲವು ದಿನಗಳ ನಂತರ’ ಚಿತ್ರವು ಸೇರಿಕೊಂಡಿದೆ. ಇಂದಿನ ಯುವಜನಾಂಗವು ಗೊತ್ತೋ, ತಿಳಿಯದೆ ತಪ್ಪುಗಳನ್ನು ಮಾಡುತ್ತಾ ಜೀವನವನ್ನು ಹಾಳು ಮಾಡಿಕೊಂಡು ಬಲಿಪಶುಗಳಾಗುತ್ತಿದ್ದಾರೆ. ಅವರುಗಳು ತಮಗೆ ಅರಿವಿಲ್ಲದಂತೆ ಸಮಸ್ಯೆಗಳನ್ನು ಸೃಷ್ಟಸಿಕೊಂಡು ಅಪಾಯ ತಂದೊಡ್ಡಿ ಕೊಳ್ಳುವುದು ಮಾಮೂಲಿಯಾಗಿದೆ. ಇಂತಹುದೆ ಕತೆಯುಳ್ಳ ಚಿತ್ರದಲ್ಲಿ ಐದು ಯುವ ಟೆಕ್ಕಿಗಳು ಗೆಳತಿಯ ಮದುವೆಯ ವಾರ್ಷಿಕೋತ್ಸವಕ್ಕೆ ತೆರೆಳುವಾಗ ಮದ್ಯದಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆದು ಒಂದು ಕಡೆ ತಂಗುತ್ತಾರೆ. ಆ ಒಂದು ರಾತ್ರಿಯಲ್ಲಿ ವಿಚಿತ್ರ ಅನುಭವದಿಂದ ಎಲ್ಲರು ತತ್ತರಿಸಿ ಹೋಗುತ್ತಾರೆ. ಮುಖ್ಯವಾಗಿ ಆರು ತಿಂಗಳ ಮಗುವನ್ನು ಗ್ರಾಫಿಕ್ಸ್‍ನಲ್ಲಿ ಸೃಷ್ಟಿಸಿ ಅದರಿಂದ ಪ್ರಮುಖ ಪಾತ್ರವನ್ನು ಮಾಡಿಸಿರುವುದು ವಿಶೇಷವಾಗಿದೆ. ಚಿಕ್ಕಮಗಳೂರು, ಮಾಲೂರು, ಸಾವನದುರ್ಗ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಶೇಕಡ 20 ರಷ್ಟು ಬಾಕಿ ಉಳಿಸಿಕೊಂಡಿದೆ.

ಶುಭಾಪೂಂಜಾ ನಾಯಕಿ, ನವನಟ ಜಗದೀಶ್ ನಾಯಕ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಹಿರಿತೆರೆಗೆ ಎಂದಿನಂತೆ ಹಾಸ್ಯ ಪಾತ್ರ, ಹುಬ್ಬಳ್ಳಿಯ ಸೋನುಪಾಟೀಲ್, ಕಾವ್ಯಶೆಟ್ಟಿ ಇವರುಗಳು ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕಾಣ ಸಿಕೊಂಡಿದ್ದಾರೆ. ಇವರೊಂದಿಗೆ ಬೇಬಿ ಶ್ರೀಲಕ್ಷೀ, ಶ್ರೀಮಾರುತಿ, ರಮ್ಯವರ್ಷಿಣ , ಪವನ್‍ಕುಮಾರ್ ನಟನೆ ಇದೆ. ಹಲವು ನಿರ್ದೆಶಕರ ಬಳಿ ಕೆಲಸ ಮಾಡಿರುವ ಶ್ರೀನಿ ಕತೆ,ಚಿತ್ರಕತೆ ಬರೆದು ಮೊದಲಬಾರಿ ಆಕ್ಷನ್ ಕಟ್ ಹೇಳಿದ್ದಾರೆ. ಹಾಡುಗಳಿಗೆ ರಾಗ ಒದಗಿಸಿರುವುದು ರಾಕಿಸೋನು, ಛಾಯಗ್ರಹಣ ಮುರಳೀಧರ್ ಮತ್ತು ನವೀನ್‍ಕುಮಾರ್, ಸಂಕಲನ ವಿಜಯ್.ಎಂ.ಕುಮಾರ್ ನಿರ್ವಹಣೆ ಹೊತ್ತುಕೊಂಡಿದ್ದಾರೆ. ಮುತ್ತುರಾಜ್.ಹೆಚ್.ಪಿ ಮತ್ತು ವಸಂತಕುಮಾರ್.ಬಿ.ಎಂ. ನಿರ್ಮಾಪಕರು ಹಾಗು ಬಿ.ಎಂ.ಚಂದ್ರಕುಮಾರ್ ಸಹ ನಿರ್ಮಾಣಪಕರಾಗಿ ಗಾಂದಿನಗರದಲ್ಲಿ ಗುರುತಿಸಿಕೊಂಡಿದ್ದಾರೆ.
-26/09/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore