HOME
CINEMA NEWS
GALLERY
TV NEWS
REVIEWS
CONTACT US
ಯಶಸ್ಸಿನ ಹಾದಿಯಲ್ಲಿ ಕವಲುದಾರಿ
ಎರಡು ವಾರಗಳ ಕೆಳಗೆ ಬಿಡುಗಡೆಯಾದ ‘ಕವಲುದಾರಿ’ ಚಿತ್ರದ ಕತೆಯು ಹೊಸ ಜಾನರ್ ಆಗಿರುವುದರಿಂದ ಎಲ್ಲಾ ಕಡೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಸಕ್ಸಸ್ ಮೀಟ್‍ದಲ್ಲಿ ಹಾಜರಿದ್ದ ನಿರ್ದೇಶಕ ಹೇಮಂತ್‍ರಾವ್ ಮಾತನಾಡಿ ವಿತರಕರಿಂದ ಇನ್ನು ಲೆಕ್ಕ ತಗೆದುಕೊಳ್ಳುತ್ತಿದ್ದೇವೆ. ಮುಂದಿನವಾರ ಎಷ್ಟು ಮೊತ್ತ ಬಂದಿದೆ ಎಂಬುದು ಗೊತ್ತಾಗಲಿದೆ. ಕೆಲವು ಕಾರಣಗಳಿಗೆ ವ್ಯವಹಾರದ ಮಾತುಗಳನ್ನು ಹೇಳವುದು ಬೇಡವೆಂದು ಮಾದ್ಯಮದ ಪ್ರಶ್ನೆಯಿಂದ ಜಾರಿಕೊಂಡರು. ಇವರ ಮಾತಿಗೆ ಧ್ವನಿಗೂಡಿಸಿದ ವಿತರಕ ಧೀರಜ್ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ನಿರ್ಮಾಪಕರು, ನಾವುಗಳು ಲಾಭದಲ್ಲಿ ಇದ್ದೇವೆಂದು ವಿವರ ನೀಡಲು ಹಿಂದೇಟು ಹಾಕಿದರು. ಪಕ್ಕದಲ್ಲೆ ಇದ್ದ ಅನಂತ್‍ನಾಗ್ ಮೈಕ್ ತೆಗೆದುಕೊಂಡು ಇದುವರೆಗಿನ ಕಲೆಕ್ಷನ್ ಆರು ಕೋಟಿ ದಾಟಿದೆ ಅಂತ ಮಾಹಿತಿ ನೀಡಿದರು.

ಜನರು ನೀಡುತ್ತಿರುವ ಪ್ರತಿಕ್ರಿಯೆ, ಮಾದ್ಯಮದ ವಿಮರ್ಶೆಯಿಂದ ಭಾವುಕನಾಗಿದ್ದೇನೆ. ತುಂಬಾ ಕಷ್ಟಪಟ್ಟು ಎಲ್ಲರು ಪ್ರೀತಿಯಿಂದ ಮಾಡಿದ ಚಿತ್ರ ಇದಾಗಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಆದರೆ ಈ ಸಿನಿಮಾಕ್ಕೆ ಬಂದ ವಿಮರ್ಶೆ ಕಂಡು ಅಚ್ಚರಿ ಆಯ್ತು. ಇದರಿಂದ ಜವಬ್ದಾರಿ ಹೆಚ್ಚಿದೆ. ಇದೊಂದು ಉತ್ತಮ ಸಿನಿಮಾವಾಗುತ್ತದೆಂದು ಮೊದಲ ಪ್ರತಿ ನೋಡಿದಾಗಲೇ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಆಗಿದೆ ಎಂದು ಅನಂತ್‍ನಾಗ್ ಹೇಳಿದರು. ಪ್ರಾರಂಭದಲ್ಲಿ ಇದನ್ನು ಯಾವ ರೀತಿ ಸ್ವೀಕರಿಸುತ್ತಾರೋ ಎಂಬ ಸಣ್ಣ ಗೊಂದಲವಿತ್ತು. ಆಗ ಅನಂತ್‍ಸರ್ ಧೈರ್ಯ ತುಂಬಿದರು. 275 ಚಿತ್ರಗಳಲ್ಲಿ ನಟಿಸಿದ್ದ ಅಂತಹ ಹಿರಿಯ ನಟರ ಅನುಭವದ ಮಾತುಗಳು ನಿಜವಾಗಿದೆ ಎಂದು ನಿರ್ದೇಶಕರು ಖುಷಿ ವ್ಯಕ್ತಪಡಿಸಿದರು.

ನಾಯಕ ರಿಶಿ, ರೋಶಿನಿಪ್ರಕಾಶ್, ಅಚ್ಯುತಕುಮಾರ್, ಸಂಪತ್, ಸಿರಿ, ಛಾಯಾಗ್ರಾಹಕ ಅದ್ವೈತಗುರುಮೂರ್ತಿ, ಸಂಗೀತ ನಿರ್ದೇಶಕ ಚರಣ್‍ರಾಜ್, ಸಮನ್ವಿತಾ ಸಂತೋಷದಲ್ಲಿ ಪಾಲ್ಗೋಂಡು ಅನುಭವಗಳನ್ನು ಹಂಚಿಕೊಂಡರು. ಅಂದಹಾಗೆ ಪಿಆರ್‍ಕೆ ಬ್ಯಾನರ್‍ನಿಂದ ತೆರೆಕಂಡ ಮೊದಲ ಸಿನಿಮಾ ಇದಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
28/04/19


ಪುರಾತನ ಕೊಲೆ ಭೇದಿಸಲು ಮಾಡ್ರನ್ ಟಚ್
38 ವರ್ಷಗಳ ಹಿಂದೆ ಪುರಾತನ ಇಲಾಖೆಯಲ್ಲಿ ಒಂದು ಕೊಲೆಯಾಗುತ್ತದೆ. ಅದರ ಬೆನ್ನಲ್ಲೆ ಸದರಿ ಇಲಾಖೆಯ ಅಧಿಕಾರಿ ಹಾಗೂ ಅವನ ಕುಟುಂಬ ಕಾಣೆಯಾಗುತ್ತದೆ. ಕಟ್ ಮಾಡಿದರೆ ಮೆಟ್ರೋ ಕಾಮಗಾರಿ ಕೆಲಸ ಮಾಡುವಾಗ ಮೂರು ತಲೆಬುರುಡೆ, ಎಲುಬುಗಳು ಕಾಣಿಸಿಕೊಳ್ಳುತ್ತದೆ. ಅದು ಕೊಲೆಯಾಗಿದ್ದರೆ ಅದರ ಹಿಂದಿನ ಲಾಭವಾದರೂ ಏನು? ಅದನ್ನು ಮಾಡಿದವರು, ಮಾಡಿಸಿದವರು ಯಾರು? ಹೀಗೆ ಕುತೂಹಲದ ದಾರಿಯನ್ನು ಹುಡುಕಿದಾಗ ಇದಕ್ಕೆಲ್ಲಾ ಸೂತ್ರಧಾರ ಯಾರೆಂಬುದು ಕ್ಲೈಮಾಕ್ಸ್‍ದಲ್ಲಿ ತಿಳಿಯಲಿದೆ. ಕತೆಯಲ್ಲಿ ಆತ ಟ್ರಾಫಿಕ್ ಇನ್ಸ್‍ಪೆಕ್ಟರ್. ವಾಹನ ಸಂಚಾರಿ ನಿಯಮವನ್ನು ಪಾಲಿಸದಿರುವವರಿಗೆ ದಂಡ ವಿಧಿಸಬೇಕಾದ ಅಧಿಕಾರಿಗೆ ಅಪರಾಧಿಗಳನ್ನು ಬೆನ್ನಟ್ಟುವ ಬಯಕೆ. ಒಂದು ಕಡೆ ಕೆಲಸವನ್ನು ಮಾಡುತ್ತಾ, ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಕ್ರೈಂ ವಿಭಾಗದಲ್ಲಿ ತೊಡಗಿಕೊಳ್ಳುತ್ತಾನೆ. ಮುಂದೆ ಅದೇ ಇಲಾಖೆಯಿಂದ ಸಹಕಾರ ಸಿಕ್ಕಾಗ ಮೂರುವರೆ ದಶಕದ ಕೆಳಗೆ ನಡೆದ ಕೊಲೆಯನ್ನು ಹೇಗೆ ಭೇದಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇವಿಷ್ಟನ್ನು ನೋಡುಗರು ಹೊರಗೆ ಹೋಗದಂತೆ ಸನ್ನಿವೇಶಗಳು ಸೃಷ್ಟಿಸಿರುವ ನಿರ್ದೇಶಕ ಜಾಣ್ಮೆಯನ್ನು ನಿಜಕ್ಕೂ ಮೆಚ್ದಬೇಕಾಗಿದೆ.

ಆಪರೇಶನ್ ಅಲಮೇಲಮ್ಮ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ರಿಶಿ, ಈ ಚಿತ್ರದ ಮೂಲಕ ಕಮರ್ಷಿಯಲ್ ಚಿತ್ರಕ್ಕೆ ಬೇಕಾಗುವ ಎಲ್ಲಾ ಅರ್ಹತೆಗಳನ್ನು ಪಡೆದುಕೊಳ್ಳುವಲ್ಲಿ ಸಪಲರಾಗಿದ್ದಾರೆ. ಇಡೀ ಚಿತ್ರಕ್ಕೆ ಅನಂತ್‍ನಾಗ್ ಮುತ್ತಣ್ಣ್ಪನಾಗಿ ಹೈಲೈಟ್ ಆಗಿದ್ದಾರೆ. ಅವರ ಅಭಿನಯದ ಬಗ್ಗೆ ಹೇಳಬೇಕಾದರೆ ಪದಗಳು ಸಾಲದು.. ಇವರಿಗೆ ಸರಿಸಾಟಿಯಾಗಿ ಪತ್ರಕರ್ತನ ಪಾತ್ರದಲ್ಲಿ ಅಚ್ಯುತಕುಮಾರ್, ರಾಜಕೀಯ ಧುರೀಣನಾಗಿ ಸಂಪತ್ ಗಮನ ಸೆಳೆದಿದ್ದಾರೆ. ರೋಶಿನಿಪ್ರಕಾಶ್ ಎರಡನೆ ಚಿತ್ರದಲ್ಲಿ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಬಂದರೂ, ನೆನಪಿನಲ್ಲಿ ಉಳಿಯುವುದು ಕೆಲವೇ ಪಾತ್ರಧಾರಿಗಳು. ಗೋಧಿಬಣ್ಣ ಸಾಧಾರಣ ಮೈಕಟ್ಟುದಲ್ಲಿ ಅಪ್ಪ-ಮಗನ ಬಾಂದವ್ಯವನ್ನು ತೋರಿಸಿದ್ದ ನಿರ್ದೇಶಕ ಹೇಮಂತ್‍ರಾವ್ ಎರಡನೆ ಪ್ರಯತ್ನದಲ್ಲಿ ಕ್ರೈ ಥ್ರಿಲ್ಲರ್ ಜಾನರ್‍ಗೆ ಮೊರೆಹೋಗಿದ್ದಾರೆ. ಚರಣ್‍ರಾಜ್ ಶಬ್ದಗಳು ದೃಶ್ಯಗಳಿಗೆ ಹೇಳಿಮಾಡಿಸಿದಂತಿದೆ. ವಿದೇಶದಲ್ಲಿ ಹಿನ್ನಲೆ ಸಂಗೀತ ಮಾಡಿಸಿದ ಬಗ್ಗೆ ಸುದ್ದಿಯಾಗಿತ್ತು. ಅದು ಸಿನಿಮಾದಲ್ಲಿ ಕಾರ್ಯಗತವಾಗಿದೆ. ಇದಕ್ಕೆ ಸರಿಯಾಗಿ ಅದ್ವೈತ್‍ಗುರುಮೂರ್ತಿ ಛಾಯಾಗ್ರಹಣ ಕಾಯಕವನ್ನು ಮರೆಯಲಾಗದು. ಕೊನೆಯಲ್ಲಿ ಪುನೀತ್‍ರಾಜ್‍ಕುಮಾರ್ ಹಾಡಿರುವ ಗೀತೆಯೊಂದಿಗೆ ಶುಭಂ ಕಾಣುತ್ತದೆ ಅಲ್ಲದೆ ಮೊದಲಬಾರಿ ಪಿಆರ್‍ಕೆ ಬ್ಯಾನರ್ ಮೂಲಕ ಜನರು ಇಷ್ಟಪಡುವ ಕತೆಯನ್ನು ಆರಿಸಿಕೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ.
ನಿರ್ಮಾಣ: ಅಶ್ವಿನಿಪುನೀತ್‍ರಾಜ್‍ಕುಮಾರ್
ಸಿನಿ ಸರ್ಕಲ್.ಇನ್ ವಿಮರ್ಶೆ
****
13/04/19

ಬಿಡುಗಡೆಯ ಹಾದಿಯಲ್ಲಿ ಕವಲುದಾರಿ
ಮರ್ಡರ್ ಮಿಸ್ಟರ್ ಕತೆ ಹೊಂದಿರುವ ‘ಕವಲುದಾರಿ’ ಚಿತ್ರದಲ್ಲಿ ಬರುವ ಸನ್ನಿವೇಶಗಳು ಪ್ರಸಕ್ತ ರಾಜಕೀಯ ಚುನಾವಣೆಗೆ ಸಮಂಜಸವಾಗಲಿದೆ ಅಂತ ತಂಡವು ಹೇಳಿಕೊಂಡಿದೆ. ಇದರೊಂದಿಗೆ ಸಮಾಜದಲ್ಲಿ ಪೋಲೀಸ್ ಅಧಿಕಾರಿಗಳಿಗೆ ಯಾವ ಸ್ಥಾನ ಇದೆ. ಸಮಾಜವು ಇವರನ್ನು ಹೇಗೆ ನೋಡುತ್ತದೆ. ಇಂತಹ ಕ್ಲಾಸಿಕ್ ಅಂಶಗಳು ಇರಲಿದೆ. ವಿನೂತನ ಎನ್ನುವಂತೆ ಟಿಶ್ಯು ಪೇಪರ್‍ದಲ್ಲಿ ಸಿನಿಮಾದ ಹೆಸರನ್ನು ಹಾಕಲಾಗಿದೆ. ಮೊದಲ ಹಂತವಾಗಿ ಮೈಸೂರು, ಬೆಂಗಳೂರು ಕಡೆಗಳಲ್ಲಿ ಸುಮಾರು ಎರಡು ಲಕ್ಷ ಮುದ್ರಣ ಮಾಡಿಸಲಾಗಿದೆ. ಚೆನ್ನೈ, ಕೊಚ್ಚಿನ್, ದೆಹಲಿ, ಬಾಂಬೆ, ಪುಣೆ, ಕಲ್ಕತ್ತಾ ಕಡೆಗಳಲ್ಲಿ ಬಿಡುಗಡೆ ಮಾಡಲಾಗುವುದೆಂದು ರಚನೆ,ನಿರ್ದೇಶಕ ಹೇಮಂತ್‍ರಾವ್ ವ್ಯಾಖ್ಯಾನ.

ಹೊರ ದೇಶದಲ್ಲಿ ಹಿನ್ನಲೆ ಸಂಗೀತದ ಕೆಲಸ ಮಾಡಿದ್ದು ಮರೆಯಲಾಗದ ಅನುಭವವೆಂದು ಚರಣ್‍ರಾಜ್ ಸಂತಸವನ್ನು ವ್ಯಕ್ತಪಡಿಸುತ್ತಾರೆ. ದೇಶದ ಮನಸ್ಥಿತಿ ಇರುವುದರ ಪರಿಸ್ಥಿತಿಯಲ್ಲಿ ಇಂತಹ ಚಿತ್ರವು ತೆರೆ ಕಾಣುತ್ತಿರುವುದು ರಿಲಿವಂಟ್ ಆಗಿದೆ ಎನ್ನಬಹುದು ಎಂಬುದು ಟ್ರಾಫಿಕ್ ಇನ್ಸ್‍ಪೆಕ್ಟರ್ ರಿಶಿ ನುಡಿ. ರೋಶಿನಿಪ್ರಕಾಶ್ ಪಾತ್ರ ಏನೆಂದು ತಿಳಿದಿಲ್ಲ. ಚಿತ್ರಮಂದಿರದಿಂದ ಹೊರ ಬರುವ ಪ್ರೇಕ್ಷಕರು ಪೋಲೀಸ್, ಯೋಧರು, ಪ್ಯಾರಾ ಮಿಲಿಟರಿ ನೌಕರರುಗಳಿಗೆ ಗೌರವ ಕೊಡುತ್ತಾರೆ. ಪುರುಷ ಮತ್ತು ಮಹಿಳೆಗೆ ಒಂದೇ ತರಹದ ಸಮವಸ್ತ್ರ ಇರಬೇಕೆಂದು ಹೇಳುತ್ತದೆಂದು ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಅನಂತ್‍ನಾಗ್ ಮಾತು.

ಸ್ಯಾಟಲೈಟ್, ಡಿಜಿಟಲ್ ಹಕ್ಕುಗಳು ಮಾರಾಟವಾಗಿದೆ. ಅಮೆಜಾನ್ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಲಿನ ಜನರು ವಿದೇಶಿ ಚಿತ್ರದಂತೆ ನೋಡಬಹುದು. ಪಿಆರ್‍ಕೆ ಮೂಲಕ ಈ ವರ್ಷದಲ್ಲಿ ಮೂರು ಸಿನಿಮಾಗಳು ಬರಲಿದೆ ಎಂದು ಎಂದು ನಿರ್ಮಾಪಕಿ ಪರವಾಗಿ ಪುನೀತ್‍ರಾಜ್‍ಕುಮಾರ್ ಹೇಳಿದರು. ಧೀರಜ್ ವಿತರಣೆ ಸಂಸ್ಥೆ ಮೂಲಕ ಶುಕ್ರವಾರದಂದು ಸುಮಾರು ಇನ್ನೂರಕ್ಕೂ ಹೆಚ್ಚು ಕೇಂದ್ರಗಳಲ್ಲಿ ರಾಜ್ಯದ್ಯಂತ ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/04/19
\

ಏಪ್ರಿಲ್‍ಗೆ ಕವಲುದಾರಿ

‘ಕವಲುದಾರಿ’ ಚಿತ್ರದ ಆಡಿಯೋ ಸಿಡಿಯು ಲೋಕಾರ್ಪಣೆಗೊಂಡಿತು. ನಿರ್ದೇಶಕ ಹೇಮಂತ್‍ರಾವ್ ಮಾತನಾಡಿ ಚಿತ್ರದಲ್ಲಿ ಒಂಬತ್ತು ಹಾಡುಗಳು ಇರಲಿದ್ದು, ಐದು ಗೀತೆಗಳನ್ನು ಹೂರಬಿಡಲಾಗುತ್ತಿದೆ. ಮಾರ್ಚ್ ತಿಂಗಳು ಆಗಿರುವುದರಿಂದ ಮಾರ್ಚ್ ಆಫ್ ಕವಲುದಾರಿ ಸಾಂಗ್ಸ್ ಎನ್ನಬಹುದು. ಬಾಕಿ ನಾಲ್ಕು ಗೀತೆಯನ್ನು ಪ್ರತಿ ಸೋಮವಾರ ಒಂದೊಂದು ಬಿಡುಗಡೆ ಮಾಡಲಾಗುವುದು. ಸಂಚಿತ್‍ಹೆಗಡೆ ಕಂಠದಾನದ ‘ನಿಗೂಡ ನಿಗೂಡ’ ಹೈಲೈಟ್ ಆಗಿದೆ ಎಂದರು. ನಿವೃತ್ತ ಪೋಲೀಸ್ ಅಧಿಕಾರಿ ಕಾಣಿಸಿಕೊಂಡಿದ್ದೇನೆ. ಚಿತ್ರವನ್ನು ಯೋಧರಿಗೆ ಅರ್ಪಿಸಲಾಗುವುದೆಂದು ನಿರ್ದೇಶಕರು ಹೇಳಿದ್ದಾರೆ. ಪ್ರೇಕ್ಷಕ ಹೊರಬರುವಾಗ ಆತನ ದೃಷ್ಟಿಕೋನ ಬದಲಾಗುತ್ತದೆಂದು ಅನಂತ್‍ನಾಗ್ ಹೇಳಿದರು.

ಪಿಆರ್‍ಕೆ ಹುಟ್ಟುಹಾಕಿ ಒಂದು ವರ್ಷ ಮೂರು ತಿಂಗಳು ಆಗಿದೆ. ಪತ್ನಿ ನಿರ್ಮಾಪಕಿ, ನಾನು ಕೇವಲ ಪ್ರಸೆಂಟರ್. ನಮ್ಮ ಸಂಸ್ಥೆಯಿಂದ ಎರಡನೆ ಚಿತ್ರ ಮಾಯಾಬಜಾರ್, ಮತ್ತೋಂದು ಚಾಲನೆ ಆಗಿದೆ. ತಂಡದ ಪ್ರಯತ್ನ ಮಿಕ್ಕಿದ್ದು ಜನರಿಗೆ ಬಿಟ್ಟದ್ದು. ಚಿಕ್ಕವನಾಗಿದ್ದಾಗ ಶಂಕರ್‍ನಾಗ್ ಇಷ್ಟವೆಂದು ಅನಂತ್‍ಸರ್‍ಗೆ ಹೇಳಿದ್ದೆ. ಈಗ ಇಬ್ಬರ ಅಭಿಮಾನಿಯಾಗಿರುವೆ. ಚರಣ್‍ರಾಜ್ ತಡವಾದರೂ ಒಳ್ಳೆ ಹಾಡುಗಳನ್ನು ಕೊಡುತ್ತಾರೆ ಎಂದು ಪುನೀತ್‍ರಾಜ್‍ಕುಮಾರ್ ತಿಳಿಸಿದರು.

ಅಪ್ಪು ಅಮ್ಮನನ್ನು ಹಿಂಬಾಲಿಸುತ್ತಿದ್ದಾನೆ. ಅವನು 1975ರಲ್ಲಿ ಹುಟ್ಟಿದ ವರ್ಷದಂದೇ ವಜ್ರೇಶ್ವರಿ ಕಂಬೈನ್ಸ್ ಶುರುವಾಯಿತು. ನಿರ್ಮಾಣ ಮಾಡಿದ ಚಿತ್ರಗಳಲ್ಲಿ ಶೇಕಡ 85ರಷ್ಟು 100 ದಿನ ಪ್ರದರ್ಶನ ಕಂಡಿದೆ. ಸಂಸ್ಥೆ ಹೆಸರಿನಲ್ಲಿ ಎಲ್ಲರ ಹೆಸರು ಇದೆ. ಗಂಡನಿಗೆ ಹೆಂಡತಿ ಸಾಥ್ ಇದ್ದರೆ ಏನು ಬೇಕಾದರೂ ಮಾಡಬಹುದೆಂದು ಅಮ್ಮ ತೋರಿಸಿದ್ದರು. ಅವರಂತೆ ಅಶ್ವಿನಿಪುನೀತ್ ಹೋಗುತ್ತಿದ್ದಾರೆ. ತಂತ್ರಜ್ಘರು ಮುಂದೆ ಬರಬೇಕೆಂದು ಬಯಸುವ ಇವರ ಗುಣವನ್ನು ಮೆಚ್ಚಲೇ ಬೇಕಾಗಿದೆ. ಇಂತಹ ತಮ್ಮನ ಅಣ್ಣನಾಗಿ ಇರುವುದೇ ಸುಕೃತವೆಂದು ರಾಘವೆಂದ್ರರಾಜ್‍ಕುಮಾರ್ ಶುಭ ಹಾರೈಸಿದರು. ಹಿನ್ನಲೆ ಸಂಗೀತವನ್ನು ಯುರೋಪ್‍ನಲ್ಲಿ 80 ಸಂಗೀತಗಾರರಿಂದ ಕೆಲಸ ಮಾಡಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ವಂದನೆಗಳು ಅಂತಾರೆ ಸಂಗೀತ ನಿರ್ದೇಶಕ ಚರಣ್‍ರಾಜ್. ಕಲವಿದರಾದ ರೋಶಿನಿಪ್ರಕಾಶ್, ಸಮನ್ವಿತಾಶೆಟ್ಟಿ, ಗಾಯಕ ಸಂಚಿತ್‍ಹೆಗ್ಗಡೆ ಮುಂತಾದವರು ಉಪಸ್ತಿತರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/03/19ಒಂದು ಕೊಲೆಯ ಸುತ್ತ
ಪುನೀತ್‍ರಾಜ್‍ಕುಮಾರ್ ಹುಟ್ಟು ಹಾಕಿರುವ ‘ಪಾರ್ವತಮ್ಮ ರಾಜ್‍ಕುಮಾರ್ ಫಿಲ್ಮ್ಸ್’ ಸಂಸ್ಥೆ ಮೂಲಕ ಮೊದಲಬಾರಿ ನಿರ್ಮಾಣವಾಗುತ್ತಿರುವ ‘ಕವಲುದಾರಿ’ ಚಿತ್ರವು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮಹೂರ್ತ ಆಚರಿಸಿಕೊಂಡಿತು. ಮೊದಲ ದೃಶ್ಯಕ್ಕೆ ಶಿವರಾಜ್‍ಕುಮಾರ್ ಕ್ಲಾಪ್ ಮಾಡಿ ಶುಭ ಹಾರೈಸಿದ ನಂತರ ತಂಡವು ಮಾದ್ಯಮದ ಎದುರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು. ಥ್ರಿಲ್ಲರ್ ರೀತಿಯಲ್ಲಿ ಒಂದು ಕೊಲೆ ನಡೆಯುತ್ತದೆ. ಅದನ್ನು ಹೇಗೆ ತನಿಖೆ ಮಾಡುತ್ತಾರೆ. ಹಳಬರು ಹೊಸಬರು ಸೇರಿಕೊಂಡು ಸುಳಿವನ್ನು ಕಂಡಿಹಿಡಿಯುವುದೇ ಸಿನಿಮಾದ ತಿರುಳು. ಗೋಧಿ ಬಣ್ಣ ಮಾಡುವಾಗಲೇ ಇಂತಹ ಕತೆ ಮಾಡಬೇಕಂದು ಯೋಚನೆ ಬಂತು. ತೆರೆ ಮೇಲೆ ಪೋಲಿಸರು ಯಾವ ರೀತಿ ಇರುತ್ತಾರೆ. ರಿಯಲ್ ಆಗಿ ಅವರ ಬದುಕನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಮೊದಲ ಹಂತದ 30 ದಿನಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದೆ ಎಂಬುದರ ಮಾಹಿತಿ ಬಿಚ್ಚಿಟ್ಟರು ರಚನೆ,ನಿರ್ದೇಶಕ ಹೇಮಂತ್.ಎಸ್.ರಾವ್. ನುರಿತ ಪೋಲೀಸ್ ಅಧಿಕಾರಿಗಳ ಕೆಲಸ, ಪ್ರಸಕ್ತ ಅಧಿಕಾರಿ. ಇವರಿಬ್ಬರ ಸಮ್ಮಿಲನದಿಂದ ಹಂತಕರನ್ನು ಬೇಟೆಯಾಡುತ್ತಿದ್ದೇವೆ. ನಿರ್ದೇಶಕರಲ್ಲಿ ಒಳ್ಳೆ ಪ್ರತಿಭೆ ಇರುವುದು ಗೋಧಿ ಬಣ್ಣ ಮಾಡುವಾಗಲೆ ತಿಳಿಯಿತು. ನಂತರ ಕಾಮನಬಿಲ್ಲು, ಭಕ್ತಪ್ರಹ್ಲಾದ ಚಿತ್ರಗಳ ನೆನಪು ಮಾಡಿಕೊಂಡರು ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಕಾಣ ಸಿಕೊಳ್ಳುತ್ತಿರುವ ಅನಂತ್‍ನಾಗ್.

ಅಮ್ಮ 81 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅವರ ಹೆಸರಿನಲ್ಲಿ ಸ್ಥಾಪನೆ ಮಾಡಲಾಗಿದ್ದು 100 ಸಂಖ್ಯೆಗೆ ತೆಗೆದುಕೊಂಡು ಹೋಗುವ ಇರಾದೆ ಇದೆ. ಹೊಸಕತೆ,ಹೊಸತನ ಇರುವ ಯಾರೇ ಬಂದರೂ ಸರಿ ನಿರ್ಮಾಣ ಮಾಡಲು ಸಿದ್ದ. ನಮ್ಮ ಬ್ಯಾನರ್‍ನಲ್ಲಿ ಮುಂದಿನ ವರ್ಷ ನನ್ನದೆ ನಾಯಕತ್ವದ ಸಿನಿಮಾ ಬರಲಿದೆ ಎಂದು ಹೇಳಿದರು ಪುನೀತ್‍ರಾಜ್‍ಕುಮಾರ್. ಮೊದಲಿನಿಂದಲೂ ಅಪ್ಪು ಸರ್ ಅಭಿಮಾನಿ. ಇಂದು ಅವರ ಬ್ಯಾನರ್‍ನಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ನನ್ನ ಸುಕೃತ ಎನ್ನಬಹುದು. ಟ್ರಾಫಿಕ್ ಪೋಲೀಸ್ ಇನ್ಸೆಪೆಕ್ಟರ್, ತನಿಖಾದಿಕಾರಿ ಎರಡು ಶೇಡ್‍ನಲ್ಲಿ ನಟಿಸುತ್ತಿದ್ದೇನೆಂದು ಪರಿಚಯ ಮಾಡಿಕೊಂಡರು ಅಲಮೇಲಮ್ಮ ಖ್ಯಾತಿಯ ರಿಷಿ. ತಂದೆ ಮಾಡಿದ ಸಾಲವನ್ನು ಜವಬ್ದಾರಿ ಹೊತ್ತುಕೊಂಡು ತೀರಿಸುವ ಪಾತ್ರ. ಅಡಿಷನ್‍ಗೆ ಹೋದಾಗ ನಾನೇ ಆಯ್ಕೆಯಾಗುತ್ತೇನೆಂದು ತಿಳಿದಿರಲಿಲ್ಲ. ಕರೆ ಬಂದಾಗ ನಂಬಲಿಕ್ಕೆ ಆಗಲಿಲ್ಲ ಅಂತ ಖುಷಿಯನ್ನು ವ್ಯಕ್ತಪಡಿಸಿದರು ನಾಯಕಿ ರೋಶಿನಿಪ್ರಕಾಶ್. ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿರುವುದಾಗಿ ಹೇಳಿಕೊಂಡರು ಚರಣ್‍ರಾಜ್. ಪುನೀತ್‍ರಾಜ್‍ಕುಮಾರ್ ಒಂದು ಕರೆಗೆ ರಕ್ಷಿತ್‍ಶೆಟ್ಟಿ, ರಾಕ್‍ಲೈನ್‍ವೆಂಕಟೇಶ್, ಅನೂಪ್‍ಭಂಡಾರಿ, ರಾಜ್ ಕುಟುಂಬ ಇನ್ನು ಅನೇಕ ಸ್ಟಾರ್‍ನಿರ್ದೇಶಕರು, ಕಲಾವಿದರು, ನಿರ್ಮಾಪಕರುಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.
-24/09/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore