HOME
CINEMA NEWS
GALLERY
TV NEWS
REVIEWS
CONTACT US

ಕವಚ ಚಿತ್ರಕ್ಕೆ ಡಾ.ರಾಜ್ ಹಾಡು
‘ಹೊಸ ಬೆಳಕು’ ಚಿತ್ರವು 1982ರಲ್ಲಿ ತೆರೆಕಂಡು ಹಿಟ್ ಆಗಿತ್ತು. ಚಿ.ಉದಯಶಂಕರ್ ಸಾಹಿತ್ಯ, ಎಂ.ರಂಗರಾವ್ ಸಂಗೀತದ ಶೀರ್ಷಿಕೆ ಗೀತೆಯನ್ನು ಡಾ.ರಾಜ್‍ಕುಮಾರ್ ಹಾಡಿದ್ದು ಸಾರ್ವಕಾಲಿಕವಾಗಿ ಕೇಳುವಂತಿದೆ. ಇದನ್ನು ಹೇಳಲು ಪೀಠಿಕೆ ಇದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೊದಲ ಬಾರಿ ಅಂದನಾಗಿ ಕಾಣಿಸಿಕೊಂಡಿರುವ ‘ಕವಚ’ ಸಿನಿಮಾಕ್ಕೆ ಇದೇ ಗೀತೆಯನ್ನು ಮರುಬಳಕೆ ಮಾಡಿಕೊಂಡಿದ್ದಾರೆ. ಸದರಿ ಹಾಡಿಗೆ ಅರ್ಜುನ್‍ಜನ್ಯಾ ಸಂಗೀತ ಒದಗಿಸಿದ್ದು, ವಿಜಯಪ್ರಕಾಶ್ ಧ್ವನಿಯಾಗಿದ್ದಾರೆ. ಸೆಲೆಬ್ರೇಷನ್ ಸಾಂಗ್ ಆಗಿದ್ದು, ಸಂದರ್ಭಕ್ಕೆ ತಕ್ಕಂತೆ ಬರಲಿದೆಯಂತೆ. ನಿರ್ದೇಶನ ಜಿವಿಆರ್ ವಾಸು ಅವರದಾಗಿದೆ. ಮಲೆಯಾಳಂದಲ್ಲಿ ‘ಒಪ್ಪಂ’ ಹೆಸರಿನಲ್ಲಿದ್ದು, ಕನ್ನಡದಲ್ಲಿ ಕವಚ ಆಗಿದೆ. ಧೀರ್ಘ ಕಾಲದ ಗ್ಯಾಪ್ ನಂತರ ಶಿವಣ್ಣ ರಿಮೇಕ್ ಸಿನಿಮಾದಲ್ಲಿ ನಟಿಸಿದ್ದು, ಕುತೂಹಲ ಮೂಡಿಸಿದೆ. ಮೂಲ ಕತೆಯಿಂದ ಶೇಕಡ 50 ಭಾಗವನ್ನು ತೆಗೆದುಕೊಂಡಿದ್ದು, ಉಳಿದುದನ್ನು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ಎಂವಿವಿ ಸತ್ಯನಾರಾಯಣ ನಿರ್ಮಾಣ ಮಾಡಿರುವ ಚಿತ್ರವು ಇದೇ ತಿಂಗಳು 18ರಂದು ಜನರಿಗೆ ತೋರಿಸಲು ಸಜ್ಜಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
3/01/19

ಜನವರಿ ಮೂರನೆ ವಾರಕ್ಕೆ ಕವಚ
ಎರಡು ದಶಕದ ನಂತರ ರಿಮೇಕ್ ಸಿನಿಮಾದಲ್ಲಿ ಅಂದನಾಗಿ ನಟಿಸಿರುವ ಶಿವರಾಜ್‍ಕುಮಾರ್ ಅಭಿನಯದ ‘ಕವಚ’ ಸಿನಿಮಾವು ಇತ್ತೀಚೆಗೆ ಎಲ್ಲಾ ಕಡೆಗಳಿಂದ ಸದ್ದು ಮಾಡುತ್ತಿದೆ. ಜಿವಿಆರ್.ವಾಸು ನಿರ್ದೇಶನ ಮಾಡಿದ್ದು ಸಾಗರ, ಬೆಂಗಳೂರು, ಮೈಸೂರು, ಮಡಕೇರಿ, ಊಟಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾರಗಣದಲ್ಲಿ ಕೃತಿಕಾ, ರಮೇಶ್‍ಭಟ್, ಗಿರಿಜಾಲೋಕೇಶ್, ರವಿಕಾಳೆ, ಲಕ್ಷೀಹಗಡೆ, ವಸಿಷ್ಟಸಿಂಹ, ಕೃತಿಕಾ, ರವೀಂದ್ರನಾಥ್, ರಾಜೇಶ್‍ನಟರಂಗ, ಇತಿಆಚಾರ್ಯ, ಲಯೇಂದ್ರ, ತಬಲನಾಣಿ, ನವೀನ್, ಆಮದು ಬಾಲನಟಿ ಮೀನಾಕ್ಷಿ, ರಾಹುಲ್, ನಂದಿನಿವಲ್ಲೀಶ್, ದಿಗಂತ್‍ದಿವಾಕರ್ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ಜನ್ಯಾ ಸಂಗೀತದ ಹಾಡುಗಳು ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಎರಡು ಸಾಹಸಗಳು ಇರಲಿದ್ದು, ಮನಸ್ಸಿನೊಳಗೆ ಕಾಣುವ ಕಣ್ಣು, ಶಬ್ದ ಮತ್ತು ವಾಸನೆಯಿಂದ ಎದುರಾಳಿಗೊಂದಿಗೆ ಹೋರಾಡುವುದು ವಿಶೇಷವಾಗಿದೆ. ಎಂವಿವಿ ಸತ್ಯನಾರಾಯಣ ನಿರ್ಮಾಣ ಮಾಡಿರುವ ಚಿತ್ರವು ಇದೇ ತಿಂಗಳು 18ರಂದು ರಾಜ್ಯದ್ಯಂತೆ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
1/01/19

ಡಿಸೆಂಬರ್ 21ಕ್ಕೆ ಕವಚ ಟ್ರೈಲರ್ ಬಿಡುಗಡೆ
ಎರಡು ದಶಕದ ನಂತರ ರಿಮೇಕ್ ಸಿನಿಮಾದಲ್ಲಿ ಅಂದನಾಗಿ ನಟಿಸಿರುವ ಶಿವರಾಜ್‍ಕುಮಾರ್ ಅಭಿನಯದ ‘ಕವಚ’ ಸಿನಿಮಾವು ಇತ್ತೀಚೆಗೆ ಎಲ್ಲಾ ಕಡೆಗಳಿಂದ ಸದ್ದು ಮಾಡುತ್ತಿದೆ. ಜಿವಿಆರ್.ವಾಸು ನಿರ್ದೇಶನ ಮಾಡಿದ್ದು ಸಾಗರ, ಬೆಂಗಳೂರು, ಮೈಸೂರು, ಮಡಕೇರಿ, ಊಟಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾರಗಣದಲ್ಲಿ ಕೃತಿಕಾ, ರಮೇಶ್‍ಭಟ್, ಗಿರಿಜಾಲೋಕೇಶ್, ರವಿಕಾಳೆ, ಲಕ್ಷೀಹಗಡೆ, ವಸಿಷ್ಟಸಿಂಹ, ಕೃತಿಕಾ, ರವೀಂದ್ರನಾಥ್, ರಾಜೇಶ್‍ನಟರಂಗ, ಇತಿಆಚಾರ್ಯ, ಲಯೇಂದ್ರ, ತಬಲನಾಣಿ, ನವೀನ್, ಆಮದು ಬಾಲನಟಿ ಮೀನಾಕ್ಷಿ, ರಾಹುಲ್, ನಂದಿನಿವಲ್ಲೀಶ್, ದಿಗಂತ್‍ದಿವಾಕರ್ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ಜನ್ಯಾ ಸಂಗೀತದ ಹಾಡುಗಳು ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಎರಡು ಸಾಹಸಗಳು ಇರಲಿದ್ದು, ಮನಸ್ಸಿನೊಳಗೆ ಕಾಣುವ ಕಣ್ಣು, ಶಬ್ದ ಮತ್ತು ವಾಸನೆಯಿಂದ ಎದುರಾಳಿಗೊಂದಿಗೆ ಹೋರಾಡುವುದು ವಿಶೇಷವಾಗಿದೆ. ಎಂವಿವಿ ಸತ್ಯನಾರಾಯಣ ನಿರ್ಮಾಣ ಮಾಡಿರುವ ಚಿತ್ರವು ಹೊಸ ವರ್ಷದಲ್ಲಿ ತೆರೆ ಕಾಣುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
20/12/18

ಡಿಸೆಂಬರ್ ಏಳರಂದು ಕವಚ
ಎರಡು ದಶಕದ ನಂತರ ರಿಮೇಕ್ ಸಿನಿಮಾದಲ್ಲಿ ಅಂದನಾಗಿ ನಟಿಸಿರುವ ಶಿವರಾಜ್‍ಕುಮಾರ್ ಅಭಿನಯದ ‘ಕವಚ’ ಸಿನಿಮಾವು ಇತ್ತೀಚೆಗೆ ಎಲ್ಲಾ ಕಡೆಗಳಿಂದ ಸದ್ದು ಮಾಡುತ್ತಿದೆ. ಜಿವಿಆರ್.ವಾಸು ನಿರ್ದೇಶನ ಮಾಡಿದ್ದು ಸಾಗರ, ಬೆಂಗಳೂರು, ಮೈಸೂರು, ಮಡಕೇರಿ, ಊಟಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾರಗಣದಲ್ಲಿ ಕೃತಿಕಾ, ರಮೇಶ್‍ಭಟ್, ಗಿರಿಜಾಲೋಕೇಶ್, ರವಿಕಾಳೆ, ಲಕ್ಷೀಹಗಡೆ, ವಸಿಷ್ಟಸಿಂಹ, ಕೃತಿಕಾ, ರವೀಂದ್ರನಾಥ್, ರಾಜೇಶ್‍ನಟರಂಗ, ಇತಿಆಚಾರ್ಯ, ಲಯೇಂದ್ರ, ತಬಲನಾಣಿ, ನವೀನ್, ಆಮದು ಬಾಲನಟಿ ಮೀನಾಕ್ಷಿ, ರಾಹುಲ್, ನಂದಿನಿವಲ್ಲೀಶ್, ದಿಗಂತ್‍ದಿವಾಕರ್ ಮುಂತಾದವರು ನಟಿಸಿದ್ದಾರೆ. ಅರ್ಜುನ್‍ಜನ್ಯಾ ಸಂಗೀತದ ಹಾಡುಗಳು ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಎರಡು ಸಾಹಸಗಳು ಇರಲಿದ್ದು, ಮನಸ್ಸಿನೊಳಗೆ ಕಾಣುವ ಕಣ್ಣು, ಶಬ್ದ ಮತ್ತು ವಾಸನೆಯಿಂದ ಎದುರಾಳಿಗೊಂದಿಗೆ ಹೋರಾಡುವುದು ವಿಶೇಷವಾಗಿದೆ. ಎಂವಿವಿ ಸತ್ಯನಾರಾಯಣ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ಮೊದಲವಾರದಂದು ಅದ್ದೂರಿಯಾಗಿ ತೆರೆಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
18/11/18

ದೇವರ ಮಕ್ಕಳ ಜಾಗದಲ್ಲಿ ಟೀಸರ್ ಲೋಕಾರ್ಪಣ
ಅಂದರು ಇರುವ ಜಾಗದಲ್ಲಿ ದೇವರು ಇರುತ್ತಾರೆಂದು ಹೇಳುತ್ತಾರೆ. ಅದರಂತೆ ‘ಕವಚ’ ಚಿತ್ರದ ಟೀಸರ್ ಅದೇ ಸ್ಥಳದಲ್ಲಿ ಅನಾವರಣಗೊಂಡಿತು. ನಾಯಕ ಅಂದನಾಗಿರುವುದರಿಂದ ನಿರ್ಮಾಪಕರ ಅಪೇಕ್ಷಯಂತೆ ಅಂದಮಕ್ಕಳು ತಂಡಕ್ಕೆ ಶುಭ ಹಾರೈಸುವದರೊಂದಿಗೆ ಸಿನಿಮಾದ ಪ್ರಚಾರವನ್ನು ಶುರು ಮಾಡಲಾಯಿತು. ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಜಿವಿಆರ್.ವಾಸು ಪ್ರಥಮ ಪ್ರತಿ ಸಿದ್ದಗೊಂಡಿದೆ. ಶಿವಣ್ಣ ಸರ್ ಹನ್‍ಮಾನ್ ಇದ್ದಂತೆ. ಎಲ್ಲಾ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆ. ಕಿಲ್ಲಿಂಗ್ ವೀರಪ್ಪನ್ ಸಮಯದಲ್ಲಿ ಅವರ ನಟನೆ ನೋಡಿ, ಈ ಚಿತ್ರಕ್ಕೆ ಇವರೇ ಸರಿಯಾಗಿದ್ದಾರೆಂದು ಅಂದೇ ತೀರ್ಮಾನಿಸಲಾಗಿತ್ತು ಎಂದು ಅವರನ್ನು ಹೊಗಳಿದರು.
ಶಿವಣ್ಣ ರೌಡಿ,ಕುರುಡ, ಒಳ್ಳೆ ಮಗ, ಪೋಲೀಸ್ ಅಧಿಕಾರಿಯಾಗಿ, ಕೊಳ್ಳೆಗಾಲದ ಭಾಷೆಯನ್ನು ಮಾತನಾಡುತ್ತಾ ಎಲ್ಲರಿಗೂ ಇಷ್ಟವಾಗಿದ್ದಾರೆ. ಅವರೊಂದಿಗೆ ನಟಿಸಿದ್ದು ಬ್ರೇಕ್ ನೀಡಿತು. ರೀಲ್‍ನಲ್ಲಿ ಅಲ್ಲದೆ ರಿಯಲ್‍ನಲ್ಲಿ ಅವರ ಸರಳತನ ಸೂಪರ್ ಎಂದು ಶುಭಹಾರೈಸಿದ್ದು ಧನಂಜಯ್.

ಕಣ್ಣಿದ್ದರೂ ಕಣ್ಣಿಲ್ಲದಂತೆ ನಟಿಸುವುದು ಕಷ್ಟದ ಕೆಲಸ. ನಾವುಗಳು ನಮ್ಮ ಭಾವನೆಗಳನ್ನು ಸುಲಭವಾಗಿ ಹೇಳಬಹುದು. ಅವರು ಒಳಮನಸ್ಸಿನಿಂದ ಹೇಳುತ್ತಾರೆ. ದೇವರ ಮೇಲೆ ಭಾರ ಹಾಕಿ ಇಂತಹ ಪಾತ್ರದಲ್ಲಿ ನಟಿಸಿದ್ದೇನೆ. ಅಪ್ಪಾಜಿ ಕಣ್ಣುಗಳನ್ನು ದಾನ ಮಾಡಿ ಇತರರಿಗೂ ಮಾದರಿಯಾಗಿದ್ದರು. ನಾನು ಸೇರಿದಂತೆ ಸಹೋದರರು ದೇಹದಾನ ಮಾಡಿದ್ದೇವೆ. ಕಲಾವಿದರಿಗೆ ಸಣ್ಣ ಪಾತ್ರವಾದರೂ ಅದರದೇ ಜವಬ್ದಾರಿ ಇದೆ. ಪಾಸಿಟೀವ್, ನೆಗಟೀವ್ ಎರಡನ್ನು ಸಮನಾಗಿ ತೆಗೆದುಕೊಂಡರೆ ಬದುಕು ಸುಂದರವಾಗಿರುತ್ತದೆ. ಆಸೆಯಿಂದ ಪಾತ್ರಕ್ಕೆ ಧ್ವನಿ ನೀಡಿದ್ದೇನೆ. ಹೋಗಬೇಕಾದರೆ ಇನ್ನೊಬ್ಬರ ಕವಚ ಆಗಲಿ ಎಂದು ತೂಕದ ಮಾತಿಗೆ ವಿರಾಮ ಹಾಕಿದರು ಶಿವರಾಜ್‍ಕುಮಾರ್.

ಟಗರು ಟ್ರೈಲರ್ ಇದೇ ಸ್ಥಳದಲ್ಲಿ ಬಿಡುಗಡೆ ಆಗಿತ್ತು. ಅಪ್ಪ ಡಾ.ರಾಜ್‍ಕುಮಾರ್ ಅಭಿಮಾನಿ. ನಾನು ಶಿವಣ್ಣನ ಅಭಿಮಾನಿಯಾಗಿದ್ದೇನೆ. ಅವರ ಸಿನಿಮಾದ ಪಾತ್ರಗಳು ಸೂಪರ್ ಆಗಿದೆ. ನನ್ನ ಕ್ಷೇತ್ರ ಅದರಲ್ಲೂ ರಮಣ ಮಹರ್ಷಿ ಅಂದರ ಆಶ್ರಮದಲ್ಲಿ ಇಂತಹ ಕಾರ್ಯಕ್ರಮ ನಡೆಸಿದ್ದು ಖುಷಿ ತಂದಿದೆ ಎಂಬುದು ಶಾಸಕಿ ಸೌಮ್ಯರೆಡ್ಡಿ ಮಾತಾಗಿತ್ತು.

ಕಲಾವಿದರಾದ ಕೃತಿಕಾ, ಇತಿಆಚಾರ್ಯ ಉಪಸ್ತಿತರಿದ್ದರು. ಎಂವಿವಿ ಸತ್ಯನಾರಾಯಣ ನಿರ್ಮಾಣ ಮಾಡಿರುವ ಸಿನಿಮಾವು ಸದ್ಯದಲ್ಲೆ ತೆರೆ ಕಾಣುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/11/18

ಕವಚ ಕುಂಬಳಕಾಯಿ
ಎಂಟು ತಿಂಗಳ ಕೆಳಗೆ ತೆಂಗಿನಕಾಯಿ ಒಡೆದು ‘ಕವಚ’ ಚಿತ್ರ ಶುರುವಾಗಿತ್ತು. ಮಂಗಳವಾರ ಕಂಠೀರವ ಸ್ಟುಡಿಯೋದಲ್ಲಿ ಕುಂಬಳಕಾಯಿ ಒಡೆಯುವುದರೊಂದಿಗೆ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದೆ. ಇದರನ್ವಯ ಚಿತ್ರದಲ್ಲಿ ನಟಿಸಿದ ಬಹುತೇಕ ಕಲಾವಿದರು ಮಾದ್ಯಮದ ಮುಂದೆ ಜಮಾಯಿಸಿದ್ದರು. ನಿರ್ದೇಶಕ ಜಿವಿಆರ್.ವಾಸು ಮಾತನಾಡಿ ಶಿವಣ್ಣನ ಸಹಕಾರವನ್ನು ಮರೆಯುವುದಕ್ಕೆ ಆಗುವುದಿಲ್ಲ. ಮೂಲ ಕತೆಗೆ ಧಕ್ಕೆಯಾಗದಂತೆ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಲಾಗಿದೆ. ಸಾಗರ, ಬೆಂಗಳೂರು, ಮೈಸೂರು, ಮಡಕೇರಿ, ಊಟಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣೋತ್ತರ ಕೆಲಸಗಳು ಶುರುವಾಗಲಿದ್ದು, ಸದ್ಯದಲ್ಲೆ ಬಿಡುಗಡೆ ಮಾಡಲಾಗುವುದು ಎಂದರು.

ಕಲಾವಿದರುಗಳಾದ ವಸಿಷ್ಟಸಿಂಹ, ಕೃತಿಕಾ, ರವೀಂದ್ರನಾಥ್, ರಾಜೇಶ್‍ನಟರಂಗ, ಇತಿಆಚಾರ್ಯ, ಲಯೇಂದ್ರ, ತಬಲನಾಣಿ, ನವೀನ್, ಆಮದು ಬಾಲನಟಿ ಮೀನಾಕ್ಷಿ, ರಾಹುಲ್, ನಂದಿನಿವಲ್ಲೀಶ್, ದಿಗಂತ್‍ದಿವಾಕರ್ ಎಲ್ಲರದು ಒಕ್ಕರೂಲ ಮಾತು. ಶಿವಣ್ಣರೊಂದಿಗೆ ನಟಿಸಿದ್ದು ಖುಷಿ ತಂದಿದೆ. ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್.

ಅವಸಾನದಲ್ಲಿ ಶಿವರಾಜ್‍ಕುಮಾರ್ ಸಿನಿಮಾದ ಬಗ್ಗೆ ಹೇಳುವುದಿಷ್ಟು : ಎಂಟು ತಿಂಗಳು ಕಳೆದಿದ್ದೇ ಗೊತ್ತಾಗಿಲ್ಲ. ರಮೇಶ್‍ಭಟ್, ಗಿರಿಜಾಲೋಕೇಶ್, ರವಿಕಾಳೆ, ಲಕ್ಷೀಹಗಡೆ, ಕೃತಿಕಾ ಮುಂತಾದವರು ಅದ್ಬುತವಾಗಿ ನಟಿಸಿದ್ದಾರೆ. ದೀರ್ಘಕಾಲದ ಗ್ಯಾಪ್ ನಂತರ ರಿಮೇಕ್ ಒಪ್ಪಿಕೊಳ್ಳಲು ಕಾರಣ ಕತೆ. ಮಲೆಯಾಳಂದಲ್ಲಿ ಮೋಹನ್‍ಲಾಲ್ ಮಾಡಿದ ಪಾತ್ರಕ್ಕೆ ಶೇಕಡ 30ರಷ್ಟು ನ್ಯಾಯ ಒದಗಿಸಿದ್ದೇನೆ. ಅಂದನ ಪಾತ್ರ ಮಾಡಲು ತಯಾರಿ ಇಲ್ಲದೆ ಬ್ಲೈಂಡ್ ಆಗಿ ಸೆಟ್‍ಗೆ ಹೋಗುತ್ತಿದ್ದೆ. ಅರ್ಜುನ್‍ಜನ್ಯಾ ಒಳ್ಳೆ ನಾಲ್ಕು ಹಾಡುಗಳನ್ನು ನೀಡಿದ್ದಾರೆ. ಎರಡು ಸಾಹಸಗಳು ಇರಲಿದ್ದು, ಮನಸ್ಸಿನೊಳಗೆ ಕಾಣುವ ಕಣ್ಣು, ಶಬ್ದ ಮತ್ತು ವಾಸನೆಯಿಂದ ಎದುರಾಳಿಗೊಂದಿಗೆ ಹೋರಾಡುತ್ತೇನೆ. ಗ್ಲಾಸ್ ಹಾಕದೆ ಮಾಮೂಲಿನಂತೆ ಕಾಣಿಸುತ್ತಿದ್ದರೂ ಕುರುಡನಂತೆ ನಟನೆ ಮಾಡುವುದು ಛಾಲೆಂಜ್ ಆಗಿತ್ತು. ಕೈಯಲ್ಲಿರುವ ಕಡ್ಡಿಯೇ ನನಗೆ ಕವಚವಾಗಿತ್ತು.

ಎಂವಿವಿ ಸತ್ಯನಾರಾಯಣ ನಿರ್ಮಾಣ ಮಾಡಿರುವ ಚಿತ್ರವು ಸೆಪ್ಟಂಬರ್‍ನಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
2/08/18ಒಳ್ಳೆ ಕತೆ ಸಿಕ್ಕರೆ ರಿಮೇಕ್ ಮಾಡಲು ಸಿದ್ದ -ಶಿವರಾಜ್‍ಕುಮಾರ್
ಸಾಕಷ್ಟು ವರ್ಷಗಳ ನಂತರ ರಿಮೇಕ್ ಚಿತ್ರ ‘ಕವಚ’ದಲ್ಲಿ ಅಭಿನಯಿಸಿ ತಾನು ಹಾಕಿಕೊಂಡಿದ್ದ ನಿರ್ಭಂದಕ್ಕೆ ತಾತ್ಕಲಿಕ ಬ್ರೇಕ್ ನೀಡಿದ್ದಾರೆ. ಶಿವಣ್ಣ ಹೇಳುವಂತೆ ರಿಮೇಕ್ ಮಾಡಬಾರದೆಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಮೋಹನ್‍ಲಾಲ್ ಚಿತ್ರ ನೋಡಿದ ಮೇಲೆ ಕತೆಯು ಕಾಡಿತು. ಏನೇ ಆದರೂ ಇದನ್ನು ಮಾಡಲೆಬೇಕೆಂದು ಎಲ್ಲವನ್ನು ಬದಿಗಿಟ್ಟು ಧೈರ್ಯ ಮಾಡಿ ಸಾಹಸಕ್ಕೆ ಇಳಿದೆ. ಮುಂದೆ ಒಳ್ಳೆ ಕತೆಗಳು ಬಂದಲ್ಲಿ ಯಾವುದೇ ಭಾಷೆಯ ಚಿತ್ರವಾದರೂ ಸರಿ, ಅದನ್ನು ಇಲ್ಲಿ ಮಾಡಲು ಸಿದ್ದ. ಕವಚ ಮುಗಿಸಿದ್ದೇನೆ. ರುಸ್ತುಂ, ದ್ರೋಣ ಚಿತ್ರಗಳು ಇದೆ. ಮೂರು ಕತೆಗಳನ್ನು ಕೇಳಲಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಪಿ.ಶೇಷಾದ್ರಿ ಹೇಳಿದ ಕತೆಯು ಹಿಡಿಸಿದೆ. ಅಂದುಕೊಂಡಂತೆ ಆದರೆ ಅವರೊಂದಿಗೆ ಚಿತ್ರ ಮಾಡುವ ಸಾದ್ಯತೆ ಇದೆ.

ಮನುಷ್ಯನಾದವನು ಹೊಸ ವರ್ಷದಲ್ಲಿ ಒಂದು ನಿರ್ಣಯ ತೆಗೆದುಕೊಳ್ಳುತ್ತಾರೆ. ಅದು ಸಿಗರೇಟ್, ಕುಡಿತ ಇತರೆ ಅಭ್ಯಾಸಗಳನ್ನು ತ್ಯಜಿಸುತ್ತಾರೆ. ಅದರಂತೆ ಈ ಬಾರಿ ಶಿವಣ್ಣ ಕೋಪ ಕಡಿಮೆ ಮಾಡಿಕೊಳ್ಳುವ ನಿರ್ಣಯಕ್ಕೆ ಬಂದಿದ್ದಾರೆ. ಸೆಟ್‍ನಲ್ಲಿ ಕೆಲವರಿಗೆ ರೇಗಿದ್ದು ಉಂಟು. ಇದರಿಂದ ಅವರಿಗೆ ಬೇಸರವಾಗಿರಬಹುದು. ಇನ್ನು ಮುಂದೆ ಈ ರೀತಿ ನಡೆದುಕೊಳ್ಳದಿರಲು ತೀರ್ಮಾನಿಸಿರುವ ಶಿವರಾಜ್‍ಕುಮಾರ್ ಎಷ್ಟರ ಮಟ್ಟಿಗೆ ಸಾದ್ಯ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
2/08/18
ನಿರ್ಧಾರವನ್ನು ಸಡಲಿಸಿದ ಶಿವರಾಜ್‍ಕುಮಾರ್
ರಿಮೇಕ್ ಚಿತ್ರಗಳನ್ನು ಮಾಡುವುದಿಲ್ಲವೆಂದು ಶಪಥ ಮಾಡಿದ್ದ ಶಿವರಾಜ್‍ಕುಮಾರ್ ಅದರಂತೆ ಹದಿನೈದು ವರ್ಷ ರೂಢಿಸಿಕೊಂಡು ಬಂದಿದ್ದರು. ಈಗ ಮಲೆಯಾಳಂ ಸೂಪರ್ ಹಿಟ್ ಚಿತ್ರ ಒಪ್ಪಂ ನೋಡಿದಾಕ್ಷಣ, ಕತೆಯ ಮೇಲೆ ಫಿದಾ ಆಗಿ, ಇದನ್ನು ಕನ್ನಡದಲ್ಲಿ ನಾನೇ ಮಾಡಬೇಕೆಂಬ ಅದಮ್ಯ ಬಯಕೆಯಿಂದ ನಿರ್ಧಾರವನ್ನು ಸಡಲಿಸಿದ್ದಕ್ಕೆ ‘ಕವಚ’ ಸಿನಿಮಾ ಸೆಟ್ಟೇರಿದೆ. ಕತೆಯಲ್ಲಿ ನಾಯಕ ಅಂಧ. ಲೋಕ ಕಾಣದಿದ್ದರೂ ಚಲನವಲನ, ದೈಹಿಕವಾಗಿ ಬಲಶಾಲಿಯಾಗಿರುತ್ತಾನೆ. ಒಂದು ಘಟನೆಯಿಂದ ಮಾನಸಿಕವಾಗಿ ಕುಗ್ಗುತ್ತಾನೆ. ಅದನ್ನು ಬುದ್ದಿವಂತಿಕೆಯಿಂದ ಹೇಗೆ ಸರಿಪಡಿಸಿಕೊಳ್ಳುತ್ತಾನೆ ಎಂಬುದು ಸಿನಿಮಾದ ತಿರುಳು. ಮೂಲ ಚಿತ್ರದಲ್ಲಿ ಮೋಹನ್‍ಲಾಲ್ ನಟನೆ ಮಾಡಿದ್ದು, ಶೇಕಡ 60 ರಷ್ಟು ಅವರಂತೆ ಹ್ಯಾಂಡ್‍ಸಮ್ ಕುರುಡನಾಗಿ ನಟಿಸಲು ಪ್ರಯತ್ನ ಪಡುವುದಾಗಿ ಮಾಧ್ಯಮದವರಲ್ಲಿ ಶಿವಣ್ಣ ಹೇಳಿಕೊಂಡಿದ್ದಾರೆ. ಇಶಾಕೊಪ್ಪಿಕರ್ ಪೋಲೀಸ್ ತನಿಖಾದಿ ಪಾತ್ರದಲ್ಲಿ ಕಾಣ ಸಿಕೊಳ್ಳುತ್ತಿದ್ಧಾರೆ.

ಖಳನಾಯಕನಾಗಿ ವಷಿಷ್ಟಸಿಂಹ ಮೂರನೆ ಬಾರಿ ಶಿವರಾಜ್‍ಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ಸಂತಸ ತಂದಿದೆಯಂತೆ. ಉಳಿದಂತೆ ರವಿಕಾಳೆ, ಮೀನಾಕ್ಷಿ, ತಬಲನಾಣ , ಸುಧಾಬೆಳವಾಡಿ, ಜಯಪ್ರಕಾಶ್ ಲಯೇಂದ್ರ ಮುಂತಾದವರ ನಟನೆ ಇದೆ. ಆರು ಹಾಡುಗಳಿಗೆ ಅರ್ಜುನ್‍ಜನ್ಯಾ ರಾಗ ಸಂಯೋಜಸುತ್ತಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಸಹಾಯಕ ನಿರ್ದೇಶನ ಮಾಡಿರುವ ಹೈದಾರಬಾದ್‍ನ ಜಿ.ವಿ.ಆರ್.ವಾಸು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಛಾಯಗ್ರಹಣ ರಾಹುಲ್‍ಶ್ರೀವಾತ್ಸವ್, ಸಾಹಸ ರವಿವರ್ಮ ಅವರದಾಗಿದೆ. ಹಯಗ್ರೀವ ಮೂವೀ ಅಧಿಷ್ಟಾನಂ ಸಂಸ್ಥೆ ಮೂಲಕ ಎಂ.ವಿ.ವಿ. ಸತ್ಯನಾರಾಯಣ ಮತ್ತು ಎ.ಸಂಪತ್‍ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಉತ್ತರಾಧಿ ಮಠದಲ್ಲಿರುವ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಹಿರಿಯ ನಿರ್ಮಾಪಕ,ವಿತರಕ ಜಯಣ್ಣ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು.
-24/11/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore