HOME
CINEMA NEWS
GALLERY
TV NEWS
REVIEWS
CONTACT US
ನೋಡುಗನಿಗೆ ತಿಳಿದಿದ್ದು, ಪಾತ್ರಗಳಿಗೆ ಗೊತ್ತಾಗುವುದಿಲ್ಲ
ಕುತೂಹಲ ಚಿತ್ರಗಳ ಅಂತ್ಯದಲ್ಲಿ ಯಾರು ಅಪರಾಧಿ, ಕೊಲೆಗಾರ ಎಂಬುದು ತಿಳಿಯುತ್ತದೆ. ಆದರೆ ‘ಕಟ್ಟು ಕಥೆ’ ಎನ್ನುವ ಸಿನಿಮಾದಲ್ಲಿ ರಹಸ್ಯ ಪ್ರೇಕ್ಷಕನಿಗೆ ತಿಳಿಯುತ್ತದೆ ಹೊರತು ಪಾತ್ರಗಳಿಗೆ ಕೊನೆತನಕ ಗೊತ್ತಾಗದಂತೆ ಸೃಷ್ಟಿಸಿರುವುದು ಮುಖ್ಯವಾಗಿದೆ. ಕತೆಯಲ್ಲಿ ಪಕ್ಕದ ಕಾಡಿನಲ್ಲಿರುವ ಒಂದು ಫಾರ್ಮ್ ಹೌಸ್‍ನಲ್ಲಿ ಕೊಲೆಗಳು ನಡೆಯುತ್ತವೆ ಆ ಮನೆಗೆ ಹೋಗಿದ್ದು ಯಾರು ಅಂತ ವಿಚಾರಣೆ ನಡೆಸಿದಾಗ ಒಬ್ಬ ಕಳ್ಳ ಎಂದರೆ, ಮತ್ತೋಬ್ಬ ದೆವ್ವ ಎಂದು ಆಣೆ ಮಾಡುತ್ತಾನೆ. ಮಗದೊಬ್ಬ ಆನೆ ಅಂತ ಭಾವಿಸಿರುತ್ತಾನೆ. ಇದರಲ್ಲಿ ಯಾರು ಕತೆ ಕಟ್ಟುತ್ತಿದ್ದಾರೆಂದು ಪೋಲೀಸ್ ಅಧಿಕಾರಿಗೆ ತಿಳಿಯುವುದಿಲ್ಲ. ಇವರಿಗೆ ಆದಂತೆ ನೋಡುಗರಿಗೂ ಅದೇ ರೀತಿ ಆಗುತ್ತದೆ. ಮೊದಲರ್ದ ಫಾರ್ಮ್‍ಹೌಸ್‍ಗೆ ಹೋಗುವುದು, ಅಲ್ಲಿ ಒಂದಷ್ಟು ಪಾತ್ರಗಳು ವಿಚಿತ್ರವಾಗಿ ವರ್ತಿಸಿ ನೋಡುಗರನ್ನು ಕಾಡುವುದರಲ್ಲೆ ಸಮಯ ತೆಗೆದುಕೊಳ್ಳುತ್ತದೆ. ವಿರಾಮದ ನಂತರ ಮರ್ಡರ್ ತನಿಖೆ ಶುರುವಾದಾಗ ಚಿತ್ರವು ಗಂಭೀರ ಸ್ವರೂಪ ತೆಗೆದುಕೊಳ್ಳುತ್ತದೆ. ಹಾಗಾದರೆ ಮೂರು ಕೊಲೆಗೂ ಸಂಬಂದಿವಿರಬಹುದೆಂದು ತನಿಖೆ ಮಾಡುತ್ತಿರುವಂತೆ, ಅದು ಎಲ್ಲಿಂದ ಎಲ್ಲಿಗೋ ಹೋಗಿ, ಇನ್ನೆಲ್ಲೋ ತಲುಪುತ್ತೆ. ಹಾಗಾದರೆ ಕೊಲೆಗಳು ಆಗಿದ್ದರ ರಹಸ್ಯವೇನು ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.

ನಿರ್ದೇಶಕ ರಾಜ್‍ಪ್ರವೀಣ್ ದೃಶ್ಯ, ಸನ್ನಿವೇಶಗಳನ್ನು ಪೂರ್ವತಯಾರಿ ಮಾಡಿಕೊಂಡಿದ್ದರಿಂದ ಮೊದಲು ನಗಿಸಿ, ನಂತರ ಬೆಚ್ಚಿ ಬೀಳಿಸುತ್ತಾರೆ. ಕಾಮಿಡಿಯನ್ನು ಅವಶ್ಯಕವಾಗಿಲ್ಲದಿದ್ದರೂ ತುರುಕಿದಂತಿದೆ. ಕಿವುಡನಾಗಿ ನಾಯಕ ಸೂರ್ಯ ಕಾಮಿಡಿಯಾಗಿ ಕಾಣಿಸಲು ಶ್ರಮಪಟ್ಟಿದ್ದಾರೆ. ನಾಯಕಿ ಸ್ವಾತಿಕೊಂಡೆ ಅಭಿನಯದಲ್ಲಿ ಪಳಗಬೇಕು. ಮಿತ್ರ, ಕಂಪೆಗೌಡ, ಮೋಹನ್‍ಜುನೇಜ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇಡೀ ಚಿತ್ರಕ್ಕೆ ರಾಜೇಶ್‍ನಟರಂಗ ಜೀವಾಳವಾಗಿದ್ದಾರೆ. ಕೊನೆತನಕ ಸೀಟಿಗೆ ಒರಗಿಕೊಳ್ಳದೆ ಮುಂದೆ ಇರುವಂತೆ ಮಾಡಲು ಅವರ ನಟನೆ ಸಾರ್ಥಕ ಎನ್ನಬಹುದು. ಮನು.ಬಿ.ಕೆ ಸೆರೆಹಿಡಿರುವ ಸುಂದರತಾಣಗಳಿಗೆ ಸಂಗೀತ ಒದಿಗಿಸಿರುವುದು ವಿಕ್ರಂಸುಬ್ರಮಣ್ಯ. ಕಟ್ಟುಕತೆ ಕಟ್ಟುವ ಜನರಿಗೆ ಸಿನಿಮಾ ಪ್ರಿಯವಾಗಲಿದೆ.
ನಿರ್ಮಾಣ: ಸ್ವೀಟ್‍ಮೈಸೂರು ಮಹದೇವ
ಸಿನಿ ಸರ್ಕಲ್.ಇನ್ ವಿಮರ್ಶೆ
17/06/18
ಕಟ್ಟು ಕಥೆ ಬಿಡುಗಡೆ ಭಾಗ್ಯ
ನೈಜ ಘಟನೆಯ ಏಳಯನ್ನು ಹೊಂದಿರುವ ‘ಕಟ್ಟು ಕಥೆ’ ಅಡಿಬರಹದಲ್ಲಿ ಎ ರಿಯಲ್ ಸ್ಟೋರಿ ಎನ್ನುವ ಚಿತ್ರದಲ್ಲಿ ನಿಜ ಜೀವನದ ಒಂದು ಏಳೆ ತೆಗೆದುಕೊಂಡು ಇಂತಹುದೆ ಪರಿಕಲ್ಪನೆ ಇಲ್ಲದಂತೆ ಕತೆಯನ್ನು ಹಣೆಯಲಾಗಿದೆ. ನಾಯಕ ಕಿವುಡನಾಗಿದ್ದು, ಪ್ರೀತಿಸುತ್ತಾನೆ. ಹೇಳಿದ್ದಕ್ಕೆ ಬೇರೆಯದನ್ನು ಅರ್ಥ ಮಾಡಿಕೊಂಡು ಅವಾಂತರಗಳು ಬಂದಾಗ ಗೆಳಯ ಪರಿಹರಿಸುವ ದೃಶ್ಯಗಳು ಕಾಮಿಡಿಯಾಗಿರುತ್ತದೆ. ಸ್ನೇಹಿತೆಯನ್ನು ಸಂಭಾಳಿಸುವ ನಾಯಕಿ. ಮಾಲೀಕ, ಕೆಲಸಗಾರ ಕೊನೆಗೆ ಹೀನಾಯ ಪರಿಸ್ಥಿತಿ ಹೀಗೆ ಮೂರು ಶೇಡ್‍ಗಳಲ್ಲಿ ಮಿತ್ರ ಅಭಿನಯಿಸಿದ್ದಾರೆ. ಮೂರು ರೀತಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಚನೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ರಾಜ್‍ಪ್ರವೀu ಗೆ ಮೊದಲ ಅನುಭವವಾಗಿದೆ. ಸಮಾಜದ ವ್ಯವಸ್ಥೆ ಸರಿಯಿಲ್ಲವೆಂದು ಬೇರೆಯವರನ್ನು ದೂಷಿಸುತ್ತೇವೆ. ಇಂತಹ ಅದ್ಬುತ ಪ್ರಸಂಗಗಳು ಸಿನಿಮಾದಲ್ಲಿ ಇರಲಿದ್ದು, ನೋಡುಗನಿಗೆ ಅಂತ್ಯ ತಿಳಿದರೂ, ಪಾತ್ರಗಳಿಗೆ ಗೊತ್ತಿರುವುದಿಲ್ಲ. ಎಲ್ಲಾ ಪಾತ್ರಗಳ ಹೆಸರು ವಿಭಿನ್ನವಾಗಿದೆ. ನಿದೇಶಕರು ಅನಿಮೇಷನ್ ಕ್ಷೇತ್ರದಲ್ಲಿ ಅನುಭವ ಹೊಂದಿರುವುದರಿಂದ ಒಳ್ಳೆ ಕತೆಗೆ ಚಿತ್ರರೂಪವನ್ನು ನಿರ್ದೇಶಕರು ನೀಡಿದ್ದಾರಂತೆ.

ನಾಯಕನಾಗಿ ಸೂರ್ಯ, ನಾಯಕಿ ಸ್ವಾತಿಕೊಂಡೆ, ಇನ್ಸ್‍ಪೆಕ್ಟರ್ ಆಗಿ ರಾಜೇಶ್‍ನಟರಂಗ, ಮಿತ್ರ ನಟನೆ ಇದೆ. ಮೈಸೂರು ನಗರದಲ್ಲಿ ಸಿಹಿ ಮಳಿಗೆಯನ್ನು ಹೊಂದಿರುವ ಸ್ವೀಟ್ಸ್ ಮಹದೇವ ಮೈಸೂರು ನಿರ್ಮಾಪಕರು, ಇವರೊಂದಿಗೆ ಸಹ ನಿರ್ಮಾಪಕಿಯಾಗಿ ಎನ್.ಸವಿತಾ ಗುರುತಿಸಿಕೊಂಡಿದ್ದಾರೆ. ಜಯಣ್ಣ ಫಿಲಿಂಸ್ ಸಂಸ್ಥೆಯ ಮೂಲಕ ಸುಮಾರು 100 ಕೇಂದ್ರಗಳಲ್ಲಿ ಚಿತ್ರವು 15ರಂದು ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
11/06/18
ಬಿಡುಗಡೆಯ ಹಾದಿಯಲ್ಲಿ ಕಟ್ಟು ಕಥೆ
ಪ್ರಚಲಿತ ಸಮಾಜದಲ್ಲಿ ನಿಜ ವಿಷಯಗಳನ್ನು ಹೇಳಿದರೂ ಕಟ್ಟು ಕಥೆ ಕಟ್ಟುತ್ತಿದ್ದಾರೆಂದು ಅಲ್ಲಗೆಳಯುತ್ತಾರೆ. ಈಗ ‘ಕಟ್ಟು ಕಥೆ’ ಅಡಿಬರಹದಲ್ಲಿ ಎ ರಿಯಲ್ ಸ್ಟೋರಿ ಎನ್ನುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಕೆಂಡಸಂಪಿಂಗೆದಲ್ಲಿ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಾಂಗಿನಿಂದ ಅಂತಹುದೆ ಪಾತ್ರಗಳು ಹೆಚ್ಚಿಗೆ ಬರುತ್ತಿರುವ ರಾಜೇಶ್‍ನಟರಂಗ ಅವರಿಗೆ ಅದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜದ ವ್ಯವಸ್ಥೆ ಸರಿಯಿಲ್ಲವೆಂದು ಬೇರೆಯವರನ್ನು ದೂಷಿಸುತ್ತೇವೆ. ಇಂತಹ ಅದ್ಬುತ ಪ್ರಸಂಗಗಳು ಸಿನಿಮಾದಲ್ಲಿ ಇರಲಿದ್ದು, ನೋಡುಗನಿಗೆ ಅಂತ್ಯ ತಿಳಿದರೂ, ಪಾತ್ರಗಳಿಗೆ ಗೊತ್ತಿರುವುದಿಲ್ಲ. ಎಲ್ಲಾ ಪಾತ್ರಗಳ ಹೆಸರು ವಿಭಿನ್ನವಾಗಿದೆ. ನಿದೇಶಕರು ಅನಿಮೇಷನ್ ಕ್ಷೇತ್ರದಲ್ಲಿ ಅನುಭವ ಹೊಂದಿರುವುದರಿಂದ ಒಳ್ಳೆ ಕತೆಗೆ ಚಿತ್ರರೂಪ ಕೊಡುವಲ್ಲಿ ಅವರ ಶ್ರಮ ಮುಖ್ಯವಾಗಿದೆ.

ನಿಜ ಜೀವನದ ಒಂದು ಏಳ ತೆಗೆದುಕೊಂಡು ಇಂತಹುದೆ ಪರಿಕಲ್ಪನೆ ಇಲ್ಲದಂತೆ ಕತೆಯನ್ನು ಏಣೆಯಲಾಗಿದೆ. ನಾಯಕ ಸೂರ್ಯ ಕಿವುಡನಾಗಿದ್ದು, ಪ್ರೀತಿಸುತ್ತಾನೆ. ಹೇಳಿದ್ದಕ್ಕೆ ಬೇರೆಯದನ್ನು ಅರ್ಥ ಮಾಡಿಕೊಂಡು ಅವಾಂತರಗಳು ಬಂದಾಗ ಗೆಳಯ ಪರಿಹರಿಸುವ ದೃಶ್ಯಗಳು ಕಾಮಿಡಿಯಾಗಿರುತ್ತದೆ. ಸ್ನೇಹಿತೆಯನ್ನು ಸಂಭಾಳಿಸುವ ಸ್ವಾತಿಕೊಂಡೆ ನಾಯಕಿ. ಮಾಲೀಕ, ಕೆಲಸಗಾರ ಕೊನೆಗೆ ಹೀನಾಯ ಪರಿಸ್ಥಿತಿ ಹೀಗೆ ಮೂರು ಶೇಡ್‍ಗಳಲ್ಲಿ ಮಿತ್ರ ಅಭಿನಯಿಸಿದ್ದಾರೆ. ರಚನೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ರಾಜ್‍ಪ್ರವೀಣ್‍ಗೆ ಮೊದಲ ಪರೀಕ್ಞೆಯಾಗಿದೆ. ಉಳಿದಂತೆ ರಜನಿಕಾಂತ್, ಪ್ರಶಾಂತ್ ಜೊತೆಗೆ ಬಹುತೇಕ ರಂಗಭೂಮಿ ಕಲಾವಿದರು ಅಭಿನಯಿಸಿರುವುದು ವಿಶೇಷ. ನಿರ್ದೇಶಕರು ಒಂದು ದೃಶ್ಯವನ್ನು ನಾಲ್ಕಾರು ಕೋನಗಳಲ್ಲಿ ತೆಗೆಸಿರುವುದು ವಿಶೇಷ. ಮೈಸೂರಿನ ಸ್ವೀಟ್ ಮಹದೇವ ನಿರ್ಮಾಪಕ ಮತ್ತು ಎನ್.ಸವಿತಾ ಸಹ ನಿರ್ಮಪಕರಿಯಾಗಿ ಇಬ್ಬರಿಗೂ ಸಿನಿಮಾ ಕೃಷಿ ಹೊಸ ಅನುಭವ. ಅಂದುಕೊಂಡಂತೆ ಆದರೆ ಜೂನ್ ತಿಂಗಳಲ್ಲಿ ತೆರೆ ಕಾಣಿಸಲು ತಂಡವು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
17/05/18
ಕಟ್ಟು ಕಥೆ ಹಾಡುಗಳ ಸಮಯ
ಗುರುವಾರ ಸಾಯಂಕಾಲ ಇಡೀ ಬೆಂಗಳೂರು ಒದ್ದಯಾಗಿದ್ದರೆ, ಕಲಾವಿದರ ಸಂಘದ ಸಭಾಂಗಣದಲ್ಲಿ ಗಣ್ಯರುಗಳು ಕಟ್ಟುಕತೆಯಲ್ಲಿ ತಲ್ಲೀನರಾಗಿದ್ದರು. ಅಂದರೆ ‘ಕಟ್ಟು ಕಥೆ’ ಚಿತ್ರದ ಧ್ವನಿ ಸಾಂದ್ರಿಕೆ ಲೋಕಾರ್ಪಣೆ ಮಾಡಲು ಆಗಮಿಸಿದ್ದರು. ಮೂರು ಹಾಡುಗಳನ್ನು ತೋರಿಸಲಾಯಿತು. ಯೋಗರಾಜಭಟ್ ಮೈಕ್ ತೆಗೆದುಕೊಂಡ ತಕ್ಷಣ ವಿದ್ಯತ್ ಕೈಕೊಟ್ಟಿತ್ತು. ಮೂರನೆ ಬಾರಿ ಸರಿಹೋದಾಗ ಅವರು ಇವತ್ತಿನ ನಿಜವಾದ ಹೀರೋ ಅಂದರೆ ಸಂಗೀತ ನಿರ್ದೇಶಕ, ಸಾಹಿತ್ಯ ಬರೆದವರಿಗೆ ಅನ್ವಯಿಸುತ್ತದೆ. ಅವರಿಗೆ ಇದು ಮೊದಲ ಹೆರಿಗೆ ಎಂದರೆ ತಪ್ಪಾಗಲಾರದು. ನಿರ್ಮಾಪಕರು ಸಿಹಿ ಅಂಗಡಿ ವ್ಯಾಪಾರದಿಂದ ಚಿತ್ರರಂಗಕ್ಕೆ ಧುಮುಕಿದ್ದಾರೆ ಎಂದು ಯೌವ್ವನದಲ್ಲಿ ಸಿಹಿ ತಿಂದ ಪುಟಾಣಿ ಕತೆ ಹೇಳಿ, ಸ್ವೀಟ್‍ಗೆ ಪವರ್ ಇದೆ ಎಂದರು.

ಮಹಾಲಕ್ಷೀ ಸ್ವೀಟ್ ಮಾಲೀಕರು ಇಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಅವರ ಸಿನಿಮಾ ಸ್ವೀಟ್ ತರಹನೇ ಇರಲಿ. ನಿರ್ದೇಶಕರು ಕರೆಂಟ್ ಹೋದಾಗ ಚಡಪಡಿಸುತ್ತಿದ್ದನ್ನು ನೋಡಿದಾಗ, ನನಗೂ ದುನಿಯಾ ಸುದ್ದಿಗೋಷ್ಟಿ ನೆನಪಿಗೆ ಬಂತು. ಇಂತಹ ಗುಣವುಳ್ಳವರು ಒಳ್ಳೆಯ ಸಿನಿಮಾಗಳನ್ನು ಕೊಡುತ್ತಾರೆ. ಸಂದೇಶ ಚೆನ್ನಾಗಿದೆ. ಹೊರಗಡೆ ನಡೆದ ವಿಷಯವನ್ನು ಯಾರಿಗಾದರೂ ಹೇಳುವಾಗ ಕಟ್ಟುಕತೆಗಳನ್ನು ಕಟ್ಟುತ್ತಾರೆ. ನಿರ್ದೆಶಕರು ಒಂದು ನೈಜ ಘಟನೆಗಳನ್ನು ಹೆಕ್ಕಿಕೊಂಡು ಜನರಿಗೆ ತೋರಿಸುವ ಪ್ರಯತ್ನ ಮಾಡಿರುವುದು ಹೆಮ್ಮಯ ವಿಷಯವಾಗಿದೆ. ನಮ್ಮಲ್ಲಿ ತುಂಬಾ ಪ್ರತಿಭೆಗಳು ಇದ್ದಾರೆ. ನಾವೆಲ್ಲರೂ ಸೇರಿಕೊಂಡು ಚಿತ್ರರಂಗವನ್ನು ಸಮೃದ್ದಿ ಮಾಡೋಣ. ದಯವಿಟ್ಟು ಈ ಚಿತ್ರಕ್ಕೆ ವೋಟ್ ಮಾಡಿರೆಂದು ಕೋರಿಕೊಂಡರು ಟಗರು ಖ್ಯಾತಿಯ ಸೂರಿ.

ನಿರ್ಮಾಪಕ ಮೈಸೂರಿನ ಸ್ವೀಟ್ ಮಹದೇವ ಮಾತನಾಡಿ ಕೈಗೆ ದುಡ್ಡು ಸಿಕ್ಕಾಗ ಮಾತ್ರ ನಾವುಗಳು ಸಿಹಿಯಾಗಿರ್ತೇವೆ. ಸಿಹಿ ಮಾಡಿದ್ದೇವೆ. ನೀವುಗಳು ಅಂದರೆ ಮಾದ್ಯಮದವರು ಅದನ್ನು ತಿಂದು ಇತರರಿಗೂ ತಲುಪಿಸುವ ಜವಬ್ದಾರಿ ತಮ್ಮದಾಗಿದೆ. ಯೋಗರಾಜಭಟ್ಟರ ಹೆಸರಿನಲ್ಲಿ ಯೋಗ ಇದೆ. ಅವರ ಯೋಗದಲ್ಲಿ ನಮಗೂ ಸ್ವಲ್ಪ ಬರಲಿ, ಸೂರಿ ಕಿರಣದಲ್ಲಿ ಒಂದಷ್ಟು ಕಿರಣಗಳು ಬಂದರೆ ಸಾಕು. ಪ್ರಾರಂಭದಲ್ಲಿ ಸಿಹಿ ಮಳಿಗೆಯನ್ನು ಬದುಕುವ ಸಲುವಾಗಿ ಶುರು ಮಾಡಿದೆವು. ನಂತರ ಶೋಕಿಗಾಗಿ ಶಾಖೆಗಳನ್ನು ತೆರೆದವು. ವ್ಯಾಪಾರದಲ್ಲಿ ವೃದ್ದಿಯಾದಂತೆ ಈ ರಂಗದಲ್ಲಿ ಬೆಳೆಯಲು ನಮ್ಮನ್ನು ಬೆಳಸಿ, ಉಳಿಸಿ, ರಕ್ಷಿಸಿ ಎಂದು ಹೇಳುತ್ತಾ ಅರ್ಥಪೂರ್ಣ ಮಾತಿಗೆ ವಿರಾಮ ಹಾಕಿದರು.

ನಾಯಕ ಸೂರ್ಯ, ನಾಯಕಿ ಸ್ವಾಂತಿಕೊಂಡೆ, ರಾಜೇಶ್‍ನಟರಂಗ, ಸಂಭಾಷಣೆಗಾರ ಮಾಸ್ತಿ, ಸಂಗೀತ ನಿರ್ದೇಶಕ ವಿಕ್ರಂಸುಬ್ರಮಣ್ಯಂ, ಸಹ ನಿರ್ಮಾಪಕಿ ಎನ್. ಸವಿತಾ ಚುಟುಕು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿನಿಮಾ ಪತ್ರಿಕೆಯ ಹಿರಿಯ ಛಾಯಗ್ರಾಹಕ ಕೆ.ಎನ್.ನಾಗೇಶ್‍ಕುಮಾರ್ ಅವರ ಹುಟ್ಟುಹಬ್ಬವನ್ನು ತಂಡವು ಸೇರಿದಂತೆ ಗಣ್ಯರುಗಳು ಆಚರಿಸಿ ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
13/05/18
ನೈಜ ಘಟನೆಯ ಕಟ್ಟು ಕಥೆ
ಪ್ರಚಲಿತ ಸಮಾಜದಲ್ಲಿ ನಿಜ ವಿಷಯಗಳನ್ನು ಹೇಳಿದರೂ ಕಟ್ಟು ಕಥೆ ಕಟ್ಟುತ್ತಿದ್ದಾರೆಂದು ಅಲ್ಲಗೆಳಯುತ್ತಾರೆ. ಈಗ ‘ಕಟ್ಟು ಕಥೆ’ ಅಡಿಬರಹದಲ್ಲಿ ಎ ರಿಯಲ್ ಸ್ಟೋರಿ ಎನ್ನುವ ಚಿತ್ರವೊಂದು ಸದ್ದಿಲ್ಲದೆ ಬಿಡುಗಡೆ ಹಂತಕ್ಕೆ ಬಂದಿದೆ. ಸುದ್ದಿ ಮಾಡಲು ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಮೊದಲು ಮೈಕ್ ತೆಗೆದುಕೊಂಡ ರಾಜೇಶ್‍ನಟರಂಗ ಟೀಸರ್ ನೋಡಿದಾಗ ಕೊಲೆ ಸುತ್ತ ಇರಲಿದೆ ಅಂತ ತಿಳಿಯುತ್ತದೆ. ಕೆಂಡಸಂಪಿಂಗೆದಲ್ಲಿ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಾಂಗಿನಿಂದ ಅಂತಹುದೆ ಪಾತ್ರಗಳು ಹೆಚ್ಚಿಗೆ ಬರುತ್ತಿವೆ. ಆದರೂ ಇಷ್ಟಪಟ್ಟು ಮಾಡಲಾಗಿದೆ. ಸಮಾಜದ ವ್ಯವಸ್ಥೆ ಸರಿಯಿಲ್ಲವೆಂದು ಬೇರೆಯವರನ್ನು ದೂಷಿಸುತ್ತೇವೆ. ಇಂತಹ ಅದ್ಬುತ ಪ್ರಸಂಗಗಳು ಸಿನಿಮಾದಲ್ಲಿ ಇರಲಿದ್ದು, ನೋಡುಗನಿಗೆ ಅಂತ್ಯ ತಿಳಿದರೂ, ಪಾತ್ರಗಳಿಗೆ ಗೊತ್ತಿರುವುದಿಲ್ಲ. ಎಲ್ಲಾ ಪಾತ್ರಗಳ ಹೆಸರು ವಿಭಿನ್ನವಾಗಿದೆ. ನಿದೇಶಕರು ಅನಿಮೇಷನ್ ಕ್ಷೇತ್ರದಲ್ಲಿ ಅನುಭವ ಹೊಂದಿರುವುದರಿಂದ ಒಳ್ಳೆ ಕತೆಗೆ ಚಿತ್ರರೂಪ ಕೊಟ್ಟಿದ್ದಾರೆಂದು ಹೇಳಿದರು.

ಸರಳ ಸಂಭಾಷಣೆ, ಅದು ಬುದ್ದಿವಂತಿಕೆಯಿಂದ ಇರಬೇಕೆಂದು ತಾಕೀತು ಮಾಡಿ ಬರೆಸಿದ್ದಾರೆಂದು ಟಗರು ಖ್ಯಾತಿಯ ಮಸ್ತಿ ಮಾತಾಗಿತ್ತು. ನಿಜ ಜೀವನದ ಒಂದು ಏಳ ತೆಗೆದುಕೊಂಡು ಇಂತಹುದೆ ಪರಿಕಲ್ಪನೆ ಇಲ್ಲದಂತೆ ಕತೆಯನ್ನು ಏಣೆಯಲಾಗಿದೆ. ನಾಯಕ ಕಿವುಡನಾಗಿದ್ದು, ಪ್ರೀತಿಸುತ್ತಾನೆ. ಹೇಳಿದ್ದಕ್ಕೆ ಬೇರೆಯದನ್ನು ಅರ್ಥ ಮಾಡಿಕೊಂಡು ಅವಾಂತರಗಳು ಬಂದಾಗ ಗೆಳಯ ಪರಿಹರಿಸುವ ದೃಶ್ಯಗಳು ಕಾಮಿಡಿಯಾಗಿರುತ್ತದೆ. ಸ್ನೇಹಿತೆಯನ್ನು ಸಂಭಾಳಿಸುವ ನಾಯಕಿ. ಮಾಲೀಕ, ಕೆಲಸಗಾರ ಕೊನೆಗೆ ಹೀನಾಯ ಪರಿಸ್ಥಿತಿ ಹೀಗೆ ಮೂರು ಶೇಡ್‍ಗಳಲ್ಲಿ ಮಿತ್ರ ಅಭಿನಯಿಸಿದ್ದಾರೆ. ಮೂರು ರೀತಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಮಾಹಿತಿ ಬಿಚ್ಚಿಟ್ಟರು ರಚನೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ರಾಜ್‍ಪ್ರವೀಣ್. ನಾಯಕ ಸೂರ್ಯ ಮತ್ತು ನಾಯಕಿ ಸ್ವಾತಿಕೊಂಡೆ ಇಬ್ಬರಿಗೂ ಎರಡನೆ ಚಿತ್ರವಾಗಿದೆಯಂತೆ. ರಾಗ ನಂತರ ಬಂದ ಅವಕಾಶ ಇದಾಗಿದೆ. ಬಹುತೇಕ ರಂಗಭೂಮಿ ಕಲಾವಿದರು ಅಭಿನಯಿಸಿರುವುದು ವಿಶೇಷ. ನಿರ್ದೇಶಕರು ಒಂದು ದೃಶ್ಯವನ್ನು ನಾಲ್ಕಾರು ಕೋನಗಳಲ್ಲಿ ತೆಗೆಯುತ್ತಿದ್ದನ್ನು ಕಂಡು ಸಂಶಯ ಬಂದಿತ್ತು. ಡಬ್ಬಿಂಗ್ ಮಾಡುವಾಗ ಇವರ ಕೆಲಸ ಏನೆಂದು ತಿಳಿಯಿತು. ಗುಳ್ಟು ರೇಂಜ್‍ಗೆ ಚಿತ್ರ ಬರಲಿದೆ ಅಂತ ಬಣ್ಣನೆ ಮಾಡಿದ್ದು ಮಿತ್ರ. ಸಾಂಸ್ಕ್ರತಿಕ ನಗರದಲ್ಲಿ ಸಿಹಿ ಮಳಿಗೆಯನ್ನು ಹೊಂದಿರುವ ಕಾರಣ ಸ್ವೀಟ್ಸ್ ಮಹದೇವ ಮೈಸೂರು ಎಂದು ಕರೆಯುತ್ತಾರೆಂದು ಪರಿಚಯ ಮಾಡಿಕೊಂಡ ನಿರ್ಮಾಪಕರು ಸಿನಿಮಾ ಹುಟ್ಟಿದ ಬಗೆಯನ್ನು ನೆನಪು ಮಾಡಿಕೊಂಡು, ಇದರಿಂದ ತಾಳ್ಮೆ ಕಲಿತು 100 ಸಿನಿಮಾ ಮಾಡುವಷ್ಟು ಅನುಭವವಾಗಿದೆ ಅಂತ ನಗಿಸಿದರು. ಧಾರವಾಹಿ ನಿರ್ಮಾಣ ಮಾಡುವ ಬಯಕೆ ಇರಲಿದ್ದು, ಮಹದೇವ ಅವರು ಭೇಟಿ ಮಾಡಿ ವಿಷಯವನ್ನು ತಿಳಿಸಿದಾಗ ಸಹ ನಿರ್ಮಾಪಕಿಯಾಗಿ ಹಣ ಹೊಡಲಾಗಿದೆ ಎಂದರು ಎನ್.ಸವಿತಾ
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
16/04/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore