HOME
CINEMA NEWS
GALLERY
TV NEWS
REVIEWS
CONTACT US
ಎರಡು ಮುಖಗಳ ಕತ್ತಲ ಕೋಣೆ
ಸೈಕಲಾಜಿಕಲ್ ಹಾರರ್, ಥ್ರಿಲ್ಲರ್ ಚಿತ್ರ ‘ಕತ್ತಲ ಕೋಣೆ’ ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಸೈನಿಕನಾಗ ಬಯಸುವ ಹುಡುಗನ ಆಸೆ ಕಮರಿ ಹೋಗುವುದು. ವ್ಯವಸ್ಥೆ ಆತನ ಕನಸನ್ನೆ ದಾಳವಾಗಿಸಿಕೊಂಡು ಯಾವ ರೀತಿ ಸೈಕೋ ಆಗಿ ಪರಿವರ್ತನೆ ಮಾಡುವಂತೆ ಆಗುತ್ತದೆ ಎನ್ನುವುದು ಒಂದು ಏಳೆಯ ಕತೆಯಾಗಿದೆ. ಸಿನಿಮಾದಲ್ಲಿ ಒಂದು ಕುಟುಂಬದ ಐಷಾರಾಮಿ ಜೀವನ, ವಿದ್ಯಾರ್ಥಿಯ ಕನಸು, ಹೆಚ್ಚಾಗಿ ಪತ್ರಿಕೋದ್ಯಮದ ಎರಡು ಮುಖಗಳು, ವ್ಯವಸ್ಥೆಗಳನ್ನು ದುಷ್ಟ ಶಕ್ತಿಗಳು ಹೇಗೆ ಬಳಸಿಕೊಳ್ಳುತ್ತವೆ. ಇವೆಲ್ಲವು ವಿಚಿತ್ರ ಘಟನೆಗಳ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತದೆ. 1993ರಂದು ಮಲೆನಾಡಿನ ತಗ್ಗು ಪ್ರದೇಶದಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡಿದೆ. ಕಳೆದ ಹದಿನೈದು ವರ್ಷಗಳಿಂದ ಉಡುಪಿ ಸ್ಥಳೀಯ ಪತ್ರಿಕೆಯಲ್ಲಿ ಪತ್ರಕರ್ತರಾಗಿರುವ ಸಂದೇಶ್‍ಶೆಟ್ಟಿಅಜ್ರಿ ಕತೆ ಬರೆಯಲು ಎರಡು ವರ್ಷ ಸಮಯ ತೆಗೆದುಕೊಂಡಿದ್ದಾರೆ. ಇದರ ಅನುಭವದಿಂದ ಚಿತ್ರಕತೆ, ಸಂಭಾಷಣೆ, ನಿರ್ದೇಶನ ಜೊತೆಗೆ ನಾಯಕನಾಗಿ ರಿರ್ಪೋಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹತ್ತು ನಿಮಿಷದ ಕ್ಲೈಮಾಕ್ಸ್‍ಗೆ ಕಾಡು, ಚಳಿಯಲ್ಲಿ ಒಳಉಡುಪು ಮಾತ್ರ ಧರಿಸಿಕೊಂಡು ಮೂರು ದಿವಸ ಶೂಟಿಂಗ್ ಮಾಡಿದ್ದಾರಂತೆ.

ಮಂಗಳೂರಿನ ಮಾಡೆಲ್ ಹಳ್ಳಿಹುಡುಗಿ ಹಾಗೂ ಪತ್ರಕರ್ತೆಯಾಗಿ ಹನ್ನಿಕಾರಾವ್ ನಾಯಕಿಯಾಗಿ ಮೊದಲ ಚಿತ್ರ. ಇವರೊಂದಿಗೆ ವೈಶಾಖ್‍ಅಮೀನ್, ರತಿಕ್‍ಮುರುಡೇಶ್ವರ್, ಅಶ್ವಥ್‍ಆಚಾರ್ಯ, ಶ್ರೀನಿವಾಸ್‍ಪೈ, ಮಂಜುನಾಥ್‍ಸಾಲಿಯಾನ್, ನಾಗರಾಜ್‍ರಾವ್ ನಟಿಸಿದ್ದಾರೆ. ಸರಿಗಮಪ ವಿಜೇತ ಮಹಬೂಬ್‍ಸಾಬ್ ಗೀತೆಗೆ ಕಂಠದಾನ ಮತ್ತು ಚಿತ್ರದ ಪರಿಚಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಪಶ್ವಿಮಘಟ್ಟಗಳ ದಟ್ಟವಾದ ಕಾಡಿನಲ್ಲಿ ಹೆಚ್ಚು ರಾತ್ರಿವೇಳೆ ಚಿತ್ರೀಕರಣ ನಡೆಸಿರುವುದು ವಿಶೇಷ. ಅಶೋಕ್‍ನೀಲಾವರ-ನಾಗರಾಜ್‍ರಾವ್ ಸಾಹಿತ್ಯದ ಗೀತೆಗಳಿಗೆ ಅರುಣ್‍ರಾಜ್ ಸಂಗೀತ ಸಂಯೋಜಿಸಿದ್ದಾರೆ. ಪುರುಷೋತ್ತಮ್‍ಅಮೀನ್ ನಿರ್ಮಾಪಕರು. ಇವರೊಂದಿಗೆ ಪಾಲುದಾರರಾಗಿರುವ ಶ್ರೀನಿವಾಸಶಿವಮೊಗ್ಗ ಇವರ ಚಿತ್ರವು ಇದೇ ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
4/08/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore