HOME
CINEMA NEWS
GALLERY
TV NEWS
REVIEWS
CONTACT US
ವಯಸ್ಸುಗಳ ಅಂತರದ ಕಥನ
ಸ್ಯಾಂಡಲ್‍ವುಡ್‍ನಲ್ಲಿ ಪ್ರಯೋಗಾತ್ಮಕ ಸಿನಿಮಾಗಳನ್ನು ಜನರು ಇಷ್ಟಪಡುತ್ತಿರುವ ಕಾರಣ ಯುವ ನಿರ್ದೇಶಕರುಗಳು ಇಂತಹುದೆ ಕತೆಗಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಅದರಂತೆ ‘ಕಥೆಯೊಂದು ಶುರುವಾಗಿದೆ’ ಎನ್ನುವ ಚಿತ್ರದಲ್ಲಿ ಮೂರು ವಯೋಮಾನದವರ ಕತೆಯು ಇರಲಿದೆ. ವಯಸ್ಸು 20 ಅಂಚಿನಲ್ಲಿರುವವರು ಬಿಸಿರಕ್ತದವರಾಗಿರುವ ಕಾರಣ ಏನೇ ಮಾಡಬೇಕಾದರೂ ಯೋಚಿಸದೆ ಮುಂದಕ್ಕೆ ನುಗ್ಗುತ್ತಾರೆ. ಅದೇ ರೀತಿ ಮೂವತ್ತರ ವಯಸ್ಸಿನವರು ಗುರಿ ತಲುಪಬೇಕೆಂಬ ಆಶಾವಾದಿಗಳಾಗಿರುತ್ತಾರೆ. ಇವರುಗಳು ಮದುವೆ, ಕೆಲಸ, ಇತ್ಯಾದಿ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಚಂಚಲ ಮನಸ್ಸು ಇರುವುದರಿಂದ ಕೆಲವು ಅಸ್ಥಿರವಾಗಿರುತ್ತದೆ. ಕೊನೆಯದಾಗಿ ಹಿರಿಯ ನಾಗರಿಕರು ಇಂದು, ನಾಳಿನ ಬಗ್ಗೆ ಯೋಚನೆ ಮಾಡದೆ ಭೂತಕಾಲವನ್ನು ನೆನಪಿಸಿಕೊಳ್ಳುತ್ತಾ, ನಮ್ಮ ಬದುಕು ಸುಂದರವೆಂದು ಎಲ್ಲರಲ್ಲಿ ಹೇಳಿಕೊಳ್ಳುತ್ತಾರೆ. ಇವೆಲ್ಲವು ನಾಲ್ಕು ದಿನದ ಪ್ರಯಾಣದಲ್ಲಿ ನಡೆಯುವ ಸನ್ನಿವೇಶಗಳು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿರುವುದು ಕಾಸರಗೂಡಿನ ಕನ್ನಡಿಗ ಸನಾಹೆಗಡೆ,

ಇವರ ಕುರಿತು ಹೇಳುವುದಾದರೆ ಮಲೆಯಾಳಂನಲ್ಲಿ 0-41 ನಿರ್ದೇಶನ ಮಾಡಿ, ನಂತರ ಜಾಹಿರಾತು ಕ್ಷೇತ್ರದಲ್ಲಿ 12 ವರ್ಷ ಕೆಲಸ ಮಾಡಿದ ಅನುಭವವಿದೆ. ಕಿರಿಕ್ ಪಾರ್ಟಿಯಲ್ಲಿ ಸಣ್ಣ ಪಾತ್ರ ಮಾಡಿದ್ದ ಅಶ್ವಿನ್, ಒಂದು ಮೊಟ್ಟೆಯ ನಾಯಕಿ ಶ್ರೇಯಾಅಂಚನ್ ಯುವ ಜೋಡಿಗಳು. ಮಧ್ಯ ವಯಸ್ಸಿನ ದಂಪತಿಗಳಾಗಿ ದಿಗಂತ್, ಪೂಜಾ ನಟನೆ ಇದೆ. ಹಿರಿಯ ಸತಿ-ಪತಿಗಳಾಗಿ ಬಾಬುಹಿರಣಯ್ಯ, ಅರುಣಾಬಾಲರಾಜ್. ಒಟ್ಟಾರೆ ಏಳು ಪಾತ್ರಗಳ ಸುತ್ತ ಸಿನಿಮಾ ಸಾಗಲಿದೆ. ಬೆಂಗಳೂರು, ಮಂಗಳೂರು, ಗೋಕರ್ಣ, ಪಾಂಡಿಚೇರಿ, ಗೋವಾ ತಟಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ನಾಲ್ಕು ಹಾಡುಗಳಿಗೆ ಸಚಿನ್‍ವಾರಿಯರ್ ಸಂಗೀತ, ಶ್ರೀರಾಜ್ ಛಾಯಗ್ರಹಣ ಇದೆ. ನಟ,ನಿರ್ದೇಶಕ ರಕ್ಷಿತ್‍ಶೆಟ್ಟಿ-ಪುಷ್ಕರ್‍ಮಲ್ಲಿಕಾರ್ಜುನ ಜಂಟಿ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ ತಂತ್ರಜ್ಘರು, ಕಲಾವಿದರ ಸಂಭಾವನೆಯಲ್ಲಿ ಅರ್ಧದಷ್ಟು ಹಣವನ್ನು ಚಿತ್ರಕ್ಕೆ ತೊಡಗಿಸಿಕೊಂಡಿರುವುದರಿಂದ ಮುಂದೆ ಹಿಟ್ ಆದಲ್ಲಿ, ಯಶಸ್ಸು ಹಾಗೂ ಹಣ ಸಿಗಲಿದೆ ಎನ್ನುವ ಪರಿಕಲ್ಪನೆಯಲ್ಲಿ ಎಲ್ಲರೂ ತಂಡದಲ್ಲಿ ಪ್ರಾಮಾಣ ಕವಾಗಿ ಕೆಲಸ ಮಾಡುತ್ತಾರಂತೆ. ಹಿಂದಿನ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ವಿನೋಧ್‍ಪ್ರಭಾಕರ್ ಈ ಸಿನಿಮಾದ ಮೂಲಕ ಪಾಲುದಾರರಾಗಿ ಗುರುತಿಸಿಕೊಂಡಿದ್ದಾರೆ.
-11/11/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore