HOME
CINEMA NEWS
GALLERY
TV NEWS
REVIEWS
CONTACT US
ದುರಳರನ್ನು ಸಂಹಾರ ಮಾಡುವ ಕಾರ್ನಿ
ದುರ್ಗಾದೇವಿ ಕೈಯಲ್ಲಿರುವ ಅಸ್ತ್ರಕ್ಕೆ ‘ಕಾರ್ನಿ’ ಎಂದು ಕರೆಯುತ್ತಾರೆ. ಸಂಹಾರ ಮಾಡುವ ಸಮಯದಲ್ಲಿ ದೇವಿಯು ಇದನ್ನು ಬಳಸುತ್ತಾರಂತೆ. ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಬರುತ್ತಿದೆ. ಇದು ಸಾಧ್ಯ ಮತ್ತು ಇಂಗ್ಲೀಷ್ ಚಿತ್ರದ ಸ್ಪೂರ್ತಿಯಿಂದ ಕತೆ ಬರೆದು ನಿರ್ದೇಶನ ಮಾಡಿರುವವುದು ವಿನೋಧ್ ಇದಕ್ಕೂ ಮುನ್ನ ವಿಎಫ್‍ಎಕ್ಸ್ ಮತ್ತು ಸಂಕಲನದಲ್ಲಿ ಕೈಯಾಡಿಸಿದ್ದಾರೆ. ಸಿನಿಮಾದ ಕುರಿತು ಹೇಳುವುದಾದರೆ ಚಿಕ್ಕಮಗಳೂರು ಸ್ಥಳದಲ್ಲಿ ಒಂದರ ನಂತರ ಒಂದರಂತೆ ಐದು ಜನರು ಕಳೆದುಹೋಗುತ್ತಾರೆ. ಮುಂದಿನ ಗುರಿ ನಾಯಕಿಯದು ಆಗಿರುತ್ತದೆ. ಇದರ ಮಧ್ಯೆ ಏನೇನು ಸಮಸ್ಯೆಗಳು ಬರುತ್ತದೆ, ಅದನ್ನು ಶಕ್ತಿ, ಯುಕ್ತಿಯಿಂದ ಹೇಗೆ ಬಗೆಹರಿಸುತ್ತಾಳೆ ಎಂಬುದನ್ನು ಡಾರ್ಕ್ ಥ್ರಿಲ್ಲರ್ ಮಾದರಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಬಿಡದಿ, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳಿಗೆ ಜಾಗ ಇರುವುದಿಲ್ಲ. ಹಿನ್ನಲೆ ಸಂಗೀತವನ್ನು ಆಂದ್ರಿನ್‍ಗೋಸ್ವಾಮಿ ಸಂಯೋಜಿಸಿದ್ದಾರೆ.

ಸಕರಾತ್ಮಕ ಮತ್ತು ನಕರಾತ್ಮಕ ಹೀಗೆ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ನಿರಂತ್‍ಗೆ ನಾಯಕನಾಗಿ ಎರಡನೆ ಅನುಭವ. ಗ್ಯಾಪ್ ನಂತರ ಬಣ್ಣ ಹಚ್ಚಿರುವ ದುನಿಯಾರಶ್ಮಿ ಪತ್ರಕರ್ತೆಯಾಗಿ ಮೂಗಿ. ಇವರು ಕಾರ್ನಿಯೊಂದಿಗೆ ಅಂತ್ಯ ಹಾಡಲಿದ್ದು, ಫೈಟ್ ಮಾಡಿದ್ದಾರಂತೆ. ಶೇಕಡ 90ರಷ್ಟು ರಾತ್ರಿ ದೃಶ್ಯಗಳು ಬರುವುದಿರಿಂದ ಸಾಯಂಕಾಲ 4 ರಿಂದ ಬೆಳಿಗ್ಗೆ 7ರ ವರೆಗೆ 15 ದಿವಸ ಕೆಲಸ ಮಾಡಿದ್ದು ಮರೆಯಲಾಗದು ಎನ್ನುತ್ತಾರೆ. ನಟನಾಗಲು ಆಸೆಪಟ್ಟಿದ್ದ ಗೋವಿಂದರಾಜು ಕೊನೆಗೆ ನಿರ್ಮಾಪಕನಾಗಿ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ. ಅಲೋಕ್‍ಕುಮಾರ್ ಪಾಲುದಾರರಾಗಿರುವ ಚಿತ್ರವು ಇದೇ ಶುಕ್ರವಾರದಂದು ತೆರೆ ಕಾಣಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
9/09/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore