HOME
CINEMA NEWS
GALLERY
TV NEWS
REVIEWS
CONTACT US

ಅದ್ದೂರಿಕಾರ್ಯಕ್ರಮ ಸಿನಿ 35
‘ಕರ್ನಾಟಕ ಚಲನಚಿತ್ರಛಾಯಾಗ್ರಾಹಕರ ಸಂಘ’ವು ನಡೆಸಿದ ‘ಸಿನಿ 35’ ಕಾರ್ಯಕ್ರಮಕ್ಕೆಇಡೀಚಿತ್ರರಂಗವು ಸಾಕ್ಷಿಯಾಗಿತ್ತು.ತೆರೆ ಹಿಂದಿನ ನಾಯಕರುಗಳಾದ ಗೇಟ್‍ಕೀಪರ್, ಚಿತ್ರಮಂದಿರದಟಾರ್ಚ್‍ಮ್ಯಾನ್, ಓಪರೇಟರ್, ರೀಲ್ ಸಾಗಿಸುವವರುಇನ್ನು ಹಲವು ವಿಭಾಗಗಳಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿರುವ 108 ಸಾಧಕರನ್ನುಒಂದೇ ವೇದಿಕೆಯಲ್ಲಿಅವರ ಶ್ರೀಮತಿಯವರಿಗೆ ಬಾಗಿನ, ಸೀರೆ, ಚೆಕ್, ಹಾರ, ಶಾಲು ಮತ್ತು ಫಲಕ ನೀಡಿ ಗೌರವಿಸಿದ್ದು ವಿಶೇಷ. ಇದಕ್ಕೂ ಮುನ್ನ ಪ್ರಾರಂಭದಿಂದಇಲ್ಲಿಯವರೆಗಿನ ಕ್ಯಾಮಾರಗಳನ್ನು ಪ್ರದರ್ಶನಕ್ಕೆಇಡಲಾಗಿತ್ತು. ಅಧ್ಯಕ್ಷರಾದಜೆ.ಜಿ.ಕೃಷ್ಣ ಸಾರಥ್ಯದಲ್ಲಿಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಜೈರಾಜ್, ತಾರಾಅನುರಾಧ, ಉಮಾಶ್ರೀ, ಕುಮಾರ್‍ಬಂಗಾರಪ್ಪ, ಡಾ.ಜಯಮಾಲ ಟೇಪ್‍ಕಟ್ ಮಾಡುವಮೂಲಕ ಚಾಲನೆ ನೀಡಿದರು.

ಉಮಾಶ್ರೀ, ತಾರಾಅನುರಾಧ, ಡಾ.ಜಯಮಾಲ, ಸುಮಿತ್ರ ಮತ್ತುಚಾಮುಂಡೇಶ್ವರಿ ಸ್ಟುಡಿಯೋಯಜಮಾನಿ ರಾಜೇಶ್ವರಿ ದೀಪ ಬೆಳಗಿಸಿ ಮುಂದಿ£ದÀಕ್ಕೆ ಅನುವು ಮಾಡಿಕೊಟ್ಟರು. ನಂತರ ಮಾತನಾಡಿದಅಧ್ಯಕ್ಷರು ನಿರ್ದೇಶಕ, ಛಾಯಾಗ್ರಾಹಕಗಂಡ-ಹೆಂಡತಿಇದ್ದಂತೆಅಂತ ಸಂಘವು ನಡೆದು ಬಂದದಾರಿಯನ್ನು ನೆನಪು ಮಾಡಿಕೊಂಡರು.ಇವರ ಮಾತಿಗೆ ಧ್ವನಿಗೂಡಿಸಿದ ಡಾ.ಜಯಮಾಲ ಇವರನ್ನು ಹಿರಿಯಣ್ಣಅಂತ ಸಂಭೋದಿಸಬಹುದು, ಸಾಯಿಕುಮಾರ್‍ಇನ್ನುಒಂದು ಹೆಜ್ಜೆ ಮುಂದೆಕ್ಕೆ ಹೋಗಿ ಕ್ಯಾಮಾರಮನ್‍ಅವರುದೃತರಾಷ್ಟ್ರಎನ್ನಲುಬಹುದುಎಂದು ಹೇಳಿದರು. 108 ಕ್ಯಾಮಾರಗಳು, ಛಾಯಾಗ್ರಾಹಕಗಳು ಸೇರಿಕೊಂಡು ಸಿದ್ದಪಡಿಸಿರುವಡಾ.ನಾಗೇಂದ್ರಪ್ರಸಾದ್ ಸಾಹಿತ್ಯದಹಾಡಿನಲ್ಲಿಉಪೇಂದ್ರ, ಧನಂಜಯ್, ವಿನೋಧ್‍ಪ್ರಭಾಕರ್, ತಂತ್ರಜ್ಘರು, ನಟರು ಕಾಣಿಸಿಕೊಂಡಿರುವ ವಿಟಿಗೆ ಹಿರಿಯ ಸಂಗೀತ ನಿರ್ದೇಶಕರಾಜನ್‍ಅನಾವರಣ ಮಾಡಿದರೆ, ರ್ಯಾಂಪ್‍ಗೀತೆಯನ್ನುತಾರಾ ಬಿಡುಗಡೆ ಮಾಡಿದರು. ಜ್ಯೂನಿಯರ್‍ಅಂತ ಹೆಸರು ಮಾಡಿರುವಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್, ಶಂಕರ್‍ನಾಗ್‍ಅವರಂತೆ ನಡೆದುಕೊಂಡು ಹೇಳುವ ಸಂಭಾಷಣೆಗೆಯೋಗರಾಜ್‍ಭಟ್ ನಿರ್ದೇಶನದಲ್ಲಿಟ್ರಾಲಿ ಬಳಸಿಕೊಂಡು ಚಿತ್ರೀಕರಿಸಿದ ಪರಿಕಲ್ಪನೆಚೆನ್ನಾಗಿ ಮೂಡಿಬಂತು. ನಿರ್ದೇಶಕರುಗಳಾದ ಭಗವಾನ್, ಸಾಯಿಪ್ರಕಾಶ್, ರೇಣುಕಾಶರ್ಮ, ಲಹರಿವೇಲು, ಬ್ಯಾಂಕ್‍ಜನಾರ್ಧನ್, ಪ್ರೊ,ದೊಡ್ಡರಂಗೇಗೌಡರು, ಸೇರಿದಂತೆ ಸಾಕಷ್ಟು ತಂತ್ರಜ್ಘರು, ಕಲಾವಿದರು ಹಾಜರಿದ್ದರು. ಏಳು ಗಂಟೆಗಳ ಕಾಲ ಸಮಾರಂಭವು ನಡೆದಿದ್ದು ವಿಶೇಷವಾಗಿತ್ತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/02/20


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore