HOME
CINEMA NEWS
GALLERY
TV NEWS
REVIEWS
CONTACT US
ಇಪ್ಪತ್ತು ಲಕ್ಷ ನಿರ್ಮಾಪಕರುಗಳ ಚಿತ್ರ
ಹತ್ತಾರು ಮಂದಿ ಸೇರಿಕೊಂಡು ಸಿನಿಮಾ ಮಾಡುವುದು, ಕ್ರೌಡ್ ಫಂಡಿಂಗ್ ಮೂಲಕ ಚಿತ್ರ ಬರುವುದು ಕೇಳಿದ್ದೇವೆ. ಆದರೆ ಹೊಸದೊಂದು ಸುದ್ದಿ ಅಚ್ಚರಿಯಾದರೂ ನಿಜ. ‘ಕಾನೂರಾಯಣ’ ಚಿತ್ರಕ್ಕೆ 20 ಲಕ್ಷ ಮಂದಿ ತಲಾ ರೂ.20ರಂತೆ ಹಣ ಹೂಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಸ್ವಸಹಾಯ ಸಂಘಗಳ ಇರಲಿದ್ದು, ಇಲ್ಲಿನ ಸದಸ್ಯರುಗಳಿಂದ ಹಣ ಪಡೆದು ನಿರ್ಮಾಣ ಮಾಡಿದ್ದಾರಂತೆ. ಗ್ರಾಮೀಣ ಭಾಗದಲ್ಲಿ ಆರ್ಥಿಕ ಶಿಸ್ತು ಸರಿಇಲ್ಲದೆ ಇರುವುದರಿಂದ ಜನರು ಸಾಲ ಮಾಡಿ ಶೂಲಕ್ಕೆ ಹೋಗುತ್ತಿದ್ದರು. ಸ್ವಸಹಾಯ ಸಂಘಗಳು ಅನುಷ್ಟಾನಗೊಂಡಾಗಿನಿಂದ ಹಣಕಾಸು ವ್ಯವಸ್ಥೆ ಸುಧಾರಣೆಯಾಗಿದೆ. ಇಲ್ಲಿನ ಜನರು ಏನೆಲ್ಲಾ ಮಾಡುತ್ತಾರೆ. ಗ್ರಾಮೀಣ ಅಭಿವೃದ್ದಿಯಾಗಬೇಕು ಎಂದರೆ ಗ್ರಾಮ ಇರಬೇಕು. ಹಳ್ಳಿಯಲ್ಲಿನ ಪ್ರಸಕ್ತ ವಾಸ್ತವದ ಪರಿಸ್ಥಿತಿ, ರೈತರ ಆತ್ಮಹತ್ಯೆಗೆ ಸಾಲ ಒಂದೇ ಕಾರಣ ಅಲ್ಲ. ವಿದ್ಯಾಭ್ಯಾಸ ಮಾಡಿದವರು ಏನು ಮಾಡಲಿಕ್ಕೆ ಆಗದೆ ನಗರಕ್ಕೆ ಬಂದಿರುವುದು. ಇಲ್ಲಿದ್ದು ಕೊಂಡೇ ಸಾಧಿಸಬಹುದು. ಜೊತೆಗೆ ರಾಜಕೀಯ ದೊಂಬರಾಟ ಹೇಗೆ ನಡೆಯುತ್ತದೆ ಎಂಬುದನ್ನು ಚಿತ್ರದಲ್ಲಿ ಮನರಂಜನೆ, ಹಾಸ್ಯದ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ. ಚಿಕ್ಕಮಗಳೂರು, ಬೆಳವಾಡಿ ಕಡೆಗಳಲ್ಲಿ ಎರಡು ಹಂತಗಳಲ್ಲಿ 37 ದಿವಸಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ತೀರ ಅಪರೂಪ ಎನ್ನುವಂತೆ ಸಿನಿಮಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಧರ್ಮಾದಿಕಾರಿ ಡಾ.ವೀರೇಂದ್ರಹೆಗ್ಗಡೆ ಆಡಿಯೋ ಸಿಡಿಯನ್ನು ಮಾಡಿದರು. ಅವರು ಮಾತನಾಡುತ್ತಾ ಗ್ರಾಮೀಣ ಕತೆಗಳು ಬರುವುದು ತೀರ ವಿರಳ. ಶ್ರಾವಣಬಂತು ಚಿತ್ರದಲ್ಲಿ ರಾಜ್‍ಕುಮಾರ್ ಪಕ್ಕ ನಿಂತುಕೊಂಡಿದ್ದು ನಟನೆ ಅಂದುಕೊಂಡಿದ್ದೆ. ಅದರ ನಂತರ ಈಗ ಕಾರ್ಯಕ್ರಮಕ್ಕೆ ಬಂದಿರುವುದು ಸಂತಸ ತಂದಿದೆ. 20 ಲಕ್ಷ ಜನರು ಸೇರಿಕೊಂಡು ಚಿತ್ರ ಮಾಡಿರುವುದು ಪ್ರಪಂಚದ ದಾಖಲೆ ಎನ್ನಬಹುದು. ಒಮ್ಮೆ ಶೂಟಿಂಗ್ ನೋಡಿದಾಗ ಇದು ಕಷ್ಟದ ಕೆಲಸ ಅಂತ ತಿಳಿದುಬಂತು. ಅದಕ್ಕೆ ಸಿನಿಮಾ ನೋಡಿ, ಚಿತ್ರೀಕರಣ ನೋಡಲು ಹೋಗಬಾರದು. ಸೃಜನಾತ್ಮಕ ನಿರ್ದೇಶಕ ನಾಗಭರಣರಿಗೆ ಸರ್ಕಾರದಿಂದ ಮತ್ತಷ್ಟು ಪ್ರಶಸ್ತಿ ಸಿಗಲಿ ಎಂದು ತಂಡಕ್ಕೆ ಶುಭಹಾರೈಸಿದರು.
ನಾಗಭರಣ ಹೇಳುವಂತೆ ಚಿತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರ್ಚು ಮಾಡಿಸಲಾಗಿದೆ. ಇಲ್ಲಿಯವರೆಗೂ ಖಾತೆಯಿಂದ 2.25 ಕೋಟಿ ತೆಗೆಯಲಾಗಿದೆ. ಇದರ ಮೇಲುಸ್ತುವಾರಿಯನ್ನು ಡಾ.ಹೆಚ್.ಎಲ್.ಮಂಜುನಾಥ್ ವಹಿಸಿಕೊಂಡಿರುವುದರಿಂದ ಅಂದು ಕೊಂಡಂತೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಇಂತಹ ಸಿನಿಮಾವನ್ನು ಗ್ರಾಮೀಣ ಭಾಗದ ಜನರು ನೋಡಬೇಕಾಗಿರುವುದರಿಂದ ಮೊದಲು ಜಿಲ್ಲಾ, ತಾಲ್ಲೊಕು ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಲಾಗಿದೆ. ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು. ತಾರಬಳಗದಲ್ಲಿ ಸ್ಕಂದಾ, ಸೋನುಗೌಡ, ಸುಂದರ್‍ರಾಜ್, ದೊಡ್ಡಣ್ಣ, ನೀನಾಸಂ ಅಶ್ವಥ್, ಜಾನ್ವಿಜ್ಯೋತಿ, ಮನು ಹೆಗಡೆ ಮುಂತಾದವರ ಅಭಿನಯವಿದೆ. ಹೇಮಾವತಿ ವೀರೇಂದ್ರಹೆಗ್ಗಡೆ ಸಾಹಿತ್ಯವು ಸೇರಿದಂತೆ ಒಟ್ಟು ಐದು ಗೀತೆಗಳಿಗೆ ವಾಸುಕಿವೈಭವ್ ಸಂಗೀತ ಸಂಯೋಜಿಸಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್. ಇನ್ ನ್ಯೂಸ್
-10/02/18For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore