HOME
CINEMA NEWS
GALLERY
TV NEWS
REVIEWS
CONTACT US
ಕನ್ನಡ ದೇಶದ ಹಾಡುಗಳ ಒಡ್ಡೋಲಗ
ಕನ್ನಡ ಭಾಷೆಯ ಸಂಸ್ಕ್ರತಿ ಸಾರುವ ‘ಕನ್ನಡ ದೇಶದೊಳ್’ ಅಡಿಬರಹದಲ್ಲಿ ಕರುನಾಡಲ್ಲಿ ಕನ್ನಡಿಗನೇ ಕಂಠೀರವ ಅಂತ ಹೇಳಿಕೊಂಡಿರುವ ಚಿತ್ರದ ಧ್ವನಿಸಾಂದ್ರಿಕೆಯು ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು. ನಿರ್ದೇಶಕ ಅಭಿರಾಮ್‍ಕಂಠೀರವ ಮಾತನಾಡಿ ಕನ್ನಡದ ತಾಕತ್ತು, ಗತ್ತು, ವೈಭವ ಎಲ್ಲವನ್ನು ತೋರಿಸುವ ಚಿತ್ರವಾಗಿದೆ. ನೋಡುಗರಿಗೆ ಇದರಿಂದ ಅಭಿಮಾನ ಹೆಚ್ಚಾಗುತ್ತದೆ. ಚಿತ್ರದಲ್ಲಿ ಕನ್ನಡಿಗನ ಶಕ್ತಿ ಏನೆಂದು ತೋರಿಸಲಾಗಿದೆ. ಪರಭಾಷಿಗರು ಕರ್ನಾಟಕ ಸಾಹಿತ್ಯ, ಸಂಸ್ಕ್ರತಿ, ಸೊಗಡು, ಮಾನ್ಯತೆ ಎಲ್ಲವನ್ನು ಚಿತ್ರ ವೀಕ್ಷಿಸಿದ ನಂತರ ತಿಳಿದುಕೊಳ್ಳುತ್ತಾರೆ. ನಮ್ಮದು ಅಪ್ಪಟ ಕನ್ನಡಿಗರ ಚಿತ್ರವೆಂದು ಬಣ್ಣಿಸಿಕೊಂಡರು.

ಇದರ ಮಧ್ಯೆ ರಾಜ್ಯದ ಕೊಡವ, ಕೊಂಕಿಣಿ, ಉತ್ತರಕರ್ನಾಟಕ, ತುಳು ಭಾಷೆಗಳಲ್ಲಿ ಸಿದ್ದಪಡಿಸಿರುವ ಲಿರಿಕಲ್ ವಿಡಿಯೋ ಹಾಡನ್ನು ತೋರಿಸಲಾಯಿತು. ಸಿಡಿ ಬಿಡುಗಡೆ ಮಾಡಿದ ಮಾಜಿ ಲೋಕಾಯುಕ್ತ ಸಂತೋಷ್‍ಹೆಗಡೆ ಇದೊಂದು ಸುಂದರ ದಿನವೆಂದು ಹೇಳಬಹುದು. ತಂಡಕ್ಕೆ ಒಳ್ಳೆಯದಾಗಲಿ ಎಂದರು.

ಇಂದು ಸಿಲಿಕಾನ್ ಸಿಟಿಯಲ್ಲಿ ಕನ್ನಡವನ್ನು ಹುಡುಕುವ ಪರಿಸ್ಥಿತಿ ಬಂದಿದೆ. ಕನ್ನಡ ಮಾತನಾಡಿದರೆ ಅವಮಾನವಾಗುತ್ತದೆಂದು ಎಲ್ಲರು ಇಂಗ್ಲೀಷ್‍ನಲ್ಲಿ ಮಾತನಾಡುವುದನ್ನು ನೋಡಿದಾಗ ಬೇಸರವಾಗುತ್ತದೆ. ಪ್ರಸಕ್ತ ಯುವಜನಾಂಗವು ಕನ್ನಡ ಅಭಿಮಾನವನ್ನು ಎತ್ತಿ ಹಿಡಿಯಬೇಕು. ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಮಾತನಾಡಿದಂತೆ ವರ್ಷದ 12 ತಿಂಗಳು ನಮ್ಮ ಭಾಷೆಯ ಮೇಲೆ ಪ್ರೀತಿಯನ್ನು ತೋರಿಸಿ, ನಾವೆಲ್ಲರೂ ಕನ್ನಡಿಗರಾಗಿ ಉಳಿಯೋಣ ಅಂತ ನೂತನ ಮಹಾಪೌರರಾದ ಗಂಗಾಂಬಿಕೆ ಕರೆ ನೀಡಿದರು. ಕಲಾವಿದರು, ತಂತ್ರಜ್ಘರು ಇವರುಗಳಿಗೆ ಮೈಕ್ ಸಿಗಲಿಲ್ಲ. ಪರಭಾಷೆಯ ಸಂಗೀತ ನಿರ್ದೇಶಕ ಸೊಲೊರಾಜ್‍ಮೇಲಂಗಿ ಮುಂದಿನ ಬಾರಿ ಕನ್ನಡದಲ್ಲಿ ಮಾತನಾಡುವೆನೆಂದು ಹೇಳಿಕೊಂಡರು. ನಟಿ ಸುಮನ್‍ನಗರ್‍ಕರ್, ದಿವ್ಯಉರಡುಗ, ಬೆಳಕು ಆಶ್ರಮದ ಮಕ್ಕಳು ಸುಂದರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಪ್ರಕಾಶ್.ಆರ್, ಹೆಚ್.ವಿನೋಧ್‍ಗೌಡ, ವೆಂಕಟೇಶ್, ಯೋಗಾನಂದ್.ಆರ್ ಮತ್ತು ವಿಶ್ವನಾಥ್.ಜಿ ಸೇರಿಕೊಂಡು ನಿರ್ಮಾಣ ಮಾಡಿರುವ ಚಿತ್ರವು ಕನ್ನಡ ರಾಜೋತ್ಸವ ದಿನದಂದು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
7/10/18ಕನ್ನಡ, ಕರ್ನಾಟಕದ ಸೊಗಡು ಸಾರುವ ಚಿತ್ರ
ನವಂಬರ್ ಸಮೀಪ ಬರುತ್ತಿದ್ದಂತೆಯೇ ಕನ್ನಡ ಭಾಷೆ ಸದ್ದು ಮಾಡಲು ಶುರುವಾಗುತ್ತದೆ. ಅದರಂತೆ ಯುವ ಕನ್ನಡಿಗರೇ ಸೇರಿಕೊಂಡು ಏಳು ವರ್ಷದ ಶ್ರಮ, ಮೂರು ವರ್ಷದ ಶೂಟಿಂಗ್ ಮಾಡಿರುವ ‘ಕನ್ನಡ ದೇಶದೊಳ್’ ಅಡಿಬರಹದಲ್ಲಿ ಕರುನಾಡಲ್ಲಿ ಕನ್ನಡಿಗನೇ ಕಂಠೀರವ ಅಂತ ಹೇಳಿಕೊಂಡಿರುವ ಚಿತ್ರವೊಂದು ತೆರೆಗೆ ಬರಲು ಕಾರ್ಯನಿರತವಾಗಿದೆ. ಪ್ರಚಲಿತ ಭಾಷೆಯು ಆಟೋದ ಮೇಲೆ, ಫೇಸ್‍ಬುಕ್‍ನಲ್ಲಿ ಚಾಲ್ತಿಯಲ್ಲಿದ್ದರೆ ಸಾಕಾಗುವುದಿಲ್ಲ. ಇದು ಎಲ್ಲಾ ಕಡೆ ಪಸರಿಸಬೇಕು. ಇದಕ್ಕಾಗಿ ಹೋರಾಟ ಮಾಡುವುದನ್ನು ಚಿತ್ರರೂಪದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಇದನ್ನು ನೋಡಿದವರು ಭಾಷಯ ಮೌಲ್ಯ, ಕರ್ನಾಟದ ಸೊಗಡಿನ ಹಿರಿಮೆಯನ್ನು ತಿಳಿದುಕೊಳ್ಳುತ್ತಾರೆ. ನಾವುಗಳು ಇದನ್ನು ತಾತ್ಸರ ಮಾಡದೆ, ಒಲವು ತೋರಿಸಬೇಕೆಂದು ಮುಂದಿನ ಪೀಳಿಗೆಗೆ ಚಿತ್ರವು ಕಟ್ಟಿಕೊಡಲಿದೆ. ಇತಿಹಾಸದಲ್ಲಿ ಇವತ್ತಿನ ಕನ್ನಡ ಯಾವ ಪರಿಸ್ಥಿತಿಯಲ್ಲಿದೆ, ಮುಂದೇನು ಆಗುತ್ತದೆ ಎಂಬುದನ್ನು ಕಮರ್ಷಿಯಲ್ ಮಾದರಿಯಲ್ಲಿ ಕತೆಯನ್ನು ಏಣಯಲಾಗಿದೆ. ಪ್ರಾದೇಶಿಕ ಭಾಷೆ ನಮ್ಮಲ್ಲೆ ಇರುವ ತುಳು, ಕೊಂಕಣಿ, ಕೊಡವ ಭಾಷೆಗಳನ್ನು ತೋರಿಸಲಾಗಿದೆ. ಅವಿನಾಶ್‍ಕಂಠೀರವ ರಚನೆ, ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ವಿದೇಶಿ ಕಲಾವಿದರಾದ ರಷ್ಯಾದ ಜೇನ್, ಆಫ್‍ಘಾನಿಸ್ತಾನ ಮೂಲದ ನಾಜರ್‍ಅಲಿ ಇಂಗ್ಲೇಂಡ್‍ನಿಂದ ಬಂದಂತ ಪಾತ್ರದಲ್ಲಿ ನಡೆಯುವ ಘಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಟೆನ್ನಿಸ್‍ಕೃಷ್ಣ ಕನ್ನಡಚಿಂತಕ, ಉಳಿದಂತೆ ಸುಚೇಂದ್ರಪ್ರಸಾದ್, ಸನತ್, ಶಿವು, ಹರೀಶ್‍ದಾಸ್ ಮುಂತಾದವರ ನಟನೆ ಇದೆ. ರಾಜ್ಯದ 30 ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಸಿರುವುದು ವಿಶೇಷವಾಗಿದೆ. ಎಂಟು ಹಾಡುಗಳಿಗೆ ಸಾಲೊರಾಜ್‍ಮೆಲಂಗಿ-ಸಾತ್ವಿಕ್‍ಆರಾಧ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ಶರತ್‍ಕುಮಾರ್.ಜಿ, ಸಂಕಲನ ಜೀವನ್‍ಪ್ರಕಾಶ್.ಎನ್ ಅವರದಾಗಿದೆ. ಕನ್ನಡಕ್ಕೆ ಏನಾದರೂ ಕೊಡುಗೆ ಕೊಡಬೇಕಂಬ ಅದಮ್ಯ ಬಯಕೆಯಿಂದ ಪ್ರಕಾಶ್.ಆರ್.,ಹೆಚ್. ವಿನೋಧ್‍ಗೌಡ, ಯೋಗಾನಂದ್.ಆರ್ ಮತ್ತು ವಿಶ್ವನಾಥ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
23/09/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore