HOME
CINEMA NEWS
GALLERY
TV NEWS
REVIEWS
CONTACT US
ಕಂಸಾಳೆ ಎಂಬ ಹೊಸ ಚಿತ್ರ
ಮೈಸೂರು ಮತ್ತುಚಾಮರಾಜನಗರದಲ್ಲಿ ಹೆಚ್ಚಾಗಿ ‘ಕಂಸಾಳೆ’ಯನ್ನು ಬಳಸುತ್ತಾರೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದು ಸಜ್ಜಾಗುತ್ತಿದೆ.ಕತೆಯು ಹೆಚ್ಚಾಗಿ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ನಡೆಯುತ್ತದೆ. ನಾಯಕನ ಪಾತ್ರವುಎಲ್ಲರಿಗೂಇಷ್ಟವಾಗುತ್ತಾ ಹೋದರೆ, ದುರಳ ವ್ಯಕ್ತಿಗಳಿಗೆ ಈತನುಕಷ್ಟಕಾರಿಯಾಗಿರುತ್ತಾನೆ. ಇದರ ಮಧ್ಯ ನವಿರಾದ ಪ್ರೀತಿ, ಹಾಗೂ ಅರಣ್ಯಕ್ಕೆ ಸಂಬಂದಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ಆತನು ಹೇಗೆ ಬಗೆಹರಿಸುತ್ತಾನೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ಮೂಡಿಗೆರೆ, ಚಾರ್ಮಿಡಿಘಾಟ್, ದೇವರೆಮನೆಯ ಸುಂದರ ತಾಣಗಳಲ್ಲಿ ಚಿತ್ರೀರಕಣ ನಡೆಯಲಿದೆ.ಜಯಂತ್‍ಕಾಯ್ಕಣಿ, ಯೋಗರಾಜಭಟ್, ಡಾ.ನಾಗೇಂದ್ರಪ್ರಸಾದ್ ಸಾಹಿತ್ಯ ಗೀತೆಗಳಿಗೆ ಪ್ರವೀಣ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಪವನ್‍ತೇಜ ನಾಯಕನಾಗಿಎರಡನೆ ಅವಕಾಶ. ಮೈಸೂರಿನ ನಯನ ಶಿಕ್ಷಕಿಯಾಗಿ ಮೊದಲ ಅನುಭವ. ಮತ್ತೋಂದು ಮುಖ್ಯ ಪಾತ್ರದಲ್ಲಿ ಹಿರಿಯ ನಟರಾಜೇಶ್, ಇವರೊಂದಿಗೆ ಪ್ರಮೀಳಜೋಷಾಯ್, ಜೀವನ್ ಮುಂತಾದವರುಅಭಿನಯಿಸುತ್ತಿದ್ದಾರೆ.ಛಾಯಾಗ್ರಹಣ ಸಾಯಿಸತೀಶ್. ಸಂಭಾಷಣೆರವಿಶಾಂತ್, ಸಂಕಲನ ಕೇಶವನ್‍ಅವರದಾಗಿದೆ. ಸಾರಕ್ಕಿತೋಟದಎಸ್.ಎ.ಚಂದ್ರಶೇಖರ್ ನಿರ್ಮಾಪಕರಾಗಿ ದ್ವಿತೀಯ ಪ್ರಯತ್ನ. ಲೋಕೇಶ್‍ಗೌಡ.ಕೆ.ವಿ. ಸಹ ನಿರ್ಮಾಪಕರು ಹಾಗೂ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
3/10/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore